For Quick Alerts
ALLOW NOTIFICATIONS  
For Daily Alerts

ಮೂತ್ರದಲ್ಲಿ ಕಂಡುಬರುವ ಅಸಹ್ಯಕರ ದುರ್ವಾಸನೆಗೆ ಕಾರಣವೇನು?

By Super
|

ನಮ್ಮ ಮೂತ್ರಪಿಂಡಗಳು ಸತತವಾಗಿ ರಕ್ತವನ್ನು ಸೋಸುತ್ತಾ ಮೂತ್ರಕೋಶದಲ್ಲಿ ದ್ರವವನ್ನು ಮೂತ್ರದ ರೂಪದಲ್ಲಿ ಶೇಖರಿಸುತ್ತಾ ಹೋಗುತ್ತವೆ. ಕಾಲಕಾಲಕ್ಕೆ ಈ ಕೋಶವನ್ನು ಬರಿದುಮಾಡುತ್ತಲೇ ಇರಬೇಕು. ಸಂಗ್ರಹದ ಹೊತ್ತು ಹೆಚ್ಚುತ್ತಾ ಹೋದಂತೆ ಮೂತ್ರದ ಬಣ್ಣ ಮತ್ತು ವಾಸನೆ ಹೆಚ್ಚುತ್ತಾ ಹೋಗುತ್ತದೆ.

ಆದರೆ ಕೆಲವು ಕಾರಣಗಳಿಂದ ಈ ವಾಸನೆ ಸಹಿಸಲಸಾಧ್ಯವಾಗುವಷ್ಟಿರುತ್ತದೆ. ಶೌಚಾಲಯ ಬಳಸಿದ ಬಳಿಕ ಕೋಣೆಯಲ್ಲಿ ಹರಡಿದ್ದ ದುರ್ವಾಸನೆಯನ್ನು ಬಳಿಕ ಬಳಸುವವರು ಅನುಭವಿಸುವವರಿಗೆ ಇರಿಸುಮುರುಸು ತರುವ ಕಲ್ಪನೆಯೇ ಇಕ್ಕಟ್ಟಿಗೆ ಸಿಕ್ಕಿಸುತ್ತದೆ. ದುರ್ವಾಸನೆಗೆ ಮುಖ್ಯ ಕಾರಣ ಮೂತ್ರಕೋಶದಲ್ಲಿ ಸೊಂಕು ಉಂಟಾಗುವುದೇ ಆಗಿದೆ. ಎಚ್ಚರ: ಮೂತ್ರದ ಬಣ್ಣದಲ್ಲಿ ಏರುಪೇರಾದರೆ ಅಪಾಯ ಕಟ್ಟಿಟ್ಟ ಬುತ್ತಿ..!

ಈ ಸೋಂಕಿನ ಮೂಲಕ ಒಳಭಾಗದಲ್ಲಿ ಬ್ಯಾಕ್ಟೀರಿಯಾಗಳಿಗೆ ರಕ್ಷಣೆಯಾಗಿ ಕೀವು ತುಂಬಿಕೊಂಡು ಮೂತ್ರದೊಂದಿಗೆ ಹೊರಬರುತ್ತದೆ. ಇದು ದುರ್ವಾಸನೆಯ ಮೂಲವಾಗಿದೆ. ಮೂತ್ರನಾಳದಲ್ಲಿ ಆಗುವ ಸೋಂಕು ಸಹಾ ದುರ್ವಾಸನೆ ಮೂಡಿಸಬಲ್ಲುದು. ಪುರುಷರಿಗಿಂತಲೂ ಈ ತೊಂದರೆ ಮಹಿಳೆಯರಲ್ಲಿ ಹೆಚ್ಚು. ಕೀವು ಮತ್ತು ಬ್ಯಾಕ್ಟೀರಿಯಾಗಳಿಗೆ ಅನುಸಾರವಾಗಿ ವಾಸನೆ ಮತ್ತು ಬಣ್ಣ ಬದಲಾಗುತ್ತಾ ಹೋಗುತ್ತದೆ. ಪದೇ-ಪದೇ ಮೂತ್ರ ವಿಸರ್ಜನೆ ಅಪಾಯದ ಸೂಚನೆ

ದುರ್ವಾಸನೆಗೆ ಇನ್ನೊಂದು ಮುಖ್ಯ ಕಾರಣವೆಂದರೆ ಸಾಕಷ್ಟು ನೀರು ಕುಡಿಯದೇ ಇರುವುದು. ಶೌಚಾಲಯದ ಸೂಕ್ತ ವ್ಯವಸ್ಥೆಯಿಲ್ಲದ ಸ್ಥಳಗಳಲ್ಲಿ ಕೆಲಸ ಮಾಡುವ ಮಹಿಳೆಯರು ಸಂಕೋಚದಿಂದ ನೀರು ಕುಡಿಯದೇ ಇರುವುದು ತೊಂದರೆಗೆ ನೀಡುವ ಆಹ್ವಾನವಾಗಿದೆ. ಇದು ಮೂತ್ರವನ್ನು ಇನ್ನಷ್ಟು ಗಾಢಬಣ್ಣವಾಗಿಸಿ, ವಿಷವಸ್ತುಗಳ ಸಾಂದ್ರತೆಯನ್ನು ಹೆಚ್ಚಿಸುತ್ತಾ ಹೋಗುತ್ತದೆ. ಇದು ಇನ್ನಿತರ ತೊಂದರೆಗೆಳಿಗೆ ಕಾರಣವಾಗಬಲ್ಲುದು. ಇದರಿಂದ ಕಾಪಾಡಿಕೊಳ್ಳಲು ಕೆಲವು ಮನೆಮದ್ದುಗಳನ್ನು ಇಲ್ಲಿ ನೀಡಲಾಗಿದೆ.

ಬಿಗಿಯಾಗಿರುವ ಒಳ ಉಡುಪುಗಳನ್ನು ತೊಡಬೇಡಿ

ಬಿಗಿಯಾಗಿರುವ ಒಳ ಉಡುಪುಗಳನ್ನು ತೊಡಬೇಡಿ

ಒಳ ಉಡುಪುಗಳು ಸಡಿಲವಾಗಿರಲಿ. ನೈಲಾನ್ ಗಿಂತಲೂ ಹತ್ತಿಯ ಬಟ್ಟೆಯೇ ಉತ್ತಮವಾಗಿವೆ. ಇದರಿಂದ ಮೂತ್ರಕೋಶದಲ್ಲಿ ನೀರು ತುಂಬಿಕೊಳ್ಳುತ್ತಾ ಹೋದಂತೆ ಒಳ ಉಡುಪು ಮತ್ತು ನಿತ್ಯದ ಉಡುಗೆಗಳ ಮೂಲಕ ಬೀಳುವ ಒತ್ತಡ ಕಡಿಮೆಯಾಗಿ ಸುಲಭವಾಗಿ ಉಬ್ಬಿಕೊಳ್ಳಲು ಸಾಧ್ಯವಾಗುತ್ತದೆ.

ಬೆಳಿಗ್ಗೆದ್ದು ಲಿಂಬೆಹಣ್ಣಿನ ರಸ ಸೇರಿಸಿದ ನೀರು ಕುಡಿಯಿರಿ

ಬೆಳಿಗ್ಗೆದ್ದು ಲಿಂಬೆಹಣ್ಣಿನ ರಸ ಸೇರಿಸಿದ ನೀರು ಕುಡಿಯಿರಿ

ಬೆಳಿಗ್ಗೆದ್ದು ಮುಖಮಾರ್ಜನದ ಬಳಿಕ ಖಾಲಿಹೊಟ್ಟೆಯಲ್ಲಿ ಲಿಂಬೆರಸ ಸೇರಿಸಿದ ನೀರು ಕುಡಿಯಿರಿ. ಇದರಿಂದ ಮೂತ್ರದಲ್ಲಿದ್ದ ವಿಷಕಾರಿ ವಸ್ತುಗಳನ್ನು ಶೀಘ್ರವಾಗಿ ಹೊರಹಾಕಲು ನೆರವಾಗುತ್ತದೆ. ಪರಿಣಾಮವಾಗಿ ಸೋಂಕು ಉಂಟಾಗುವುದರಿಂದ ತಪ್ಪಿಸಿ ದುರ್ವಾಸನೆಯಿಂದ ಕಾಪಾಡುತ್ತದೆ.

ಸಾಕಷ್ಟು ನೀರು ಕುಡಿಯಿರಿ

ಸಾಕಷ್ಟು ನೀರು ಕುಡಿಯಿರಿ

ನಿಮ್ಮ ಕೆಲಸಕ್ಕಿಂತಲೂ ಆರೋಗ್ಯ ಮುಖ್ಯ. ಶೌಚಾಲಯವಿಲ್ಲದಿರುವ ಸ್ಥಳದಲ್ಲಿ ಸೂಕ್ತ ವ್ಯವಸ್ಥೆ ಕಲ್ಪಿಸುವವರೆಗೂ ಕೆಲಸ ಸಾಧ್ಯವಿಲ್ಲ ಎಂದು ಕಟ್ಟುನಿಟ್ಟಾಗಿ ಹೇಳಿ. ಸಾಕಷ್ಟು ನೀರು ಕುಡಿಯಿರಿ ಹಾಗೂ ಕ್ಲುಪ್ತಕಾಲದಲ್ಲಿ ಮೂತ್ರವಿಸರ್ಜಿಸಿ.

ಮಜ್ಜಿಗೆ ಕುಡಿಯಿರಿ

ಮಜ್ಜಿಗೆ ಕುಡಿಯಿರಿ

ಬೆಣ್ಣೆರಹಿತವಾದ ಮಜ್ಜಿಗೆಯಲ್ಲಿ ನೀರುಳ್ಳಿ, ಬೆಳ್ಳುಳ್ಳಿ ಮತ್ತು ಶುಂಠಿಯನ್ನು ಸೇರಿಸಿ ನಿತ್ಯವೂ ಬೆಳಿಗ್ಗೆ ಕುಡಿಯುವುದರಿಂದ ಉರಿಮೂತ್ರ, ಮೂತ್ರದಲ್ಲಿ ವಾಸನೆ, ಸೋಂಕು ಮೊದಲಾದ ತೊಂದರೆಗಳು ನಿವಾರಣೆಯಾಗುತ್ತದೆ. ಬೆಳಗ್ಗಿನ ಮೂತ್ರದಲ್ಲಿ ಹೆಚ್ಚಿನ ವಾಸನೆ ಇದ್ದರೆ ದಿನಕ್ಕೆ ಎರಡು ಲೋಟ ಕುಡಿಯಿರಿ.

ಕ್ರ್ಯಾನ್ಬೆರಿ ಜ್ಯೂಸ್ ಕುಡಿಯಿರಿ

ಕ್ರ್ಯಾನ್ಬೆರಿ ಜ್ಯೂಸ್ ಕುಡಿಯಿರಿ

ಮೂತ್ರದಲ್ಲಿ ವಾಸನೆ ಇದ್ದರೆ ಕ್ರ್ಯಾನ್ಬೆರಿ ಹಣ್ಣುಗಳ ರಸ ಉತ್ತಮ ಪರಿಹಾರ ನೀಡುತ್ತದೆ. ಒಂದು ವೇಳೆ ರಸ ಸಿಗದೇ ಇದ್ದರೆ ಹಣ್ಣುಗಳನ್ನು ನೇರವಾಗಿಯೂ ಸೇವಿಸಬಹುದು. ರಸವನ್ನು ಬೆಳಗ್ಗಿನ ಸಮಯ ಖಾಲಿಹೊಟ್ಟೆಯಲ್ಲಿ ಸೇವಿಸುವುದು ಉತ್ತಮ.

ಎಳನೀರಿಗೆ ಕಲ್ಲುಸಕ್ಕರೆ ಸೇರಿಸಿ ಕುಡಿಯಿರಿ

ಎಳನೀರಿಗೆ ಕಲ್ಲುಸಕ್ಕರೆ ಸೇರಿಸಿ ಕುಡಿಯಿರಿ

ಎಳನೀರಿನಲ್ಲಿ ಕಲ್ಲುಸಕ್ಕರೆಯ ಚಿಕ್ಕ ತುಂಡನ್ನು ಕಲಕಿ ಕರಗಿದ ಬಳಿಕ ಖಾಲಿಹೊಟ್ಟೆಯಲ್ಲಿ ಸೇವಿಸಿ, ಮುಂದಿನ ಮುಕ್ಕಾಲು ಗಂಟೆ ಏನನ್ನೂ ಸೇವಿಸಬೇಡಿ. ಬಳಿಕ ನಾಲ್ಕೈದು ಬಾರಿ ಮೂತ್ರಕ್ಕೆ ಅವಸರವಾಗುತ್ತದೆ. ಇದು ಮೂತ್ರವನ್ನು ಹೆಚ್ಚಿಸಿ ವಿಷಕಾರಿ ವಸ್ತುಗಳನ್ನು ಹೊರದಬ್ಬುತ್ತದೆ.

ಬಾರ್ಲಿ ನೀರನ್ನು ಸೇವಿಸಿ

ಬಾರ್ಲಿ ನೀರನ್ನು ಸೇವಿಸಿ

ಬಾರ್ಲಿ ಕುದಿಸಿ ತಣಿಸಿ ಸೋಸಿದ ನೀರು ಸಹಾ ಮೂತ್ರವನ್ನು ಹೆಚ್ಚಿಸಲು ನೆರವಾಗುತ್ತದೆ. ಹೆಚ್ಚು ಮೂತ್ರ ಹೊರಹರಿಯುವುದರಿಂದ ವಾಸನೆಯೂ ಕಡಿಮೆಯಾಗುತ್ತದೆ.

English summary

Home Remedies To Cure Smelly Urine

Urine odour can be unpleasant and can also lead to embarrassing situations especially if you are using a bathroom in your guest's place. Well, are there any home remedies to cure smelly urine? In most of the cases, the general cause would be urinary tract infection.
X
Desktop Bottom Promotion