For Quick Alerts
ALLOW NOTIFICATIONS  
For Daily Alerts

ನರಕಯಾತನೆ ನೀಡುವ ಎದೆಯುರಿ ಸಮಸ್ಯೆಗೆ ಫಲಪ್ರದ ಮನೆಮದ್ದು

By Super
|

ಕೆಲವೊಮ್ಮೆ ಹೃದಯದ ಬಳಿ ಎದೆಯ ನಟ್ಟನಡುವೆ ಚೂರಿಯಿಂದ ಇರಿದಂತೆ ತೀಕ್ಷ್ಣವಾದ ನೋವು ಕಾಣಿಸಿಕೊಳ್ಳುತ್ತದೆ. ಇದರ ಬಗ್ಗೆ ಮಾಹಿತಿ ಇಲ್ಲದವರು ತಮ್ಮ ಹೃದಯದಲ್ಲಿಯೇ ತೊಂದರೆ ಇದೆ, ಹೃದಯಾಘಾತವಾಗುತ್ತಿದೆ ಎಂಬಂತೆ ಗಾಬರಿಗೊಳ್ಳುತ್ತಾರೆ. ವಾಸ್ತವವಾಗಿ ಹೃದಯದಲ್ಲಿ ನೋವು ಕಾಣಿಸಿಕೊಂಡರೆ ಎದೆಯ ನಟ್ಟ ನಡುವಿನಲ್ಲಲ್ಲ, ಕೊಂಚ ಎಡಭಾಗದಲ್ಲಿ ನೋವು ಕಾಣಿಸಿಕೊಳ್ಳುತ್ತದೆ.

ನಟ್ಟನಡುವಿನಲ್ಲಿ ಉರಿ ಅಥವಾ ತೀಕ್ಷ್ಣವಾದ ನೋವು ಕಾಣಿಸಿಕೊಂಡರೆ ಅದು ಬಹುತೇಕ ಎದೆಯುರಿಯ (heartburn) ಪ್ರಭಾವವಾಗಿರಬಹುದು. ಇದು ಹೊಟ್ಟೆಯ ಮೇಲ್ಭಾಗದಿಂದ ಹಿಡಿದು ಗಂಟಲವರೆಗೂ ವ್ಯಾಪಿಸಬಹುದು. ಇದಕ್ಕೆ ಮುಖ್ಯ ಕಾರಣ ನಮ್ಮ ಜಠರದಲ್ಲಿ ಅತ್ಯಂತ ಆಮ್ಲೀಯವಾದ ಜಠರರಸದಲ್ಲಿ ಆಹಾರ ಜೀರ್ಣವಾದ ಬಳಿಕ ಕರಗಿದ ದ್ರವ ಕರುಳುಗಳ ಮೂಲಕ ಮುಂದೆ ಹೋಗಬೇಕು. ಆದರೆ ವಿವಿಧ ಕಾರಣಗಳಿಂದಾಗಿ ಈ ಆಮ್ಲೀಯ ದ್ರವ ಅನ್ನನಾಳದ ಮೂಲಕ ಹೊಟ್ಟೆಯಿಂದ ಗಂಟಲಿನತ್ತ ಹೊರಡುತ್ತದೆ. ಕರಗಿರುವ ಆಮ್ಲದ ಕಾರಣ ಅನ್ನನಾಳದ ಒಳಭಾಗದಲ್ಲಿ ಉರಿ ತರಿಸುತ್ತದೆ. ಇದೇ ಎದೆಯುರಿ. ಎದೆಯುರಿ ಸಮಸ್ಯೆಗೆ ಆರೋಗ್ಯಕರ ಜೀವನಶೈಲಿಯೇ ಮದ್ದು ಕಣ್ರಿ!

ಈ ಸ್ಥಿತಿಗೆ ಮುಖ್ಯ ಕಾರಣ ಹೊಟ್ಟೆಯ ಮೇಲ್ಭಾಗದ ಸ್ನಾಯುಗಳು ಆಹಾರ ಕೆಳಬರುವಾಗ ಸಡಿಲವಾಗಿ ಅನ್ನನಾಳದಿಂದ ಅಹಾರ ಜಠರಕ್ಕೆ ಇಳಿಸಲು ನೆರವಾಗುತ್ತದೆ. ಬಳಿಕ ಜೀರ್ಣಗೊಂಡ ಆಹಾರವನ್ನು ಕರುಳುಗಳತ್ತ ನೂಕಲು ಸಂಕುಚಿಸಿ ಆಮ್ಲೀಯ ದ್ರವ ಅನ್ನನ್ನಾಳಕ್ಕೇರದಂತೆ ತಡೆಯುತ್ತದೆ. ಆದರೆ ಕೆಲವೊಮ್ಮೆ ಆಮ್ಲೀಯ ಆಹಾರ ಮೇಲೆ ಬರುವಾಗ ಸಂಕುಚಿಸದೇ ಅನ್ನನಾಳದ ಮೂಲಕ ಮೇಲೆ ಬರಲು ಅನುವು ಮಾಡಿಕೊಡುತ್ತದೆ. ಇದಕ್ಕೆ ತಪ್ಪು ಜೀವನಶೈಲಿ, ಸಾಕಷ್ಟು ನಿದ್ದೆ, ವಿಶ್ರಾಂತಿಯಿಲ್ಲದೇ ಇರುವುದು, ಕುಡಿಯುವ ನೀರಿನ ಪ್ರಮಾಣದಲ್ಲಿ ಕೊರತೆ ಮೊದಲಾದ ಹಲವು ಕಾರಣಗಳಿವೆ. ಇದಕ್ಕಾಗಿ ಮನೆಯಲ್ಲಿಯೇ ಲಭ್ಯವಿರುವ ಸುಲಭ ಅಡುಗೆ ಸಾಮಾಗ್ರಿಗಳಿಂದ ಮತ್ತು ಆಹಾರಗಳಿಂದ ನೈಸರ್ಗಿಕವಾದ ಪರಿಹಾರ ಪಡೆಯಬಹುದು. ಯಮಯಾತನೆ ನೀಡುವ ಮುಟ್ಟಿನ ನೋವಿಗೆ ಪರಿಹಾರವೇನು?

ಅಡುಗೆ ಸೋಡಾ

ಅಡುಗೆ ಸೋಡಾ

ಸೋಡಿಯಂ ಬೈಕಾರ್ಬೋನೇಟ್ ಅಥವಾ ದೋಸೆಗೆ ಬುರುಗು ಬರಲು ಉಪಯೋಗಿಸುವ ಅಡುಗೆ ಸೋಡಾ ವಾಸ್ತವಾಗಿ ಪ್ರತ್ಯಾಮ್ಲವಾಗಿದೆ (ಆಮ್ಲದ pH 7 ಕ್ಕಿಂತ ಕಡಿಮೆಯಿದ್ದು ಪ್ರತ್ಯಾಮ್ಲದ pH 7ಕ್ಕಿಂತಲೂ ಹೆಚ್ಚಿರುತ್ತದೆ). ಆಮ್ಲ+ಪ್ರತ್ಯಾಮ್ಲ=ಉಪ್ಪು + ನೀರು ಎಂಬ ರಾಸಾಯನಿಕ ಸೂತ್ರದ ಆಧಾರದ ಮೇಲೆ ಅನ್ನನಾಳದಲ್ಲಿರುವ ಆಮ್ಲದ ಪ್ರಭಾವವನ್ನು ಪ್ರತ್ಯಾಮ್ಲವಾದ ಅಡುಗೆ ಸೋಡಾ ಕಡಿಮೆಗೊಳಿಸುತ್ತದೆ. ಇದಕ್ಕಾಗಿ ಒಂದು ಲೋಟ ತಣ್ಣೀರಿಗೆ ಒಂದು ಚಿಕ್ಕ ಚಮಚ ಅಡುಗೆ ಸೋಡಾ ಸೇರಿಸಿ ಕಲಕಿ ಕುಡಿಯಿರಿ. ಉರಿ ಕಡಿಮೆಯಾದ ಬಳಿಕ ಸಾಕಷ್ಟು ತಣ್ಣೀರು ಕುಡಿಯಿರಿ, ಏಕೆಂದರೆ ಆಮ್ಲವನ್ನು ಶಮನಗೊಳಿಸಿದ ಬಳಿಕ ಉತ್ಪತ್ತಿಯಾದ ಉಪ್ಪನ್ನು ಹೊರಹಾಕಲು ಸಾಕಷ್ಟು ನೀರಿನ ಅಗತ್ಯವಿದೆ.

ಲೋಳೆಸರದ ಜ್ಯೂಸ್

ಲೋಳೆಸರದ ಜ್ಯೂಸ್

ಊಟಕ್ಕೂ ಮೊದಲು ಲೋಳೆಸರದ ರಸದಿಂದ ತಯಾರಿಸಿದ ಜ್ಯೂಸ್ ಕುಡಿಯುವುದರಿಂದ ಎದೆಯುರಿ ಕಡಿಮೆಯಾಗುತ್ತದೆ. ಇದಕ್ಕಾಗಿ ಲೋಳೆಸರದ ಬೆರಳುಗಾತ್ರದ ಈಗತಾನೇ ಮುರಿದ ಕೋಡನ್ನು ನಯವಾಗಿ ಅರೆದು ಒಂದು ಲೋಟ ನೀರಿನಲ್ಲಿ ಹಾಕಿ ಮಿಕ್ಸಿಯಲ್ಲಿ ಗೊಟಾಯಿಸಿ. ಎದೆಯುರಿಗೆ ಇದೊಂದು ಅತ್ಯುತ್ತಮವಾದ ಪರಿಹಾರವಾಗಿದೆ.

ಸೇಬಿನ ಶಿರ್ಕಾ (Apple Cider Vinegar)

ಸೇಬಿನ ಶಿರ್ಕಾ (Apple Cider Vinegar)

ಊಟಕ್ಕೂ ಮೊದಲು ಒಂದು ಲೋಟ ನೀರಿನಲ್ಲಿ ಒಂದು ದೊಡ್ಡ ಚಮಚ ಶೋಧಿಸದ ಸೇಬಿನ ಶಿರ್ಕಾ ಸೇರಿಸಿ ಕುಡಿಯುವುದರಿಂದಲೂ ಎದೆಯುರಿ ಕಡಿಮೆಯಾಗುತ್ತದೆ.

ಸಾಸಿವೆ

ಸಾಸಿವೆ

ಒಗ್ಗರಣೆಗೆ ಉಪಯೋಗಿಸುವ ಹಳದಿ ಸಾಸಿವೆ ಕಾಳು ಸಹಾ ಒಂದು ಪ್ರತ್ಯಾಮ್ಲವಾಗಿದ್ದು ಆಮ್ಲವನ್ನು ಶಮನಗೊಳಿಸುತ್ತದೆ. ಇದಕ್ಕಾಗಿ ಊಟದ ಬಳಿಕ ಕೆಲವು ಕಾಳುಗಳನ್ನು ನೇರವಾಗಿ ಜಗಿದು ತಿನ್ನುವುದು ಉತ್ತಮ. ಆದರೆ ಇದರ ರುಚಿ ಕಹಿಯಾಗಿರುವುದರಿಂದ ಹೆಚ್ಚಿನವರು ಹಾಗೇ ತಿನ್ನಲು ಇಷ್ಟಪಡುವುದಿಲ್ಲ. ಇದಕ್ಕಾಗಿ ಒಂದು ಚಿಕ್ಕ ಚಮಚದಷ್ಟು ಹಳದಿ ಸಾಸಿವೆಯನ್ನು ನೇರವಾಗಿ ಬಾಯಿಯಲ್ಲಿ ಸುರಿದು ನೀರಿನ ಮೂಲಕ ನುಂಗುವುದು ಪರಿಣಾಮಕಾರಿಯಾಗಿದೆ. ಇದೂ ಸಾಧ್ಯವಾಗದಿದ್ದರೆ ಊಟದ ಕಡೆಯ ತುತ್ತುಗಳಲ್ಲಿ ಅಥವಾ ಕಡೆಗೆ ನುಂಗುವ ಚಪಾತಿ, ಬ್ರೆಡ್ ಮೊದಲಾದವುಗಳ ನಡುವೆ ಇರಿಸಿ ತಿನ್ನುವ ಮೂಲಕ ಎದೆಯುರಿಯಾಗುವುದನ್ನು ತಡೆಗಟ್ಟಬಹುದು.

ಶುಂಠಿ ಮತ್ತು ಲಿಂಬೆ

ಶುಂಠಿ ಮತ್ತು ಲಿಂಬೆ

ಸುಮಾರು ಒಂದು ಇಂಚು ಹಸಿಶುಂಠಿಯನ್ನು ಅರೆದು ರಸವನ್ನು ಹಿಂಡಿ ತೆಗೆಯಿರಿ. ಇದಕ್ಕೆ ಸಮಪ್ರಮಾಣದಲ್ಲಿ ಲಿಂಬೆರಸವನ್ನು ಸೇರಿಸಿ ಮಿಶ್ರಣ ಮಾಡಿಕೊಳ್ಳಿ. ಊಟದ ಬಳಿಕ ಒಂದು ಚಿಕ್ಕ ಚಮಚ ರಸವನ್ನು ನೇರವಾಗಿ ಕುಡಿಯಿರಿ. ಕೊಂಚ ತೀಕ್ಷ್ಣವಾಗಿರುವುದರಿಂದ ನಾಲಿಗೆಗೆ ಚುರುಕು ಮುಟ್ಟಿಸುವುದು ನಿಮಗೆ ಇಷ್ಟವಿಲ್ಲದಿದ್ದರೆ ಈ ರಸವನ್ನು ಹಾಲಿಲ್ಲದ ಟೀ ಯಲ್ಲಿ ಸೇರಿಸಿ ಸೇವಿಸಿ. ಸಕ್ಕರೆ ಸೇರಿಸಬೇಡಿ, ಕೊಂಚ ಬೆಲ್ಲ ಬೇಕಿದ್ದರೆ ಸೇರಿಸಿ ಊಟಕ್ಕೂ ಮೊದಲೇ ಕುಡಿಯಿರಿ.

ಕ್ಯಾರೆಟ್ ಅಥವಾ ಎಲೆಕೋಸು

ಕ್ಯಾರೆಟ್ ಅಥವಾ ಎಲೆಕೋಸು

ಈ ಎರಡೂ ತರಕಾರಿಗಳ ರಸ ಎದೆಯುರಿ ಕಡಿಮೆಗೊಳಿಸಲು ಉತ್ತಮವಾಗಿವೆ. ಕ್ಯಾರೆಟ್ ಅಥವಾ ಎಲೆಕೋಸನ್ನು ತುರಿದು ಮಿಕ್ಸಿಯಲ್ಲಿ ಕಡೆದು ರಸವನ್ನು ಹಿಂಡಿ ಊಟದ ಬಳಿಕ ಒಂದು ಕಪ್ ಕುಡಿಯುವ ಮೂಲಕ ಆಮ್ಲೀಯತೆ ಕಡಿಮೆಯಾಗುತ್ತದೆ.

ಬಾಳೆಹಣ್ಣು

ಬಾಳೆಹಣ್ಣು

ಊಟದ ಬಳಿಕ ಚೆನ್ನಾಗಿ ಹಣ್ಣಾಗಿರುವ ಬಾಳೆಹಣ್ಣೊಂದನ್ನು ಊಟದ ಬಳಿಕ ತಿನ್ನಿ. (ಈ ಸೂಚನೆಯನ್ನು ಬಾಳೆಹಣ್ಣಿನ ಸಿಪ್ಪೆಯ ಚುಕ್ಕಿಗಳು ತಿಳಿಸುತ್ತವೆ. ಚುಕ್ಕಿಗಳು ಸುಮಾರು ಬೇಳೆಗಾತ್ರದಷ್ಟು ದೊಡ್ಡದಾಗಿರಬೇಕು). ಇದರಿಂದ ಕೂಡಲೇ ಎದೆಯುರಿ ಕಡಿಮೆಯಾಗುತ್ತದೆ.

ಪಪ್ಪಾಯಿ ಹಣ್ಣು

ಪಪ್ಪಾಯಿ ಹಣ್ಣು

ಪಪ್ಪಾಯಿಯಲ್ಲಿರುವ ಪಾಪಿನ್ ಎಂಬ ಪೋಷಕಾಂಶ ಸಹಾ ಒಂದು ಪ್ರತ್ಯಾಮ್ಲವಾಗಿದೆ ಹಾಗೂ ಜೀರ್ಣಕ್ರಿಯೆಯಲ್ಲಿ ಸಹಕರಿಸುತ್ತದೆ. ಇದಕ್ಕಾಗಿ ಚೆನ್ನಾಗಿ ಹಣ್ಣಾದ ಪೊಪ್ಪಾಯಿಯ ತಿರುಳನ್ನು ಊಟದ ಬಳಿಕ ಸೇವಿಸಿ. ಇಷ್ಟವಾಗದಿದ್ದರೆ ಕೊಂಚ ನೀರು ಮತ್ತು ಬೆಲ್ಲದೊಡನೆ ಜ್ಯೂಸ್ ಮಾಡಿಕೊಂಡು ಸಹಾ ಸೇವಿಸಬಹುದು.

ಮೆಂತೆ

ಮೆಂತೆ

ಊಟದ ಬಳಿಕ ಅರ್ಧ ಚಿಕ್ಕಚಮಚ ಮೆಂತೆಕಾಳುಗಳನ್ನು ನೀರಿನೊಂದಿಗೆ ಅಗಿಯದೇ ನುಂಗಿ. ಇದು ಗಂಟಲಿನಲ್ಲಿ ಇಳಿಯುತ್ತಿದ್ದಂತೆಯೇ ಆಮ್ಲೀಯವಾದ ದ್ರವದೊಡನೆ ಪ್ರಕ್ರಿಯೆಗೆ ಒಳಗಾಗಿ ಆಮ್ಲದ ಪ್ರಭಾವವನ್ನು ತಗ್ಗಿಸಿ ಮತ್ತೆ ಹೊಟ್ಟೆಯತ್ತ ಬರುವಂತೆ ಮಾಡುತ್ತದೆ.

ದೊಡ್ಡ ಜೀರಿಗೆ (ಸೌಂಫ್)

ದೊಡ್ಡ ಜೀರಿಗೆ (ಸೌಂಫ್)

ಊಟದ ಬಳಿಕ ಸುಮಾರು ಒಂದು ಘಂಟೆ ತಣ್ಣೀರಿನಲ್ಲಿ ನೆನೆಸಿದ್ದ ಒಂದು ದೊಡ್ಡ ಚಮಚ ದೊಡ್ಡಜೀರಿಗೆ ಕಾಳುಗಳನ್ನು ನೀರಿನೊಂದಿಗೆ ಅಗಿಯದೇ ನುಂಗಿರಿ. ಇದರಿಂದ ಎದೆಯುರಿ ಶೀಘ್ರವಾಗಿ ಕಡಿಮೆಯಾಗುತ್ತದೆ.

ನೆಲ್ಲಿಕಾಯಿ

ನೆಲ್ಲಿಕಾಯಿ

ಊಟದ ಬಳಿಕ ನೆಲ್ಲಿಕಾಯಿಯನ್ನು ಚೆನ್ನಾಗಿ ಅಗಿದು ನೀರಿನೊಂದಿಗೆ ನುಂಗುವ ಮೂಲಕವೂ ಎದೆಯುರಿ ಕಡಿಮೆಯಾಗುತ್ತದೆ. ಜೊತೆಗೇ ಅನ್ನನಾಳ ಮತ್ತು ಜೀರ್ಣಾಂಗಗಳಲ್ಲಿ ಸೋಂಕು ಅಥವಾ ಸೂಕ್ಷ್ಮಗೀರುಗಳಿದ್ದರೆ ಅವುಗಳನ್ನು ಶೀಘ್ರವಾಗಿ ಗುಣಪಡಿಸಲೂ ನೆಲ್ಲಿಕಾಯಿಯಲ್ಲಿರುವ ಪೋಷಕಾಂಶಗಳು ನೆರವಾಗುತ್ತವೆ. ಅಲ್ಲದೇ ಅನ್ನನಾಳದ ಒಳಭಾಗವನ್ನು ಆಮ್ಲದ ತೀವ್ರತೆಯಿಂದಲೂ ರಕ್ಷಿಸುತ್ತದೆ.

ತುಳಸಿ ಎಲೆಗಳು

ತುಳಸಿ ಎಲೆಗಳು

ಈಗ ತಾನೇ ಕಿತ್ತ ನಾಲ್ಕೈದು ತುಳಸಿ ಎಲೆಗಳನ್ನು ಊಟದ ಬಳಿಕ ಜಗಿದು ಸೇವಿಸುವುದರಿಂದಲೂ ಎದೆಯುರಿ ಕಡಿಮೆಯಾಗುತ್ತದೆ. ಈ ಅಭ್ಯಾಸವನ್ನು ಪ್ರತಿದಿನ ರೂಢಿಸಿಕೊಂಡರೆ ಜೀರ್ಣಕ್ರಿಯೆ ಉತ್ತಮಗೊಳ್ಳುವ ಜೊತೆಗೇ ಎದೆಯುರಿ, ಹುಳಿತೇಗು ಮೊದಲಾದ ತೊಂದರೆಗಳಿಂದಲೂ ಮುಕ್ತಿ ಪಡೆಯಬಹುದು.

ಏಲಕ್ಕಿ

ಏಲಕ್ಕಿ

ಎರಡು ಏಲಕ್ಕಿಗಳನ್ನು ಪುಡಿಮಾಡಿ ಒಂದು ಲೋಟ ನೀರಿನೊಂದಿಗೆ ಸುಮಾರು ಹದಿನೈದು ನಿಮಿಷಗಳವರೆಗೆ ಚಿಕ್ಕ ಉರಿಯಲ್ಲಿ ಕುದಿಸಿ. ಈ ನೀರನ್ನು ನೋಸಿ ತಣಿಯಲು ಬಿಡಿ. ಊಟವಾದ ಬಳಿಕ ಈ ನೀರನ್ನು ಕುಡಿಯುವುದರಿಂದ ಎದೆಯುರಿ ಕಡಿಮೆಯಾಗುತ್ತದೆ.

ಲವಂಗ

ಲವಂಗ

ಥಟ್ಟನೇ ಎದೆಯುರಿ ಪ್ರಾರಂಭವಾಗಿ ಏನೂ ಮಾಡಲು ತೋಚದೇ ಇದ್ದಾಗ ಒಂದೆರಡು ಲವಂಗಗಳನ್ನು ಚೆನ್ನಾಗಿ ಜಗಿದು ದ್ರವವಾದ ಬಳಿಕ ನುಂಗಿ. ಇದು ಎದೆಯುರಿಯನ್ನು ತಕ್ಷಣ ಶಮನಗೊಳಿಸುತ್ತದೆ.

ಫ್ರಿಜ್ಜಿನಲ್ಲಿಟ್ಟ ತಣ್ಣನೆಯ ಹಾಲು

ಫ್ರಿಜ್ಜಿನಲ್ಲಿಟ್ಟ ತಣ್ಣನೆಯ ಹಾಲು

ಫ್ರಿಜ್ಜಿನ ಫ್ರೀಜರಿನಲ್ಲಿ ಇನ್ನೇನು ಮಂಜುಗಡ್ಡೆಯ ರೂಪ ಪಡೆಯುತ್ತದೆ ಎನ್ನುವಷ್ಟು ತಣ್ಣಗಿರುವ ಪ್ಯಾಶ್ಚರೀಕರಿಸಿದ ಹಾಲನ್ನು (Chilled milk) ಊಟದ ಬಳಿಕ ಒಂದು ಲೋಟ ಕುಡಿಯುವುದರಿಂದಲೂ ಶೀಘ್ರವಾದ ಶಮನ ದೊರಕುತ್ತದೆ.


English summary

Home Remedies To Curb Heartburn Naturally

If you have experienced a painful burning sensation rising exactly behind your breastbone moving up your throat, then that is nothing but an acid reflux which happens when the acid from your gut enters your esophagus. Check for few home remedies to curb heartburn naturally. Read on to find more.
X
Desktop Bottom Promotion