For Quick Alerts
ALLOW NOTIFICATIONS  
For Daily Alerts

ಓಟ್ಸ್ ಇಷ್ಟವೇ? ಹಾಗಾದರೆ ಈ ಲೇಖನವನ್ನು ತಪ್ಪದೇ ಓದಿ

By Arshad
|

ಓಟ್ಸ್ ರಷ್ಯಾದ ಪ್ರಧಾನ ಬೆಳೆಯಾಗಿದ್ದು ಇಂಗ್ಲೆಂಡ್, ಕೆನಡಾ, ಆಸ್ಟ್ರೇಲಿಯಾ, ಫಿನ್ಲೆಂಡ್ ಮೊದಲಾದ ದೇಶಗಳಲ್ಲಿಯೂ ಹೆಚ್ಚಿನ ಪ್ರಮಾಣದಲ್ಲೆ ಬೆಳೆಯಲಾಗುತ್ತಿದೆ. ಆದರೆ ಈ ಧಾನ್ಯವನ್ನು ಕುದುರೆಗಳ ಆಹಾರವನ್ನಾಗಿ ಹೆಚ್ಚಾಗಿ ಬಳಸಲ್ಪಡುವುದರಿಂದ ಅಲ್ಲಿನ ಜನರು ಓಟ್ಸ್ ಗಿಂತಲೂ ಗೋಧಿಗೇ ಹೆಚ್ಚಿನ ಮಹತ್ವ ನೀಡುತ್ತಾರೆ.

ಇದೇ ಕಾರಣಕ್ಕೆ ಅಗಾಧವಾದ ಪ್ರಮಾಣದ ಓಟ್ಸ್ ಅನ್ನು ಭಾರತ ಸಹಿತ ಇತರ ರಾಷ್ಟ್ರಗಳಿಗೆ ರಫ್ತು ಮಾಡಲಾಗುತ್ತಿದೆ. ಇತ್ತೀಚಿನವರೆಗೂ ಅಪರಿಚಿತವಾಗಿ ಉಳಿದಿದ್ದ ಈ ಓಟ್ಸ್ ಇಂದು ಎಲ್ಲೆಡೆ ಸಂಸ್ಕರಿತ ರೂಪದಲ್ಲಿ (ಅಂದರೆ ಸುಮಾರು ನಮ್ಮ ಅವಲಕ್ಕಿಯಂತೆ) ದೊರಕುತ್ತಿದೆ. ಓಟ್ ಮೀಲ್ ನಿಜವಾಗಿಯೂ ತೂಕ ಇಳಿಸುತ್ತದೆಯಾ?

ಓಟ್ಸ್ ನಲ್ಲಿರುವ ಪಾಲಿಫೆನಾಲ್‌ಗಳೆಂಬ ಪೋಷಕಾಂಶಗಳು ಉರಿಯೂತನಿವಾರಕ ಗುಣ (anti-inflammatory) ಹೊಂದಿರುವ ಕಾರಣ ಹೃದಯದ ಕಾಯಿಲೆ, ಕರುಳಿನ ಕ್ಯಾನ್ಸರ್, ಚರ್ಮದ ಉರಿತ ಮೊದಲಾದ ತೊಂದರೆಗಳಂದ ರಕ್ಷಣೆ ನೀಡುತ್ತದೆ. ಆದರೆ ವ್ಯಾಪಾರಿಕರಣದ ಭರದಲ್ಲಿ ಇದನ್ನು ಸಂಸ್ಕರಿಸಲು ಹಲವಾರು ರಾಸಾಯನಿಕಗಳನ್ನು ಉಪಯೋಗಿಸುವುದರಿಂದ ಆರೋಗ್ಯಕ್ಕೆ ಮಾರಕವಾಗಬಹುದು.

ಓಟ್ಸ್ ಅನ್ನು ನಿಮ್ಮ ನಿಯಮಿತ ಆಹಾರವನ್ನಾಗಿ ಬಳಸುವ ಮೊದಲು ಕೆಳಗಿನ ಸ್ಲೈಡ್ ಮೂಲಕ ಇದರ ಬಗ್ಗೆ ನೀಡಲಾಗಿರುವ ಅಮೂಲ್ಯ ಮಾಹಿತಿಗಳನ್ನು ಅರಿಯುವುದು ಉತ್ತಮ: ತ್ವಚೆಯ ಕಾಂತಿಗೆ ಓಟ್ಸ್‌ನ್ನು ಒಮ್ಮೆ ಪ್ರಯತ್ನಿಸಿ ನೋಡಿ!

ಓಟ್ಸ್ ಅಲರ್ಜಿಯುಂಟುಮಾಡಬಹುದು

ಓಟ್ಸ್ ಅಲರ್ಜಿಯುಂಟುಮಾಡಬಹುದು

ಓಟ್ಸ್‌ನಲ್ಲಿರುವ Avenin ಮತ್ತು phytic acid ಗಳೆಂಬ ಎರಡು ಆಮ್ಲಗಳು ಹೆಚ್ಚಿನವರಿಗೆ ಅಲರ್ಜಿಕಾರಕವಾಗಿದೆ. ಇದನ್ನು ನಿವಾರಿಸಲು ಸುಲಭ ಉಪಾಯವಿದೆ. ಅಂದರೆ ಉಗುರು ಬೆಚ್ಚನೆಯ ನೀರಿನಲ್ಲಿ ಕೊಂಚ ಸೇಬಿನ ಶಿರ್ಕಾ (apple cider vinegar) ದಲ್ಲಿ ಅರ್ಧ ದಿನ ಮುಳುಗಿಸಿ ಬಳಿಕ ಸೋಸಿ ಒಣಗಿಸುವುದು. ಆದರೆ ವಾಣಿಜ್ಯ ಬಳಕೆಯಲ್ಲಿ ಇದನ್ನೆಲ್ಲಾ ಮಾಡುತ್ತಾ ಕುಳಿತಿರಲು ಸಾಧ್ಯವಿಲ್ಲ. ಆದ್ದರಿಂದ ನೀವು ಬಳಸುವ ಓಟ್ಸ್‌ನಲ್ಲಿ ಈ ಆಮ್ಲಗಳು ಸಂಪೂರ್ಣವಾಗಿ ನಿವಾರಣೆಯಾಗಿವೆ ಎಂದು ಹೇಳಲು ಸಾಧ್ಯವಿಲ್ಲ. ಈ ಓಟ್ಸ್ ಬಳಕೆಯಿಂದ ಅಲರ್ಜಿಯುಂಟಾಗಬಹುದು.

ಓಟ್ಸ್‌ನಲ್ಲಿ ಅತಿ ಹೆಚ್ಚಿನ ಪ್ರಮಾಣದಲ್ಲಿ ಕೀಟನಾಶಕಗಳಿರಬಹುದು

ಓಟ್ಸ್‌ನಲ್ಲಿ ಅತಿ ಹೆಚ್ಚಿನ ಪ್ರಮಾಣದಲ್ಲಿ ಕೀಟನಾಶಕಗಳಿರಬಹುದು

ಓಟ್ಸ್ ಬೆಳೆಯುವ ದೇಶಗಳಲ್ಲಿ ಅಧಿಕ ಪ್ರಮಾಣದಲ್ಲಿ ಕೀಟನಾಶಕಗಳನ್ನು ಬಳಸಲಾಗುತ್ತದೆ. ಕ್ಯಾನೋಲಾ ಮತ್ತು ಸೋಯಾ ಅವರೆಗಳಲ್ಲಿಯೂ ಅಧಿಕ ಪ್ರಮಾಣದ ಕೀಟನಾಶಕ ಪತ್ತೆಯಾಗಿದೆ. ವಾಣಿಜ್ಯ ಉದ್ದೇಶದಿಂದ ಬಹಳ ವಿಸ್ತಾರವಾದ ಪ್ರದೇಶದಲ್ಲಿ ಇವನ್ನು ಬೆಳೆಸಲಾಗುವುದರಿಂದ ಅತಿ ಪ್ರಬಲವಾದುವನ್ನೇ ಬಳಸಲಾಗುತ್ತದೆ. ಮುಂದಿನ ಸ್ಲೈಡ್ ಕ್ಲಿಕ್ ಮಾಡಿ

ಓಟ್ಸ್‌ನಲ್ಲಿ ಅತಿ ಹೆಚ್ಚಿನ ಪ್ರಮಾಣದಲ್ಲಿ ಕೀಟನಾಶಕಗಳಿರಬಹುದು

ಓಟ್ಸ್‌ನಲ್ಲಿ ಅತಿ ಹೆಚ್ಚಿನ ಪ್ರಮಾಣದಲ್ಲಿ ಕೀಟನಾಶಕಗಳಿರಬಹುದು

ಈ ಓಟ್ಸ್ ನಲ್ಲಿ ಕನಿಷ್ಟ ಆರು ತರಹದ ಕೀಟನಾಶಕಗಳಿರುವುದು ಪರೀಕ್ಷೆಗಳಿಂದ ಕಂಡುಬಂದಿದೆ. ಆದ್ದರಿಂದ ಸಾವಯವ ವಿಧಾನದಲ್ಲಿ ಬೆಳೆದ ಓಟ್ಸ್ ಮಾತ್ರ ಬಳಕೆಗೆ ಉತ್ತಮವಾಗಿದೆ. ನೀವು ಬಳಸುವ ಓಟ್ಸ್ ಸಾವಯವ ವಿಧಾನದಲ್ಲಿ ಬೆಳೆದಿದ್ದಕ್ಕೆ ಏನಾದರೂ ಖಾತರಿ ಇದೆಯೇ?

ಸಾವಯವ ವಿಧಾನದಿಂದ ಬೆಳೆದ ಓಟ್ಸ್ ಅತ್ಯುತ್ತಮ

ಸಾವಯವ ವಿಧಾನದಿಂದ ಬೆಳೆದ ಓಟ್ಸ್ ಅತ್ಯುತ್ತಮ

ಸಾವಯವ ವಿಧಾನದಲ್ಲಿ ಬೆಳೆದು ಸ್ಟೇನ್ ಲೆಸ್ ಕೃಷಿ ಉಪಕರಣಗಳನ್ನು ಬಳಸಿ ಕೊಯ್ಲು ಮಾಡಿದ ಓಟ್ಸ್ ಆರೋಗ್ಯಕರವಾಗಿವೆ. ಇವನ್ನು ಬೇಯಿಸಲು ಹೆಚ್ಚು ಸಮಯ ಬೇಕಾದರೂ ಪೋಷಕಾಂಶಗಳು ಗರಿಷ್ಟ ಪ್ರಮಾಣದಲ್ಲಿರುತ್ತವೆ. ಇವು ಅವಲಕ್ಕಿಯ ರೂಪದಲ್ಲಿರದೇ ನಾಲ್ಕಾರು ತುಂಡು ಮಾಡಿದ ಕುಚ್ಚಿಗೆ ಅಕ್ಕಿಯ ನುಚ್ಚಿನಂತಿರುತ್ತವೆ. ನಿಮ್ಮ ಓಟ್ಸ್ ಯಾವ ರೂಪದಲ್ಲಿದೆ?

ಮಾರುಕಟ್ಟೆಯಲ್ಲಿ ದೊರಕುವ ಹೆಚ್ಚಿನ ಓಟ್ಸ್ ನಲ್ಲಿ ಗ್ಲುಟೆನ್ ಇದೆ

ಮಾರುಕಟ್ಟೆಯಲ್ಲಿ ದೊರಕುವ ಹೆಚ್ಚಿನ ಓಟ್ಸ್ ನಲ್ಲಿ ಗ್ಲುಟೆನ್ ಇದೆ

ಗೋಧಿ ಹಿಟ್ಟು ಬಿಡಿಬಿಡಿಯಾಗಿದ್ದು ಬಿಸಿನೀರಿನಲ್ಲಿ ಹಾಕಿದ ತಕ್ಷಣ ಗೋಂದು ಗೋಂದಾಗಲು ಈ ಗ್ಲುಟೆನ್ ಕಾರಣ. ಆದರೆ ಓಟ್ಸ್ ನಲ್ಲಿರುವ ಗ್ಲುಟೆನ್ (ವಾಸ್ತವಾಗಿ ಒಂದು ತರಹದ ನಾರು ರೂಪದ ಪ್ರೋಟೀನ್) ಹೆಚ್ಚಿನವರಿಗೆ ಅಲರ್ಜಿ ತರಿಸುತ್ತದೆ. ಆದ್ದರಿಂದ ವಾಣಿಜ್ಯ ಉದ್ದೇಶದಲ್ಲಿ ಈ ಗ್ಲುಟೆನ್ ನಿವಾರಿಸಿ ಸಂಸ್ಕರಿಸಿ ನೀಡಲಾಗುತ್ತದೆ. ಆದರೆ ಸಂಸ್ಕರಿಸಿದ ಉಪಕರಣಗಳು ಗೋಧಿ ಬಾರ್ಲಿಯಂತಹ ಇತರ ಧಾನಗಳನ್ನೂ ಸಂಸ್ಕರಿಸಲು ಬಳಸಲ್ಪಡುವುದರಿಂದ ಅದರಲ್ಲಿರುವ ಗ್ಲುಟೆನ್ ಓಟ್ಸ್‌ಗೂ ಬರಬಹುದು. ಮುಂದಿನ ಸ್ಲೈಡ್ ಕ್ಲಿಕ್ ಮಾಡಿ

ಮಾರುಕಟ್ಟೆಯಲ್ಲಿ ದೊರಕುವ ಹೆಚ್ಚಿನ ಓಟ್ಸ್ ನಲ್ಲಿ ಗ್ಲುಟೆನ್ ಇದೆ

ಮಾರುಕಟ್ಟೆಯಲ್ಲಿ ದೊರಕುವ ಹೆಚ್ಚಿನ ಓಟ್ಸ್ ನಲ್ಲಿ ಗ್ಲುಟೆನ್ ಇದೆ

ಅಷ್ಟಕ್ಕೂ ಓಟ್ಸ್ ಇರುವ ಪಾಕೆಟ್ಟುಗಳಲ್ಲಿ ಗ್ಲುಟೆನ್ ರಹಿತ ಎಂದು ಎಲ್ಲೂ ಬರೆದಿದ್ದು ಕಾಣಲ್ಪಡದೇ ಇರುವುದರಿಂದ ಇದು ಸಂಪೂರ್ಣವಾಗಿ ಗ್ಲುಟೆನ್ ರಹಿತ ಎಂದು ಖಚಿತವಾಗಿ ಹೇಳಲಾಗುವುದಿಲ್ಲ. ಈ ಗ್ಲುಟೆನ್ ನ ಅಲರ್ಜಿ Celiac Disease (CD) ಎಂಬ ಕಾಯಿಲೆಗೆ ಮೂಲವಾಗಿದೆ.

ರಕ್ತದಲ್ಲಿ ಗ್ಲುಕೋಸ್ ಪ್ರಮಾಣ ಏರಬಹುದು

ರಕ್ತದಲ್ಲಿ ಗ್ಲುಕೋಸ್ ಪ್ರಮಾಣ ಏರಬಹುದು

ಓಟ್ಸ್ ಅಹಾರವನ್ನು ಸೇವಿಸ ಕೆಲನಿಮಿಷಗಳಲ್ಲಿಯೇ ರಕ್ತದಲ್ಲಿರುವ ಗ್ಲುಕೋಸ್ ಪ್ರಮಾಣದಲ್ಲಿ ಹೆಚ್ಚಳವಾಗುವುದು ಕಂಡುಬಂದಿದೆ. ಇದನ್ನು ಸರಿಪಡಿಸಲು ಹೆಚ್ಚಿನ ಇನ್ಸುಲಿನ್ ಅಗತ್ಯವಿದೆ. ಕೆಲವರ ಮೇದೋಜೀರಕ ಗ್ರಂಥಿಗಳು (pancreas) ಸಾಕಷ್ಟು ಪ್ರಮಾಣದಲ್ಲಿ ಮತ್ತು ಅಷ್ಟು ತ್ವರಿತವಾಗಿ ಇನ್ಸುಲಿನ್ ಉತ್ಪಾದಿಸಲು ಸಾಧ್ಯವಾಗುವುದಿಲ್ಲ. ಅದರಲ್ಲೂ ಮಧುಮೇಹಿಗಳಿಗೆ ಈ ಆಗಾಧ ಪ್ರಮಾಣದ ಸಕ್ಕರೆಯನ್ನು ಭರಿಸಲು ಸಾಧ್ಯವೇ ಇಲ್ಲ. ಮುಂದಿನ ಸ್ಲೈಡ್ ಕ್ಲಿಕ್ ಮಾಡಿ

ರಕ್ತದಲ್ಲಿ ಗ್ಲುಕೋಸ್ ಪ್ರಮಾಣ ಏರಬಹುದು

ರಕ್ತದಲ್ಲಿ ಗ್ಲುಕೋಸ್ ಪ್ರಮಾಣ ಏರಬಹುದು

ಒಂದು ವೇಳೆ ಮಧುಮೇಹಿಗಳಲ್ಲದಿದ್ದವರಲ್ಲಿಯೂ ಸಾಕಷ್ಟು ಪ್ರಮಾಣದಲ್ಲಿ ಮತ್ತು ಅಷ್ಟು ತ್ವರಿತವಾಗಿ ಗ್ಲುಕೋಸ್ ಲಭ್ಯವಾಗದೇ ಇದ್ದರೆ hyperglycemia ಎಂಬ ಸ್ಥಿತಿ ಎದುರಾಗಬಹುದು. ವಿಪರೀತ ಸ್ಥಿತಿ ಮಾರಣಾಂತಿಕವೂ ಆಗಬಹುದು. ಆದ್ದರಿಂದ ಓಟ್ಸ್ ನಿಮಗೆ ಸೂಕ್ತವೇ ಅಲ್ಲವೇ ಎಂಬುದನ್ನು ವೈದ್ಯರಿಂದ ತಿಳಿದುಕೊಂಡ ಬಳಿಕ ಸೇವಿಸುವುದು ಉತ್ತಮ.

ಸಲಹೆ

ಸಲಹೆ

*) ಮಾರುಕಟ್ಟೆಯಲ್ಲಿ ಲಭ್ಯವಿರುವ ಅವಲಕ್ಕಿ ರೂಪದ, ಥಟ್ಟನೇ ತಯಾರಾಗುವ ಓಟ್ಸ್ ಸೇವನೆ ಆರೋಗ್ಯಕರವಲ್ಲ.

ಬದಲಿಗೆ ಅಕ್ಕಿನುಚ್ಚಿನಂತಿರುವ, ಗೋಧಿಬಣ್ಣದ ಕಾಳುಗಳು, ಅದರಲ್ಲೂ ಸಾವಯವ ಕೃಷಿಯಲ್ಲಿ ಬೆಳೆದ ಓಟ್ಸ್ ಉತ್ತಮವಾಗಿದೆ.

*) ಆಹಾರ ವಸ್ತುಗಳಲ್ಲಿ ವಿದೇಶೀ ವ್ಯಾಮೋಹವನ್ನು ಬಿಟ್ಟು ನಮ್ಮ ಸ್ಥಳೀಯ ಧಾನ್ಯಗಳಿಗೆ ಹೆಚ್ಚಿನ ಪ್ರೋತ್ಸಾಹ ನೀಡುವುದು ಉತ್ತಮ. ಕರ್ನಾಟಕದ ಧಾನ್ಯಗಳಾದ ಜೋಳ, ನವಣೆ, ರಾಗಿ, ಮೆಕ್ಕೆಜೋಳ ಮೊದಲಾದವುಗಳು ಓಟ್ಸ್ ಗಿಂತಲೂ ಹೆಚ್ಚಿನ ಪೋಷಕಾಂಶಗಳನ್ನು ನೀಡಬಲ್ಲವು.

English summary

Like oats? Know These Important Facts

Oats have gained a good reputation and much praise from many health organisations as it prevents heart attack, lowers cholesterol and aids in weight loss. Oats contain manganese, selenium, phosphorus, magnesium and zinc and Vitamin E. Here are some points regarding oats that you need to know if the major part of your meals are oats.
X
Desktop Bottom Promotion