For Quick Alerts
ALLOW NOTIFICATIONS  
For Daily Alerts

ಆರೋಗ್ಯದ ಸ್ಥಿತಿಯನ್ನು ಸ್ಪಷ್ಟವಾಗಿ ಸೂಚಿಸುವ ಕಣ್ಣುಗಳ ಬಣ್ಣ!

By Super
|

ನಮ್ಮ ಶರೀರದ ಅತಿ ಸೂಕ್ಷ್ಮ ಮತ್ತು ಮುಖ್ಯವಾದ ಅಂಗಗಳೆಂದರೆ ಕಣ್ಣುಗಳು. ಕಣ್ಣುಗಳ ವರ್ಣನೆಯನ್ನು ಕವಿಗಳು ಸೌಂದರ್ಯದ ಪ್ರತೀಕವಾಗಿ ಸೂಚಿಸಿದರೆ ಇದಕ್ಕೆ ವಿರುದ್ಧವಾಗಿ ಕಣ್ಣುಗಳು ನಮ್ಮ ಆರೋಗ್ಯದ ಸ್ಥಿತಿಯನ್ನು ಸೂಚಿಸುತ್ತವೆ. ಅಷ್ಟೇ ಅಲ್ಲ, ಶರೀರಕ್ಕೆ ಮುಂದೆ ಆಗಮಿಸಬಹುದಾದ ದೊಡ್ಡ ತೊಂದರೆಯ ಮುನ್ಸೂಚನೆಯನ್ನೂ ನೀಡುತ್ತವೆ.

ನಾವು ನೋಡುವ ಕಣ್ಣುಗಳ ಹೊರಭಾಗ ಕೇವಲ ಮೂರರಲ್ಲಿ ಒಂದರಷ್ಟಿದ್ದು ಇನ್ನುಳಿದ ಭಾಗ ಕಣ್ಣುಗುಡ್ಡೆಯ ಒಳಗಿರುತ್ತದೆ. ಹೊರಗೆ ಕಾಣುವ ಭಾಗ ಬಿಳಿಯ ಭಾಗದ ನಡುವಣ ವೃತ್ತಾಕಾರದ ಕಣ್ಣಿನ ಪಾಪೆಯ ಬಣ್ಣ ಕಣ್ಣಿನ ನೈಜ ಬಣ್ಣವಾಗಿದೆ. ಆರೋಗ್ಯವಂತ ಶರೀರದ ಕಣ್ಣು ಸಹಜವರ್ಣದಲ್ಲಿದ್ದರೆ ಅನಾರೋಗ್ಯ ಈ ಬಣ್ಣವನ್ನು ಬದಲಿಸುತ್ತದೆ. ಉದಾಹರಣೆಗೆ ನೀಲಿ, ಬೂದು, ನಸುಗಂದು ಇತ್ಯಾದಿ ಬಣ್ಣಗಳು ದೇಹದ ಅನಾರೋಗ್ಯದ ಸ್ಥಿತಿಯನ್ನು ಸ್ಪಷ್ಟವಾಗಿ ತಿಳಿಸುತ್ತವೆ. ನಿಜಕ್ಕೂ ಕಣ್ಣಿನ ಬಣ್ಣ ವ್ಯಕ್ತಿಯ ವ್ಯಕ್ತಿತ್ವವನ್ನು ಬಣ್ಣಿಸುತ್ತದೆಯೇ?

ಕ್ಯಾಟರಾಕ್ಟ್, ಯಕೃತ್ ತೊಂದರೆ, ಕ್ಯಾನ್ಸರ್, ತೊನ್ನು ಮೊದಲಾದ ತೊಂದರೆಗಳನ್ನು ಕಣ್ಣಿನ ಬಣ್ಣ ಸ್ಪಷ್ಟವಾಗಿ ತಿಳಿಸುತ್ತವೆ. ಒಂದು ಸಂಶೋಧನೆಯಲ್ಲಿ ಕಣ್ಣಿನ ಈ ಬಣ್ಣಗಳು ವಿವಿಧ ಕಾಯಿಲೆಗಳ ಸೂಚನೆಗಳನ್ನು ಸೂಚಿಸುತ್ತವೆ ಎಂದು ಕಂಡುಕೊಳ್ಳಲಾಗಿದೆ. ಅಲ್ಲದೇ ಮಾನಸಿಕ ಕಾಯಿಲೆಗಳಾದ ಖಿನ್ನತೆ, ಮನೋಭಾವದಲ್ಲಿ ತೀವ್ರತರದ ಏರುಪೇರಾಗುವ bipolar disorder ಎಂಬ ಸ್ಥಿತಿ, ಸ್ಕೀಜೋಫ್ರೀನಿಯಾ (schizophrenia) ಎಂಬ ದ್ವಂದ್ವ ವ್ಯಕ್ತಿತ್ವ ಮೊದಲಾದವುಗಳನ್ನೂ ಕಣ್ಣಿನ ಬಣ್ಣ ಪ್ರಚುರಪಡಿಸುತ್ತದೆ.

ಕೆಳಗಿನ ಸ್ಲೈಡ್ ಶೋ ಮೂಲಕ ನೀಡಲಾಗಿರುವ ಮಾಹಿತಿಗಳು ನಿಮ್ಮನ್ನು ಅಚ್ಚರಿಯ ಕೂಪಕ್ಕೆ ತಳ್ಳುತ್ತವೆ. ಒಂದು ವೇಳೆ ನಿಮ್ಮ ಕಣ್ಣಿನ ಬಣ್ಣ ಬದಲಾಗಿರುವುದು ನಿಮ್ಮ ಗಮನಕ್ಕೆ ಬಂದರೆ ಕೂಡಲೇ ವೈದ್ಯರನ್ನು ಕಂಡು ತಪಾಸಣೆಗೊಳಗಾಗಿ ಮುಂಬರುವ ಆಪತ್ತಿನಿಂದ ಪಾರಾಗಲು ಸಾಧ್ಯ.

ತಿಳಿಯಾಗಿರುವ ಕಣ್ಣಿನ ಬಣ್ಣಗಳು

ತಿಳಿಯಾಗಿರುವ ಕಣ್ಣಿನ ಬಣ್ಣಗಳು

ಒಂದು ವೇಳೆ ಕಣ್ಣಿನ ಪಾಪೆಯ ಬಣ್ಣ ತನ್ನ ಸಹಜವರ್ಣದಲ್ಲಿಯೇ ಕೊಂಚ ತಿಳಿಯಾಗಿದ್ದರೆ (ಅಂದರೆ ಕಂದು ಬಣ್ಣಕ್ಕಿದ್ದು ನಸುಗಂದು, ಕಪ್ಪಗಿದ್ದುದು ನಸುಗಪ್ಪು ಆಗಿದ್ದರೆ ಇತ್ಯಾದಿ) ಇದು ಅಕ್ಷಿಪಟಲದ ಅವನತಿ (macular degeneration) ಎಂಬ ಸ್ಥಿತಿಯ ಲಕ್ಷಣವಾಗಿದೆ. ಮುಂದಿನ ಸ್ಲೈಡ್ ಕ್ಲಿಕ್ ಮಾಡಿ

ತಿಳಿಯಾಗಿರುವ ಕಣ್ಣಿನ ಬಣ್ಣಗಳು

ತಿಳಿಯಾಗಿರುವ ಕಣ್ಣಿನ ಬಣ್ಣಗಳು

ಇದು ಶಾಶ್ವತ ಕುರುಡು ತರಿಸುವ ಸ್ಥಿತಿಯ ಮುನ್ನೆಚ್ಚರಿಕೆಯಾಗಿದ್ದು ಹೆಚ್ಚಾಗಿ ಅರವತ್ತು ದಾಟಿದ ಹಿರಿಯರಲ್ಲಿ ಕಾಣಿಸಿಕೊಳ್ಳುತ್ತದೆ. ಸೂಕ್ತ ಸಮಯದಲ್ಲಿ ಚಿಕಿತ್ಸೆ ಪಡೆಯುವ ಮೂಲಕ ಇದರ ಪರಿಣಾಮವನ್ನು ಆದಷ್ಟು ಮುಂದೆ ಹಾಕಬಹುದು ಅಥವಾ ಇನ್ನಷ್ಟು ಹಾಳಾಗದಂತೆ ನಿಲ್ಲಿಸಬಹುದು.

ಪ್ರಖರವಾದ ಕಣ್ಣುಗಳು ನೋವು ತಡೆದುಕೊಳ್ಳುವ ಶಕ್ತಿ ಪ್ರಕಟಿಸಬಲ್ಲವು

ಪ್ರಖರವಾದ ಕಣ್ಣುಗಳು ನೋವು ತಡೆದುಕೊಳ್ಳುವ ಶಕ್ತಿ ಪ್ರಕಟಿಸಬಲ್ಲವು

American Pain Society ಎಂಬ ಸಂಸ್ಥೆ ನಡೆಸಿದ ಸಂಶೋಧನೆಯ ಪ್ರಕಾರ ತಿಳಿ ಮತ್ತು ಪ್ರಖರ ಬಣ್ಣದ ಕಣ್ಣುಗಳನ್ನು ಹೊಂದಿರುವ ಮಹಿಳೆಯರು ದಟ್ಟವರ್ಣದ ಕಣ್ಣಿನ ಬಣ್ಣವನ್ನು ಹೊಂದಿರುವ ಮಹಿಳೆಯರಿಗಿಂತಲೂ ಹೆಚ್ಚು ನೋವನ್ನು ಸಹಿಸಲು ಸಮರ್ಥರಿರುತ್ತಾರೆ. ಮುಂದಿನ ಸ್ಲೈಡ್ ಕ್ಲಿಕ್ ಮಾಡಿ

ಪ್ರಖರವಾದ ಕಣ್ಣುಗಳು ನೋವು ತಡೆದುಕೊಳ್ಳುವ ಶಕ್ತಿ ಪ್ರಕಟಿಸಬಲ್ಲವು

ಪ್ರಖರವಾದ ಕಣ್ಣುಗಳು ನೋವು ತಡೆದುಕೊಳ್ಳುವ ಶಕ್ತಿ ಪ್ರಕಟಿಸಬಲ್ಲವು

ವಿಶೇಷವಾಗಿ ಹೆರಿಗೆ ನೋವನ್ನು ಇವರು ಸುಲಭವಾಗಿ ತಡೆದುಕೊಳ್ಳಬಲ್ಲರು. ಅಲ್ಲದೇ ಇವರು ಯಾವುದೇ ಪರಿಸ್ಥಿತಿಯಲ್ಲಿ ಸ್ಥಿತಪ್ರಜ್ಞರಾಗಿದ್ದು ಉದ್ವೇಗಕ್ಕೆ ಒಳಗಾಗದೇ ಇರುತ್ತಾರೆ ಮತ್ತು ಸುಖನಿದ್ದೆಯನ್ನು ಪಡೆಯುವವರಾಗಿರುತ್ತಾರೆ.

ತಿಳಿಯಾದ ಪಾಪೆಯ ಬಣ್ಣ ಮದ್ಯದ ಅಮಲಿನ ಲಕ್ಷಣವಾಗಿದೆ

ತಿಳಿಯಾದ ಪಾಪೆಯ ಬಣ್ಣ ಮದ್ಯದ ಅಮಲಿನ ಲಕ್ಷಣವಾಗಿದೆ

ದಟ್ಟವರ್ಣದ ಕಣ್ಣುಗಳಿರುವವರು ತಿಳಿವರ್ಣದ ಬಣ್ಣದ ಕಣ್ಣಿನವರಿಗೆ ಹೋಲಿಸಿದರೆ ಮದ್ಯದ ಪ್ರಭಾವಕ್ಕೆ ಹೆಚ್ಚು ಒಳಗಾಗುತ್ತಾರೆ. ಮದ್ಯದ ಅಮಲಿನಲ್ಲಿ ಕಣ್ಣಿನ ಬಣ್ಣ ಕೊಂಚವೇ ತಿಳಿಯಾಗುತ್ತದೆ. ಅಂದರೆ ತಿಳಿಯಾಗಿರುವ ಅಕ್ಷಿಪಟಲದ ಬಣ್ಣ ಮದ್ಯದ ಸೇವನೆಯನ್ನು ಸೂಚಿಸುತ್ತದೆ. ಆದ್ದರಿಂದ ಇವರು ಮದ್ಯದಿಂದ ದೂರವಿರುವುದು ಅಥವಾ ಅಲ್ಪ ಪ್ರಮಾಣದಲ್ಲಿ ಸೇವಿಸುವುದು ಉತ್ತಮ. ತಿಳಿಬಣ್ಣದ ಕಣ್ಣಿನವರಲ್ಲಿ ಮದ್ಯದ ಅಮಲು ಸುಲಭವಾಗಿ ಗೋಚರವಾಗುವುದಿಲ್ಲ.

ತಿಳಿ ಹಳದಿ ಬಣ್ಣ ಕಾಮಾಲೆಯ ಸೂಚನೆಯಾಗಿದೆ

ತಿಳಿ ಹಳದಿ ಬಣ್ಣ ಕಾಮಾಲೆಯ ಸೂಚನೆಯಾಗಿದೆ

ಒಂದು ವೇಳೆ ಕಣ್ಣಿನ ಬಿಳಿಬಣ್ಣ ಹಳದಿಯಾಗಿದ್ದರೆ ಯಕೃತ್ ಗೆ ಸಂಬಂಧಿಸಿದ ಕಾಮಾಲೆ ಅಥವಾ ಜಾಂಡೀಸ್ ರೋಗದ ಲಕ್ಷಣವಾಗಿದೆ. ಇದೇ ಕಾರಣಕ್ಕೆ 'ಕಾಮಾಲೆ ಬಂದವನಿಗೆ ಲೋಕವೆಲ್ಲಾ ಹಳದಿಯಾಗಿ ಕಾಣುತ್ತದೆ' ಎಂಬ ಕನ್ನಡ ಗಾದೆ ಹುಟ್ಟಿಕೊಂಡಿದೆ.

ಪಾಪೆ ಇನ್ನಷ್ಟು ದಟ್ಟವಾಗುವುದು ಕ್ಯಾಟರಾಕ್ಟ್ ನ ಸಂಕೇತವಾಗಿದೆ

ಪಾಪೆ ಇನ್ನಷ್ಟು ದಟ್ಟವಾಗುವುದು ಕ್ಯಾಟರಾಕ್ಟ್ ನ ಸಂಕೇತವಾಗಿದೆ

ಒಂದು ವೇಳೆ ಕಣ್ಣಿನ ಬಣ್ಣ ತನ್ನ ಸಹಜಬಣ್ಣಕ್ಕಿಂತ ಹೆಚ್ಚು ದಟ್ಟವಾಗಿದ್ದರೆ ಇದು ಕ್ಯಾಟರಾಕ್ಟ್ ಎಂಬ ರೋಗದ ಲಕ್ಷಣವಾಗಿರಬಹುದು. ತಕ್ಷಣವೇ ವೈದ್ಯರನ್ನು ಕಂಡು ಪರೀಕ್ಷೆಗೆ ಒಳಪಡುವುದು ಅನಿವಾರ್ಯ. ಏಕೆಂದರೆ ಕ್ಯಾಟರಾಕ್ಟ್ ನ ಪ್ರಭಾವ ನೇರವಾಗಿ ಅಂಧತ್ವದತ್ತ ದೂಡುತ್ತದೆ.

ಕಂದು, ಬೂದು ಅಥವಾ ಹಸಿರು ಬಣ್ಣದ ಕಣ್ಣುಗಳು

ಕಂದು, ಬೂದು ಅಥವಾ ಹಸಿರು ಬಣ್ಣದ ಕಣ್ಣುಗಳು

ಬೂದು, ಕಂದು ಅಥವಾ ಹಸಿರು ಕಣ್ಣಿನ ವ್ಯಕ್ತಿಗಳು ಚರ್ಮದ ಬಣ್ಣ ಬದಲಾಗುವ ತೊನ್ನು ರೋಗಕ್ಕೆ ಗುರಿಯಾಗುವ ಸಾಧ್ಯತೆ ಹೆಚ್ಚು. ಇದಕ್ಕೆ ನಮ್ಮ ದೇಹದ ರೋಗ ನಿರೋಧಕ ಶಕ್ತಿ ಚರ್ಮದ ವಿರುದ್ಧ ಮುಗಿಬೀಳುವುದೇ ಕಾರಣ. ಆದರೆ ಇದನ್ನು ತಡೆಯುವ ಔಷಧಿ ಇನ್ನೂ ಲಭ್ಯವಿಲ್ಲ. ಆದರೆ ಈ ಬಣ್ಣದ ಕಣ್ಣಿನವರು ನಿಯಮಿತವಾಗಿ ತಪಾಸಣೆಗೊಳಗಾಗುತ್ತಿರುವ ಮೂಲಕ ತಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಲು ಸಾಧ್ಯವಾಗುತ್ತದೆ.

ನೀಲಿ ಕಣ್ಣುಗಳು ಕ್ಯಾನ್ಸರ್ ಸಂಕೇತವಾಗಿವೆ

ನೀಲಿ ಕಣ್ಣುಗಳು ಕ್ಯಾನ್ಸರ್ ಸಂಕೇತವಾಗಿವೆ

ವೈಜ್ಞಾನಿಕ ಸಂಶೋಧನೆಗಳ ಪ್ರಕಾರ ನೀಲಿ ಕಣ್ಣುಗಳಿರುವ ವ್ಯಕ್ತಿಗಳು ಕ್ಯಾನ್ಸರ್ ರೋಗಕ್ಕೆ ಸುಲಭವಾಗಿ ತುತ್ತಾಗುತ್ತಾರೆ. ಇವರಲ್ಲಿ ಕ್ಯಾನ್ಸರ್ ಕಣಗಳನ್ನು ಹೊಡೆದೋಡಿಸಲು ಶಕ್ತಿ ಕಡಿಮೆ ಇರುವುದೇ ಇದಕ್ಕೆ ಕಾರಣ.

English summary

How Is Eye Colour Related To Your Health

It is said that "eyes are the mirrors of our soul", as you must have heard people saying that "your eyes can say everything about you". In the same way, your eyes can say much more about your internal health and also warn you about some incoming diseases.
X
Desktop Bottom Promotion