For Quick Alerts
ALLOW NOTIFICATIONS  
For Daily Alerts

ಬೇಸಿಗೆಯಲ್ಲಿ ಕಾಡುವ ಹುಳುಕಡ್ಡಿ ಸಮಸ್ಯೆಗೆ ಪರಿಹಾರವೇನು?

By Deepak M
|

ರಿಂಗ್‌ವರ್ಮ್ ಅಂದರೆ ಕನ್ನಡದಲ್ಲಿ ತರ್ದು ಅಥವಾ ದದ್ದು, ದರ್ದು, ಹುಳುಕಡ್ಡಿ ಎಂದು ಕರೆಯುತ್ತಾರೆ. ಇದು ವಿಶೇಷವಾಗಿ ಬೇಸಿಗೆಯಲ್ಲಿ ನಮಗೆ ತೊಂದರೆ ಕೊಡುತ್ತದೆ. ಇದಕ್ಕೆ ಬೇಸಿಗೆಯಲ್ಲಿ ಕಂಡು ಬರುವ ಅತಿಯಾದ ಸೆಖೆಯೇ ಕಾರಣ. ಇದೊಂದು ಬಗೆಯ ತ್ವಚೆಯ ಅಲರ್ಜಿಯಾಗಿದ್ದು, ಅದು ತ್ವಚೆಯಲ್ಲಿ ಗುಳ್ಳೆಗಳನ್ನು ಉಂಟು ಮಾಡುತ್ತದೆ. ಈ ಹುಳುಕಡ್ಡಿ ಬರಲು ಇನ್‍ಫೆಕ್ಷನ್, ತ್ವಚೆಯಲ್ಲಿ ಮೊಯಿಶ್ಚರ್ ಕೊರತೆ ಇತ್ಯಾದಿಗಳು ಕಾರಣವಾಗಿರುತ್ತವೆ.

ಹುಳುಕಡ್ಡಿ ಅನ್ನು ಹೇಗೆ ನಿವಾರಿಸುವುದು? ಇದನ್ನು ಪರಿಹರಿಸಲು ನೀವು ವೈದ್ಯರ ಬಳಿ ಪರಿಹಾರವನ್ನು ಪಡೆಯುವುದು ಉತ್ತಮ. ಸಾಮಾನ್ಯವಾಗಿ ಕ್ರೀಮ್ ಅಥವಾ ಟ್ಯಾಬ್ಲೆಟ್ ಮೂಲಕ ಇದನ್ನು ನಿವಾರಿಸಬಹುದು. ವೃತ್ತಿಪರ ವೈದ್ಯರ ನೆರವನ್ನು ಇದಕ್ಕಾಗಿ ಪಡೆಯುವುದು ಸೂಕ್ತ. ಬೇಸಿಗೆಯ ಬಿಸಿಲು ಮತ್ತು ಬೆವರು ಈ ಫಂಗಸ್‌ನಿಂದ ಹರಡುವ ತ್ವಚೆಯ ಸಮಸ್ಯೆಯನ್ನು ನಿಮಗೆ ದಯಪಾಲಿಸುತ್ತವೆ.

ಈ ಫಂಗಸ್ ಇನ್‌ಫೆಕ್ಷನ್ ತ್ವಚೆಯಲ್ಲಿ ತುರಿಕೆ ಮತ್ತು ಕಿರಿಕಿರಿಯನ್ನು ತರುತ್ತದೆ. ಒಂದು ವೇಳೆ ಇದನ್ನು ಕೆರೆದುಕೊಳ್ಳಬೇಕು ಎಂದು ನಿಮಗೆ ಅನಿಸಿದರು ಸಹ ಅದನ್ನು ತಡೆದುಕೊಳ್ಳಿ. ಏಕೆಂದರೆ ನೀವು ಒಂದು ವೇಳೆ ನೀವು ಇದನ್ನು ಕೆರೆದುಕೊಂಡಲ್ಲಿ ಈ ಇನ್‍ಫೆಕ್ಷನ್ ಎಲ್ಲಾ ಕಡೆ ಹರಡಲು ನೀವೇ ಸಹಾಯ ಮಾಡಿದಂತಾಗುತ್ತದೆ. ಆದ್ದರಿಂದ ಕೆರೆದುಕೊಳ್ಳುವುದನ್ನು ನಿಯಂತ್ರಿಸಿಕೊಳ್ಳಿ. ತ್ವಚೆ ಅಲರ್ಜಿ ನಿವಾರಣೆಗೆ ಮನೆ ಮದ್ದು

ಇನ್‍ಫೆಕ್ಷನ್ ಇರುವ ಸಾಕು ಪ್ರಾಣಿಗಳು

ಇನ್‍ಫೆಕ್ಷನ್ ಇರುವ ಸಾಕು ಪ್ರಾಣಿಗಳು

ಒಂದು ವೇಳೆ ನಿಮ್ಮ ಸಾಕು ಪ್ರಾಣಿಗಳು ಇನ್‍ಫೆಕ್ಷನ್‍ಗೆ ಒಳಗಾಗಿದ್ದಲ್ಲಿ, ಅದನ್ನು ನೇರವಾಗಿ ಮುಟ್ಟಬೇಡಿ. ಮೊದಲು ಅದನ್ನು ಪ್ರಾಣಿ ತಜ್ಞರ ಬಳಿ ತೋರಿಸಿ, ಚಿಕಿತ್ಸೆ ಪಡೆದ ನಂತರ ಅದನ್ನು ಮುಟ್ಟಿ.

ವೈಯುಕ್ತಿಕ ಸ್ವಚ್ಛತೆಯನ್ನು ಕಾಪಾಡಿಕೊಳ್ಳಿ

ವೈಯುಕ್ತಿಕ ಸ್ವಚ್ಛತೆಯನ್ನು ಕಾಪಾಡಿಕೊಳ್ಳಿ

ನಿಮ್ಮ ವೈಯುಕ್ತಿಕ ಸ್ವಚ್ಛತೆಯನ್ನು ಕಾಪಾಡಿಕೊಳ್ಳಿ ಮತ್ತು ನಿಮ್ಮ ಸುತ್ತ ಮುತ್ತ ಸಹ ಸ್ವಚ್ಛತೆಯನ್ನು ಕಾಪಾಡಿ. ಏನಾದರು ಕೊಳೆಯನ್ನು ಮುಟ್ಟಿದರೆ ಮೊದಲು ಕೈಯನ್ನು ತೊಳೆದುಕೊಳ್ಳಿ. ನೀವು ಶುಚಿಯಾಗಿದ್ದಲ್ಲಿ ತ್ವಚೆಯ ಈ ಸಮಸ್ಯೆ ನಿಮ್ಮನ್ನು ಕಾಡುವುದಿಲ್ಲ.

ಟವೆಲ್‌ಗಳನ್ನು ಹಂಚಿಕೊಳ್ಳಲು ಹೋಗಬೇಡಿ

ಟವೆಲ್‌ಗಳನ್ನು ಹಂಚಿಕೊಳ್ಳಲು ಹೋಗಬೇಡಿ

ಯಾವುದೇ ಕಾರಣಕ್ಕು ನಿಮ್ಮ ಟವೆಲ್, ಒಳ ಉಡುಪುಗಳನ್ನು ಇತರರ ಜೊತೆಗೆ ಹಂಚಿಕೊಳ್ಳಬೇಡಿ. ಇದರಿಂದ ಇನ್‍ಫೆಕ್ಷನ್ ಸುಲಭವಾಗಿ ಒಬ್ಬರಿಂದ ಒಬ್ಬರಿಗೆ ಹರಡುತ್ತದೆ. ಒಂದು ವೇಳೆ ಇದನ್ನು ಬಳಸುವ ಮೊದಲು ಬಿಸಿ ನೀರಿನಲ್ಲಿ ಒಗೆದು ಬಳಸಿ.

ನಿಮ್ಮ ಮಕ್ಕಳಿಗೆ ಹೇಳಿ

ನಿಮ್ಮ ಮಕ್ಕಳಿಗೆ ಹೇಳಿ

ಇಂತಹ ತ್ವಚೆಯ ಸಮಸ್ಯೆಗಳನ್ನು ಹೇಗೆ ಎದುರಿಸಬೇಕು ಮತ್ತು ಮುಂಜಾಗರೂಕತೆ ಕ್ರಮಗಳನ್ನು ಹೇಗೆ ತೆಗೆದುಕೊಳ್ಳಬೇಕು ಎಂದು ನಿಮ್ಮ ಮಕ್ಕಳಿಗೆ ತಿಳಿಸಿಕೊಡಿ.

ಆಟದ ಮೈದಾನ

ಆಟದ ಮೈದಾನ

ಒಂದು ವೇಳೆ ನೀವು ಇತರರ ಜೊತೆಗೆ ಆಟದ ಮೈದಾನದಲ್ಲಿ ಕಳೆಯಬೇಕಾದಲ್ಲಿ, ಆಟ ಮುಗಿದ ತಕ್ಷಣ ಮೊದಲು ಕೈ ಕಾಲು ಮುಖವನ್ನು ಚೆನ್ನಾಗಿ ತೊಳೆಯುವ ಅಭ್ಯಾಸವನ್ನು ಇರಿಸಿಕೊಳ್ಳಿ.

ಒಣಗಿಸಿ

ಒಣಗಿಸಿ

ಸ್ನಾನ ಮುಗಿದ ತಕ್ಷಣ ನಿಮ್ಮ ದೇಹವನ್ನು ಚೆನ್ನಾಗಿ ಒಣಗಿಸಲು ಮರೆಯಬೇಡಿ. ಬೆವರು ಮತ್ತು ತೇವಾಂಶವು ಇನ್‍ಫೆಕ್ಷನ್ ಅನ್ನು ಹೆಚ್ಚು ಮಾಡುತ್ತದೆ.

ಬಟ್ಟೆಗಳು

ಬಟ್ಟೆಗಳು

ನಿಮ್ಮ ಬಟ್ಟೆಗಳು ಬೆವರನ್ನುಂಟು ಮಾಡುತ್ತದೆಯೇ ಎಂದು ಗಮನಿಸಿ. ಬೆವರುಕಾರಕ ಬಟ್ಟೆಗಳನ್ನು ಹೆಚ್ಚಾಗಿ ಧರಿಸಬೇಡಿ.

ಸಾರ್ವಜನಿಕ ಶೌಚಾಲಯಗಳು

ಸಾರ್ವಜನಿಕ ಶೌಚಾಲಯಗಳು

ಒಂದು ವೇಳೆ ನೀವು ಸಾರ್ವಜನಿಕ ಶೌಚಾಲಯಗಳನ್ನು ಬಳಸುತ್ತಿದ್ದಲ್ಲಿ, ಪಾದರಕ್ಷೆಗಳನ್ನು ಧರಿಸಿಕೊಂಡು ಹೋಗಿ. ಜೊತೆಗೆ ಜಿಮ್ ಮುಂತಾದ ಕಡೆಯಲ್ಲಿ ಸಹ ಆದಷ್ಟು ಎಚ್ಚರಿಕೆಯನ್ನು ವಹಿಸಿ.

English summary

How To Prevent Ringworm

It is very important to know how to prevent ringworm especially in summer. Summers are generally sweaty and ringworm is a skin allergy which causes a rash on your skin. Though there are many causes behind the ringworm infection, moisture on your skin is one main triggering factor.
X
Desktop Bottom Promotion