For Quick Alerts
ALLOW NOTIFICATIONS  
For Daily Alerts

ಹಾಸಿಗೆಯಲ್ಲಿ ಮೂತ್ರ ಮಾಡಿಕೊಳ್ಳುವ ಸಮಸ್ಯೆಗೆ ಫಲಪ್ರದ ಮನೆಮದ್ದು

|

ಈ ಸಮಸ್ಯೆಯಲ್ಲಿ ಮಕ್ಕಳು ಮತ್ತು ಹಿರಿಯರು ರಾತ್ರಿ ಮಲಗಿರುವಾಗ ಹಾಸಿಗೆಯಲ್ಲ್ಲಿ ಯಾವುದೇ ಭಾವನೆಗಳಿಲ್ಲದೆ ಅಥವಾ ತಮಗೆ ಅರಿವಿಲ್ಲದಂತೆ ಮೂತ್ರ ಮಾಡಿಕೊಳ್ಳುತ್ತಾರೆ. ಅದೃಷ್ಟವಶಾತ್ ಇದಕ್ಕೆ ಕೆಲವೊಂದು ಪರಿಣಾಮಕಾರಿ ಮನೆ ಮದ್ದುಗಳು ಇವೆ. ಈ ಸಮಸ್ಯೆಯು ಬಾಲ್ಯದಲ್ಲಿ ಕಾಣಿಸಿಕೊಳ್ಳುತ್ತದೆ ಮತ್ತು ವಯಸ್ಕರಾಗುವವರೆಗೆ ಇರುತ್ತದೆ. ಇದು ವಯಸ್ಕರಲ್ಲಿ ಕಂಡು ಬಂದರೆ, ಅತ್ಯಂತ ಮುಜುಗರಕ್ಕೀಡು ಮಾಡುವ ಸಂಗತಿಯಾಗಿರುತ್ತದೆ.

ಏಕೆಂದರೆ ಇದನ್ನು ಅವರು ವೈದ್ಯರ ಬಳಿ ಸಹ ಹೇಳಿಕೊಳ್ಳಲು ಸಂಕೋಚಪಡುತ್ತಾರೆ. ಜೊತೆಗೆ ಇದು ಅವರ ಮನಸ್ಸಿನ ಮೇಲೆ ವ್ಯತಿರಿಕ್ತ ಪರಿಣಾಮವನ್ನು ಸಹ ಬೀರುತ್ತದೆ. ಹಾಸಿಗೆಯಲ್ಲಿ ಮೂತ್ರ ಮಾಡಿಕೊಳ್ಳುವುದಕ್ಕೆ ಕೆಲವೊಂದು ವೈದ್ಯಕೀಯ ಕಾರಣಗಳು ಇವೆಯಾದರು, ಅದರಿಂದ ಯಾವುದೇ ಗಂಭೀರವಾದ ಸಮಸ್ಯೆಯು ಎದುರಾಗುವುದಿಲ್ಲ. ಹಾಸಿಗೆಯಲ್ಲಿ ಮೂತ್ರ ಮಾಡಿಕೊಳ್ಳುವುದನ್ನು ಸ್ವಾಭಾವಿಕವಾಗಿ ತಡೆಯಬಹುದೇ? ಈ ಸಮಸ್ಯೆಯನ್ನು ಪರಿಗಣನೆಗೆ ತೆಗೆದುಕೊಂಡಿರುವ ಬೋಲ್ಡ್‌ಸ್ಕೈ ನಿಮ್ಮೊಂದಿಗೆ ಹಾಸಿಗೆಯಲ್ಲಿ ಮೂತ್ರ ಮಾಡಿಕೊಳ್ಳುವ ಸಮಸ್ಯೆಯಿರುವವರಿಗಾಗಿ ಮನೆ ಮದ್ದುಗಳನ್ನು ಹಂಚಿಕೊಳ್ಳಲಿದೆ. ನಿಮ್ಮ ಮಗು ಬೆಡ್ ವೆಟ್ ಮಾಡುವುದನ್ನು ತಡೆಯಬೇಕೆ?

ಬೆಲ್ಲ ಮತ್ತು ಎಳ್ಳು

Home remedies for bed wetting in children and adults

ಬೆಲ್ಲವನ್ನು ಕರಿ ಎಳ್ಳಿನ ಜೊತೆಗೆ ಸೇರಿಸಿ, ಅದನ್ನು ಹಾಲಿನಲ್ಲಿ ಬೆರೆಸಿಕೊಂಡು ಸೇವಿಸಿ. ಇದು ಚಳಿಗಾಲದ ಸಮಯದಲ್ಲಿ ದೇಹದ ಉಷ್ಣಾಂಶವನ್ನು ಅಧಿಕಗೊಳಿಸುತ್ತದೆ. ಇದನ್ನು ಬೆಳ್ಳಂ-ಬೆಳಗ್ಗೆಯೇ ಸೇವಿಸುವುದರಿಂದ ಹಾಸಿಗೆಯಲ್ಲಿ ಮೂತ್ರ ಮಾಡಿಕೊಳ್ಳುವ ಸಮಸ್ಯೆ ದೂರವಾಗುತ್ತದೆ.

ನೀರಿನ ಸೇವನೆ


ನಿಮ್ಮ ನೀರಿನ ಸೇವನೆಯನ್ನು ರಾತ್ರಿ ಮಲಗುವ ಮೊದಲು ನೀವು ಸೇವಿಸುವ ನೀರಿನ ಅಂಶವನ್ನು ಕಡಿಮೆ ಮಾಡಿ. ಇದರಿಂದ ರಾತ್ರಿಯ ಹೊತ್ತು ಮೂತ್ರ ಮಾಡಿಕೊಳ್ಳುವ ಪ್ರಮೇಯ ಕಡಿಮೆಯಾಗುತ್ತದೆ.

ಸಾಸಿವೆ ಪುಡಿ


ಇದೊಂದು ಪರಿಣಾಮಕಾರಿಯಾದ ಮನೆಮದ್ದಾಗಿದ್ದು, ಹಾಸಿಗೆಯಲ್ಲಿ ಮೂತ್ರ ಮಾಡಿಕೊಳ್ಳುವ ಸಮಸ್ಯೆಯನ್ನು ಪರಿಹರಿಸುತ್ತದೆ. ಇದರ ಜೊತೆಗೆ ಇದು ಮೂತ್ರ ವ್ಯವಸ್ಥೆಯಲ್ಲಿ ಕಂಡು ಬರುವ ಕಾಯಿಲೆಗಳನ್ನು ಗುಣಪಡಿಸುತ್ತದೆ ಮತ್ತು ಹಾಸಿಗೆಯಲ್ಲಿ ಮೂತ್ರ ಮಾಡಿಕೊಳ್ಳುವ ಸಮಸ್ಯೆಯನ್ನು ಸಹ ಕಡಿಮೆ ಮಾಡುತ್ತದೆ. ಹಾಸಿಗೆಯಲ್ಲಿ ಒದ್ದೆ ಮಾಡಿಕೊಳ್ಳುವ ಹಿರಿಯರು ಸಹ ಇದನ್ನು ಸೇವಿಸುವ ಮೂಲಕ ಈ ಸಮಸ್ಯೆಯಿಂದ ಪಾರಾಗಬಹುದು. ಎಚ್ಚರ: ಮೂತ್ರದ ಬಣ್ಣದಲ್ಲಿ ಏರುಪೇರಾದರೆ ಅಪಾಯ ಕಟ್ಟಿಟ್ಟ ಬುತ್ತಿ..!

ಹರ್ಬಲ್ ಟೀ


ಓಕ್ ತೊಗಟೆ, ಬಾರ್ಬೆರ್ರಿ ಮತ್ತು ಹಾರ್ಸ್‌ಟೇಲ್ ಗಿಡಮೂಲಿಕೆಗಳಿಂದ ತಯಾರಿಸಲಾದ ಟೀಯು ಹಾಸಿಗೆಯಲ್ಲಿ ಮೂತ್ರ ಮಾಡಿಕೊಳ್ಳುವವರಿಗೆ ಒಳ್ಳೆಯ ಮನೆಮದ್ದಾಗಿರುತ್ತದೆ. ಈ ಟೀಯನ್ನು ಮಾಡಿಕೊಳ್ಳಲು ಈ ಗಿಡಮೂಲಿಕೆಗಳನ್ನು ನೀರಿನಲ್ಲಿ ಹಾಕಿ, ನಂತರ ಎರಡು ಗಂಟೆಗಳ ಕಾಲ ಕಾಯಿಸಿ. ಈ ಟೀಯನ್ನು ನಿಮ್ಮ ಮಗುವಿಗೆ ಮಲಗುವ ಮುನ್ನ ಕುಡಿಸಿ. ಇದೇ ಟೀಯನ್ನು ವಯಸ್ಕರು ಸಹ ಸೇವಿಸುವುದರಿಂದ ಅವರಲ್ಲಿರುವ ಹಾಸಿಗೆಯಲ್ಲಿ ಮೂತ್ರ ಮಾಡಿಕೊಳ್ಳುವ ಸಮಸ್ಯೆಯನ್ನು ನಿವಾರಿಸಿಕೊಳ್ಳಬಹುದು.

ಬಾಳೆಹಣ್ಣುಗಳು


ಬಾಳೆಹಣ್ಣುಗಳು ಸಹ ಮಾನಸಿಕ ಮತ್ತು ದೈಹಿಕ ಆರೋಗ್ಯಕ್ಕೆ ಒಳ್ಳೆಯದು. ಅದರಲ್ಲೂ ಜೀರ್ಣಕ್ರಿಯೆಗೆ ಈ ಹಣ್ಣು ತುಂಬಾ ಉಪಕಾರಿ. ಇದರಲ್ಲಿ ಸಮೃದ್ಧವಾಗಿರುವ ಪೊಟಾಶಿಯಂ ಮತ್ತು ಮೆಗ್ನಿಶಿಯಂಗಳು ನಿಮ್ಮ ಸಮಸ್ಯೆ ಹೋಗಲಾಡಿಸಲು ತುಂಬಾ ನೆರವಾಗುತ್ತವೆ. ರಾತ್ರಿಯ ಹೊತ್ತು ಹಾಸಿಗೆಯಲ್ಲಿ ಒದ್ದೆ ಮಾಡಿಕೊಳ್ಳುವುದನ್ನು ತಡೆಯಲು ಬಾಳೆಹಣ್ಣನ್ನು ದಿನಕ್ಕೆ ಮೂರು ಬಾರಿ ಸೇವಿಸಿ.
English summary

Home remedies for bed wetting in children and adults

In this problem a child or adult urinates on bed during night without getting any feeling of it or realising it. Fortunately there are some effective home remedies for bed wetting in adults and children. Boldsky will share with you home remedies for bed wetting in adults and children.
Story first published: Monday, March 2, 2015, 15:12 [IST]
X
Desktop Bottom Promotion