For Quick Alerts
ALLOW NOTIFICATIONS  
For Daily Alerts

ಮನೆಯಂಗಳದಲ್ಲೇ ಬೆಳೆಸಬಹುದಾದ ಆರೋಗ್ಯಕಾರಿ ಸಂಜೀವಿನಿಗಳು!

By Arshad
|

ಸಾಮಾನ್ಯ ತೊಂದರೆಗಳಾದ ಜ್ವರ, ಶೀತ, ಅಜೀರ್ಣ, ವಾಯುಪ್ರಕೋಪ, ಹುಳಿತೇಗು ಮೊದಲಾದ ತೊಂದರೆಗಳಿಗೆ ಆಯುರ್ವೇದದಲ್ಲಿ ಹಲವು ಉತ್ತಮ ಚಿಕಿತ್ಸೆಗಳಿದ್ದು ಅವುಗಳಲ್ಲಿ ಬಹಳಷ್ಟು ಮನೆಯಲ್ಲಿ ಅಡುಗೆಗೆ ಉಪಯೋಗಿಸುವ ಸಾಮಾಗ್ರಿಗಳೇ ಆಗಿವೆ. ಕೆಲವಂತೂ ನಿತ್ಯ ಉಪಯೋಗಿಸುವ ಸೊಪ್ಪು ಮತ್ತು ಎಲೆಗಳಾಗಿವೆ.

ಉದಾಹರಣೆಗೆ ಬೇವಿನ ಸೊಪ್ಪು. ನಿಮ್ಮ ಮನೆಯ ಹಿತ್ತಲಲ್ಲಿ ಅಥವಾ ಅಂಗಳದಲ್ಲಿ, ಜಾಗವಿಲ್ಲದಿದ್ದರೆ ಟೆರೇಸಿನಲ್ಲಿ, ಅಲ್ಲೂ ಜಾಗವಿಲ್ಲದಿದ್ದರೆ ಮನೆಯ ಬಾಲ್ಕನಿ ಅಥವಾ ಹಜಾರದಲ್ಲಿ ಹೂಕುಂಡಗಳಲ್ಲಿ ನೆಟ್ಟು ಆರೋಗ್ಯವನ್ನು ಕಾಪಾಡುವ ಮೂಲಿಕೆಗಳನ್ನು ಪಡೆಯಬಹುದು. ಸುಲಭವಾಗಿ ಬೆಳೆಯಬಹುದಾದ ಗಿಡಗಳ ಬಗ್ಗೆ ಇಲ್ಲಿ ವಿವರಿಸಲಾಗಿದೆ. ಈ ಹೂಗಳಲ್ಲಿದೆ ನಿದ್ರಾಹೀನತೆ ಸಮಸ್ಯೆಗೆ ಮದ್ದು

ತುಳಸಿ

ತುಳಸಿ

ಕೆಮ್ಮು, ಶೀತ ಮೊದಲಾದ ತೊಂದರೆಗಳಿಗೆ ಉಪಯುಕ್ತವಾದ ತುಳಸಿಯನ್ನು ಚಿಕ್ಕ ಹೂಕುಂಡದಲ್ಲಿಯೂ ಬೆಳೆಸಬಹುದು. ತುಳಸಿ ಎಲೆಗಳಲ್ಲಿ ಜೀವಿರೋಧಿ (antibacterial) ಮತ್ತು ಕಫಹಾರಿ (expectorant) ಗುಣಗಳಿದ್ದು ಶ್ವಾಸನಾಳಗಳನ್ನು ನಿರಾಳಗೊಳಿಸಲು ನೆರವಾಗುತ್ತದೆ. ಇದಕ್ಕಾಗಿ ಕುದಿಯುವ ನೀರಿನಲ್ಲಿ ಕೆಲವು ತುಳಸಿ ಎಲೆಗಳನ್ನು ಸೇರಿಸಿ ಕೆಲವು ನಿಮಿಷಗಳ ಬಳಿಕ ಸೋಸಿ ಬಿಸಿಯಿರುವಂತೆಯೇ ಕುಡಿಯಿರಿ. ಹೆಚ್ಚಿನ ಪರಿಣಾಮಕ್ಕಾಗಿ ಕೆಲವು ಹನಿ ಜೇನನ್ನೂ ಸೇರಿಸಬಹುದು. ಚರ್ಮದಲ್ಲಿ ತುರಿಕೆ, ದದ್ದು, ಹುಳಕಡ್ಡಿ ಮೊದಲಾದ ತೊಂದರೆಯಿದ್ದಲ್ಲಿ ಕೆಲವು ತುಳಸಿ ಎಲೆಗಳನ್ನು ಚೆನ್ನಾಗಿ ಜಜ್ಜಿ ಅರೆದು ಹಸಿಯಿದ್ದಂತೆಯೇ ತುರಿಕೆಯಿರುವ ಚರ್ಮದ ಮೇಲೆ ಹಚ್ಚಿ ಒಣಗಲು ಬಿಡಿ. ಹಚ್ಚಿದ ಬಳಿಕ ಉಗುರು ತಾಗಿಸಬಾರದು. ಕೇವಲ ತಣ್ಣೀರಿನಿಂದ ಮಾತ್ರ ತೊಳೆಯಿರಿ. ಬಿಸಿನೀರು ಅಥವಾ ಸೋಪು ಉಪಯೋಗಿಸಬೇಡಿ. ಬಹುಪಯೋಗಿ ಔಷಧಗಳ ಸಂಜೀವಿನಿ 'ಗಿಡಮೂಲಿಕೆಗಳ' ವೈಶಿಷ್ಟ್ಯವೇನು?

ಶುಂಠಿ

ಶುಂಠಿ

ಹಸಿಶುಂಠಿಯನ್ನೂ ಹೂಕುಂಡದಲ್ಲಿ ಬೆಳೆಸಬಹುದು. ಆದರೆ ಸೂರ್ಯನ ಬಿಸಿಲು ನೇರವಾಗಿ ಬೀಳುತ್ತಿರುವಲ್ಲಿ ಮಾತ್ರ ಇದರ ಎಲೆಗಳು ಚೆನ್ನಾಗಿ ಬೆಳೆಯುತ್ತವೆ. ಇದು ಸಾಧ್ಯವಿಲ್ಲದಿದ್ದರೆ ಆಗಾಗ ದಿನದಲ್ಲಿ ಒಂದು ಘಂಟೆ ಕಾಲ ಕುಂಡವನ್ನು ಬಿಸಿಲಿನಲ್ಲಿಡುವುದು ಉತ್ತಮ. ಶುಂಠಿಯ ಗಡ್ಡೆಯನ್ನು ಸ್ವಚ್ಛಗೊಳಿಸಿ ಸಿಪ್ಪೆ ತೆಗೆದು ಜಜ್ಜಿ ಕುದಿಯುವ ನೀರಿನಲ್ಲಿ ಸೇರಿಇಸ್ ಕುಡಿಯುವುದರಿಂದ ಅಜೀರ್ಣ, ವಾಯುಪ್ರಕೋಪ ಮೊದಲಾದ ತೊಂದರೆಗಳು ನಿವಾರಣೆಯಾಗುತ್ತವೆ.

ಕೊತ್ತಂಬರಿ ಸೊಪ್ಪು

ಕೊತ್ತಂಬರಿ ಸೊಪ್ಪು

ಕೊತ್ತಂಬರಿ ಸೊಪ್ಪನ್ನು ಸುಲಭವಾಗಿ ಮನೆಯೊಳಗೇ ಬೆಳೆಯಬಹುದು. ಕೊತ್ತಂಬರಿ ಸೊಪ್ಪಿನಲ್ಲಿಯೂ ಜೀರ್ಣಕಾರಿ ಮತ್ತು ವಾಯುಪ್ರಕೋಪವನ್ನು ತಡೆಯುವ ಗುಣಗಳಿದ್ದು ಜೀರ್ಣಕ್ರಿಯೆಯಲ್ಲಿ ಸಹಕರಿಸುತ್ತದೆ. ಅಗಲವಾದ ಹರಿವಾಣದಂತಹ ಮರದ ಅಥವಾ ಮಣ್ಣಿನ ಪಾತ್ರೆಯಲ್ಲಿ ಮಣ್ಣು ಮತ್ತು ಮರಳಿನ ಮಿಶ್ರಣದಲ್ಲಿ ಧನಿಯ ಕಾಳುಗಳನ್ನು ನೆಟ್ಟು ಕೊತ್ತಂಬರಿ ಸೊಪ್ಪನ್ನು ಬೆಳೆಯಬಹುದು. ಇದಕ್ಕೆ ಹೆಚ್ಚಿನ ಸೂರ್ಯನ ಬೆಳಕು ಅಗತ್ಯವಿಲ್ಲದಿರುವುದರಿಂದ ಮನೆಯೊಳಗಣ ಬೆಳಕಿನಲ್ಲಿಯೂ ಹುಲುಸಾಗಿ ಬೆಳೆಯುತ್ತದೆ. ತೂಕ ಇಳಿಕೆಯಲ್ಲಿ ಸಹಾಯ ಮಾಡುವ ಹರ್ಬ್ಸ್

ಮದರಂಗಿ

ಮದರಂಗಿ

ಮದರಂಗಿ ಒಂದು ಚಿಕ್ಕ ಗಾತ್ರದ ಮರವಾಗಿದೆ. ಇದನ್ನು ಮನೆಯೊಳಗೆ ಬೆಳೆಸಲು ಸಾಧ್ಯವಿಲ್ಲ. ಆದರೆ ಹಿತ್ತಲಲ್ಲಿ ಮತ್ತು ಅಂಗಳದಲಿ ಬೆಳೆಯಬಹುದು. ಟೆರೇಸಿನಲ್ಲಿ ದೊಡ್ಡಗಾತ್ರದ ಹೂಕುಂಡದಲ್ಲಿಯೂ ಬೆಳೆಸಬಹುದು. ಆದರೆ ಹೂಕುಂಡದಲ್ಲಿ ಬೆಳೆದ ಮದರಂಗಿ ಎಲೆಗಳು ಚಿಕ್ಕದಾಗಿರುವುದು ಮತ್ತು ಹೆಚ್ಚು ಬಣ್ಣವಿಲ್ಲದಿರುವುದು ಗಮನಕ್ಕೆ ಬಂದಿದೆ. ಮದರಂಗಿ ಎಲೆಗಳನ್ನು ಅರೆದು ಹಚ್ಚುವುದರಿಂದ ಕೈಗಳಲ್ಲಿ ತಾತ್ಕಾಲಿಕವಾಗಿ ಕೆಂಪು ಬಣ್ಣ ಮೂಡುವುದರಿಂದ ಇದನ್ನು ಸೌಂದರ್ಯ ಪ್ರಸಾದನವಾಗಿ ಎಲ್ಲೆಡೆ ಬಳಸುತ್ತಾರೆ. ಕೂದಲಿನ ಆರೈಕೆಗಾಗಿ ಮದರಂಗಿ ಎಲೆ ಮತ್ತು ಬೇವಿನ ಎಲೆಗಳನ್ನು (ನಾಲ್ಕು ಮತ್ತು ಒಂದರ ಪ್ರಮಾಣದಲ್ಲಿ) ಅರೆದು ಕೂದಲಿಗೆ ಹಚ್ಚುವುದರಿಂದ ಕೂದಲ ಸಮಸ್ಯೆಗಳಾದ ತಲೆಹೊಟ್ಟು, ಸೀರು, ಕೂದಲ ತುದಿ ಬಿರುಕು ಬಿಡುವುದು, ಉದುರುವುದು, ಮಧ್ಯೆ ತುಂಡಾಗುವುದು ಮೊದಲಾದ ತೊಂದರೆಗಳು ನಿವಾರಣೆಯಾಗುತ್ತವೆ. ಮಹಿಳೆಯರ ಋತುಬಂಧದ ಕಾಲದಲ್ಲಿ ಪಾದಗಳಲ್ಲಿ ಚಿಕ್ಕ ಚಿಕ್ಕ ಪಟಾಕಿ ಸಿಡಿದಂತೆ ನೋವಾಗುವುದನ್ನು ನಿವಾರಿಸಲು ಮದರಂಗಿ ಎಲೆಗಳನ್ನು ಚೆನ್ನಾಗಿ ಅರೆದು ಪಾದಗಳಿಗೆ ಹಚ್ಚಿ ರಾತ್ರಿಯಿಡೀ ಒಣಗಲು ಬಿಡಬೇಕು. ಮರುದಿನ ಈ ನೋವು ಕಡಿಮೆಯಾಗುತ್ತದೆ.

ಬೇವಿನ ಎಲೆಗಳು

ಬೇವಿನ ಎಲೆಗಳು

ಒಗ್ಗರಣೆಗೆ ಅಗತ್ಯವಾದ ಬೇವಿನ ಎಲೆ ಹಲವು ಆರೋಗ್ಯಕರ ಗುಣಗಳನ್ನೂ ಹೊಂದಿದೆ. ಆದರೆ ಬೇವು ಒಂದು ದೊಡ್ಡದಾಗಿ ಬೆಳೆಯುವ ಮರವಾಗಿದೆ. ಇದನ್ನು ಮನೆಯೊಳಗೆ ಬೆಳೆಸಲು ಸಾಧ್ಯವಿಲ್ಲ. ಅಂಗಳ, ಹಿತ್ತಲು ಅಥವಾ ದೊಡ್ಡ ಹೂಕುಂಡದಲ್ಲಿ ಟೆರೇಸ್ ನಲ್ಲಿ ಬೆಳೆಸಬಹುದು. ಬೇವಿನ ಎಲೆಯ ಸೇವನೆಯಿಂದ ಹೊಟ್ಟೆಯಲ್ಲಿ ಹುಳಗಳಿದ್ದರೆ ನಿವಾರಣೆಯಾಗುತ್ತದೆ ಮತ್ತು ಜೀರ್ಣಕ್ರಿಯೆಯಲ್ಲಿ ನೆರವಾಗುತ್ತದೆ. ಜೊತೆಗೇ ದೇಹದ ಕೊಬ್ಬು ಕರಗಿಸಲು ನೆರವಾಗಿ ತೂಕ ಕಳೆದುಕೊಳ್ಳಲು ನೆರವಾಗುತ್ತದೆ. ಬೇವಿನ ಎಲೆಗಳನ್ನು ಬಿಸಿನೀರಿನಲ್ಲಿ ಕುದಿಸಿ ಸೋಸಿ ಕುಡಿಯುವುದರಿಂದಲೂ ತೂಕ ಕಳೆದುಕೊಳ್ಳಲು ಸಾಧ್ಯವಾಗುತ್ತದೆ.

English summary

Healthy ayurvedic herbs you should grow at home

A simple ailment such as cold, indigestion or flatulence does not always require prescription medication. So, here are a few herbs that you must grow in your home garden so that they are readily available when you need them.
X
Desktop Bottom Promotion