For Quick Alerts
ALLOW NOTIFICATIONS  
For Daily Alerts

ಮುಟ್ಟು ಹಿಂದೂಡಿಕೊಳ್ಳಬೇಕಾ..? ಹಾಗಾದ್ರೆ ಹೀಗೆ ಮಾಡಿ

By Su.Ra
|

ತಿಂಗಳ ಸಮಸ್ಯೆ ಎಷ್ಟೋ ಸಂದರ್ಭದಲ್ಲಿ ಮಹಿಳೆಯರಿಗೆ ಕಿರಿಕಿರಿಯನ್ನುಂಟು ಮಾಡುತ್ತೆ. ಅದ್ರಲ್ಲೂ ಮನೆಯಲ್ಲಿ ಯಾವುದೋ ಫಂಕ್ಷನ್ ಇದೆ, ಸಮಾರಂಭ ಇದೆ ಅಂದಾಗ ಪೀರೆಡ್ಸ್ ಪ್ರಾಬ್ಲಮ್ ಇದ್ರೆ ಕೆಲವರು ಮೆಡಿಸಿನ್ ಗಳ ಮೊರೆ ಹೋಗ್ತಾರೆ. ಆದ್ರೆ ಹಾಗೆ ತೆಗೆದುಕೊಳ್ಳುವ ಮಾತ್ರೆಗಳು ನಿಮ್ಮ ಆರೋಗ್ಯದ ಮೇಲೆ ಯಾವ ರೀತಿ ವ್ಯತಿರಿಕ್ತ ಪರಿಣಾಮಗಳನ್ನು ಉಂಟುಮಾಡುತ್ತೆ. ಯಮಯಾತನೆ ನೀಡುವ ಮುಟ್ಟಿನ ನೋವಿಗೆ ಪರಿಹಾರವೇನು?

ಅಷ್ಟಕ್ಕೂ ಮೀರಿ ನೀವು ಪೀರೆಡ್ಸ್ ಪ್ರೀಪೋನ್ ಮಾಡ್ಕೊಬೇಕು ಅಂದ್ರೆ ಕೆಲವು ಮನೆಮದ್ದುಗಳೇ ಇವೆ. ಯಾವುದೇ ಸೈಡ್ ಎಫೆಕ್ಟ್ ಮಾಡದೇ ಇವು ನಿಮ್ಮ ಡೇಟ್ ಬೇಗನೆ ಆಗುವಂತೆ ಮಾಡಿಕೊಳ್ಳಬಹುದು. ಬನ್ನಿ ಅಂತಹ ಮನೆಮದ್ದನ್ನು ಸ್ಲೈಡ್ ಶೋ ಮೂಲಕ ಓದಿ..

ಪಪ್ಪಾಯ

ಪಪ್ಪಾಯ

ನಿಮ್ಮ ಅಜ್ಜಿಯನ್ನು ಅಮ್ಮನನ್ನೋ ಕೇಳಿದ್ರೆ ಪಿರೇಡ್ಸ್ ಬೇಗ ಆಗುವಂತೆ ಮಾಡಲು ಏನ್ ತಿನ್ನಬೇಕು ಅಂತ ಕೇಳಿದ್ರೆ ಮೊದಲು ಹೇಳೋದೇ ಪಪ್ಪಾಯ ತಿನ್ನು ಅಂತ. ಖಂಡಿತ ಇದು ವರ್ಕೌಟ್ ಆಗುತ್ತೆ. ಪಪ್ಪಾಯ ಕೆರೋಟಿನ್ ಅಂಶಗಳನ್ನು ಒಳಗೊಂಡಿದ್ದು ಮುಟ್ಟಿಗೆ ಕಾರಣವಾಗುವ ಇಸ್ಟ್ರೋಜನ್ ಹಾರ್ಮೋನ್ ಇಂಬ್ಯಾಲೆನ್ಸ್ ಮಾಡುತ್ತೆ. ಪಪ್ಪಾಯ ದೇಹವನ್ನು ಹೀಟ್ ಮಾಡಿ ಪೀರೆಡ್ಸ್ ಬೇಗ ಆಗುವಂತೆ ಮಾಡುತ್ತೆ.

ಸೇಸಮೆ ಕಾಳುಗಳು

ಸೇಸಮೆ ಕಾಳುಗಳು

ಒಂದು ಚಮಚದಷ್ಟು ಸೇಸಮೆ ಕಾಳುಗಳು ಇಲ್ಲವೇ ಅದ್ರ ಪೌಡರ್ಗೆ ಒಂದು ಚಮಚ ಬೆಲ್ಲ ಇಲ್ಲವೇ ಜೇನುತುಪ್ಪ ಸೇರಿಸಿ ಸೇವಿಸೋದ್ರಿಂದ ಪೀರೆಡ್ಸ್ ಬೇಗ ಆಗುವಂತೆ ಮಾಡ್ಕೊಳ್ಳಬಹುದು.

ಖರ್ಜೂರ

ಖರ್ಜೂರ

ನಿಮ್ಮ ಡೇಟಿಗಿಂತ ಪೀರೆಡ್ಸ್ ಬೇಗನೆ ಆಗ್ಬೇಕು ಅಂದ್ರೆ ಪ್ರತಿದಿನ ಸ್ವಲ್ಪ ಖರ್ಜೂರ ಸೇವಿಸಿ. ಎಲ್ಲಿಗೋ ಟ್ರಾವೆಲ್ ಮಾಡ್ಬೇಕು, ಫಂಕ್ಷನ್ ಇದೆ ಅಂತ ಪೀರೇಡ್ಸ್ ಬೇಗ ಆಗ್ಬೇಕು ಅಂತ ಚಿಂತಿಸುವವರಿಗೆ ಖರ್ಜೂರ ಸೇವನೆಯಿಂದ ದೇಹದ ಉಷ್ಣತೆ ಹೆಚ್ಚಾಗಿ ಬೇಗನೆ ಪೀರೆಡ್ಸ್ ಆಗುತ್ತೆ.

ದಾಳಿಂಬೆ ಜ್ಯೂಸ್

ದಾಳಿಂಬೆ ಜ್ಯೂಸ್

ದಾಳಿಂಬೆ ಹಣ್ಣುಗಳ ಜ್ಯೂಸ್ ಅನ್ನು ದಿನಕ್ಕೆ 2 ರಿಂದ ಮೂರು ಬಾರಿ ಕುಡಿಯುತ್ತಾ ಬಂದ್ರೆ ಪೀರೆಡ್ಸ್ ಬೇಗ ಆಗಲು ಸಹಕಾರಿಯಾಗುತ್ತೆ. ದಾಳಿಂಬೆ ದೇಹದಲ್ಲಿ ರಕ್ತಕಣಗಳನ್ನು ಹೆಚ್ಚಿಸುತ್ತೆ.

ಕಬ್ಬಿನ ಹಾಲು

ಕಬ್ಬಿನ ಹಾಲು

ನಿಮ್ಮ ಪೀರೆಡ್ಸ್ ಡೇಟ್ಸ್‌ಗೂ ಎರಡು ಅಥ್ವಾ ಮೂರು ವಾರ ಮುಂಚೆಯಿಂದ ಕಬ್ಬಿನ ಹಾಲು ಸೇವಿಸಿದ್ರೆ ಸ್ವಲ್ಪ ಬೇಗ ಪೀರೆಡ್ಸ್ ಆಗಲು ಸಹಕಾರಿಯಾಗುತ್ತೆ. ಹಿಂದಿನ ಕಾಲದಲ್ಲಿ ಕಾಮನ್ ಆಗಿ ಬಳಸ್ತಾ ಇದ್ದ ಮೆಥೆಡ್‌ಗಳಿವು. ಬಟ್ ಎಲ್ಲರಿಗೂ ವರ್ಕ್ ಆಗ್ಬೇಕು ಅಂತೇನೂ ಇಲ್ಲ. ಬಟ್ ಟ್ರೈ ಮಾಡಿ ನೋಡ್ಬಹುದು. ಟ್ಯಾಬ್ಲೆಟ್ ತೆಗೆದುಕೊಂಡು ತೊಂದರೆ ಅನುಭವಿಸೋದಕ್ಕಿಂತ ಇದು ಸುರಕ್ಷಿತ ಮೆಥೆಡ್ ಅನ್ನೋದು ನೆನಪಿರಲಿ..

English summary

Home Remedies to Pre-pone or Postpone Periods in Kannada

If you want to delay or pre-pone your periods, the most obvious solution you look for are some pills which ultimately carry side effects with them. What if you can do it without risking your health? Yes, There are multiple ways which can actually help in doing so. Next time, when you need to pre-pone or postpone your periods try these home remedies and lifestyle tricks. You will be surprised to see the results.
X
Desktop Bottom Promotion