For Quick Alerts
ALLOW NOTIFICATIONS  
For Daily Alerts

ವಿಶ್ವ ಚುಂಬನದ ದಿನ: ದಿನನಿತ್ಯ ಚುಂಬಿಸಿ, ಆರೋಗ್ಯ ವೃದ್ಧಿಸಿ!

By Super
|

ಪ್ರೀತಿ, ಜಗತ್ತಿನಲ್ಲಿಯೇ ಅತ್ಯಮೂಲ್ಯವಾದ ಐಶ್ವರ್ಯ. ಈ ಪ್ರೀತಿಯನ್ನು ವ್ಯಕ್ತಪಡಿಸುವ ಬಗೆ ಹೇಗೆ? ಮಹಿಳೆಯರನ್ನು ಕೇಳಿದರೆ 'ಸೀರೆ ಕೊಡಿಸುವ ಮೂಲಕ' ಎಂಬ ಉತ್ತರ ಥಟ್ಟನೇ ಬರಬಹುದು. ಪ್ರಾಣಿಗಳು ನೆಕ್ಕುವ ಮೂಲಕ ತಮ್ಮ ಪ್ರೀತಿಯನ್ನು ವ್ಯಕ್ತಪಡಿಸಿದರೆ ಮನುಷ್ಯರು ಚುಂಬನದಿಂದ ತಮ್ಮ ಪ್ರೀತಿಯನ್ನು ವ್ಯಕ್ತಪಡಿಸುತ್ತಾರೆ. ಚುಂಬನದ ಬಗ್ಗೆ ಕೆಲ ಇಂಟರೆಸ್ಟಿಂಗ್ ಅಂಶಗಳು

ಚುಂಬನ ಎಂದಾಕ್ಷಣ ನಲ್ಲ ತನ್ನ ನಲ್ಲೆಗೆ ನೀಡುವ ಸಿಹಿಮುತ್ತು ಎಂದೇ ಹೆಚ್ಚಿನವರು ತಿಳಿದುಬಿಡುತ್ತಾರೆ. ವಾಸ್ತವವಾಗಿ ಚುಂಬನದ ವ್ಯಾಖ್ಯಾನ ಇದಕ್ಕಿಂತಲೂ ವಿಶಾಲವಾಗಿದೆ. ಹಲವು ರಾಷ್ಟ್ರಗಳಲ್ಲಿ ಮೊಣಕಾಲೂರಿ ಮಹಿಳೆಯ ಹಸ್ತದ ಹಿಂಭಾಗವನ್ನು ಚುಂಬಿಸುವುದು ಗೌರವ ನೀಡುವ ಸಂಕೇತವಾಗಿದೆ.

ಖ್ಯಾತ ವ್ಯಕ್ತಿಗಳು ತಮ್ಮ ಹಸ್ತವನ್ನು ಚುಂಬಿಸಿ ಅಭಿಮಾನಿಗಳತ್ತ ಬೀಸುವ ಮೂಲಕ ತಮ್ಮ ಧನ್ಯವಾದಗಳನ್ನು ತಿಳಿಸುತ್ತಾರೆ. ತಾಯಿ ಮಗುವನ್ನು ಚುಂಬಿಸುವುದು ಅಕ್ಕರೆಯ ಲಕ್ಷಣವಾದರೆ ಬಹುಮಾನ ಗೆದ್ದು ಬಂದ ಮಗುವನ್ನು ಚುಂಬಿಸುವುದು ಅಭಿನಂದನೆಯ ಸಂಕೇತವಾಗಿದೆ. ಪತಿ ಪತ್ನಿಯರು, ಪ್ರೇಮದಲ್ಲಿರುವವರು ಏಕಾಂತದಲ್ಲಿ ತುಟಿಗೆ ನೀಡುವ ಚುಂಬನ ಜೀವನಪರ್ಯಂತ ಆಚರಿಸುವ ಬದ್ಧತೆಗೆ ಸಾಕ್ಷಿಯಾಗುತ್ತದೆ. ಅಷ್ಟೇ ಏಕೆ, ಕ್ರಿಶ್ಚಿಯನ್ ಸಹಿತ ಹಲವು ಸಮುದಾಯಗಳಲ್ಲಿ ಮದುವೆ ಸಂಪನ್ನಗೊಳ್ಳುವುದೇ 'you may kiss your bride' ಎಂಬ ವಾಕ್ಯದಿಂದ! ಚುಂಬನ ಪರೀಕ್ಷೆಯಲ್ಲಿ ಪಾಸಾಗಲು ಇಲ್ಲಿದೆ 15 ಸಲಹೆಗಳು!

ಚುಂಬನ ಕೇವಲ ನಮ್ಮ ಭಾವನೆಗಳನ್ನು ತೋರ್ಪಡಿಸುವ ಕ್ರಿಯೆಯಲ್ಲ. ಇದರಿಂದ ನಮ್ಮ ದೇಹದೊಳಗೂ ಹಲವಾರು ಸಂವೇದನೆಗಳು ಮತ್ತು ರಸದೂತಗಳ ಸ್ರವಿಕೆ ನಡೆಯುತ್ತದೆ. ಇದರಿಂದ ಶರೀರಕ್ಕೆ ಹಲವು ಪ್ರಯೋಜನಗಳಿವೆ. ಅದರಲ್ಲೂ ಪ್ರೇಮಿಗಳ ತುಟಿಗೆ ತುಟಿ ತಾಕಿಸಿದ ಚುಂಬನ ಬಹಳ ಪ್ರಯೋಜನಕಾರಿ ಎಂದು ಸಂಶೋಧನೆಗಳು ತಿಳಿಸುತ್ತವೆ. ದಿನಕ್ಕೊಂದು ಚುಂಬನ ವೈದ್ಯರನ್ನು ದೂರವಿಡುವುದು ಎಂದೂ ಹೇಳಬಹುದು.

ಆದರೆ ಚುಂಬನವನ್ನು ಯಾವ ಸಂದರ್ಭದಲ್ಲಿ ಮತ್ತು ಯಾರಿಗೆ ನೀಡುತ್ತೀರಿ ಎಂಬುದು ಮುಖ್ಯ. ಸಾಂದರ್ಭಿಕವಲ್ಲದ, ಅಥವಾ ತಪ್ಪಾದ ವ್ಯಕ್ತಿಗೆ ನೀಡುವ ಚುಂಬನ ಅನಾಹುತಕ್ಕೆ ನಾಂದಿಯಾಗಬಹುದು. ಸರಿಯಾದ ವ್ಯಕ್ತಿಗೆ ಸರಿಯಾದ ಸಂದರ್ಭದಲ್ಲಿ ನೀಡುವ ಚುಂಬನದ ಆರೋಗ್ಯಕರ ಪರಿಣಾಮಗಳನ್ನು ಕೆಳಗಿನ ಸ್ಲೈಡ್ ಶೋ ಮೂಲಕ ನೋಡಿರಿ:

ಒತ್ತಡವನ್ನು ಕಡಿಮೆಗೊಳಿಸುತ್ತದೆ

ಒತ್ತಡವನ್ನು ಕಡಿಮೆಗೊಳಿಸುತ್ತದೆ

ಚುಂಬನದ ಸಮಯದಲ್ಲಿ ದೇಹದಲ್ಲಿ ಎಪಿನೆಫ್ರಿನ್ (epinephrine) ಎಂಬ ಪೋಷಕಾಂಶ ಬಿಡುಗಡೆಯಾಗುತ್ತದೆ. ಒಟ್ಟಾರೆ ರಕ್ತಸಂಚಾರವನ್ನು ಇದು ಸುಗಮಗೊಳಿಸುವ ಮೂಲಕ ದೇಹವನ್ನು ನಿರಾಳಗೊಳಿಸುತ್ತದೆ. ದಿನದ ಆಯಾಸದಿಂದ ಬಳಲಿ ಮನೆಗೆ ಹಿಂದಿರುಗಿದ ಪತಿಗೆ ಪತ್ನಿ ನೀಡುವ ಒಂದೇ ಚುಂಬನ ದಿನದ ಒತ್ತಡದಿಂದ ಹೊರಬರಲು ನೆರವಾಗಬಲ್ಲುದು! ಇದರಿಂದ ಶಾರೀರಿಕವಾಗಿ ಮತ್ತು ಮಾನಸಿಕವಾಗಿ ಒತ್ತಡದಿಂದ ಹೊರಬರಲು ದೇಹ ಹೆಚ್ಚು ಸಮರ್ಥವಾಗುತ್ತದೆ.

ಅಧಿಕ ರಕ್ತದೊತ್ತಡವನ್ನು ನಿಯಂತ್ರಿಸುತ್ತದೆ

ಅಧಿಕ ರಕ್ತದೊತ್ತಡವನ್ನು ನಿಯಂತ್ರಿಸುತ್ತದೆ

ರಕ್ತದೊತ್ತಡಕ್ಕೆ ದೈಹಿಕ ಮತ್ತು ಮಾನಸಿಕವಾದ ಕಾರಣಗಳಿವೆ. ಇದರಲ್ಲಿ ಮಾನಸಿಕವಾದ ಕಾರಣಗಳಿಗೆ ಚುಂಬನ ಉತ್ತಮ ಪರಿಹಾರ ನೀಡಬಲ್ಲುದು. ಒತ್ತಡದಲ್ಲಿದ್ದಾಗ, ಕ್ಷೋಬೆಯಲ್ಲಿದ್ದಾಗ, ದುಃಖದಲ್ಲಿದ್ದಾಗ ಆಪ್ತರಿಂದ ಪಡೆಯುವ ಒಂದು ಸಾಂತ್ವಾನದ ಮುತ್ತು ಮನಸ್ಸನ್ನು ನಿರಾಳಗೊಳಿಸಿ ಉದ್ವೇಗವನ್ನು ಕಡಿಮೆಗೊಳಿಸುವ ಮೂಲಕ ಏರಿದ್ದ ರಕ್ತದೊತ್ತಡವನ್ನು ನಿಯಂತ್ರಿಸುತ್ತದೆ.

ರಕ್ತಪರಿಚಲನೆಯನ್ನು ಹೆಚ್ಚಿಸುತ್ತದೆ

ರಕ್ತಪರಿಚಲನೆಯನ್ನು ಹೆಚ್ಚಿಸುತ್ತದೆ

ಚುಂಬನದ ಬಳಿಕ ರಕ್ತದಲ್ಲಿ ಹರಿಯುವ ಎಪಿನೆಫ್ರಿನ್ ರಕ್ತನಾಳಗಳನ್ನು ಸಡಿಲಗೊಳಿಸುವ ಮೂಲಕ ರಕ್ತದ ಪರಿಚಲನೆಯನ್ನು ಹೆಚ್ಚಿಸಲು ನೆರವಾಗುತ್ತದೆ. ಉತ್ತಮಗೊಂಡ ರಕ್ತಪರಿಚಲನೆ ಪರೋಕ್ಷವಾಗಿ ವಿವಿಧ ತೊಂದರೆಗಳನ್ನು ನಿವಾರಿಸುತ್ತದೆ. ಹೃದಯದ ಬಡಿತ ಹೆಚ್ಚಾಗಿ ಹೃದಯದಿಂದ ಅತಿ ದೂರವಿರುವ ಭಾಗಗಳಿಗೂ ಉತ್ತಮ ಪ್ರಮಾಣದಲ್ಲಿ ರಕ್ತ ಪೂರೈಕೆಯಾಗುತ್ತದೆ.

ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ

ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ

ಚುಂಬನದಿಂದ ನಮ್ಮ ದೇಹದಲ್ಲಿ ಇಮ್ಯುನೋಗ್ಲೋಬಿನ್ ಎ (immunoglobulin A (IgA)) ಎಂಬ ಪ್ರೋಟೀನ್ ನ(glycosylated proteins) ಪ್ರಮಾಣ ಹೆಚ್ಚುತ್ತದೆ. ಇದು ನಮ್ಮ ದೇಹದಲ್ಲಿ ಲೋಳೆ ಇರುವಲ್ಲೆಲ್ಲಾ (ಗಂಟಲ ಒಳಭಾಗ, ಜೀರ್ಣಾಂಗಗಳು, ಜನನಾಂಗಗಳು, ಮೂತ್ರಕೋಶ ಮೊದಲಾದವು ಮುಂದಿನ ಸ್ಲೈಡ್ ಕ್ಲಿಕ್ ಮಾಡಿ

ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ

ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ

ಚಿಕ್ಕ ಪ್ರಮಾಣದಲ್ಲಿದ್ದು ಯಾವುದೇ ಸೋಂಕು ತಗಲದಂತೆ ರಕ್ಷಿಸುತ್ತದೆ. ತುಟಿಯಿಂದ ತುಟಿಗೆ ಹಚ್ಚುವ ಚುಂಬನದಿಂದ ಓರ್ವ ವ್ಯಕ್ತಿಯ ಬ್ಯಾಕ್ಟೀರಿಯಾ ಸಹಾ ದಾಟಿ ಆ ವ್ಯಕ್ತಿಯಲ್ಲಿಯೂ ಆ ಬ್ಯಾಕ್ಟೀರಿಯಾ ವಿರುದ್ದ ಸೆಣಸಾಡಲು ರೋಗನಿರೋಧಕ ಶಕ್ತಿಯನ್ನು ಬೆಳೆಸಲು ನೆರವಾಗುತ್ತದೆ.

English summary

International kissing day special: Health benefits of kissing

Kissing is a common human trait and a universal language that will help in expressing your love in the easiest way. Kiss varies! It differs depending on the person whom you are kissing. The kiss to your mother will not be the same as that you share with your lover. Here is one more reason for you to continue kissing your dear ones. 
Story first published: Sunday, July 5, 2015, 12:26 [IST]
X
Desktop Bottom Promotion