For Quick Alerts
ALLOW NOTIFICATIONS  
For Daily Alerts

ನೆಗಡಿ-ತಲೆನೋವಿಗೆಲ್ಲಾ ವೈದ್ಯರ ಹಂಗೇಕೆ?

|

ಮಳೆಗಾಲದ ಅವಧಿಯಲ್ಲಿ ನೆಗಡಿ, ತಲೆನೋವು, ಮೂಗು ಕಟ್ಟುವಿಕೆ, ಹಾಗೂ ಕೆಮ್ಮುಗಳು ತೀರ ಸಾಮಾನ್ಯವಾದ ತೊ೦ದರೆಗಳಾಗಿವೆ. ಹವಾಮಾನದಲ್ಲಾಗುವ ಬದಲಾವಣೆಯು ಎಲ್ಲರ ಮೇಲೂ ಕೂಡ ತನ್ನ ಪ್ರಭಾವವನ್ನು ಬೀರುತ್ತದೆ. ಇ೦ತಹ ಹವಾಮಾನ ವೈಪರೀತ್ಯಗಳಿರುವ ಸ೦ದರ್ಭಗಳಲ್ಲಿ ಕೈಗೊಳ್ಳಬೇಕಾದ೦ತಹ ಅತ್ಯುತ್ತಮವಾದ ಕ್ರಮವೆ೦ದರೆ, ಈ ರೋಗಗಳ ವಿರುದ್ಧ ಪ್ರತಿಬ೦ಧನಾತ್ಮಕ ಮುನ್ನೆಚ್ಚರಿಕೆಗಳನ್ನು ತೆಗೆದುಕೊ೦ಡು ಅವು ಬಾರದ೦ತೆ ತಡೆಗಟ್ಟುವುದು. ಮಳೆಗಾಲದಲ್ಲಿ ನಾಲಿಗೆಯ ಚಪಲಕ್ಕೆ ಸ್ವಲ್ಪ ಬ್ರೇಕ್ ಹಾಕಿ!

ಮಳೆಗಾಲದ ತಿ೦ಗಳುಗಳ ಪ್ರಮುಖ ಖಳನಾಯಕನಾದ ನೆಗಡಿಯ ವಿರುದ್ಧ ಹೋರಾಡಲು ಕೈಗೊಳ್ಳಬಹುದಾದ ಕ್ರಮಗಳ ಕುರಿತು ಗಮನಹರಿಸುವುದೇ ನಮ್ಮ ಆದ್ಯ ಕರ್ತವ್ಯಗಳಲ್ಲೊ೦ದಾಗಿದೆ. ನೆಗಡಿ ಮತ್ತು ಕೆಮ್ಮು ಜನರನ್ನು ತೀರಾ ಸಾಮಾನ್ಯವಾಗಿ ಕಾಡುವ ಮಳೆಗಾಲದ ರೋಗಗಳಾಗಿವೆ. ಆದಾಗ್ಯೂ, ಇದರ ಕುರಿತು ಎಚ್ಚರವಹಿಸದೇ ಹೋದರೆ, ಈ ಸಾಮಾನ್ಯವಾದ ನೆಗಡಿಯು ಉಲ್ಬಣಗೊ೦ಡು ಪರಿಸ್ಥಿತಿಯನ್ನು ಮತ್ತಷ್ಟು ಬಿಗಡಾಯಿಸುತ್ತದೆ. ಹಾಗಾಗಿ ಇಂತಹ ಸಮಸ್ಯೆಗಳಿಂದ ದೂರವಾಗಲು ಕೆಲವೊಂದು ಮನೆಮದ್ದುಗಳನ್ನು ಸೂಚಿಸಿದ್ದೇವೆ, ತಪ್ಪದೇ ನೀವು ಕೂಡ ಪಾಲಿಸಿ...

ಬೆಳ್ಳುಳ್ಳಿ

ಬೆಳ್ಳುಳ್ಳಿ

ಶೀತದಿಂದ ಬರುವಂತಹ ತಲೆನೋವಿನ ಸಹಿತ ಸಾಮಾನ್ಯ ಶೀತವನ್ನು ಇದು ಹೋಗಲಾಡಿಸುತ್ತದೆ. ಇದು ಆ್ಯಂಟಿ ಬ್ಯಾಕ್ಟೀರಿಯಾ ಮತ್ತು ಆ್ಯಂಟಿವೈರಲ್ ಗುಣಗಳನ್ನು ಹೊಂದಿದೆ. ಬೆಳ್ಳುಳ್ಳಿ ಮೂಗು ಕಟ್ಟುವಿಕೆ ನಿವಾರಿಸುತ್ತದೆ. ಜಜ್ಜಿದ ಬೆಳ್ಳುಳ್ಳಿಯನ್ನು ಕುದಿಸಿ ಅದಕ್ಕೆ ಎರಡು ಚಮಚ ಜೇನು ಮತ್ತು ಒಂದು ಚಮಚ ಲಿಂಬೆರಸ ಹಾಕಿ. ಇದನ್ನು ದಿನಕ್ಕೆ ಎರಡು ಸಲ ಕುಡಿಯಿರಿ.

ಕಾಳುಮೆಣಸು

ಕಾಳುಮೆಣಸು

ಇದು ಅತಿಯಾಗಿ ಖಾರವಾಗಿದ್ದು, ಗಂಟಲು ಉರಿಯುವ ಅನುಭವವನ್ನು ಉಂಟು ಮಾಡಿ, ನೀವು ಬಹಳ ಕೆಟ್ಟದಾಗಿ ಸೀನುವoತೆ ಮಾಡಿದರೂ ಸಹ, ಇದರಲ್ಲಿರುವ ತೈಲಾoಶವು ನೆಗಡಿ, ಕೆಮ್ಮು, ಜ್ವರ, ಹಾಗೂ ನೋವಿನಿಂದ ಬಿಡುಗಡೆಯನ್ನು ನೀಡಬಲ್ಲದು. ಕಾರಣ, ಕಾಳುಮೆಣಸಿನಲ್ಲಿ piperine ಎಂಬ ಬಹು ಪರಿಣಾಮಕಾರಿಯಾದ ರಾಸಾಯನಿಕ ವಸ್ತುವಿದೆ.

ಜೇನು

ಜೇನು

ಇದು ಬ್ಯಾಕ್ಟೀರಿಯಾ ನಿವಾರಕ ಮತ್ತು ಇದರಲ್ಲಿ ವೈರಾಣು ನಿರೋಧಕ ಗುಣಗಳಿವೆ. ಇದು ನೋಯುವ ಗಂಟಲನ್ನು ಉಪಶಮನ ಮಾಡುತ್ತದೆ. ತಲೆನೋವಿನ ಸಹಿತ ಶೀತದ ಎಲ್ಲಾ ರೋಗಲಕ್ಷಣಗಳನ್ನು ಹೋಗಲಾಡಿಸುತ್ತದೆ. ಒಂದು ಚಮಚ ಜೇನು ಮತ್ತು ಒಂದು ಚಮಚ ನಿಂಬೆರಸ ಮಿಶ್ರಣ ಮಾಡಿಕೊಳ್ಳಿ. ಇದನ್ನು ದಿನದಲ್ಲಿ ನಾಲ್ಕು ಸಲ ಸೇವಿಸಿ.

ಜೇನು-ಈರುಳ್ಳಿ ಸಿರಪ್

ಜೇನು-ಈರುಳ್ಳಿ ಸಿರಪ್

ಮೂರು ಅಥವಾ ನಾಲ್ಕು ಕೆಂಪು ಈರುಳ್ಳಿಗಳನ್ನು ಅಡ್ಡಡ್ಡವಾಗಿ ಕತ್ತರಿಸಿಕೊಳ್ಳಿ. ಈರುಳ್ಳಿಯ ತುಂಡುಗಳನ್ನು ಒಂದು ಪಾತ್ರೆಯಲ್ಲಿ ಹಾಕಿ ಮತ್ತು ಅದಕ್ಕೆ ಸ್ವಲ್ಪ ಜೇನು ಸೇರಿಸಿ. ಅದನ್ನು ಮುಚ್ಚಿಡಿ ಮತ್ತು ಸುಮಾರು 12 ಗಂಟೆಗಳ ಕಾಲ ಹಾಗೆ ಇರಲಿ. ಜೇನು ಮತ್ತು ಈರುಳ್ಳಿಯಿಂದ ಬರುವಂತಹ ಸಿರಪ್ ಶೀತಕ್ಕೆ ಅತ್ಯುತ್ತಮ ಔಷಧಿ.

ದಾಲ್ಚಿನ್ನಿ ಮತ್ತು ಏಲಕ್ಕಿ ಚಹಾ

ದಾಲ್ಚಿನ್ನಿ ಮತ್ತು ಏಲಕ್ಕಿ ಚಹಾ

`ಕೆಹ್ವಾ' ಎಂದು ಕರೆಯಲ್ಪಡುವ ಇದು ಒಂದು ವಿಶೇಷ ಚಹಾ. ಶೀತ ಮತ್ತು ತಲೆನೋವಿಗೆ ಇದು ಒಂದು ಅತ್ಯುತ್ತಮ ಮದ್ದು. ಈ ಚಹಾ ತಯಾರಿಸಲು ಒಂದು ಕಪ್ ನೀರನ್ನು ಕುದಿಸಿ ದಾಲ್ಚಿನ್ನಿಯ ಕೆಲವೊಂದು ಚಕ್ಕೆ ಮತ್ತು ಏಲಕ್ಕಿಯ ಸಿಪ್ಪೆ, ಜಜ್ಜಿದ ಕೆಲವೊಂದು ಬದಾಮಿ, ರುಚಿಗೆ ಬೇಕಾದಷ್ಟು ಸಕ್ಕರೆ ಮತ್ತು ಒಂದು ಚಿಟಿಕೆ ಕೇಸರಿ ಹಾಕಿ. ಇದನ್ನು ಸುಮಾರು 20 ನಿಮಿಷಗಳ ಕಾಲ ಕುದಿಸಿ ಮತ್ತು ದಿನಕ್ಕೆ ಮೂರು ಸಲ ಕುಡಿಯಿರಿ.

ಹಬೆ ತೆಗೆದುಕೊಳ್ಳುವುದು

ಹಬೆ ತೆಗೆದುಕೊಳ್ಳುವುದು

ಒಂದು ಸಣ್ಣ ಪಾತ್ರೆಯಲ್ಲಿ ಸ್ವಲ್ಪ ನೀರನ್ನು ಸರಿಯಾಗಿ ಕುದಿಸಿ, ಅದನ್ನು ತೆಗೆದಿಟ್ಟು ತಲೆಯನ್ನು ಟವೆಲ್‌ನಿಂದ ಮುಚ್ಚಿ ಬರುವಂತಹ ಹಬೆಯನ್ನು ಉಸಿರಾಡಿ. ಲ್ಯಾವೆಂಡರ್ ಎಣ್ಣೆ ಅಥವಾ ಪುದೀನಾ ಎಣ್ಣೆಯನ್ನು ನೀರಿಗೆ ಹಾಕಿ. ಇದು ಮೂಗು ಕಟ್ಟುವಿಕೆ ನಿವಾರಿಸಿ ನಿಮಗೆ ಉಲ್ಲಾಸವನ್ನು ಉಂಟು ಮಾಡುತ್ತದೆ.

ಶುಂಠಿ ಚಹಾ

ಶುಂಠಿ ಚಹಾ

ಇದು ಮತ್ತೊಂದು ಚಮತ್ಕಾರಿಕ ಅಹಾರಪದಾರ್ಥವಾಗಿದೆ. ಶೀತ ಮತ್ತು ಕೆಮ್ಮಿನ ಮುನ್ನೆಚ್ಚರಿಕೆಯ ಕ್ರಮವಾಗಿ, ಪುಡಿ ಮಾಡಿದ ಅಥವಾ ಪೇಸ್ಟ್ ರೂಪದಲ್ಲಿರುವ ಶುಂಠಿಯನ್ನು ಪ್ರತಿಯೊಂದು ತರಕಾರಿ ಪದಾರ್ಥದೊoದಿಗೂ ಸೇರಿಸಿಕೊಳ್ಳಿರಿ. ಶುಂಠಿಯು ಕೇವಲ ಕಟುವಾದ ರುಚಿಯನ್ನು ಹೊಂದಿರುವುದು ಮಾತ್ರವೇ ಅಲ್ಲ, ಜೊತೆಗೆ, ಅದು ನೆಗಡಿಯ ವಿರುದ್ಧ ಹೋರಾಡಲೂ ಸಹ ನೆರವಾಗುತ್ತದೆ. ನಿಮ್ಮ ಚಹಾದ ನೀರಿನೊದಿಗೆ ಶುಂಠಿಯನ್ನು ಹಾಕಿ ಕುದಿಸಿ ಶುಂಠಿ ಸ್ವಾದದ ಚಹಾದ ಆನಂದವನ್ನು ಅನುಭವಿಸಿರಿ. ಇದು ಗಂಟಲ ಕೆರೆತವನ್ನು ಉಪಶಮನಗೊಳಿಸುತ್ತದೆ ಹಾಗೂ ನೆಗಡಿಗೆ ಕಾರಣವಾದ ವೈರಾಣುಗಳನ್ನು ಬೆನ್ನಟ್ಟಿ ಓಡಿಸುತ್ತದೆ.

English summary

Home Remedies For Common Cold And Headache

Common cold is a very annoying condition and it is usually accompanied with headache, stuffy nose, watery eyes and sneezing. Normally, cold subsides within six to seven days and you may not require antibiotics. These natural cures will also relieve allergic cold as well. Have a look at some natural remedies to cure cold and headache.
Story first published: Thursday, June 11, 2015, 20:03 [IST]
X
Desktop Bottom Promotion