For Quick Alerts
ALLOW NOTIFICATIONS  
For Daily Alerts

ಮೂಳೆ ಸಂದುಗಳ ನೋವು, ಮುನ್ನೆಚ್ಚರಿಕೆ ಕ್ರಮ ಅರಿಯಿರಿ

|

ನಮ್ಮ ದೇಹದ ಚಲನೆಗೆ ಮೂಳೆಗಳ ನಡುವಣ ಸಂದುಗಳಲ್ಲಿ ಸಾಕಷ್ಟು ಲೋಳೆಯಿರುವುದು ಮುಖ್ಯ. synovial fluid ಎಂದು ಕರೆಯಲಾಗುವ ಈ ದ್ರವ ಮೂಳೆಗಳ ಆರೋಗ್ಯವನ್ನು ಕಾಪಾಡುವಲ್ಲಿ ಪ್ರಮುಖ ಪಾತ್ರವಹಿಸುತ್ತದೆ. ನಡೆಯುವಾಗ ಮತ್ತು ಓಡುವಾಗ ಶರೀರದ ಭಾರ ಮೂಳೆಗಳ ಮೇಲೆ ಬಿದ್ದಾಗ ಆಗುವ ಘರ್ಷಣೆಯನ್ನೂ ಈ ದ್ರವ ತಡೆದುಕೊಳ್ಳುತ್ತದೆ.

ಆದರೆ ವಯಸ್ಸಾದಂತೆ ಈ ದ್ರವದ ಪ್ರಮಾಣದಲ್ಲಿ ಕಡಿಮೆಯಾಗುತ್ತಾ ಹೋಗುತ್ತದೆ. ಆಗ ಮೂಳೆಗೆ ಮೂಳೆ ನೇರವಾಗಿ ತಗಲುವುದರಿಂದ ಮೂಳೆ ಸಂದುಗಳಲ್ಲಿ ನೋವು, ಸುತ್ತಲ ಭಾಗ ಕೆಂಪಗಾಗುವುದು, ಉರಿ ಮೊದಲಾದ ತೊಂದರೆಗಳು ಎದುರಾಗುತ್ತದೆ. ಒಂದು ವೇಳೆ ಮೂಳೆಸಂದುಗಳಲ್ಲಿ ನೋವು ಕಂಡುಬಂದರೆ ಕೂಡಲೇ ವೈದ್ಯರಿಂದ ತಪಾಸಣೆಗೊಳಪಡುವುದು ಅಗತ್ಯ. ಮಂಡಿ ನೋವಿಗೆ ಇಲ್ಲಿದೆ ನೋಡಿ ಸುಲಭ ಪರಿಹಾರ!

ಒಂದು ವೇಳೆ ಈ ನೋವನ್ನು ಕಡೆಗಣಿಸಿದರೆ ಇದು ಉಲ್ಬಣಗೊಂಡು ಸಂಧಿವಾತಕ್ಕೆ (arthritis) ಕಾರಣವಾಗಬಹುದು. ಏಕೆಂದರೆ ನಮ್ಮ ಬೆರಳುಗಳ ಮೂಳೆಗಳು ಅತಿ ಚಿಕ್ಕವೂ, ಸೂಕ್ಷ್ಮವೂ ಆಗಿದ್ದು ಬೇಗನೇ ತೊಂದರೆಗೆ ಗುರಿಯಾಗುತ್ತದೆ. ಈ ಪರಿಸ್ಥಿತಿ ಬಂದ ಮೇಲೆ ವೈದ್ಯರ ಸೂಚನೆ ಪಾಲಿಸುವುದಕ್ಕಿಂತ ಕೊಂಚ ಮುನ್ನೆಚ್ಚರಿಕೆ ವಹಿಸಿ ಈ ಪರಿಸ್ಥಿತಿ ಬರದೇ ಇರದಂತೆ ನೋಡಿಕೊಳ್ಳುವುದು ಜಾಣತನ.

ಸೂಕ್ತ ಆಹಾರ, ನಿಯಮಿತ ವ್ಯಾಯಾಮ ಮತ್ತು ದೈಹಿಕ ಚಟುವಟಿಕೆಗಳು, ನಿಮ್ಮ ನಡೆಯುವ ಮತ್ತು ಕುಳಿತುಕೊಳ್ಳುವ ಭಂಗಿ ಮೊದಲಾದವುಗಳನ್ನು ಸುಧಾರಿಸುವ ಮೂಲಕ ಸಂದಿವಾತಕ್ಕೆ ಒಳಗಾಗುವ ಸಾಧ್ಯತೆಯನ್ನು ಕಡಿಮೆಗೊಳಿಸಬಹುದು. ಜಾಣರಾಗುವ ಇರಾದೆಯಿದ್ದರೆ ಕೆಳಗಿನ ಸ್ಲೈಡ್ ಶೋ ನೋಡುತ್ತಾ ಸಾಗಿ, ಅನುಸರಿಸಿ, ಆರೋಗ್ಯವಂತರಾಗಿ.. ಮೊಣಕಾಲು ನೋವಿಗಾಗಿ ಮನೆ ಮದ್ದು

ನಿಮ್ಮ ಆಹಾರವನ್ನು ಗಮನಿಸಿ

ನಿಮ್ಮ ಆಹಾರವನ್ನು ಗಮನಿಸಿ

ನಿಮ್ಮ ಆಹಾರದಲ್ಲಿ ಒಮೆಗಾ-3 ಕೊಬ್ಬಿನ ತೈಲ (omega-3 fatty acids) ಸಾಕಷ್ಟು ಪ್ರಮಾಣದಲ್ಲಿರುವಂತೆ ನೋಡಿಕೊಳ್ಳಿ. ಸಾಲ್ಮನ್ ಮೀನು, ಅಗಸೆ ಬೀಜ, ಮೀನು, ಸೋಯಾ ಅವರೆ, ಸಿಗಡಿ, ಹೂಕೋಸು ಮೊದಲಾದವುಗಳಲ್ಲಿ ಇವು ಧಾರಾಳವಾಗಿರುತ್ತವೆ. ಅಲ್ಲದೇ ಉರಿಯೂತವನ್ನು ಕಡಿಮೆಗೊಳಿಸುವ ಗುಣವಿರುವ ಬೀನ್ಸ್ ಮತ್ತು ವಿವಿಧ ಒಣಫಲಗಳನ್ನು ನಿಯಮಿತವಾಗಿ ಸೇವಿಸುತ್ತಿರುವುದರಿಂದ ಸಂಧಿವಾತಕ್ಕೆ ಗುರಿಯಾಗುವ ಸಂಭವವನ್ನು ಕಡಿಮೆಗೊಳಿಸಬಹುದು.

ನಿಮ್ಮ ತೂಕವನ್ನು ನಿಯಂತ್ರಿಸಿ

ನಿಮ್ಮ ತೂಕವನ್ನು ನಿಯಂತ್ರಿಸಿ

ನಿಮ್ಮ ದೇಹದ ತೂಕ ಹೆಚ್ಚಾದಷ್ಟೂ ನಿಮ್ಮ ಮೂಳೆಗಳು ಹೊರಬೇಕಾದ ಭಾರವೂ ಹೆಚ್ಚುತ್ತದೆ. ಮೂಳೆಸಂದುಗಳ ನಡುವಣ ದ್ರವ ಅತಿಹೆಚ್ಚು ಒತ್ತಡಕ್ಕೆ ಒಳಗಾಗಿ ದೂರ ಸರಿಯುವುದರಿಂದ ಮೂಳೆಗಳು ಒಂದಕ್ಕೊಂದು ತಾಗುವ ಸಂಭವ ಹೆಚ್ಚಾಗುತ್ತದೆ. ಆದ್ದರಿಂದ ನಿಮ್ಮ ವಯಸ್ಸಿಗೆ ತಕ್ಕಂತೆ ತೂಕವನ್ನೂ ನಿಯಂತ್ರಣದಲ್ಲಿಟ್ಟುಕೊಳ್ಳುವುದು ಅಗತ್ಯ.

ದೈಹಿಕ ಚಟುವಟಿಕೆಗಳಲ್ಲಿ ವ್ಯಸ್ತರಾಗಿ

ದೈಹಿಕ ಚಟುವಟಿಕೆಗಳಲ್ಲಿ ವ್ಯಸ್ತರಾಗಿ

ನಮ್ಮ ದೇಹದ ಸ್ನಾಯುಗಳಿಗೆ ವ್ಯಾಯಾಮ ಅಗತ್ಯವಿರುವಂತೆಯೇ ಮೂಳೆಸಂದುಗಳಿಗೂ ಅಗತ್ಯವಿದೆ. ಆದ್ದರಿಂದ ಹೆಚ್ಚು ಹೊತ್ತು ಒಂದೆಡೆ ಕುಳಿತಿರದೇ ಸಾಧ್ಯವಾದಷ್ಟು ದೈಹಿಕ ಚಟುವಟಿಕೆಯಲ್ಲಿ ದೇಹವನ್ನು ವ್ಯಸ್ತರಾಗಿಸಿ. ಇದರಿಂದ synovial fluid ದ್ರವವೂ ಸತತವಾಗಿ ಉತ್ಪತ್ತಿಯಾಗುತ್ತಲೇ ಇರಲು ಸಾಧ್ಯವಾಗುತ್ತದೆ.

ಧೂಮಪಾನಿಯಾಗಿದ್ದರೆ ಬಿಡುವತ್ತ ಒಲವು ತೋರಿ

ಧೂಮಪಾನಿಯಾಗಿದ್ದರೆ ಬಿಡುವತ್ತ ಒಲವು ತೋರಿ

synovial fluid ದ್ರವ ನೀರುನೀರಾಗಲು ಧೂಮಪಾನದ ಮೂಲಕ ಆಗಮನವಾಗುವ ನಿಕೋಟಿನ್ ಕಾರಣವಾಗಿದೆ. ಈ ಬಗ್ಗೆ ಸಂಶೋಧನೆಯೊಂದು ಹೀಗೆ ಹೇಳುತ್ತದೆ: "An excessive citrullination of peptides in the lungs of smokers has been suggested as a direct link between smoking and the formation of antibodies to citrullinated peptides, which can be found in approximately 60% of Rheumatoid arthritis patients" ಅಂದರೆ ಧೂಮಪಾನದಿಂದ ರ್‍ಯೂಮಾಟಿಕ್ ಸಂಧಿವಾತ ಬರುವ ಸಾಧ್ಯತೆ ಅರವತ್ತು ಶೇಖಡಾ ಹೆಚ್ಚುತ್ತದೆ. ಧೂಮಪಾನ ಬಿಡಲು ಸಾಧ್ಯವಿಲ್ಲ ಎಂದು ಹೇಳಬೇಡಿ. ಇದಕ್ಕೆ ಬೇಕಾಗಿರುವುದು ಬಿಟ್ಟು ಬಿಡುವ ದೃಢ ನಿರ್ಧಾರ ಮಾತ್ರ. ಉಳಿದುದನ್ನು ನಿಮ್ಮ ವೈದ್ಯರು ನೋಡಿಕೊಳ್ಳುತ್ತಾರೆ.

ನಿಮ್ಮ ಕುಳಿತುಕೊಳ್ಳುವ ಮತ್ತು ನಿಲ್ಲುವ ಭಂಗಿಯನ್ನು ಗಮನಿಸಿ

ನಿಮ್ಮ ಕುಳಿತುಕೊಳ್ಳುವ ಮತ್ತು ನಿಲ್ಲುವ ಭಂಗಿಯನ್ನು ಗಮನಿಸಿ

ಚಿಕ್ಕವಯಸ್ಸಿನಿಂದಲೇ ಬೆನ್ನುಮೂಳೆಯನ್ನು ಹಿಂದಾಗಿಸಿ ಆರಾಮವಾಗಿ ಕುಳಿತುಕೊಳ್ಳುತ್ತಾ ಬಂದ ಅಭ್ಯಾಸವಿದ್ದರೆ ಕೂಡಲೇ ಇದನ್ನು ಬದಲಿಸಿ. ಕೊಂಚ ಅನಾನುಕೂಲ ಎನಿಸಿದರೂ ಮುಂದಿನ ದಿನಗಳಲ್ಲಿ ಆಗುವ ನೋವನ್ನು ತಡೆದುಕೊಳ್ಳಲು ಈಗ ಬೆನ್ನನ್ನು ನೆಟ್ಟಗಾಗಿಸಿಕೊಳ್ಳುವುದು ಜಾಣತನ. ಅಂತೆಯೇ ನಿಲ್ಲುವ ಭಂಗಿ, ಭಾರ ಎತ್ತುವ ಮೊದಲಾದ ಭಂಗಿಗಳನ್ನು ಗಮನಿಸಿ. ಮೂಳೆಗಳ ಮೇಲೆ ಹೆಚ್ಚು ಒತ್ತಡ ಬೀಳುವ ಯಾವುದೇ ವಿಧಾನ ಅನುಸರಿಸಬೇಡಿ. ನಿಮ್ಮ ವೈದ್ಯರು ಈ ಬಗ್ಗೆ ಸೂಕ್ತ ಮಾರ್ಗದರ್ಶನ ನೀಡಬಲ್ಲರು.

ಭಾರ ಎತ್ತುವಾಗ ಜಾಗ್ರತೆ ವಹಿಸಿ

ಭಾರ ಎತ್ತುವಾಗ ಜಾಗ್ರತೆ ವಹಿಸಿ

ಭಾರವಾದ ವಸ್ತುಗಳನ್ನು ಒಬ್ಬರೇ ಎತ್ತಲು ಹೋಗಬೇಡಿ. ಸಹಾಯ ಪಡೆಯಿರಿ. ಅನಿವಾರ್ಯ ಸಂದರ್ಭಗಳಲ್ಲಿ ಭಾರವನ್ನು ಸೂಕ್ತ ಭಂಗಿಯಲ್ಲಿಯೇ ಎತ್ತಿ. ಉದಾಹರಣೆಗೆ ಮೊಣಕಾಲು ಮಡಚದೇ ಬೆನ್ನು ಬಗ್ಗಿಸಿ ಎತ್ತುವುದು ಅಪಾಯಕರ. ಬದಲಿಗೆ ಮೊಣಕಾಲು ಮಡಚಿ ಬೆನ್ನು ನೆಟ್ಟಗಿದ್ದಂತೆಯೇ ಎತ್ತುವುದು ಉತ್ತಮ ವಿಧಾನವಾಗಿದೆ.

ಒತ್ತಡಕ್ಕೆ ಒಳಗಾಗಬೇಡಿ

ಒತ್ತಡಕ್ಕೆ ಒಳಗಾಗಬೇಡಿ

ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಒತ್ತಡ ಸಾಮಾನ್ಯವಾಗಿದೆ. ಆದರೆ ಒತ್ತಡ ಹೆಚ್ಚಿದ್ದಷ್ಟೂ ಮೆದುಳಿನ ಚಟುವಟಿಕೆಗೆ ಹೆಚ್ಚಿನ ರಕ್ತ ಪೂರೈಕೆಯಾಗಿ ದೇಹದ ಇತರ ಭಾಗಗಳಿಗೆ ಪೂರೈಕೆ ಕಡಿಮೆಯಾಗುತ್ತದೆ. ಮೂಳೆಸಂದುಗಳೂ ಇದರಲ್ಲಿ ಒಂದು.

ಮುಚ್ಚಳ ತೆರೆಯಲು ಉಗುರನ್ನು ಬಳಸಬೇಡಿ

ಮುಚ್ಚಳ ತೆರೆಯಲು ಉಗುರನ್ನು ಬಳಸಬೇಡಿ

ಡಬ್ಬಿಗಳ ಮುಚ್ಚಳ ತೆರೆಯಲು, ಹಾಳೆಗಳನ್ನು ಬಂಧಿಸಿದ್ದ ಸ್ಟ್ಯಾಪ್ಲರ್ ಪಿನ್ ಕಳಚಲು ಬೆರಳುಗಳ ಮೇಲೆ ಹೆಚ್ಚಿನ ಒತ್ತಡ ಹಾಕಬೇಡಿ. ಸರಳ ಸನ್ನೆಗಳನ್ನು ಉಪಯೋಗಿಸಿ. ಇದರಿಂದ ವಯಸ್ಸಾಗುತ್ತಿದ್ದಂತೆಯೇ ಬೆರಳುಗಳು ಸಂಧಿವಾತಕ್ಕೆ ಒಳಗಾಗುವ ಸಾಧ್ಯತೆ ಹೆಚ್ಚುತ್ತಾ ಹೋಗುತ್ತದೆ.

English summary

How To Prevent Joint Damage

How to prevent joint damage as your age advances? Well, putting aside all other solutions, the first thing you can do is strengthening your joints. If you experience pain or redness in your joints, it is always better to go for a check-up to eliminate certain health conditions.
Story first published: Thursday, August 6, 2015, 15:07 [IST]
X
Desktop Bottom Promotion