For Quick Alerts
ALLOW NOTIFICATIONS  
For Daily Alerts

ಸುಳಿವು ಕೊಡದೇ ಕಾಡುವ ರೋಗ-ಹೆಪಟೈಟಿಸ್ ಬಿ!

By Super
|

ನಮ್ಮ ದೇಹ ಸುದೃಢವಾಗಲು ನಮ್ಮ ಮೇಲೆ ವಿವಿಧ ಕೀಟಾಣುಗಳ, ವೈರಸ್ಸುಗಳ ಧಾಳಿಯಾಗಬೇಕು. ಆಗಲೇ ನಮ್ಮ ದೇಹದ ರೋಗನಿರೋಧಕ ಶಕ್ತಿ ಇದರ ವಿರುದ್ಧ ಸೆಣಸುವ ಶಕ್ತಿ ಪಡೆದುಕೊಳ್ಳುತ್ತದೆ. ಅಂತೆಯೇ ಹೆಪಟೈಟಿಸ್ ಬಿ ಸಹಾ ಒಂದು ವೈರಸ್ ಆಗಿದ್ದು ವಯಸ್ಕರಲ್ಲಿ ಕನಿಷ್ಠ ಒಂದು ಬಾರಿಯಾದರೂ ಈ ವೈರಾಣು ದಾಳಿ ಮಾಡಿಯೇ ಇರುತ್ತದೆ. ಆದರೆ ನಮ್ಮ ದೇಹದ ರೋಗ ನಿರೋಧಕ ಶಕ್ತಿ ಇದನ್ನು ಸದೆಬಡಿಯುವ ಕ್ಷಮತೆ ಪಡೆದಿರುತ್ತದೆ. ಇದನ್ನು ಲಘು ಹೆಪಟೈಟಿಸ್ ಬಿ (acute hepatitis B) ಎಂದು ಕರೆಯುತ್ತಾರೆ.

ಆದರೆ ಕೆಲವೊಮ್ಮೆ ಈ ವೈರಸ್ಸು ಮತ್ತೊಮ್ಮೆ ಧಾಳಿಮಾಡಿ ರೋಗ ನಿರೋಧಕ ಶಕ್ತಿಗೆ ಸವಾಲು ಎಸೆಯುತ್ತದೆ. ಹಿಂದೆ ನನ್ನನ್ನು ಸೋಲಿಸಿದ್ದೆಯೆಲ್ಲಾ, ಈಗ ಬಾ, ನಿನ್ನನ್ನು ಸೋಲಿಸುವ ಪಟ್ಟುಗಳಿವೆ ನನ್ನ ಬಳಿ ಎನ್ನುತ್ತದೆ. ಅಂತೆಯೇ ನಮ್ಮ ರೋಗ ನಿರೋಧಕ ಶಕ್ತಿಗೆ ಈ ವೈರಸ್ಸಿನ ಹೊಸ ಪಟ್ಟುಗಳನ್ನು ಎದುರಿಸಲು ಸಾಕಷ್ಟು ಹೆಣಗಾಡಬೇಕಾಗುತ್ತದೆ.

ಏಕೆಂದರೆ ಈ ವೈರಸ್ಸು ಈಗ ನಿಮ್ಮ ಯಕೃತ್ (liver) ಮೇಲೆ ತನ್ನ ಧಾಳಿಯನ್ನು ಕೇಂದ್ರೀಕರಿಸುತ್ತದೆ. ಇದನ್ನು ತೀವ್ರವಾದ ಹೆಪಟೈಟಿಸ್ ಬಿ (chronic hepatitis B) ಎಂದು ಕರೆಯಲಾಗುತ್ತದೆ. ಚಿಕ್ಕ ಮಕ್ಕಳಲ್ಲಿ ಬರುವ ಲಘು ಹೆಪಟೈಟಿಸ್ ಬಿ ಸೋಂಕು ಶೀಘ್ರವೇ ತೀವ್ರ ಹೆಪಟೈಟಿಸ್‌ನ ರೂಪ ಪಡೆಯುತ್ತವೆ. ವಯಸ್ಕರಲ್ಲಿ ತೀವ್ರತರದ ಸೋಂಕು ಉಂಟಾದರೆ ಯಕೃತ್ ಬಹುವಾಗಿ ಘಾಸಿಗೊಳ್ಳಬಹುದು. ಮಾರಕ ಕಾಯಿಲೆ 'ಹೆಪಟೈಟಿಸ್‌' ಬಗ್ಗೆ ಎಚ್ಚರ ಅತ್ಯಗತ್ಯ

Home Treatment to prevent hepatitis B virus

ಇದರ ವಿಚಿತ್ರವೆಂದರೆ ಈ ಸೋಂಕು ಕೆಲವರಲ್ಲಿದ್ದೂ ಯಾವುದೇ ಸೂಚನೆ ನೀಡದೇ ಇರುವುದು. ಒಂದು ವೇಳೆ ಇದ್ದರೂ ಚಿಕ್ಕ ಜ್ವರದಂತಿದ್ದು ಹೆಚ್ಚಿನವರು ಇದನ್ನು ಉಪೇಕ್ಷಿಸುತ್ತಾರೆ. ಆದರೆ ನಿಮ್ಮಿಂದ ಈ ವೈರಸ್ ಬೇರೊಬ್ಬರಿಗೆ ಹರಡಿದರೆ ಅವರ ಶರೀರ ಇದಕ್ಕೆ ಸಿದ್ಧರಿಲ್ಲದ ಕಾರಣ ಶೀಘ್ರವೇ ಇದರ ಸೋಂಕಿಗೆ ಬಲಿಯಾಗುತ್ತಾರೆ. ಒಂದು ವೇಳೆ ನಿಮ್ಮಲ್ಲಿ ಈ ಸೋಂಕು ಪತ್ತೆಯಾದರೆ ಇದಕ್ಕೆ ಸುಲಭವಾದ ಮನೆಮದ್ದುಗಳು ಲಭ್ಯವಿವೆ. ಬನ್ನಿ ಈ ಸೋಂಕಿನಿಂದ ರಕ್ಷಣೆ ಪಡೆಯಲು ಉಪಯುಕ್ತವಾದ ಪರಿಹಾರಗಳನ್ನು ಇಲ್ಲಿ ನೀಡಲಾಗಿದೆ ಮುಂದೆ ಓದಿ...

ನಿಮ್ಮ ಚಟುವಟಿಕೆಗಳನ್ನು ನಿಧಾನಗೊಳಿಸಿ
ಈ ವೈರಸ್‌ನ ಸೋಂಕು ಉಂಟಾಗಿದ್ದರೆ ಶೀಘ್ರವೇ ಸುಸ್ತಾಗುವ ಲಕ್ಷಣಗಳು ಕಂಡುಬರುತ್ತವೆ. ಮೈ ಕೈ ನೋವು ಆವರಿಸುತ್ತದೆ. ಈ ಪರಿಸ್ಥಿತಿಯಲ್ಲಿ ಸುಮ್ಮನೇ ಮಲಗುವ ಮನಸ್ಸಾಗುತ್ತದೆ. ಆದರೆ ನಿಮ್ಮ ಚಟುವಟಿಕೆಗಳನ್ನು ಸಂಪೂರ್ಣವಾಗಿ ನಿಲ್ಲಿಸದೇ ನಿಧಾನಗೊಳಿಸುವುದು ಉತ್ತಮ. ಈ ಸಮಯದಲ್ಲಿ ಕ್ರೀಡೆ, ವೇಗದ ನಡಿಗೆ, ವ್ಯಾಯಾಮ ಮೊದಲಾದವುಗಳನ್ನು ಮಾಡಬೇಡಿ.


ನಿಧಾನವಾದ ನಡಿಗೆ ಮತ್ತು ಸುಲಭವಾದ ಮನೆಗೆಲಸಗಳನ್ನು ಮಾಡುತ್ತಲೇ ಇರಿ. ಕೊಂಚಕಾಲದಲ್ಲಿಯೇ ನಿಮ್ಮ ಶರೀರ ಈ ವೈರಸ್ಸಿನ ಮೇಲೆ ಹತೋಟಿ ಸಾಧಿಸುತ್ತದೆ. ಕೊಂಚ ಬೆವರುವ ಮೂಲಕ ಇದರ ಸೂಚನೆಯನ್ನೂ ನೀಡುತ್ತದೆ. ಬಳಿಕ ನಿಮ್ಮ ಎಂದಿನ ಚಟುವಟಿಕೆಗಳನ್ನು ನಿಧಾನವಾಗಿ, ಸ್ವಲ್ಪ ಸ್ವಲ್ಪವಾಗಿಯೇ ಹೆಚ್ಚಿಸಿಕೊಳ್ಳುತ್ತಾ ಹೋಗಿ. ಒಂದು ವೇಳೆ ಥಟ್ಟನೇ ಹೆಚ್ಚಿನ ಶ್ರಮದ ಕೆಲಸಕ್ಕೆ ಧಾವಿಸಿದರೆ ವೈರಸ್ಸು ಮತ್ತೆ ಧಾಳಿಯಿಡಬಹುದು.

ಸೂಕ್ತವಾದ ಆಹಾರವನ್ನು ಸೇವಿಸಿ
ಈ ವೈರಸ್ಸಿನ ಸೋಂಕು ಇದ್ದಾಗ ಆಹಾರ ರುಚಿಸುವುದಿಲ್ಲ. ಆದರೆ ಆಹಾರವನ್ನು ಕ್ಲುಪ್ತಕಾಲಕ್ಕೆ ಸೇವಿಸುವುದು ಅತಿ ಅಗತ್ಯ. ಕೆಲವರಿಗೆ ವಾಂತಿ, ಹಸಿವಿಲ್ಲದಿರುವುದು ಮೊದಲಾದ ಲಕ್ಷಣಗಳು ಕಾಣಿಸಿಕೊಳ್ಳಬಹುದು. ಆದರೆ ಹಸಿವಿಲ್ಲ ಎಂಬ ಕಾರಣಕ್ಕೆ ಊಟ ಮಾಡದೇ ಇರಬೇಡಿ. ಅತಿ ಹೆಚ್ಚೂ ಅಲ್ಲದ, ಅತಿ ಕಡಿಮೆಯೂ ಅಲ್ಲದ ಪ್ರಮಾಣದಲ್ಲಿ ನಿಮ್ಮ ಎಂದಿನ ಆಹಾರವನ್ನು ಸೇವಿಸಿ. ಪ್ರಾತಃಕಾಲದಲ್ಲಿ ಮಾಮೂಲಿಗಿಂತಲೂ ಹೆಚ್ಚು ಪ್ರಮಾಣದಲ್ಲಿ ಸೇವಿಸಿ. ಈ ಹೊತ್ತಿನಲ್ಲಿ ಯಾವುದೇ ಆಹಾರ ರುಚಿಸದ ಕಾರಣ ವಿವಿಧ ಆಹಾರಗಳನ್ನು ಪ್ರಯತ್ನಿಸಿ ನಿಮಗೆ ರುಚಿಸಿದ ಆಹಾರವನ್ನು ಸೇವಿಸಿ. ಹೆಪಟೈಟಿಸ್ ಬಿ ತುಂಬಾ ಅಪಾಯಕಾರಿಯಾದ ಕಾಯಿಲೆ

ಸಾಕಷ್ಟು ದ್ರವಾಹಾರಗಳನ್ನು ಸೇವಿಸಿ
ಈ ವೈರಸ್ಸಿನ ಸೋಂಕು ಹೆಚ್ಚುತ್ತಿರುವಾಗ ವಾಂತಿಯಾಗುವ ಸಾಧ್ಯತೆಗಳು ಹೆಚ್ಚು. ಆದ್ದರಿಂದ ದಿನದ ಅವಧಿಯಲ್ಲಿ ಪದೇ ಪದೇ ನೀರು ಕುಡಿಯಿರಿ. ಒಂದು ವೇಳೆ ವಾಂತಿಯಾಗುವುದಿಲ್ಲ ಎನ್ನಿಸಿದರೆ ಹಣ್ಣಿನ ರಸಗಳನ್ನು ಸೇವಿಸಿ. ಒಂದು ಚಿಕ್ಕ ತುಂಡು ಕಲ್ಲುಸಕ್ಕರೆ ಸೇರಿಸಿದ ಎಳನೀರು ಈ ಹೊತ್ತಿಗೆ ಅಮೃತಸಮಾನವಾದ ಪಾನೀಯವಾಗಿದೆ. ಥಟ್ಟನೇ ದೇಹಕ್ಕೆ ಶಕ್ತಿ ನೀಡುವ "ಎನರ್ಜಿ ಡ್ರಿಂಕ್" ಈ ಹೊತ್ತಿನಲ್ಲಿ ಕೊಂಚ ಉಪಯೋಗಕ್ಕೆ ಬರಬಹುದು. ಆದರೆ ಕೊಂಚ ಪ್ರಮಾಣದಲ್ಲಿ ಮಾತ್ರ ಸೇವಿಸಿ. ವಿಟಮಿನ್ ಸಿ ಹೆಚ್ಚಿರುವ ದ್ರವಗಳು ಅಥವ ಓ ಆರ್ ಎಸ್ ಪುಡಿಯನ್ನು ಸೇರಿಸಿದ ನೀರನ್ನೂ ಕುಡಿಯಬಹುದು.

ಮದ್ಯಪಾನದ ನೆನಪನ್ನೂ ಮಾಡದಿರಿ
ವೈರಸ್ಸಿನ ಧಾಳಿಯಿಂದ ಜರ್ಝರಿತವಾಗಿರುವ ಯಕೃತ್ ನಿಮ್ಮ ಮದ್ಯವನ್ನು ಸಹಿಸುವ ಶಕ್ತಿಯನ್ನೇ ಹೊಂದಿರುವುದಿಲ್ಲ. ಈ ಹೊತ್ತಿನಲ್ಲಿ ಮದ್ಯಪಾನ ಮಾಡುವುದು ನಿಮ್ಮ ಕೈಯಾರೆ ನಿಮ್ಮ ಯಕೃತ್ತನ್ನು ಹೊಸಕಿದಂತಾಗುತ್ತದೆ. ವೈರಸ್ ಇನ್ನಷ್ಟು ಬಲಶಾಲಿಯಾಗಿ ಈಗಾಗಲೇ ಕುಗ್ಗಿರುವ ಯಕೃತ್ತನ್ನು ಇನ್ನಷ್ಟು ಕುಗ್ಗಿಸುತ್ತದೆ. ಸೋಂಕು ಹೆಚ್ಚಾಗುತ್ತಾ ಹೋಗುತ್ತದೆ. ಕೆಲವು ವೇಳೆ ಪರಿಸ್ಥಿತಿ ವಿಕೋಪಕ್ಕೆ ತಿರುಗಿ ಸಾವು ಸಹಾ ಸಂಭವಿಸಬಹುದು.

ಈ ರೋಗ ಹರಡುವ ಬಗೆ ಮತ್ತು ಇತರ ವಿವರಗಳು
* ಸೋಂಕಿರುವ ವ್ಯಕ್ತಿಯೊಂದಿಗೆ ಅಸುರಕ್ಷಿತ ಲೈಂಗಿಕ ಸಂಬಂಧ ಹೊಂದಿದಾಗ
* ಸೋಂಕಿರುವ ವ್ಯಕ್ತಿಯ ಸೂಜಿಯನ್ನು ಉಪಯೋಗಿಸಿದಾಗ
* ಹಚ್ಚೆ ಹಾಕಿಸಿಕೊಂಡಾಗ ಆ ಸೂಜಿ ಈ ಮೊದಲು ಸೋಂಕಿದ್ದ ವ್ಯಕ್ತಿಗೆ ಉಪಯೋಗಿಸಿದ್ದಾಗ
* ಸೋಂಕಿರುವ ವ್ಯಕ್ತಿಯ ಖಾಸಗಿ ವಸ್ತುಗಳಾದ ರೇಜರ್, ಹಲ್ಲುಜ್ಜುವ ಬ್ರಷ್ ಮೊದಲಾದವುಗಳನ್ನು ಉಪಯೋಗಿಸಿದಾಗ.
* ಈ ರೋಗ ಹಸ್ತಲಾಘವ, ಅಪ್ಪುಗೆ, ಚುಂಬನ, ಸೀನು, ಕೆಮ್ಮು, ಆಹಾರ ಮತ್ತು ಕುಡಿಯುವ ನೀರನ್ನು ಹಂಚಿಕೊಳ್ಳುವುದರಿಂದ ಹರಡುವುದಿಲ್ಲ.
* ಈ ರೋಗಕ್ಕೆ ಔಷಧಿ ಲಭ್ಯವಿದೆ. ರಕ್ತಪರೀಕ್ಷೆಯಿಂದ ಇದರ ಪತ್ತೆ ಮಾಡಬಹುದು.
* ಒಂದು ವೇಳೆ ಯಕೃತ್ ಬಹಳಷ್ಟು ಹಾನಿಗೊಂಡಿದ್ದರೆ ದಾನಿಯ ಯಕೃತ್‌ನ ಒಂದು ಭಾಗವನ್ನು ಕಸಿ ಮಾಡಿ ಪುನರ್ಜೀವನಗೊಳಿಸಬಹುದು. ದಾನಿಯ ಯಕೃತ್ ಮತ್ತೆ ಬೆಳೆಯುತ್ತದೆ. ನಮ್ಮ ದೇಹದಲ್ಲಿ ಕತ್ತರಿಸಿದ ಬಳಿಕ ಬೆಳೆಯುವ ಏಕಮಾತ್ರ ಅಂಗ ಯಕೃತ್ ಆಗಿದೆ.

English summary

Home Treatment to prevent hepatitis B virus

Hepatitis B is an infectious inflammatory illness of the liver caused by the hepatitis B virus (HBV). The virus is transmitted by exposure to infectious blood or body fluids such as semen and vaginal fluids. but Home treatment can help relieve symptoms and prevent the spread of hepatitis B virus
X
Desktop Bottom Promotion