For Quick Alerts
ALLOW NOTIFICATIONS  
For Daily Alerts

ಸಮೃದ್ಧ ಪೋಷಕಾಂಶಗಳ ಆಗರ - ಬಿಳಿ ಈರುಳ್ಳಿ

By Arshad
|

ನಮ್ಮಲ್ಲಿ ಸರ್ವೇಸಾಧಾರಣ ಒಂದು ಪೂರ್ವಾಗ್ರಹ ನಂಬಿಕೆಯಿದೆ. ಅಂದರೆ ಕೆಲವು ಆಹಾರ ಪದಾರ್ಥಗಳನ್ನು ನಾವು ಅವು ಸೇವಿಸುವ ಜನರ ಅಥವಾ ಜಾನುವಾರುಗಳಿಗೆ ತಳಕು ಹಾಕಿಕೊಂಡು 'ಇದು ನಮಗಲ್ಲ' ಎಂಬ ತೀರ್ಮಾನಕ್ಕೆ ಬಂದುಬಿಟ್ಟಿದ್ದೇವೆ. ಉದಾಹರಣೆಗೆ ಹುರುಳಿ. ಇದನ್ನು ಎತ್ತುಗಳಿಗೆ ತಿನ್ನಿಸುವ ಕಾರಣ ಹುರುಳಿಯನ್ನು ಹೆಚ್ಚಿನವರು ಎತ್ತಿನ ಖಾದ್ಯ ಎಂದೇ ತಿಳಿದು ಮನೆಗೆ ತರುವ ಗೋಜಿಗೇ ಹೋಗುವುದಿಲ್ಲ. ಅದೇ ಪಂಚತಾರಾ ಹೋಟೆಲುಗಳಲ್ಲಿ ಹುರುಳಿಯ ಸೂಪ್ (lentil soup) ಎಂದು ಸಿಗುವ ಖಾದ್ಯಕ್ಕೆ ದುಬಾರಿ ಬೆಲೆ! ಬಿಳಿ ಈರುಳ್ಳಿಯಲ್ಲಿರುವ 4 ಪ್ರಮುಖ ಔಷಧೀಯ ಗುಣಗಳು

ಇದೇ ರೀತಿ ಬಿಳಿ ಈರುಳ್ಳಿ ಸಹಾ, ಹೆಚ್ಚಿನವರು ಮಾರುಕಟ್ಟೆಯಲ್ಲಿ ಬಿಳಿ ಈರುಳ್ಳಿಯನ್ನು ಕಂಡಾಕ್ಷಣ ಆ ಅಂಗಡಿಯತ್ತ ಸುಳಿಯುವುದೇ ಇಲ್ಲ. ಈ ಗುಟ್ಟನ್ನು ಕಂಡುಕೊಂಡ ತರಕಾರಿ ಅಂಗಡಿಯವರೂ ಗಿರಾಕಿ ಕಳೆದುಕೊಳ್ಳಲಿಚ್ಛಿಸದೆ ಬಿಳಿ ಈರುಳ್ಳಿ ಇಡುವುದೇ ಇಲ್ಲ! ಈರುಳ್ಳಿಯ ಇತರ ವಿಧಗಳಾದ ಕೆಂಪು ಮತ್ತು ಹಳದಿ ಈರುಳ್ಳಿಗಳು ಮಾತ್ರ ಹೆಚ್ಚಾಗಿ ಮಾರುಕಟ್ಟೆಯಲ್ಲಿ ಲಭ್ಯವಿವೆ. ಈರುಳ್ಳಿ ರಸದ ಅದ್ಭುತವಾದ ಆರೋಗ್ಯಕಾರಿ ಪ್ರಯೋಜನಗಳು

ವಾಸ್ತವದಲ್ಲಿ ಬಿಳಿ ಈರುಳ್ಳಿಯಲ್ಲಿ ಸಾಮಾನ್ಯ ಈರುಳ್ಳಿಯಲ್ಲಿರದ ಹಲವು ಪೋಷಕಾಂಶಗಳಿವೆ. ವಿಟಮಿನ್ ಸಿ, ಫ್ಲೇವನಾಯ್ಡ್ ಮತ್ತು ಫೈಟೋ ನ್ಯೂಟ್ರಿಯೆಂಟ್ ಗಳೆಂಬ ಪೋಷಕಾಂಶಗಳು ಬಿಳಿ ಈರುಳ್ಳಿಯಲ್ಲಿ ಬೇರಾವುದೇ ತರಕಾರಿಯಲ್ಲಿ ಲಭ್ಯವಾಗದಷ್ಟು ಆಗಾಧ ಪ್ರಮಾಣದಲ್ಲಿದೆ. ಅಷ್ಟೇ ಅಲ್ಲದೆ ಹೃದಯಸಂಬಂಧಿ ಕಾಯಿಲೆ, ಹೃದಯಸ್ತಂಭನ ಮೊದಲಾದವುಗಳ ವಿರುದ್ಧ ಹೋರಾಡುವ ಶಕ್ತಿಯಿದೆ. ಬನ್ನಿ ಇದರ ಇನ್ನಷ್ಟು ಪ್ರಯೋಜನಗಳ ಕುರಿತು ಕೆಳಗಿನ ಸ್ಲೈಡ್ ಶೋ ಮೂಲಕ ಓದಿ...

ಹೃದಯದ ಕ್ಷಮತೆಯನ್ನು ಹೆಚ್ಚಿಸುತ್ತದೆ

ಹೃದಯದ ಕ್ಷಮತೆಯನ್ನು ಹೆಚ್ಚಿಸುತ್ತದೆ

ಹೃದಯ ಇಡಿಯ ದೇಹಕ್ಕೆ ರಕ್ತ ಪೂರೈಸಲು ಸತತವಾಗಿ ಬಡಿಯುತ್ತಲೇ ಇರಬೇಕು. ಇದಕ್ಕಾಗಿ ಹೃದಯಕ್ಕೂ ರಕ್ತಪೂರೈಕೆಯ ಅಗತ್ಯವಿದೆ.ಈ ರಕ್ತನಾಳಗಳಲ್ಲಿ ಕೊಂಚವಾದರೂ ರಕ್ತ ಹೆಪ್ಪುಗಟ್ಟಲು ತೊಡಗಿದರೆ ನಿಧಾನವಾಗಿ ಹೃದಯಸ್ತಂಭನದ ಸಾಧ್ಯತೆಗಳು ಹೆಚ್ಚುತ್ತಾ ಹೋಗುತ್ತವೆ. ಬಿಳಿ ಈರುಳ್ಳಿಯ ನಿಯಮಿತ ಸೇವನೆಯಿಂದ ಈ ರಕ್ತ ಹೆಪ್ಪುಗಟ್ಟುವ ಸಾಧ್ಯತೆ ಕಡಿಮೆಯಾಗಿ ಹೃದಯದ ಕ್ಷಮತೆ ಹೆಚ್ಚುತ್ತದೆ, ತನ್ಮೂಲಕ ಆರೋಗ್ಯ ಉತ್ತಮಗೊಳ್ಳುತ್ತದೆ.

ವಿವಿಧ ಕ್ಯಾನ್ಸರ್ ಬರುವುದನ್ನು ತಡೆಯುತ್ತದೆ

ವಿವಿಧ ಕ್ಯಾನ್ಸರ್ ಬರುವುದನ್ನು ತಡೆಯುತ್ತದೆ

ಬಿಳಿ ಈರುಳ್ಳಿಯಲ್ಲಿರುವ ಕ್ವೆರ್ಸೆಟಿನ್ (quercetin) ಎಂಬ ಪೋಷಕಾಂಶವು ಕ್ಯಾನ್ಸರ್ ಕಾರಕ ಕಣಗಳ ವಿರುದ್ಧ ಹೋರಾಡುವ ಗುಣ ಹೊಂದಿವೆ. ಬಿಳಿ ಈರುಳ್ಳಿಯನ್ನು ನಮ್ಮ ನಿತ್ಯದ ಅಹಾರಗಳ ಜೊತೆ ಸೇವಿಸುವುದರಿಂದ ದೇಹ ಕ್ಯಾನ್ಸರ್ ವಿರುದ್ಧ ಹೋರಾಡುವ ಶಕ್ತಿಯನ್ನು ಬೆಳೆಸಿಕೊಂಡು ಹಲವು ವಿಧದ ಕ್ಯಾನ್ಸರ್ ಬರುವುದರಿಂದ ತಡೆದಂತಾಗುತ್ತದೆ.

ರಕ್ತದ ಗಾಢತೆಯನ್ನು ಕಡಿಮೆಗೊಳಿಸುತ್ತದೆ

ರಕ್ತದ ಗಾಢತೆಯನ್ನು ಕಡಿಮೆಗೊಳಿಸುತ್ತದೆ

blood is thicker than water ಎಂಬ ಸುಭಾಷಿತ ಮಾನವ ಸಂಬಂಧಗಳ ಗಾಢತೆಯನ್ನು ಬಿಂಬಿಸಿದರೂ ರಕ್ತ ಅತಿಹೆಚ್ಚು ಗಾಢವಾಗಿರುವುದು ಆರೋಗ್ಯಕ್ಕೆ ಮಾರಕ. ಗಾಢವಾಗಿರುವ ರಕ್ತವನ್ನು ದೇಹದ ತುದಿಯ ಭಾಗಗಳಿಗೆ ತಲುಪಿಸಲು ಹೃದಯಕ್ಕೆ ಹೆಚ್ಚಿನ ಒತ್ತಡ ನೀಡಬೇಕಾಗುತ್ತದೆ. ಬಿಳಿ ಈರುಳ್ಳಿಯಲ್ಲಿರುವ ಫ್ಲೇವನಾಯ್ಡುಗಳು ಮತ್ತು ಮುಖ್ಯವಾಗಿ ಗಂಧಕ (sulphur) ರಕ್ತದ ಗಾಢತೆಯನ್ನು ಸೂಕ್ತ ಪರಿಮಿತಿಗಳಲ್ಲಿರುವಂತೆ ನೋಡಿಕೊಳ್ಳುತ್ತವೆ. ಪರಿಣಾಮವಾಗಿ ಹೃದಯದೊತ್ತಡ ಪರಿಮಿತಿಗಳಲ್ಲಿದ್ದು ಆರೋಗ್ಯ ಉತ್ತಮಗೊಳ್ಳುತ್ತದೆ.

ಉರಿಯೂತ ವಿರೋಧಿ ಗುಣ

ಉರಿಯೂತ ವಿರೋಧಿ ಗುಣ

ಬಿಳಿ ಈರುಳ್ಳಿಯಲ್ಲಿ ಉತ್ತಮ ಪ್ರಮಾಣದಲ್ಲಿರುವ ಗಂಧಕ ಇದನ್ನೊಂದು ಉರಿಯೂತ ವಿರೋಧಿ (Anti-inflammatory) ಯನ್ನಾಗಿಸಿದೆ. ಇದು ದೇಹದ ಹಲವಾರು ತೊಂದರೆಗಳಿಂದ ರಕ್ಷಿಸುತ್ತದೆ. ವಿಶೇಷವಾಗಿ ಅಸ್ತಮಾ ರೋಗಿಗಳಿಗೆ ಬಿಳಿ ಈರುಳ್ಳಿಯ ಈ ಗುಣ ಹೆಚ್ಚು ಫಲಕಾರಿಯಾಗಿದೆ.

ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ

ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ

ಬಿಳಿ ಈರುಳ್ಳಿಯಲ್ಲಿರುವ ಆಗಾಧ ಪ್ರಮಾಣದ ವಿಟಮಿನ್ ಸಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಲು ನೆರವಾಗುತ್ತದೆ. ಅಲ್ಲದೇ ದೇಹದಲ್ಲಿ ಅಲರ್ಜಿಕಾರಕ ಕಣಗಳಿದ್ದರೆ ಅದನ್ನು ತೊಡೆಯಲು ಬೆಂಬಲಿಸಿ ವಿವಿಧ ಅಲರ್ಜಿಗಳಿಂದ ರಕ್ಷಿಸುತ್ತದೆ.

ಜೀರ್ಣಶಕ್ತಿಯನ್ನು ಉತ್ತಮಗೊಳಿಸುತ್ತದೆ

ಜೀರ್ಣಶಕ್ತಿಯನ್ನು ಉತ್ತಮಗೊಳಿಸುತ್ತದೆ

ಬಿಳಿ ಈರುಳ್ಳಿಯಲ್ಲಿರುವ ವಿವಿಧ ಆಮ್ಲಗಳು ಜಠರರಸದೊಡನೆ ಮಿಳಿತಗೊಂಡ ಬಳಿಕ ಜೀರ್ಣಕ್ರಿಯೆ ಉತ್ತಮಗೊಳ್ಳುತ್ತದೆ. ಇದರಲ್ಲಿರುವ ಕರಗುವ ನಾರು ಕರುಳುಗಳ ಒಳಗೆ ಹುಣ್ಣುಗಳಾಗದಂತೆ ನೋಡಿಕೊಳ್ಳುತ್ತದೆ ಹಾಗೂ ದೊಡ್ಡಕರುಳಿನಿಂದ ಹೆಚ್ಚಿನ ಪ್ರಮಾಣದಲ್ಲಿ ನೀರನ್ನು ಹೀರಿಕೊಳ್ಳಲು ನೆರವಾಗುತ್ತದೆ. ಪರಿಣಾಮವಾಗಿ ಅಲ್ಸರ್ (ಕರುಳಿನ ಹುಣ್ಣು) ಅತಿಸಾರ, ಅಮಶಂಕೆ ಮತ್ತು ಕರುಳಿನ ತೊಂದರೆಗಳಿಂದ ಮುಕ್ತಿ ದೊರಕುತ್ತದೆ.

ರಕ್ತದಲ್ಲಿನ ಸಕ್ಕರೆಯ ಪ್ರಮಾಣವನ್ನು ನಿಯಂತ್ರಿಸುತ್ತದೆ

ರಕ್ತದಲ್ಲಿನ ಸಕ್ಕರೆಯ ಪ್ರಮಾಣವನ್ನು ನಿಯಂತ್ರಿಸುತ್ತದೆ

ಟೆಕ್ಸಸ್ ವಿಶ್ವವಿದ್ಯಾಲಯದಲ್ಲಿ ನಡೆದ ಇತ್ತೀಚಿನ ಸಂಶೋಧನೆಗಳ ಪ್ರಕಾರ ಬಿಳಿ ಈರುಳ್ಳಿಯಲ್ಲಿ ಕ್ರೋಮಿಯಂ ಎಂಬ ಖನಿಜವಿದೆ. ಕ್ರೋಮಿಯಂ ಮತ್ತು ಗಂಧಕದ ಜೋಡಿ ರಕ್ತದಲ್ಲಿನ ಸಕ್ಕರೆಯ ಪ್ರಮಾಣವನ್ನು ನಿಯಂತ್ರಿಸಲು, ತನ್ಮೂಲಕ ಮಧುಮೇಹವನ್ನು ತಹಬಂದಿಗೆ ತರಲು ಸೂಕ್ತವಾದ ರುಸ್ತುಂಜೋಡಿಯಾಗಿದೆ.

ಮೂಳೆಗಳ ಸಾಂದ್ರತೆಯನ್ನು ಹೆಚ್ಚಿಸುತ್ತದೆ

ಮೂಳೆಗಳ ಸಾಂದ್ರತೆಯನ್ನು ಹೆಚ್ಚಿಸುತ್ತದೆ

ವಯಸ್ಸಾದಂತೆ ಮೂಳೆಗಳು ತಮ್ಮ ಸಾಂದ್ರತೆಯನ್ನು ಕಳೆದುಕೊಳ್ಳುತ್ತವೆ. ವಿಶೇಷವಾಗಿ ಮಹಿಳೆಯರಲ್ಲಿ ಈ ತೊಂದರೆ ಹೆಚ್ಚು. ತಮ್ಮ ಆಹಾರದಲ್ಲಿ ನಿಯಮಿತವಾಗಿ ಬಿಳಿ ಈರುಳ್ಳಿಯನ್ನು ಸೇವಿಸಿದವರಲ್ಲಿ ಮೂಳೆಸವೆತ, ಬೆನ್ನು ಬಾಗುವುದು, ಮೂಳೆಗಳು ಟೊಳ್ಳಾಗುವುದು ಅಥವಾ ಗಾಳಿಗುಳ್ಳೆಗಳು ತುಂಬಿಕೊಳ್ಳುವುದು (osteoporosis) ಮೊದಲಾದ ತೊಂದರೆಗಳಿಂದ ದೂರವಿರುವುದು ಕಂಡುಬಂದಿದೆ.

ಬಂಜೆತನವನ್ನು ನಿವಾರಿಸುತ್ತದೆ

ಬಂಜೆತನವನ್ನು ನಿವಾರಿಸುತ್ತದೆ

ಬಿಳಿ ಈರುಳ್ಳಿಯಲ್ಲಿರುವ ಫೋಲಿಕ್ ಆಮ್ಲಕ್ಕೆ ಬಂಜೆತನಕ್ಕೆ ಕಾರಣವಾಗುವ ಪರಿಸ್ಥಿತಿಯನ್ನು ಸುಧಾರಿಸುವ ಗುಣವಿದೆ. ಜೊತೆಗೇ ಬಿಳಿ ಈರುಳ್ಳಿಯಲ್ಲಿರುವ ಕಬ್ಬಿಣದ ಅಂಶ ಈ ಶಕ್ತಿಗೆ ಬೆಂಬಲ ನೀಡುತ್ತದೆ. ಪರಿಣಾಮವಾಗಿ ಮಹಿಳೆಯರಿಗೂ, ಪುರುಷರಿಗೂ ಬಂಜೆತನದಿಂದ ಮುಕ್ತಿ ದೊರಕುತ ಸಾಧ್ಯತೆ ದಟ್ಟವಾಗುತ್ತದೆ. ಇದೇ ಕಾರಣಕ್ಕೆ ವೈದ್ಯರು ಬಿಳಿ ಈರುಳ್ಳಿಯ ಸೇವನೆಯನ್ನು ಸಲಹೆ ಮಾಡುತ್ತಾರೆ.

ಆರೋಗ್ಯಕರ ಕೂದಲಿಗಾಗಿ

ಆರೋಗ್ಯಕರ ಕೂದಲಿಗಾಗಿ

ಬಿಳಿ ಈರುಳ್ಳಿಯನ್ನು ನಿಯಮಿತವಾಗಿ ಸೇವಿಸುತ್ತಾ ಬಂದಿರುವ ಜನರ ತಲೆಗೂದಲು ದಟ್ಟವಾಗಿರುವುದು, ನೆರೆಯುವುದು ತಡವಾಗುವುದು ಮತ್ತು ಕಾಂತಿಯುಕ್ತವಾಗಿರುವುದು ಕಂಡುಬಂದಿದೆ. ಬಿಳಿ ಈರುಳ್ಳಿಯನ್ನು ಸೇವಿಸಿದವರ ತಲೆಯಲ್ಲಿ ಹೊಟ್ಟು ಸಹಾ ಇಲ್ಲದಿರುವುದು ಇದರ ಪೋಷಣೆಗೆ ಹಿಡಿದ ಕೈಗನ್ನಡಿಯಾಗಿದೆ.

ಶೀತದಿಂದ ಮುಕ್ತಿ ನೀಡುತ್ತದೆ

ಶೀತದಿಂದ ಮುಕ್ತಿ ನೀಡುತ್ತದೆ

ರೋಮನ್ ದೊರೆಗಳಿಗೆ ಶೀತವಾದಾಗ ಬಿಳಿ ಈರುಳ್ಳಿಯನ್ನು ಸೇವಿಸುತ್ತಿದ್ದರೆಂದು ಇತಿಹಾಸದಲ್ಲಿ ದಾಖಲಿಸಲ್ಪಟ್ಟಿದೆ. ಅಲ್ಲದೇ ಶೀತದ ಹಲವು ಔಷಧಿಗಳಲ್ಲಿ ಬಿಳಿ ಈರುಳ್ಳಿಯನ್ನು ಬಳಸುತ್ತಿರುವುದು ಇದರ ಶೀತನಿರೋಧಕ ಗುಣಕ್ಕೆ ಸಾಕ್ಷಿಯಾಗಿದೆ.

ಸೌಮ್ಯವಾದ ತ್ವಚೆಗೆ ಉತ್ತಮವಾಗಿದೆ

ಸೌಮ್ಯವಾದ ತ್ವಚೆಗೆ ಉತ್ತಮವಾಗಿದೆ

ಬಿಳಿ ಈರುಳ್ಳಿಯನ್ನು ನಿಯಮಿತವಾಗಿ ಸೇವಿಸುವುದರಿಂದ ಚರ್ಮದ ಕಾಂತಿ ಹೆಚ್ಚುತ್ತದೆ ಹಾಗೂ ತ್ವಚೆ ಸೌಮ್ಯವಾಗಿರುತ್ತದೆ. ಜೊತೆಗೇ ಇದರಲ್ಲಿರುವ ವಿಟಮಿನ್ ಸಿ ತ್ವಚೆಯ ಹಲವು ಸೋಂಕುಗಳಿಂದ ರಕ್ಷಿಸುತ್ತದೆ.

ಸುಖಕರ ನಿದ್ದೆಗೆ ಪೂರಕವಾಗಿದೆ

ಸುಖಕರ ನಿದ್ದೆಗೆ ಪೂರಕವಾಗಿದೆ

ಉತ್ತಮ ಆರೋಗ್ಯಕ್ಕಾಗಿ ಗಾಢನಿದ್ದೆ ಅಗತ್ಯವಾಗಿದೆ. ಬಿಳಿ ಈರುಳ್ಳಿಯನ್ನು ರಾತ್ರಿಯೂಟದಲ್ಲಿ ಸೇವಿಸುವ ಮೂಲಕ ಉತ್ತಮ ನಿದ್ದೆ ಪಡೆಯಬಹುದಾಗಿದೆ.

English summary

Health Benefits Of White Onions

Onions will definitely make you cry, but it is a rich store house of nutrients! Onions are inevitable part of Indian cooking recipes. According to the researchers, white onions are super-healthy with vitamin-c, flavonoids, and phytonutrients. Here, we will discuss 13 health benefits of white onions.
X
Desktop Bottom Promotion