For Quick Alerts
ALLOW NOTIFICATIONS  
For Daily Alerts

ಪ್ರತಿ ದಿನ ಮೊಸರು ಸೇವಿಸಿದರೆ ಖಂಡಿತ ಮೋಸವಿಲ್ಲ

By manu
|

ನಮ್ಮ ದೇಹ ಅತಿ ಸುಲಭವಾಗಿ ಜೀರ್ಣಿಸಿಕೊಳ್ಳುವ ಆಹಾರವೆಂದರೆ ನೀರು. ಅದು ಬಿಟ್ಟರೆ ಮೊಸರು ಅಗ್ರಸ್ಥಾನದಲ್ಲಿ ನಿಲ್ಲುತ್ತದೆ. ಏಕೆಂದರೆ ಹಾಲನ್ನು ಮೊಸರನ್ನಾಗಿಸುವ ಕ್ರಿಯೆಯಲ್ಲಿ ನಮ್ಮ ಜೀರ್ಣಾಂಗಗಳು ಮಾಡುವ ಮುಕ್ಕಾಲುಪಾಲು ಕೆಲಸವನ್ನು ಮೊಸರಿನಲ್ಲಿರುವ ಬ್ಯಾಕ್ಟೀರಿಯಾಗಳೇ ಮುಗಿಸಿರುತ್ತವೆ. ಹಾಗಾಗಿ ಮೊಸರು ನಮಗೆ ಅತ್ಯುತ್ತಮವಾದ ಆಹಾರವಾಗಿದೆ. ವೈದ್ಯರೂ ಜೀರ್ಣ ಸಮಸ್ಯೆ ಇರುವ ರೋಗಿಗಳಿಗೆ ಮೊಸರನ್ನೇ ಆಹಾರವನ್ನಾಗಿ ಸ್ವೀಕರಿಸಲು ಸಲಹೆ ಮಾಡುತ್ತಾರೆ.

ಅದರಲ್ಲೂ ದಕ್ಷಿಣ ಭಾರತದಲ್ಲಿ ಊಟದ ಕೊನೆಯಲ್ಲಿ ಮೊಸರು ಇಲ್ಲವಾದಲ್ಲಿ ಊಟ ಎಂಬುದು ಯಾವತ್ತಿಗೂ ಪರಿಪೂರ್ಣವಾಗುವುದಿಲ್ಲ. ಒಂದು ಒಳ್ಳೆಯ ಊಟಕ್ಕೆ ಉಪಸಂಹಾರ ಆಡುವುದೇ ಮೊಸರು. ಊಟದ ಕೊನೆಯಲ್ಲಿ ನೀವು ಸೇವಿಸುವ ಮೊಸರನ್ನವು ನಿಮ್ಮ ಆರೋಗ್ಯಕ್ಕೆ ಹೆಚ್ಚಿನ ಪ್ರಯೋಜನಗಳನ್ನು ನೀಡುತ್ತದೆ. ಮೊಸರು ಸೇವನೆಯಿಂದ ಆರೋಗ್ಯವೃದ್ಧಿ ಹೇಗೆ?

ಅಧ್ಯಯನದ ಪ್ರಕಾರ ಮೊಸರು ಎಂಬುದು ಒಂದು ಅಳತೆಯಿಲ್ಲದ ಪದಾರ್ಥವಾಗಿದ್ದು, ಇದು ನಿಮ್ಮ ಆಯುಸ್ಸನ್ನು ಹೆಚ್ಚಿಸಲು ಸಹಕರಿಸುತ್ತದೆ ಎಂದು ತಿಳಿದು ಬಂದಿದೆ. ಅದಕ್ಕಾಗಿ ಇದನ್ನು ನೀವು ತಪ್ಪದೆ ದಿನಾ ಸೇವಿಸಬೇಕು ಎಂಬುದನ್ನು ಮರೆಯಬಾರದು. ಇದೊಂದು ಪ್ರೊ-ಬಯೋಟಿಕ್ ಆಹಾರವಾಗಿದ್ದು, ಇದರಲ್ಲಿ ಕ್ಯಾಲ್ಸಿಯಂ ಅಧಿಕ ಪ್ರಮಾಣದಲ್ಲಿರುತ್ತದೆ. ಬನ್ನಿ ಮೊಸರಿನ ಇನ್ನೂ ಹಲವು ಸದ್ಗುಣಗಳ ಪೈಕಿ ಪ್ರಮುಖವಾದುದನ್ನು ಇಲ್ಲಿ ವಿವರಿಸಲಾಗಿದೆ, ಮುಂದೆ ಓದಿ..

ರೋಗ ನಿರೋಧಕ ಶಕ್ತಿಯನ್ನು ನೀಡುತ್ತದೆ

ರೋಗ ನಿರೋಧಕ ಶಕ್ತಿಯನ್ನು ನೀಡುತ್ತದೆ

ಮೊಸರಿನಲ್ಲಿ ದೇಹಕ್ಕೆ ಮಾರಕವಾದ ಯಾವುದೇ ಅಂಶವಿಲ್ಲ. ಇದರಲ್ಲಿರುವ ಸಕಲ ಅಂಶಗಳು ದೇಹದ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಲು ಪೂರಕವಾಗಿವೆ. ವಿಶೇಷವಾಗಿ ರಕ್ತದಲ್ಲಿರುವ ಬಿಳಿರಕ್ತಕಣಗಳನ್ನು ಹೆಚ್ಚಿಸಲು ಮತ್ತು ಪ್ರತಿಕಣದ ಸಾಮರ್ಥ್ಯ ಹೆಚ್ಚಿಸಲು ಮೊಸರು ನೆರವಾಗುತ್ತದೆ. ಈ ಕಣಗಳು ರೋಗಕಾರಕ ಕಣಗಳನ್ನು ಸದೆಬಡಿದು ದೇಹದ ಆರೋಗ್ಯವನ್ನು ಕಾಪಾಡುತ್ತದೆ. ಮುಂದೆ ಓದಿ

ರೋಗ ನಿರೋಧಕ ಶಕ್ತಿಯನ್ನು ನೀಡುತ್ತದೆ

ರೋಗ ನಿರೋಧಕ ಶಕ್ತಿಯನ್ನು ನೀಡುತ್ತದೆ

ಅಧ್ಯಾನದ ಪ್ರಕಾರ ಪ್ರತಿದಿನವು ಒಂದು ಟೇಬಲ್ ಚಮಚದಷ್ಟು ಮೊಸರನ್ನು ಸೇವಿಸುತ್ತಿದ್ದಲ್ಲಿ, ಅದರಿಂದ ರೋಗ ನಿರೋಧಕ ಶಕ್ತಿಯು ಹೆಚ್ಚಾಗುತ್ತದೆ ಎಂದು ತಿಳಿದುಬಂದಿದೆ. ಮೊಸರಿನಲ್ಲಿರುವ ಒಳ್ಳೆಯ ಬ್ಯಾಕ್ಟೀರಿಯಾಗಳು ದೇಹದಲ್ಲಿರುವ ಅಸಂಖ್ಯಾತ ಸೂಕ್ಷ್ಮಾಣು ಜೀವಿಗಳ ಮೇಲೆ ಹೋರಾಡುತ್ತ, ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತವೆ.

ಹಲ್ಲಿಗಾಗಿ ಅತ್ಯುತ್ತಮ ಆಹಾರ

ಹಲ್ಲಿಗಾಗಿ ಅತ್ಯುತ್ತಮ ಆಹಾರ

ಮೊಸರಿನಲ್ಲಿ ಕ್ಯಾಲ್ಸಿಯಂ ಮತ್ತು ರಂಜಕ ಅಧಿಕ ಪ್ರಮಾಣದಲ್ಲಿರುವ ಕಾರಣದಿಂದ ಇದು ಹಲ್ಲುಗಳಿಗೆ ಅತ್ಯುತ್ತಮ ಆಹಾರವಾಗಿರುತ್ತದೆ. ಇದು ಮೂಳೆಗಳಿಗೆ ಉತ್ತಮ ಪೋಷಕಾಂಶಗಳನ್ನು ಒದಗಿಸುವುದರ, ಜೊತೆಗೆ ಆಸ್ಟಿಯೊಪೊರೊಸಿಸ್ ಮತ್ತು ಅರ್ಥರಿಟಿಸ್‌ನಂತಹ ಮೂಳೆಗೆ ಸಂಬಂಧಿಸಿದ ರೋಗಗಳು ಬರದಂತೆ ತಡೆಯುತ್ತದೆ.

ತ್ವಚೆಯ ಕಾಂತಿಗೆ ಸಹಕಾರಿ

ತ್ವಚೆಯ ಕಾಂತಿಗೆ ಸಹಕಾರಿ

ಚರ್ಮದ ಕಾಂತಿಯನ್ನು ಹೆಚ್ಚಿಸುತ್ತದೆ ಮುಖದ ಕಾಂತಿಯನ್ನು ಹೆಚ್ಚಿಸಲು ಈ ವಿಧಾನ ಅನುಸರಿಸಿ. ಒಂದು ಚಿಕ್ಕಚಮಚ ಮೊಸರು, ಸಮಪ್ರಮಾಣದ ಕಡಲೆಹಿಟ್ಟು, ಕೆಲವು ಹನಿ ಜೇನು ಮತ್ತು ಕೆಲವು ಹನಿ ಗುಲಾಬಿ ನೀರನ್ನು ಸೇರಿಸಿ ಮಿಶ್ರಣ ಮಾಡಿಕೊಳ್ಳಿ. ಈ ಮಿಶ್ರಣವನ್ನು ಇಡಿಯ ಮುಖಕ್ಕೆ ಲೇಪಿಸಿ. (ಕಣ್ಣು ರೆಪ್ಪೆಗಳಿಗೂ ಲೇಪಿಸಬಹುದು). ಸುಮಾರು ಇಪ್ಪತ್ತು ನಿಮಿಷಗಳ ಬಳಿಕ ಈ ಲೇಪ ಒಣಗುತ್ತದೆ. ಬಳಿಕ ಸ್ವಚ್ಛವಾದ ತಣ್ಣೀರಿನಿಂದ ತೊಳೆದುಕೊಳ್ಳಿ. ಇದು ತಕ್ಷಣವೇ ನಿಮ್ಮ ಚರ್ಮಕ್ಕೆ ಕಾಂತಿಯನ್ನೂ ಮತ್ತು ಮೃದುತ್ವವನ್ನೂ ನೀಡುತ್ತದೆ. ನಿಯಮಿತವಾಗಿ ಅನುಸರಿಸುವುದರಿಂದ ಚರ್ಮ ಬಹುಕಾಲ ನೆರಿಗೆಗಳಿಂದ ದೂರವಿರುತ್ತದೆ

ತೂಕ ಕಡಿಮೆ ಮಾಡಲು ಸಹಕರಿಸುತ್ತದೆ

ತೂಕ ಕಡಿಮೆ ಮಾಡಲು ಸಹಕರಿಸುತ್ತದೆ

ಮೊಸರಿನಲ್ಲಿ ಅಧಿಕ ಕ್ಯಾಲ್ಸಿಯಂ ಪ್ರಮಾಣ ಇರುತ್ತದೆ. ಈ ಅಂಶವು ನಿಮ್ಮ ದೇಹದಲ್ಲಿ ಮತ್ತಷ್ತು ಕಾರ್ಟಿಸೊಲ್ ಅಂಶವು ಸೇರಿಕೊಳ್ಳದಂತೆ ತಡೆಯುವ ಮೂಲಕ ತೂಕ ಕಳೆದುಕೊಳ್ಳಲು ಸಹಕರಿಸುತ್ತದೆ.

ಒತ್ತಡವನ್ನು ನಿವಾರಿಸುತ್ತದೆ

ಒತ್ತಡವನ್ನು ನಿವಾರಿಸುತ್ತದೆ

ಮೊಸರನ್ನು ಸೇವಿಸುವುದರಿಂದ ಮೆದುಳಿನಲ್ಲಿ ಭಾವನೆಗಳು ಮತ್ತು ನೋವನ್ನು ಉಂಟು ಮಾಡುವ ಭಾಗಗಳು ಹಗುರಗೊಳ್ಳುತ್ತವೆ. ಇದರಿಂದ ಮನಸ್ಸಿನ ಒತ್ತಡವು ಸಹ ಕಡಿಮೆಯಾಗುತ್ತದೆ. ಇದರಿಂದಾಗಿಯೇ ಡಯೇಟಿಷಿಯನ್‌ಗಳು ಊಟದ ಕೊನೆಯಲ್ಲಿ ಮೊಸರನ್ನು ತಿನ್ನಲು ಸೂಚಿಸುತ್ತಾರೆ.

ಇದು ಹೃದಯಕ್ಕೆ ಸಂಬಂಧಿಸಿದ ಆಹಾರ

ಇದು ಹೃದಯಕ್ಕೆ ಸಂಬಂಧಿಸಿದ ಆಹಾರ

ಮೊಸರು ಹೃದಯಕ್ಕೆ ಸಂಬಂಧಿಸಿದ ಆಹಾರವಾಗಿರುತ್ತದೆ. ಇದನ್ನು ಪ್ರತಿದಿನ ಸೇವಿಸುವುದರಿಂದ ನಮ್ಮ ದೇಹದ ಅಂಗಾಂಗಗಳ ಮೇಲೆ ಒಳ್ಳೆಯ ಪ್ರಯೋಜನವುಂಟಾಗುತ್ತದೆ. ಮೊಸರು ಅಧಿಕ ರಕ್ತದೊತ್ತಡವನ್ನು ತಡೆಯುತ್ತದೆ ಮತ್ತು ಕ್ಯಾರೊಟಿಡ್ ರಕ್ತನಾಳಗಳನ್ನು ಗಟ್ಟಿಗೊಳಿಸುವ ಮೂಲಕ ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡುತ್ತದೆ.

English summary

Here Is Why Curd Should Be Eaten Everyday!

In South India people love to add spice to their meals. A dollop of curd added to your plate will provide you with extra health benefits. According to a new study it is said, curd is an extravagant ingredient which helps you to live longer when added to your daily diet in any given form. The pro-biotic food is rich in calcium where it helps to keep your bones and teeth healthy.
X
Desktop Bottom Promotion