For Quick Alerts
ALLOW NOTIFICATIONS  
For Daily Alerts

ಕ್ಯಾರೆಟ್‍ನ ಮಹತ್ವ ಮತ್ತು ಆರೋಗ್ಯದ ಮಹಾತ್ಮೆ

|

ನಿಮ್ಮ ಆರೋಗ್ಯವನ್ನು ನಿಸ್ಸಂಶಯವಾಗಿ ಹೆಚ್ಚಿಸುವ ತರಕಾರಿಯಲ್ಲಿ ಕ್ಯಾರೆಟ್‍ಗೆ ಅಗ್ರಸ್ಥಾನ ನೀಡಬಹುದು. ಇವುಗಳಲ್ಲಿ ಏನೆಲ್ಲಾ ಆರೋಗ್ಯವು ದೊರೆಯುತ್ತದೆ ಎಂಬುದನ್ನು ನಾವು ಇಂದು ನಿಮಗೆ ತಿಳಿಸುತ್ತಿದ್ದೇವೆ. ಇದನ್ನು ಆದಷ್ಟು ನಿಮ್ಮ ದೈನಂದಿನ ಡಯಟ್‍ನಲ್ಲಿ ಸೇರಿಸಿಕೊಳ್ಳಿ. ಕ್ಯಾರೆಟ್‍ಗಳು ಅಪಿಯಸಿಯೆ ಕುಟುಂಬಕ್ಕೆ ಸೇರಿದ ಗಿಡಗಳು. ಈ ಹೆಸರು ಗ್ರೀಕ್ ಭಾಷೆಯ "ಕರಟಾನ್" ಪದದಿಂದ ಬಂದಿದೆ. ಸಂಯುಕ್ತ ರಾಷ್ಟ್ರಗಳ

ಕೃಷಿ ಇಲಾಖೆಯ ಪ್ರಕಾರ ಒಂದು ಕ್ಯಾರೆಟ್ ಅಥವಾ ಕತ್ತರಿಸಿದ ಅರ್ಧ ಕಪ್ ಕ್ಯಾರೆಟ್‍ನಲ್ಲಿ 25 ಕ್ಯಾಲೊರಿ, 6 ಗ್ರಾಂ ಕಾರ್ಬೋಹೈಡ್ರೇಟ್, 3 ಗ್ರಾಂ ಸಕ್ಕರೆ ಮತ್ತು 1 ಗ್ರಾಂ ಪ್ರೋಟಿನ್ ದೊರೆಯುತ್ತದೆಯಂತೆ. ಕ್ಯಾರೆಟ್‍ನಲ್ಲಿ ವಿಟಮಿನ್ ಎ, ಕ್ಯಾಲ್ಸಿಯಂ, ಕಬ್ಬಿಣಾಂಶ, ವಿಟಮಿನ್ ಇ, ನಾರಿನಂಶ, ವಿಟಮಿನ್ ಕೆ, ಪೊಟಾಶಿಯಂ, ವಿಟಮಿನ್ ಸಿ, ಪೊಟಾಶಿಯಂ, ಮೆಗ್ನಿಶಿಯಂ, ಫೋಲೆಟ್, ಮ್ಯಾಂಗನೀಸ್, ವಿಟಮಿನ್ ಇ ಮತ್ತು ಸತು ಇರುತ್ತದೆಯಂತೆ.

ಮತ್ತೊಂದು ಪ್ರಮುಖ ಅಂಶವೆಂದರೆ, ಕ್ಯಾರಟ್‍ನಲ್ಲಿ ಅತ್ಯದ್ಭುತವಾದ ಆಂಟಿ ಆಕ್ಸಿಡೆಂಟ್ ಸಹ ಇರುತ್ತದೆ. ವಿಟಮಿನ್ ಎ ಜೊತೆಗೆ ಇದರಲ್ಲಿ ಬೀಟಾ ಕೆರೊಟಿನ್, ಸಹ ಇರುತ್ತದೆ. ಅವುಗಳಿಂದಲೆ ಕ್ಯಾರೆಟ್‍ಗೆ ಕಡು ಕಿತ್ತಳೆ ಬಣ್ಣ ಬಂದಿರುವುದು. ತೂಕ ಕಡಿಮೆ ಮಾಡಿಕೊಳ್ಳಲು ಕ್ಯಾರೆಟ್‍ಗಳು ಹೇಳಿ ಮಾಡಿಸಿದ ತರಕಾರಿಗಳಾಗಿವೆ. ಇದರಲ್ಲಿ ಕ್ಯಾಲೋರಿ ಕಡಿಮೆಯಿರುವುದರಿಂದ, ಸ್ನ್ಯಾಕ್ಸ್ ಆಗಿ ಇದನ್ನೆ ಸೇವಿಸಿ. ರಕ್ತದ ಶುದ್ಧತೆಗೆ ದಿನಾ ಕ್ಯಾರೆಟ್‌‌‌ನ್ನು ಸೇವಿಸಿ!

Health Secrets Of Carrots

ಹಲ್ಲುಗಳನ್ನು ಸ್ವಚ್ಛಗೊಳಿಸಲು
ಕ್ಯಾರೆಟ್‍ನಲ್ಲಿರುವ ಗರಿ ಗರಿ ಅಂಶವು ನಿಮ್ಮ ಹಲ್ಲುಗಳನ್ನು ಸ್ವಚ್ಛಗೊಳಿಸುತ್ತದೆ. ಇದನ್ನು ಹಾಗೆಯೇ ಸೇವಿಸುವುದರಿಂದ ಹಲ್ಲುಗಳು ಬೆಳ್ಳಗಾಗುತ್ತವೆ.

ತ್ವಚೆಯ ಹೊಳಪಿಗೆ
ಕ್ಯಾರೆಟ್ ರಸವು ತ್ವಚೆಯ ಹೊಳಪಿಗೆ ಹೇಳಿ ಮಾಡಿಸಿದ ಔಷಧಿಯಾಗಿರುತ್ತದೆ. ಜೊತೆಗೆ ಇದು ತ್ವಚೆಯ ಆರೋಗ್ಯವನ್ನು ಸಹ ಸುಧಾರಿಸುತ್ತದೆ. ಪುರುಷರ ಆರೋಗ್ಯಕ್ಕೆ ಕ್ಯಾರೆಟ್ ಒಳ್ಳೆಯದು

ಕಣ್ಣುಗಳು
ಕ್ಯಾರೆಟ್ ಸೇವಿಸುವುದರಿಂದ ಕಣ್ಣಿನ ಆರೋಗ್ಯವನ್ನು ಸುಧಾರಿಸಿಕೊಳ್ಳಬಹುದು. ಇದರಲ್ಲಿರುವ ವಿಟಮಿನ್ ಎ ಯು ನಿಮ್ಮ ಕಣ್ಣುಗಳಿಗೆ ಅತ್ಯಗತ್ಯವಾಗಿ ಬೇಕಾಗುತ್ತವೆ.

ರಕ್ತ
ಕ್ಯಾರೆಟ್‍ನಲ್ಲಿರುವ ಆಲ್ಕಾಲೈನ್‍ಗಳು ರಕ್ತದಲ್ಲಿರುವ ಆಸಿಡ್‍ಗಳನ್ನು ಸಮತೋಲನದಲ್ಲಿಡುತ್ತವೆ. ಜೊತೆಗೆ ಇವು ರಕ್ತವನ್ನು ಶುದ್ಧಗೊಳಿಸುತ್ತವೆ.

ವಯಸ್ಸಾದಂತೆ ಕಾಣುವುದನ್ನು ತಡೆಯುತ್ತವೆ
ಕ್ಯಾರೆಟ್‌ಗಳು ನಿಮ್ಮನ್ನು ವಯಸ್ಸಾದಂತೆ ಕಾಣುವುದನ್ನು ತಡೆಯುತ್ತವೆ. ಇದರಲ್ಲಿರುವ ಸಮೃದ್ಧ ಆಂಟಿ-ಆಕ್ಸಿಡೆಂಟ್‍ಗಳು ನಿಮ್ಮ ತ್ವಚೆಯನ್ನು ಬಿಗಿಯಾಗಿ ಇರಿಸುತ್ತವೆ.

ಸೂರ್ಯನಿಂದ ರಕ್ಷಣೆ
ಸೂರ್ಯನಿಂದ ರಕ್ಷಣೆ ಸೂರ್ಯನ ಕಿರಣಗಳಿಂದ ನಿಮ್ಮ ತ್ವಚೆಯನ್ನು ಕಾಪಾಡುವಲ್ಲಿ ಕ್ಯಾರೆಟ್ ಜ್ಯೂಸ್ ನಿಮಗೆ ಉತ್ತಮವಾಗಿ ಸಹಕರಿಸುತ್ತದೆ. ಕ್ಯಾರೆಟ್ ಜ್ಯೂಸ್ ಸನ್ ಬರ್ನ್‍ಗಳನ್ನು ಗುಣಪಡಿಸುತ್ತದೆ ಮತ್ತು ತ್ವಚೆಯನ್ನು ಸೂರ್ಯನ ಬೆಳಕಿನಿಂದ ಕಾಪಾಡುತ್ತದೆ. ಸನ್‍ಸ್ಕ್ರೀನ್ ಲೋಶನ್ ಬಳಸುವ ಬದಲು, ನೀವು ಕ್ಯಾರೆಟ್ ಜ್ಯೂಸನ್ನು ಸೇವಿಸಿ ನಿಮ್ಮ ತ್ವಚೆಯನ್ನು ಕಾಪಾಡಿಕೊಳ್ಳಿ.

ಸೆಪ್ಸಿಸ್ ಅನ್ನು ನಿಯಂತ್ರಿಸುತ್ತವೆ
ಕ್ಯಾರೆಟ್‍ನಲ್ಲಿರುವ ಆಂಟಿಸೆಪ್ಟಿಕ್ ಅಂಶಗಳು ಅವುಗಳನ್ನು ಒಂದು ಜನಪ್ರಿಯ ತರಕಾರಿಯನ್ನಾಗಿ ಮಾಡಿವೆ. ಈ ಅಂಶವು ಸೆಪ್ಸಿಸ್ ಬರದಂತೆ ತಡೆಯುತ್ತವೆ.

English summary

Health Secrets Of Carrots

Carrots, carrots & carrots! There are many health benefits of carrots & it has many essential health supplements. Know more about the carrot benefits for health and sure, you will include carrot in your daily diet. Know more about the carrot benefits for health
X
Desktop Bottom Promotion