For Quick Alerts
ALLOW NOTIFICATIONS  
For Daily Alerts

ಪ್ರತೀ ದಿನ ಬೆರ್ರಿ ಹಣ್ಣುಗಳನ್ನು ಸೇವಿಸಲು ಮಾತ್ರ ಮರೆಯದಿರಿ!

|

ಹಣ್ಣುಗಳು ನಮ್ಮ ಆರೋಗ್ಯವನ್ನು ವೃದ್ಧಿಸುವ ಆಹಾರ ಪದಾರ್ಥಗಳು ಎಂದು ಎಲ್ಲರಿಗೂ ಗೊತ್ತು. ಅದರಲ್ಲಿಯೂ ಬೆರ್ರಿಗಳು ನಿಮ್ಮ ದೈನಂದಿನ ಆಹಾರ ಪದಾರ್ಥದಲ್ಲಿ ತಪ್ಪದೆ ಸೇರಿಸಿಕೊಳ್ಳಬೇಕಾದ ಹಣ್ಣುಗಳಾಗಿರುತ್ತವೆ. ಇವುಗಳಲ್ಲಿ ಆಂಟಿಆಕ್ಸಿಡೆಂಟ್‍ಗಳು ಅಧಿಕವಾಗಿದ್ದು ತ್ವರಿತವಾಗಿ ನಿಮಗೆ ಹೊಟ್ಟೆ ತುಂಬಿದ ಅನುಭವವನ್ನು ನೀಡುತ್ತವೆ. ಓಟ್ಸ್ ಜೊತೆಗೆ ಸೇರಿದಾಗ ಈ ಬೆರ್ರಿಗಳು ಒಳ್ಳೆಯ ಶಕ್ತಿಯನ್ನು ಮತ್ತು ಪೋಷಕಾಂಶಗಳನ್ನು ನೀಡುತ್ತದೆ.

ಒಂದು ವೇಳೆ ನಿಮ್ಮ ರೋಗ ನಿರೋಧಕ ಶಕ್ತಿಯು ಕಡಿಮೆಯಾಗಿದ್ದಲ್ಲಿ, ಈ ಬೆರ್ರಿಗಳನ್ನು ತಪ್ಪದೇ ತಿನ್ನಿ. ಬ್ಲೂಬೆರ್ರಿ ಮತ್ತು ಮಲ್‌ಬೆರ್ರಿಗಳನ್ನು ನೀವು ದಿನದ ಯಾವ ಸಮಯದಲ್ಲಿ ಬೇಕಾದರು ಸೇವಿಸಬಹುದು. ಈ ಎರಡು ಬೆರ್ರಿಗಳು ಶಕ್ತಿಯ ಗಣಿಗಳಂತೆ ನಿಮ್ಮ ಉಪಯೋಗಕ್ಕೆ ಬರುತ್ತವೆ. ಏಕೆಂದರೆ ಇವುಗಳಲ್ಲಿ ಸ್ವಾಭಾವಿಕ ಆಮ್ಲಗಳು ಅಧಿಕವಾಗಿರುತ್ತವೆ.

ಸ್ಟ್ರಾಬೆರ್ರಿಗಳು, ಅಕೈ ಮತ್ತು ಗೊಜಿ ಬೆರ್ರಿಗಳನ್ನು ವಾರಕ್ಕೆ ಒಮ್ಮೆಯಾದರು ತಪ್ಪದೆ ಸೇವಿಸುತ್ತಿದ್ದರೆ, ಹಲವಾರು ಕಾಯಿಲೆಗಳಿಂದ ನಾವು ದೂರವಿರಬಹುದು. ಇವುಗಳು ತೂಕವನ್ನು ಕಳೆದುಕೊಳ್ಳುವವರಿಗೆ ಸಹಾಯ ಮಾಡುವ ಹಣ್ಣುಗಳಾಗಿವೆ. ಇಲ್ಲಿ ನಿಮಗಾಗಿ ಕೆಲವೊಂದು ಬೆರ್ರಿಗಳ ಪರಿಚಯವನ್ನು ನೀಡಿದ್ದೇವೆ. ಮುಂದೆ ಓದಿ

Healthy Berries That Are Good For You

ಸ್ಟ್ರಾಬೆರ್ರಿಗಳು
ಸ್ಟ್ರಾಬೆರ್ರಿಗಳಲ್ಲಿ ವಿಟಮಿನ್ ಸಿ ಅಧಿಕ ಪ್ರಮಾಣದಲ್ಲಿರುತ್ತದೆ. ಈ ಬೆರ್ರಿಗಳು ನಿಮ್ಮ ಶಕ್ತಿಯನ್ನು ಹೆಚ್ಚಿಸುತ್ತವೆ. ಹೀಗಾಗಿ ನೀವು ಜಿಮ್‌ನಲ್ಲಿ ಮತ್ತಷ್ಟು ಸಮಯ ವರ್ಕ್‌ಔಟ್ ಮಾಡಬಹುದು. ತೂಕವನ್ನು ಬೇಗ ಕಡಿಮೆ ಮಾಡಿಕೊಳ್ಳಲು ಒಂದು ಹಿಡಿ ಸ್ಟ್ರಾಬೆರ್ರಿಯನ್ನು ಸೇವಿಸಿ.

ಬ್ಲೂಬೆರ್ರಿಗಳು
ಬ್ಲೂಬೆರ್ರಿಗಳನ್ನು ದಿನಾ ಬಿಟ್ಟು ದಿನ ಸೇವಿಸುವುದರಿಂದ ಕ್ಯಾನ್ಸರ್ ವಿರುದ್ಧ ಹೋರಾಡಬಹುದು. ಯಾರಿಗೆ ಈ ಮಾರಣಾಂತಿಕ ಕಾಯಿಲೆಯು ಬಂದಿರುತ್ತದೆಯೋ, ಅವರು ಪ್ರತಿದಿನ ಬ್ಲೂಬೆರ್ರಿಗಳನ್ನು ಸೇವಿಸುತ್ತಾ ಇರಬೇಕು. ಇವುಗಳು ಕ್ಯಾನ್ಸರ್ ಕೋಶಗಳನ್ನು ಕೊಂದು, ಸದೃಢವಾದ ಕೋಶಗಳನ್ನು ಆ ಸ್ಥಳದಲ್ಲಿ ಬೆಳೆಯುವಂತೆ ಮಾಡುತ್ತದೆ.

ಮಲ್‌ಬೆರ್ರಿ
ಮಲ್‌ಬೆರ್ರಿಗಳಲ್ಲಿ ಆಂಟಿಆಕ್ಸಿಡೆಂಟ್‌ಗಳು ಅಧಿಕ ಪ್ರಮಾಣದಲ್ಲಿರುತ್ತವೆ. ಇವುಗಳು ಜ್ವರದ ಮೇಲೆ ಪ್ರಭಾವಶಾಲಿಯಾಗಿ ಕೆಲಸ ಮಾಡುತ್ತವೆ. ದೇಹದಲ್ಲಿ ಜ್ವರದಿಂದ ಉಷ್ಣಾಂಶ ಏರಿದಂತೆ, ಅದನ್ನು ಕಡಿಮೆ ಮಾಡುವ ಗುಣಗಳನ್ನು ಒಳಗೊಂಡಿರುತ್ತದೆ. ಜೊತೆಗೆ ಇದು ದೇಹದಲ್ಲಿರುವ ಅಪಾಯಕಾರಿ ಬ್ಯಾಕ್ಟೀರಿಯಾಗಳ ಮೇಲೆ ಹೋರಾಡುತ್ತದೆ.

ರಾಸ್ಪ್‌ಬೆರ್ರಿಗಳು
ರಾಸ್ಪ್‌ಬೆರ್ರಿಗಳನ್ನು ಮಧುಮೇಹ ಇರುವವರು ತಪ್ಪದೆ ತಿನ್ನಬೇಕು. ಇದರಲ್ಲಿ ಸ್ವಾಭಾವಿಕ ಸಕ್ಕರೆ ಅಂಶವಿದ್ದು, ಇದು ನಿಮ್ಮ ದೇಹದಲ್ಲಿ ಇನ್ಸುಲಿನ್ ಮಟ್ಟವನ್ನು ಸುಸ್ಥಿತಿಯಲ್ಲಿಡುತ್ತದೆ. ನಿಮ್ಮ ದೇಹದಲ್ಲಿ ಸಕ್ಕರೆ ಮಟ್ಟವನ್ನು ಕಾಪಾಡಿಕೊಳ್ಳಲು ಒಂದು ಹಿಡಿ ರಾಸ್ಪ್‌ಬೆರ್ರಿಗಳು ಸಾಕು.

ಗೊಜಿ ಬೆರ್ರಿಗಳು
ಗೊಜಿ ಬೆರ್ರಿಗಳು ಮದುವೆಯಾದವರಿಗೆ ತುಂಬಾ ಒಳ್ಳೆಯದು. ಏಕೆ ಗೊತ್ತೇ? ಇವುಗಳು ಬಹುತೇಕ ಲೈಂಗಿಕ ಸಮಸ್ಯೆಗಳಿಗೆ ರಾಮ ಬಾಣದಂತೆ ವರ್ತಿಸುತ್ತವೆ. ಇವು ಲಿಬಿಡೊವನ್ನು ಹೆಚ್ಚಿಸುತ್ತವೆ. ಇವು ಹೆಣ್ಣು ಮತ್ತು ಗಂಡು ಇಬ್ಬರ ದೇಹಕ್ಕೂ ಒಳ್ಳೆಯದು.

English summary

Healthy Berries That Are Good For You

Berries are the best food you can add to your daily diet. They are extremely rich in antioxidants and most importantly they keep you full. Berries when added to oats provide extra benefits in terms of energy and nutrients. Here are some of the best berries for you to consume, take a look.
Story first published: Tuesday, June 30, 2015, 15:15 [IST]
X
Desktop Bottom Promotion