For Quick Alerts
ALLOW NOTIFICATIONS  
For Daily Alerts

ಮುಜುಗರವನ್ನುಂಟು ಮಾಡುವ ವಾಂತಿ ಸಮಸ್ಯೆಗೆ ಫಲಪ್ರದ ಮನೆಮದ್ದುಗಳು

By Super
|

ಚಲನಚಿತ್ರದಲ್ಲಿ ನಾಯಕಿ ಗರ್ಭಿಣಿ ಎಂದು ತಿಳಿಸಲು ನಿರ್ದೇಶಕರು ಒಂದು ಸುಲಭತಂತ್ರವನ್ನು ಅನುಸರಿಸುತ್ತಾರೆ. ಅದೇ ನಾಯಕಿ ವಾಂತಿ ಮಾಡಿಕೊಳ್ಳುತ್ತಿರುವುದನ್ನು ತಾಯಿ ಗಮನಿಸುವುದು. ಅಂದರೆ ವಾಂತಿ ಶುಭ ಸಂದೇಶ ನೀಡುವ ಸಂಕೇತ ಎಂದಾಯ್ತು. ಆದರೆ ವಾಸ್ತವವಾಗಿ ವಾಂತಿಯಾಗಲು ಗರ್ಭಿಣಿಯಾಗಲೇಬೇಕೆಂಬ ನಿಯಮವಿಲ್ಲ. ಇನ್ನೂ ಹಲವು ಕಾರಣಗಳಿವೆ.

ಪ್ರಮುಖವಾಗಿ ಆಹಾರದ ಜೊತೆ ಹೊಟ್ಟೆ ಸೇರಿದ ವಿಷಕಾರಿ ವಸ್ತುಗಳನ್ನು ನಮ್ಮ ದೇಹದ ರೋಗ ನಿರೋಧಕ ವ್ಯವಸ್ಥೆ ಬಲವಂತವಾಗಿ ಬಾಯಿಯ ಮೂಲಕ ಹೊರಹಾಕುತ್ತದೆ. ಸೊಳ್ಳೆಗಳು ಮನುಷ್ಯರನ್ನೇ ಏಕೆ ಕಡಿಯುತ್ತವೆ ಎಂದು ತಿಳಿದಿದೆಯೇ?

ಹೊಟ್ಟೆಯ ಮೇಲ್ಭಾಗದ ಸ್ನಾಯುಗಳು ಸಂಕುಚಿತಗೊಂಡು ಒಳಗಣ ದ್ರವ ಒತ್ತಡ ತಾಳಲಾರದೇ ಅನ್ನನಾಳ, ಗಂಟಲು ಮತ್ತು ಬಾಯಿಯ ಮೂಲಕ ಹೊರಬರುವುದನ್ನೇ ವಾಂತಿ ಎಂದು ಕರೆಯುತ್ತೇವೆ. ಈ ಸಮಯದಲ್ಲಿ ನಮ್ಮ ಕಿರುನಾಲಿಗೆ ಶ್ವಾಸಮಾರ್ಗವನ್ನು ಕಡ್ಡಾಯವಾಗಿ ಮುಚ್ಚಲೇಬೇಕು, ಇಲ್ಲದಿದ್ದರೆ ಖಾರವಾದ ದ್ರವ ಮೂಗು ಮತ್ತು ಶ್ವಾಸಕೋಶದಲ್ಲಿ ಪ್ರವೇಶವಾಗಿ ಪ್ರಾಣಕ್ಕೇ ಅಪಾಯ ತಂದೊಡ್ಡಬಲ್ಲುದು.

ಕೆಲವರಿಗೆ ಬಸ್ಸಿನಲ್ಲಿ ಕುಳಿತಾಕ್ಷಣ ಕುಲುಕುವಿಕೆಗೆ ವಾಂತಿಯಾಗುತ್ತದೆ. ಕುಲುಕುವಿಕೆಯನ್ನು ಮೆದುಳು ಒಂದು ತೊಂದರೆಯೆಂದೇ ಪರಿಗಣಿಸಿ ಹೊಟ್ಟೆಯಲ್ಲಿದ್ದ ಜೀರ್ಣವಾದ ಆಹಾರವನ್ನು ಹೊರಕಳಿಸುತ್ತದೆ. ಅವಾಮಿನ್ ಮಾತ್ರೆ ಈ ಸಂದೇಶವನ್ನು ತಡೆಹಿಡಿದು ವಾಂತಿಯಾಗದಂತೆ ನೋಡಿಕೊಳ್ಳುತ್ತದೆ. ಕಿಡ್ನಿ ಕಲ್ಲುಗಳನ್ನು ದೇಹದಿಂದ ಹೊರಹಾಕುವ ಸೂಪರ್ ಮನೆಮದ್ದುಗಳು

ವಾಂತಿಯಾಗಲು ಅಜೀರ್ಣ, ಬೇಧಿ, ಆಹಾರದಲ್ಲಿ ವಿಷಪದಾರ್ಥ, ಗರ್ಭವತಿಯರ ಪ್ರಾರಂಭಿಕ ದಿನಗಳು, ಆಹಾರದಲ್ಲಿ ಆಮ್ಲೀಯತೆ ಹೆಚ್ಚುವುದು ಮೊದಲಾದ ಹಲವು ಕಾರಣಗಳಿವೆ. ಕೆಲವು ಔಷಧಿಗಳು ಅಲರ್ಜಿ ತರಿಸುವಂತಿದ್ದರೂ ವಾಂತಿಯಾಗಬಹುದು. ಕೆಲವು ಪರಸ್ಪರ ಹೊಂದಿಕೊಳ್ಳದ ಆಹಾರಗಳನ್ನು ಸೇವಿಸಿದಾಗಲೂ ವಾಂತಿಯಾಗಬಹುದು. ಈ ತೊಂದರೆಯನ್ನು ಸಮರ್ಥವಾಗಿ ನಿಭಾಯಿಸಲು ಫಲಪ್ರದವಾದ ಮನೆಮದ್ದುಗಳನ್ನು ಇಲ್ಲಿ ನೀಡಲಾಗಿದೆ.

ಹಸಿಶುಂಠಿ

ಹಸಿಶುಂಠಿ

ವಾಂತಿಯನ್ನು ನಿಲ್ಲಿಸಲು ಅತ್ಯುತ್ತಮವಾದ ಆಹಾರವೆಂದರೆ ಹಸಿಶುಂಠಿಯಾಗಿದೆ. ಇದರಲ್ಲಿ ವಾಂತಿನಿವಾರಕ (anti emetic) ಗುಣವಿರುವುದರಿಂದ ವಾಂತಿಯಾಗುವ ಹಾಗೆ ಅನ್ನಿಸಿದ ಕೂಡಲೇ ಶುಂಠಿ ಬೆರೆಸಿದ ಕಪ್ಪು ಚಹಾವನ್ನು ಕುಡಿಯುವ ಮೂಲಕ ವಾಂತಿಯಾಗದೇ ಇರುವಂತೆ ನೋಡಿಕೊಳ್ಳಬಹುದು. ಗರ್ಭಿಣಿಯರಿಗೂ ಈ ಚಹಾ ಅತಿ ಸೂಕ್ತವಾಗಿದೆ. ಇದಕ್ಕಾಗಿ ಒಂದು ಲೋಟ ಕುದಿಯುವ ನೀರಿಗೆ ಅಲ್ಪಪ್ರಮಾಣದಲ್ಲಿ ಚಹಾಪುಡಿ ಮತ್ತು ಸುಮಾರು ಅರ್ಧ ಇಂಚಿನ ಹಸಿಶುಂಠಿಯನ್ನು ಜಜ್ಜಿ ಅತಿ ಕಡಿಮೆ ಉರಿಯಲ್ಲಿ ಸುಮಾರು ಮೂರರಿಂದ ಐದು ನಿಮಿಷ ಕುದಿಸಿ. ಬಳಿಕ ಸೋಸಿ ಬೆಲ್ಲ ಅಥವಾ ಸಕ್ಕರೆಯೊಡನೆ ಹಾಲಿಲ್ಲದೇ ಸೇವಿಸಿ. ಹೊಟ್ಟೆ ಭಾರವಾಗಿದ್ದಂತೆ ಅನ್ನಿಸಿದರೆ ಒಂದು ಲೋಟಕ್ಕೆ ಎರಡು ಪುದಿನಾ ಎಲೆಗಳನ್ನು ಸೇರಿಸಿ.

ಪುದಿನಾ ಎಲೆಗಳು ಮತ್ತು ಜೇನು

ಪುದಿನಾ ಎಲೆಗಳು ಮತ್ತು ಜೇನು

ವಾಂತಿ ನಿಲ್ಲಿಸಲು ಪುದಿನಾ ಮತ್ತು ಜೇನಿನ ಮಿಶ್ರಣ ಸಹಾ ಉತ್ತಮ ಫಲಿತಾಂಶ ನೀಡುತ್ತದೆ. ವಾಂತಿಯಾಗುವಂತಿದ್ದರೆ ಕೂಡಲೇ ಕೆಲವು ಪುದಿನಾ ಸೊಪ್ಪಿನ ಹಸಿ ಎಲೆಗಳನ್ನು ಹಾಗೇ ಜಗಿದು ನುಂಗಿ. ಸಮಯವಿದೆ ಎಂದಾದಲ್ಲಿ ಕುದಿಯುತ್ತಿರುವ ನೀರಿಗೆ (ಒಂದು ಲೋಟಕ್ಕೆ ಸುಮಾರು ಹತ್ತು ಎಲೆಗಳು ಅಥವಾ ಒಣ ಎಲೆಗಳ ಪುಡಿಯಾದರೆ ಅರ್ಧ ಚಮಚ) ಸೇರಿಸಿ ಚಿಕ್ಕ ಉರಿಯಲ್ಲಿ ಕುದಿಸಿ. ಇದಕ್ಕೆ ಒಂದು ಲೋಟಕ್ಕೆ ಒಂದು ಚಿಕ್ಕಚಮಚದ ಪ್ರಮಾಣದಲ್ಲಿ ಜೇನು ಸೇರಿಸಿ. ಬಿಸಿಯಿದ್ದಂತೆಯೇ ಕುಡಿಯಿರಿ. ಸಾಧ್ಯವಾದರೆ ಪುದಿನಾ ಸೊಪ್ಪಿನ ಸುವಾಸನೆಯನ್ನು ಆಘ್ರಾಣಿಸಿ. ಇವೆಲ್ಲವೂ ವಾಂತಿಯಾಗದಿರಲು ಸಹಕರಿಸುತ್ತವೆ.

ಸೇಬಿನ ಶಿರ್ಕಾ (Apple Cider Vinegar)

ಸೇಬಿನ ಶಿರ್ಕಾ (Apple Cider Vinegar)

ಒಂದು ಲೋಟ ಉಗುರುಬೆಚ್ಚನೆಯ ನೀರಿಗೆ ಒಂದು ಚಮಚದ ಪ್ರಮಾಣದಲ್ಲಿ ಸೇಬಿನ ಶಿರ್ಕಾ ಸೇರಿಸಿ ಬಾಟಲಿಯಲ್ಲಿ ಹಾಕಿಟ್ಟು ಫ್ರಿಜ್ಜಿನಲ್ಲಿ ಶೇಖರಿಸಿಡಿ. ವಾಂತಿಯಾಗುವ ಲಕ್ಷಣ ಕಂಡುಬಂದ ತಕ್ಷಣ ಈ ನೀರನ್ನು ಬಾಯಿಯಲ್ಲಿ ಹಾಕಿ ಗಳಗಳನೇ ಪ್ರೋಕ್ಷಳಿಸಿ, ಆದರೆ ನುಂಗಬೇಡಿ. ಗಂಟಲು ಮೇಲೆತ್ತಿ ಗಳಗಳ ಮಾಡುವುದು ಉತ್ತಮ. ಇದು ವಾಂತಿಯಾಗುವ ಬಯಕೆಯನ್ನು ದೂರಗೊಳಿಸುತ್ತದೆ.

ದಾಲ್ಚಿನ್ನಿ

ದಾಲ್ಚಿನ್ನಿ

ದಾಲ್ಚಿನ್ನಿಯಲ್ಲಿಯೂ ವಾಂತಿನಿವಾರಕ (anti emetic) ಗುಣಗಳಿವೆ. ಗರ್ಭಿಣಿಯರಿಗೆ ಕಾಡುವ ವಾಂತಿ ನಿಲ್ಲಿಸಲು ದಾಲ್ಚಿನ್ನಿ ಅತ್ಯುತ್ತಮವಾಗಿದೆ. ಇದಕ್ಕಾಗಿ ಒಂದು ಲೋಟ ಕುದಿಯುವ ನೀರಿಗೆ ಅರ್ಧ ಚಮಚ ಟೀ ಪುಡಿ ಮತ್ತು ಮೂರರಿಂದ ನಾಲ್ಕು ದಾಲ್ಚಿನ್ನಿ ಕೋಡುಗಳನ್ನು ಸೇರಿಸಿ ಕುದಿಸಿ. (ದಾಲ್ಚಿನ್ನಿಯನ್ನು ಸ್ವಲ್ಪ ಜಜ್ಜಿ ಹಾಕಿದರೆ ಹೆಚ್ಚು ಪರಿಣಾಮಕಾರಿಯಾಗಿದೆ). ರುಚಿಗಾಗಿ ಸ್ವಲ್ಪ ಜೇನನ್ನೂ ಸೇವಿಸಬಹುದು. ವಾಂತಿಯಾಗುವ ಲಕ್ಷಣ ಕಂಡಕೂಡಲೇ ಈ ನೀರನ್ನು ಬಿಸಿಬಿಸಿಯಾಗಿಯೇ ಕುಡಿಯಿರಿ.

ಅನ್ನ ಬಸಿದ ನೀರು

ಅನ್ನ ಬಸಿದ ನೀರು

ಕೆಲವೊಮ್ಮೆ ಆಹಾರದಲ್ಲಿ ಆಮ್ಲೀಯತೆ ಹೆಚ್ಚಾಗಿದ್ದರೆ ಹಲವು ಅನಿಲಗಳು ಉತ್ಪತ್ತಿಯಾಗಿ ಹೊಟ್ಟೆ ತುಂಬಿಕೊಳ್ಳುತ್ತದೆ. ಪರಿಣಾಮವಾಗಿ ವಾಂತಿಯಾಗುತ್ತದೆ. ಇದಕ್ಕಾಗಿ ಅನ್ನ ಬಸಿದ ನೀರನ್ನು ಕುಡಿಯುವುದು ಅತ್ಯುತ್ತಮವಾಗಿದೆ. ಅನ್ನ ಬಸಿದ ನೀರಿನಲ್ಲಿರುವ ಪಿಷ್ಟ ಕ್ಷಾರೀಯವಾಗಿದ್ದು ಆಮ್ಲದ ಪ್ರಕೋಪವನ್ನು ಕಡಿಮೆಗೊಳಿಸುತ್ತದೆ. ಈ ನೀರನ್ನು ಬಿಸಿಯಿದ್ದಂತೆಯೂ ತಣಿಸಿಯೂ ಕುಡಿಯಬಹುದು. ಬೆಳ್ತಿಗೆ ಅಕ್ಕಿಯ ಗಂಜಿ ಉತ್ತಮವಾಗಿದೆ. ಕುಚ್ಚಿಗೆ ಅಕ್ಕಿಯ ಗಂಜಿ ಅಷ್ಟು ಸೂಕ್ತವಲ್ಲ.

ಈರುಳ್ಳಿ ರಸ

ಈರುಳ್ಳಿ ರಸ

ಕೆಲವೊಮ್ಮೆ ಒಗ್ಗದ ಆಹಾರವನ್ನು ಸೇವಿಸಿದ ಬಳಿಕ ವಾಕರಿಕೆ ಪ್ರಾರಂಭವಾಗುತ್ತದೆ. ಇನ್ನೇನು ವಾಂತಿಯಾಗಿಯೇ ಬಿಡುತ್ತದೆ ಎಂಬ ಕ್ಷಣದವರೆಗೂ ಬಂದು ಮತ್ತೆ ಹಿಂದೆ ಹೋಗುವುದು ಎಂಬಂತಹ ತೊಂದರೆಗಳು ಎದುರಾಗುತ್ತವೆ. ಇಂತಹ ತೊಂದರೆಗೆ ಈರುಳ್ಳಿ ರಸ ಉತ್ತಮ ಫಲ ನೀಡುತ್ತದೆ. ಇದಕ್ಕಾಗಿ ಒಂದು ದೊಡ್ಡ ಅಥವಾ ಎರಡು ಚಿಕ್ಕ ನೀರುಳ್ಳಿಗಳನ್ನು ಚಿಕ್ಕದಾಗಿ ಕತ್ತರಿಸಿ ಮಿಕ್ಸಿಯಲ್ಲಿ ಕಡೆಯಿರಿ. ನಂತರ ಈ ಮಿಶ್ರಣವನ್ನು ಬಟ್ಟೆಯಲ್ಲಿಟ್ಟು ಹಿಂಡಿ ರಸ ತೆಗೆಯಿರಿ. ಇದರೊಂದಿಗೆ ಕೊಂಚ ಪುದಿನಾ ಎಲೆಗಳ ರಸವನ್ನೂ ಸೇರಿಸಬಹುದು. ಒಂದು ಚಮಚ ರಸವನ್ನು ಕುಡಿದ ತಕ್ಷಣ ಈ ತೊಂದರೆ ಕಡಿಮೆಯಾಗುತ್ತದೆ.

ಲವಂಗ

ಲವಂಗ

ಒಂದು ವೇಳೆ ಅಜೀರ್ಣದ ಕಾರಣ ವಾಂತಿಯಾಗುವಂತಿದ್ದರೆ ಅಥವಾ ಊಟವಾದ ಕೂಡಲೇ ವಾಂತಿಯಾಗುವ ಲಕ್ಷಣ ಕಂಡುಬಂದರೆ ಕೂಡಲೇ ಎರಡರಿಂದ ನಾಲ್ಕು ಲವಂಗದ ಕೋಡುಗಳನ್ನು ಅಗಿದು ನುಂಗಿಬಿಡಿ. ಕೊಂಚ ಖಾರವಾಗಿರುವುದರಿಂದ ಅಗಿಯುವ ಸಮಯದಲ್ಲಿ ಕೊಂಚ ಜೇನನ್ನೂ ಸೇವಿಸಬಹುದು.

ಹಸಿ ಹಾಲು

ಹಸಿ ಹಾಲು

ಒಂದು ವೇಳೆ ಹೊಟ್ಟೆಯಲ್ಲಿ ಆಮ್ಲೀಯತೆ ಹೆಚ್ಚಾದ ಕಾರಣ ವಾಂತಿಯಾಗುವಂತಿದ್ದರೆ ಪ್ಯಾಶ್ಚರೀಕರಿಸಿದ ಅಥವಾ ಕುದಿಸಿ ತಣಿಸಿದ ಹಾಲು ವಾಂತಿ ನಿಲ್ಲಿಸಲು ಉತ್ತಮವಾಗಿದೆ.ಇದಕ್ಕಾಗಿ ಹಾಲನ್ನು ನೇರವಾಗಿ ಕುಡಿಯಬಹುದು ಅಥವಾ ಬೇಕರಿಯಲ್ಲಿ ಸಿಗುವ ರಸ್ಕ್ ಗಳನ್ನು ಹಾಲಿನಲ್ಲಿ ಮುಳುಗಿಸಿ ಮೃದುವಾದ ಬಳಿಕ ಸೇವಿಸಿ.ಈ ವಿಧಾನವನ್ನು ಗರ್ಭಿಣಿಯರಿಗೆ ಕಾಡುವ ವಾಂತಿಗೂ ಅನುಸರಿಸಬಹುದು.

ಏಲಕ್ಕಿ

ಏಲಕ್ಕಿ

ಊಟವಾದ ಕೂಡಲೇ ವಾಂತಿಯಾಗುವಂತಿದ್ದರೆ ಕೂಡಲೇ ಕೆಲವು ಏಲಕ್ಕಿಗಳನ್ನು ಜಗಿದು ನುಂಗಿಬಿಡಿ. ಇದರಿಂದ ವಾಕರಿಕೆ ಮತ್ತು ವಾಂತಿಯಾಗುವುದರಿಂದ ತಡೆಯಬಹುದು.

ಜೀರಿಗೆ

ಜೀರಿಗೆ

ವಾಂತಿ ಯಾವುದೇ ಕಾರಣದಿಂದ ಆಗಿರಲಿ, ಇದನ್ನು ನಿಲ್ಲಿಸಲು ಜೀರಿಗೆ ಉತ್ತಮವಾಗಿದೆ. ಇದಕ್ಕಾಗಿ ಒಂದು ಲೋಟ ಉಗುರು ಬೆಚ್ಚನೆಯ ನೀರಿಗೆ ಅರ್ಧ ಚಮಚ ಜೀರಿಗೆ ಪುಡಿ ಹಾಕಿ ಕಲಕಿ ಕುಡಿಯಿರಿ.ಇದರಿಂದ ವಾಕರಿಕೆ ಮತ್ತು ವಾಂತಿ ತಕ್ಷಣ ಕಡಿಮೆಯಾಗುತ್ತದೆ.

English summary

Home Remedies To Stop Vomiting

Vomiting also called emesis is a reflex action in the stomach that forcefully expels out the gastric contents from the mouth. It is a defense mechanism that protects us from toxins entering the stomach through food we ingest. How to stop vomiting at home? Today, Boldsky will share with you some effective & best home remedies to stop vomiting.
X
Desktop Bottom Promotion