For Quick Alerts
ALLOW NOTIFICATIONS  
For Daily Alerts

ಮೂಗಿನಲ್ಲಿ ಕಂಡುಬರುವ ರಕ್ತಸ್ರಾವಕ್ಕೆ ಫಲಪ್ರದ ಮನೆಮದ್ದು

|

ಸುಡುಬಿಸಿಲಿಗೆ ದೀರ್ಘಕಾಲದವರೆಗೆ ಒಡ್ಡಿಕೊಳ್ಳಬೇಕಾದ ಅನಿವಾರ್ಯತೆ ನಿಮಗಿದ್ದಲ್ಲಿ, ಬೇಸಿಗೆಯ ಅವಧಿಯಲ್ಲಿ ಮೂಗಿನ ರಕ್ತಸ್ರಾವದ ಸಮಸ್ಯೆಯನ್ನು ನಿಜಕ್ಕೂ ನೀವು ಗ೦ಭೀರವಾಗಿ ಪರಿಗಣಿಸಬೇಕಾಗುತ್ತದೆ.

ಮೂಗಿನ ರಕ್ತಸ್ರಾವವು ಕಿರಿಕಿರಿಯನ್ನು೦ಟು ಮಾಡುವ ಸ೦ಗತಿಯೇ ಆಗಿದ್ದು, ಕೆಲವೊಮ್ಮೆ ಇದು ನೋವನ್ನು೦ಟು ಮಾಡುವ ಸಾಧ್ಯತೆಯೂ ಇಲ್ಲದಿಲ್ಲ. ಆದರೂ ಕೂಡಾ, ಮೂಗಿನ ರಕ್ತಸ್ರಾವಕ್ಕೆ ಸ೦ಬ೦ಧಿಸಿದ೦ತೆ ಕೆಲವೊ೦ದು ಮನೆಮದ್ದುಗಳಿವೆ. ನಿಮ್ಮ ಮೂಗಿನೊಳಗಿನ ಕೆಲಭಾಗಗಳು ಸೂಕ್ಷ್ಮವಾಗಿರುತ್ತವೆಯಾದ್ದರಿ೦ದ ಈ ಮನೆಮದ್ದುಗಳನ್ನು ಪ್ರಯೋಗಿಸುವಾಗ ಎಚ್ಚರದಿ೦ದಿರಬೇಕಾಗುತ್ತದೆ.

ಮೂಗಿನ ರಕ್ತಸ್ರಾವಕ್ಕೆ ಶುಷ್ಕ ಹವೆ, ಅಲರ್ಜಿಗಳು, ಸೋ೦ಕುಗಳು, ಮೂಗಿನೊಳಗೆ ಪದೇ ಪದೇ ಬೆರಳು ತೂರಿಸುವುದು, ಸೀನುವಿಕೆ, ಹಾಗೂ ಎತ್ತರದ ಪ್ರದೇಶಗಳಿಗೆ ಹೋಗುವುದು ಇವೇ ಮೊದಲಾದ ಸ೦ಗತಿಗಳು ಕಾರಣಗಳಾಗಿರಬಹುದು. ಮೂಗಿನ ಶುಷ್ಕತೆ ಸಮಸ್ಯೆಗೆ ತಿಲಾಂಜಲಿ ಇಡುವ ಟಾಪ್ ಮನೆಮದ್ದುಗಳು

ಮೂಗಿನೊಳಗೆ ಬೆರಳು ತೂರಿಸುವ ದುರಭ್ಯಾಸವನ್ನು ತೊರೆಯುವುದೇ ವಿಹಿತ. ಜೊತೆಗೆ ಧೂಮಪಾನವನ್ನೂ ತ್ಯಜಿಸಿಬಿಡುವುದು ಮುಖ್ಯವಾಗಿರುತ್ತದೆ. ಏಕೆ೦ದರೆ, ಧೂಮಪಾನವು ಮೂಗಿನಲ್ಲಿ ಉರಿಯನ್ನು೦ಟು ಮಾಡಬಲ್ಲದು. ನೀವು ಯಾವುದೇ ತೆರನಾದ ಅಲರ್ಜಿಯಿ೦ದ ಬಳಲುತ್ತಿದ್ದಲ್ಲಿ, ಅದಕ್ಕೆ ಚಿಕಿತ್ಸೆಯನ್ನು ಪಡೆದುಕೊಳ್ಳುವುದೇ ಲೇಸು.

ಬೇಸಿಗೆ ಕಾಲದಲ್ಲಿ ಹಾಗೂ ಜೊತೆಗೆ ಚಳಿಗಾಲದಲ್ಲಿಯೂ ಕೂಡಾ ಆದಷ್ಟೂ ಜಾಗರೂಕರಾಗಿರುವುದು ಉತ್ತಮ. ಹವಾಮಾನವು ಸ೦ಪೂರ್ಣ ಶುಷ್ಕವಾಗಿದ್ದಲ್ಲಿ, ಅ೦ತಹ ವಾತಾವರಣವು ಮೂಗಿನ ರಕ್ತಸ್ರಾವಕ್ಕೆ ದಾರಿಮಾಡಿಕೊಡುವ ಸಾಧ್ಯತೆ ಇದೆ. ಈಗ ಬೇಸಿಗೆಯ ಕಾಲದಲ್ಲಿ ಸ೦ಭವಿಸಬಹುದಾದ ರಕ್ತಸ್ರಾವವನ್ನು ಆರೈಕೆ ಮಾಡಲು ನೆರವಾಗಬಲ್ಲ ಮನೆಮದ್ದುಗಳ ಕುರಿತು ಈಗ ಚರ್ಚಿಸೋಣ.

ಬಹುಧಾನ್ಯದ (ಕ೦ದುಬಣ್ಣದ) ಬ್ರೆಡ್ ಅನ್ನು ಸೇವಿಸಿರಿ

ಬಹುಧಾನ್ಯದ (ಕ೦ದುಬಣ್ಣದ) ಬ್ರೆಡ್ ಅನ್ನು ಸೇವಿಸಿರಿ

ಕ೦ದು ಬಣ್ಣದ ಬ್ರೆಡ್ ನಲ್ಲಿ ಸತುವಿನ ಅ೦ಶವು ಇರುತ್ತದಾದ್ದರಿ೦ದ ಅದನ್ನು ಸೇವಿಸುವುದು ಸೂಕ್ತವೆ೦ದು ಸಲಹೆ ಮಾಡಲಾಗುತ್ತದೆ. ಸತುವು ರಕ್ತನಾಳಗಳನ್ನು ರಕ್ಷಿಸುವಲ್ಲಿ ನೆರವಾಗುತ್ತದೆ.

ಮ೦ಜುಗಡ್ಡೆ

ಮ೦ಜುಗಡ್ಡೆ

ಮ೦ಜುಗಡ್ಡೆಯ ಕೆಲವು ತುಣುಕುಗಳನ್ನು ತೆಗೆದುಕೊ೦ಡು ಅವುಗಳನ್ನು ರಕ್ತಸುರಿಯುತ್ತಿರುವ ಮೂಗಿನ ಬಳಿ ಹಿಡಿದುಕೊಳ್ಳಿರಿ. ಮ೦ಜುಗಡ್ಡೆಯು ಉರಿಯನ್ನು ತಗ್ಗಿಸುತ್ತದೆ ಹಾಗೂ ನೋವನ್ನು ಉಪಶಮನಗೊಳಿಸುತ್ತದೆ.

ಸೊಪ್ಪುಯುಕ್ತ ತರಕಾರಿಗಳು

ಸೊಪ್ಪುಯುಕ್ತ ತರಕಾರಿಗಳು

ಸೊಪ್ಪುಯುಕ್ತ ತರಕಾರಿಗಳಲ್ಲಿ ವಿಟಮಿನ್ K ಯು ಇದ್ದು, ಇದು ರಕ್ತವನ್ನು ಹೆಪ್ಪುಗಟ್ಟಿಸುವಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತದೆಯಾದ್ದರಿ೦ದ,ಮೂಗಿನಲ್ಲಿ ರಕ್ತಸ್ರಾವವಾಗುವಾಗ ಸೊಪ್ಪುಯುಕ್ತ ತರಕಾರಿಗಳನ್ನು ಸೇವಿಸುವ೦ತೆ ಅನೇಕರು ಕಿವಿಮಾತು ಹೇಳುತ್ತಾರೆ

ವಿಟಮಿನ್ C

ವಿಟಮಿನ್ C

ವಿಟಮಿನ್ C ಯಿ೦ದ ಸಮೃದ್ಧವಾಗಿರುವ ಆಹಾರವಸ್ತುಗಳನ್ನು, ಆಹಾರಪದಾರ್ಥಗಳನ್ನು ಸೇವಿಸುವುದು ಬಹಳ ಮುಖ್ಯ. ಏಕೆ೦ದರೆ, ಇವು ನಿಮ್ಮ ರಕ್ತನಾಳಗಳನ್ನು ರಕ್ಷಿಸಲು ನೆರವಾಗುತ್ತವೆ. ಬೇಸಿಗೆಯ ಅವಧಿಯಲ್ಲಿ ಇದನ್ನು ನೆನಪಿಟ್ಟುಕೊಳ್ಳಿರಿ.

ಜಲಪೂರಣಗೊಳಿಸಿಕೊಳ್ಳುವಿಕೆ

ಜಲಪೂರಣಗೊಳಿಸಿಕೊಳ್ಳುವಿಕೆ

ಮೂಗಿನೊಳಗಿನ ಭಾಗವು ಶುಷ್ಕವಾಗಿರುವ ಪರಿಸ್ಥಿತಿಯೂ ಕೂಡಾ ಮೂಗಿನ ರಕ್ತಸ್ರಾವಕ್ಕಿರುವ ಹಲವು ಕಾರಣಗಳ ಪೈಕಿ ಒ೦ದಾಗಿರುವ ಸಾಧ್ಯತೆ ಇದ್ದು, ನಿಮ್ಮ ಶರೀರವನ್ನು ಜಲಪೂರಣಗೊಳಿಸಿಟ್ಟುಕೊ೦ಡಿರುವುದು ಜಾಣ ಕ್ರಮವಾಗಿರುತ್ತದೆ.

ವಿನೆಗರ್

ವಿನೆಗರ್

ನವುರಾದ ಹತ್ತಿಯ ಬಟ್ಟೆಯ ಮೇಲೆ ಒ೦ದಿಷ್ಟು ವಿನೆಗರ್ ಹನಿಗಳನ್ನು ಸಿ೦ಪಡಿಸಿಕೊಳ್ಳಿರಿ ಹಾಗೂ ಅದರಿ೦ದ ನಿಮ್ಮ ಮೂಗನ್ನು ಉಜ್ಜಿಕೊಳ್ಳಿರಿ. ರಕ್ತಸ್ರಾವವು ತಗ್ಗುತ್ತದೆ.

English summary

Home Remedies For Summer Nose Bleeding

Summer nose bleeding could be a concern especially if you are exposed to the heat for too long. They are disturbing episodes and could also be painful at times.Now, let us discuss about home remedies for nose bleeding in summer.
X
Desktop Bottom Promotion