For Quick Alerts
ALLOW NOTIFICATIONS  
For Daily Alerts

ಪ್ರಯಾಣದ ನಂತರ ಕಾಡುವ ಮೈ ಕೈ ನೋವಿಗೆ ಮನೆಮದ್ದು

By Super
|

ದೀರ್ಘಪ್ರಯಾಣಕ್ಕಾಗಿ ಹೆಚ್ಚಿನವರು ರಾತ್ರಿ ಹೊರಡುವ ಬಸ್ಸುಗಳನ್ನೇ ಹೆಚ್ಚಾಗಿ ಅವಲಂಬಿಸುತ್ತಾರೆ. ಏಕೆಂದರೆ ದೀರ್ಘಪ್ರಯಾಣದ ಬಳಿಕ ಆವರಿಸುವ ಮೈಕೈ ನೋವು ಮತ್ತು ಆಯಾಸ ರಾತ್ರಿ ಪ್ರಯಾಣದಲ್ಲಿ ಹಗಲಿನ ಪ್ರಯಾಣಕ್ಕಿಂತ ಕಡಿಮೆ ಇರುತ್ತದೆ. ಆದರೆ ರಾತ್ರಿಯಾಗಲೀ ಹಗಲಾಗಲಿ, ಈ ತೊಂದರೆಗಳು ಇದ್ದೇ ಇರುತ್ತವೆ. ಇಡಿಯ ಮೈಯ ಸ್ನಾಯುಗಳೆಲ್ಲಾ ನೋವಿನಿಂದ ಕೂಡಿದ್ದು ಕೆಲವರಿಗೆ ಪಾದಗಳು ಮತ್ತು ಕೆಳಮೊಣಕಾಲಿನ ಬಳಿ ಊದಿಕೊಂಡಿರುತ್ತದೆ. ಮಧುಮೇಹಿಗಳಲ್ಲಿ ಈ ತೊಂದರೆ ಅತಿ ಹೆಚ್ಚು. ಸ್ನಾಯುಗಳು ಸೆಳೆತಗೊಂಡಿದ್ದು ಉರಿ ತರಿಸುತ್ತದೆ.

ಪಾದಗಳಲ್ಲಿ ಊದಿದ ಭಾಗದಲ್ಲಿ ಬೆರಳಿನಿಂದ ಒತ್ತಿದರೆ ಬೆರಳಿನ ಅಚ್ಚು ಬಿದ್ದಿರುವುದು ಬಹುಕಾಲದವರೆಗೆ ಹಾಗೇ ಇರುತ್ತದೆ. ಅದರಲ್ಲೂ ಹೆಚ್ಚೂ ಕಡಿಮೆ ಪ್ರತಿದಿನ ಪ್ರಯಾಣ ಮಾಡಲೇಬೇಕಾದವರ ದೇಹ ನಿಧಾನವಾಗಿ ನುಜ್ಜುಗುಜ್ಜಾಗುತ್ತಾ ಹೋಗುತ್ತದೆ. ಸೂಕ್ತ ವಿಶ್ರಾಂತಿ ಮತ್ತು ಆರೈಕೆ ಇಲ್ಲದಿದ್ದರೆ ಹಲವು ತೊಂದರೆಗಳು ಕಾಡಬಹುದು. ಇದೇ ಕಾರಣಕ್ಕೆ ಬಸ್ ಚಾಲನೆ, ವಿಮಾನದ ಪೈಲಟ್ ಮೊದಲಾದ ವೃತ್ತಿಯಲ್ಲಿರುವವರಿಗೆ ಪ್ರತಿ ಪ್ರಯಾಣದ ಬಳಿಕ ಕಡ್ಡಾಯವಾದ ವಿಶ್ರಾಂತಿಯನ್ನು ನೀಡಲಾಗುತ್ತದೆ.

https://www.boldsky.com/img/300x225/2015/07/02-1435816887-cover.jpg

ರೈಲು ಪ್ರಯಾಣದಲ್ಲಾದರೆ ಕೊಂಚ ಅಡ್ಡಡಲು ಸ್ಥಳಾವಕಾಶ ಇದ್ದರೂ ಬಸ್ ಪ್ರಯಾಣದಲ್ಲಿ ಅಡ್ಡಾಡಲು ಸ್ಥಳಾವಕಾಶ ಇಲ್ಲದಿರುವುದರಿಂದ ತುಂಬಾ ಹೊತ್ತು ಕುಳಿತಿರುವ ಮತ್ತು ನಿಧಾನವಾಗಿ ಆಗುವ ಕುಲುಕಾಟದ ಕಾರಣ ನಮ್ಮ ಸ್ನಾಯುಗಳು ನಿಧಾನವಾಗಿ ಸೆಳವಿಗೆ ಒಳಗಾಗುತ್ತದೆ (spasm). ಮೂಳೆಸಂದುಗಳಲ್ಲಿ ಸಂವೇದನೆಯ ತೊಂದರೆ ಇದ್ದವರಿಗೆ ಮತ್ತು ವೃದ್ಧರಿಗೆ ಈ ಸೆಳವು ಅತೀವ ನೋವು ನೀಡುತ್ತದೆ. ಯಮಯಾತನೆ ನೀಡುವ ಮೈ, ಕೈ ನೋವನ್ನು ಮಟ್ಟಹಾಕುವುದು ಹೇಗೆ?

ನೋವುನಿವಾರಕ ಮಾತ್ರೆಗಳನ್ನು ತೆಗೆದುಕೊಳ್ಳುವುದರಿಂದ ಕೊಂಚ ಶಮನ ಕಂಡುಬಂದರೂ ಇದರ ಪ್ರಭಾವ ಮುಗಿದ ಬಳಿಕ ನೋವು ಮತ್ತೆ ಮರುಕಳಿಸುತ್ತದೆ. ಈ ತೊಂದರೆಯಿಂದ ಮುಕ್ತಿ ಪಡೆಯಲು ಹಲವು ಮನೆಮದ್ದುಗಳು ಲಭ್ಯವಿವೆ. ಇವುಗಳನ್ನು ಉಪಯೋಗಿಸುವುದರಿಂದ ಪ್ರಯಾಣದ ಆಯಾಸ, ಸ್ನಾಯುಗಳ ಸೆಳವು ಮತ್ತು ಉರಿಯೂತ, ಪಾದಗಳ ಬಾವು ಗಮನಾರ್ಹವಾಗಿ ಕಡಿಮೆಯಾಗುತ್ತದೆ.

ಈ ಮನೆಮದ್ದುಗಳು ಸುರಕ್ಷಿತವಾಗಿದ್ದು ಪ್ರತಿ ಪ್ರಯಾಣದ ಬಳಿಕವೂ ಉಪಯೋಗಿಸಬಹುದಾಗಿದೆ. ಇದರಲ್ಲಿರುವ ಪೋಷಕಾಂಶಗಳು ನೈಸರ್ಗಿಕವಾಗಿ ದೇಹ ಪುನಃಶ್ಚೇತನ ಪಡೆಯಲು ನೆರವಾಗುತ್ತದೆ. ಈ ಗುಣಗಳಿರುವ ಸುಲಭ ಮನೆಮದ್ದುಗಳನ್ನು ಕೆಳಗೆ ವಿವರಿಸಲಾಗಿದೆ.

ಚೆರ್ರಿ ಹಣ್ಣಿನ ರಸ ಸೇವಿಸಿ


ಕೆಲವು ಚೆರ್ರಿ ಹಣ್ಣುಗಳನ್ನು ಮಿಕ್ಸಿಯಲ್ಲಿ ಕಡೆದು ತಾಜಾ ಇರುವಂತೆಯೇ ಸೇವಿಸುವುದರಿಂದ ಪ್ರಯಾಣದ ಆಯಾಸ ತಕ್ಷಣ ಪರಿಹಾರವಾಗುತ್ತದೆ. ಇದರಲ್ಲಿರುವ ಆಂಥೋಸಯಾನಿನ್ (anthocyanins) ಎಂಬ ಆಂಟಿ ಆಕ್ಸಿಡೆಂಟುಗಳು ಸ್ನಾಯುಗಳ ಉರಿಯೂತವನ್ನು ಸಮರ್ಥವಾಗಿ ನಿವಾರಿಸುವ ಗುಣವುಳ್ಳದ್ದಾಗಿದೆ. ಸ್ನಾಯುಗಳ ಸೆಳವು ಹಾಗೂ ಊದಿಕೊಂಡಿರುವ ಪಾದಗಳಿಗೂ ಇವು ಉತ್ತಮವಾಗಿವೆ. ತಾಜಾ ಹಣ್ಣು ಸಿಗದೇ ಇದ್ದಲ್ಲಿ ಚೆರ್ರಿ ಹಣ್ಣಿನ ಜಾಮ್ ಸವರಿದ ರೊಟ್ಟಿ ಅಥವಾ ಬ್ರೆಡ್ ಸೇವಿಸುವ ಮೂಲಕವೂ ಉತ್ತಮ ಪರಿಣಾಮ ಪಡೆಯಬಹುದು.

ಮೆಗ್ನೀಶಿಯಂ ಹೆಚ್ಚಿರುವ ಆಹಾರ ಸೇವಿಸಿ


ಪ್ರಯಾಣದ ಬಳಿಕ ದಣಿದ ದೇಹಕ್ಕೆ ಮೆಗ್ನೀಶಿಯಂ ಹೆಚ್ಚಿರುವ ಆಹಾರಗಳು ಉತ್ತಮ ಪೋಷಣೆ ನೀಡುತ್ತವೆ. ಜೋನಿಬೆಲ್ಲ, ಸ್ಕ್ವಾಶ್ ಹಣ್ಣು, ಕುಂಬಳದ ಬೀಜಗಳು, ಪಾಲಕ್ ಸೊಪ್ಪು, swiss chard (ಬಸಲೆಯಂತಹ ಸೊಪ್ಪು), ಕೋಕೋ ಪುಡಿ, ಕಪ್ಪು ಬೀನ್ಸ್, ಅಗಸೆ ಬೀಜ, ಎಳ್ಳು, ಸೂರ್ಯಕಾಂತಿ ಬೀಜ, ಬಾದಾಮಿ ಮತ್ತು ಗೇರುಬೀಜಗಳಲ್ಲಿ ಮೆಗ್ನೇಶಿಯಂ ಉತ್ತಮ ಪ್ರಮಾಣದಲ್ಲಿವೆ. ಸ್ನಾಯುಗಳ ಸೆಳವಿಗೆ ಮುಖ್ಯವಾಗಿ ಮೆಗ್ನೀಶಿಯಂ ಕೊರತೆಯೇ ಕಾರಣ. ಒಂದು ವೇಳೆ ವೈದ್ಯಕೀಯ ತಪಾಸಣೆಯಲ್ಲಿ ಮೆಗ್ನೀಶಿಯಂ ಅಂಶ ತೀರಾ ಕಡಿಮೆ ಇದೆ ಎಂದು ತಿಳಿದುಬಂದರೆ ವೈದ್ಯರು ಸೂಚಿಸುವ ಮಗ್ನೇಶಿಯಂ ಮಾತ್ರೆಗಳನ್ನು ಸೇವಿಸಿ. ಮೆಗ್ನೀಶಿಯಂ ಹೆಚ್ಚಿರುವ ಈ ಆಹಾರಗಳನ್ನು ಸೇವಿಸಿ ವಿಶ್ರಾಂತಿ ಪಡೆದ ಬಳಿಕ ದೇಹ ನವಚೈತನ್ಯ ಪಡೆದಿರುತ್ತದೆ.

ಅಗತ್ಯತೈಲ (Essential Oils) ನಿಂದ ಮಸಾಜ್ ಮಾಡಿ


ಅಗತ್ಯತೈಲಗಳು ಉತ್ತಮ ಉರಿಯೂತ ನಿವಾರಕ ಹಾಗೂ ನೋವು ನಿವಾರಕವಾದುದರಿಂದ ಈ ಎಣ್ಣೆಗಳನ್ನು ಉಪಯೋಗಿಸಿ ಮಾಡುವ ಮಸಾಜ್ ದೇಹದ ನೋವನ್ನು ನಿವಾರಿಸಲು ಉತ್ತಮವಾಗಿದೆ. ಮಸಾಜ್ ನಿಂದ ರಕ್ತ ಪರಿಚಲನೆ ಹೆಚ್ಚುವುದು ಹಾಗೂ ಸ್ನಾಯುಗಳಿಗೆ ನವಿರಾದ ಶಾಖ ನೀಡುವ ಮೂಲಕ ಸ್ನಾಯುಗಳ ಎಡೆಗಳಲ್ಲಿ ಸಂಗ್ರಹವಾಗಿದ್ದ ಲ್ಯಾಕ್ಟಿಕ್ ಆಮ್ಲವನ್ನು ಹೊರಹಾಕಲು ನೆರವಾಗುತ್ತದೆ. ಪರಿಣಾಮವಾಗಿ ಸೆಳವಿಗೆ ಒಳಗಾಗಿದ್ದ ಸ್ನಾಯುಗಳು ನಿರಾಳವಾಗಿ ದೇಹದ ನೋವನ್ನು ಕಡಿಮೆಯಾಗುತ್ತದೆ. ಪರಿಣಾಮಕಾರಿಯಾದ 9 ನೋವು ನಿವಾರಕ ಎಣ್ಣೆಗಳು

ಎಪ್ಸಂ ಉಪ್ಪಿನ ನೀರಿನಿಂದ ಸ್ನಾನ ಮಾಡಿ
ಎಪ್ಸಂ ಉಪ್ಪು ಎಂದು ಕರೆಯಲ್ಪಡುವ ಮೆಗ್ನೀಶಿಯಂ ಸಲ್ಫೇಟ್ ಲವಣಕ್ಕೂ ಸ್ನಾಯುಗಳ ಉರಿಯೂತ ನಿವಾರಿಸುವ ಶಕ್ತಿಯಿದೆ. ಸ್ನಾಯುಗಳಿಗೆ ಅತೀವ ನೋವು ನೀಡುವ fibromyalgia ಸ್ಥಿತಿಗೂ ಈ ಲವಣ ಉತ್ತಮ ಪೋಷಣೆ ನೀಡಲು ಸಮರ್ಥವಾಗಿದೆ. ಆದರೆ ಈ ಲವಣವನ್ನು ಸೇವಿಸುವಂತಿಲ್ಲವಾದುದರಿಂದ ಇದನ್ನು ಕರಗಿಸಿದ ನೀರಿನಿಂದ ಸ್ನಾನ ಮಾಡಿಕೊಳ್ಳಬಹುದು.


ಇದಕ್ಕಾಗಿ ಸ್ನಾನದ ಬೋಗುಣಿಯು ಉಗುರುಬೆಚ್ಚನೆಯ ನೀರಿನಿಂದ ಅಥವಾ ನಿಮಗೆ ಸಹಿಸಲು ಸಾಧ್ಯವಿರುವಷ್ಟು ಬಿಸಿ ಇರುವ ನೀರು ತುಂಬಿದ ಬಳಿಕ ಸುಮಾರು ಎರಡು ಕಪ್ ಲವಣ ಸೇರಿಸಿ ಈ ನೀರಿನಲ್ಲಿ ಕನಿಷ್ಟ ಹದಿನೈದರಿಂದ ಗರಿಷ್ಟ ಮೂವತ್ತು ನಿಮಿಷ ಪವಡಿಸಿ. ಇದರಿಂದ ಸ್ನಾಯುಗಳ ಸೆಳವು, ನೋವು ಕಡಿಮೆಯಾಗಿ ದೇಹ ಆರಾಮ ಅನುಭವಿಸುತ್ತದೆ. ನಿರಾಳವಾದ ದೇಹದ ಕಾರಣ ಮನಸ್ಸಿನ ಒತ್ತಡವೂ ಕಡಿಮೆಯಾಗುತ್ತದೆ.
English summary

Home Remedies For Body Pain And Tiredness After Long Journey

We always feel tired and exhausted after a long road journey. Our muscles ache and there may be swelling too. The muscles tend to become stiff and sore. The persons who have to travel a lot on a daily basis may face this problem immediately after reaching home. Take a look at some effective home remedies to relieve body pain and tiredness after traveling.
X
Desktop Bottom Promotion