For Quick Alerts
ALLOW NOTIFICATIONS  
For Daily Alerts

ವಾವ್! ಬಾಳೆದಿಂಡಿನ ಜ್ಯೂಸ್‌ನಲ್ಲಿ ಏನೆಲ್ಲಾ ಪ್ರಯೋಜನಗಳಿವೆ ನೋಡಿ?

By Super
|

ಈ ಮರದಿಂದ ಕಿಟಕಿ ಬಾಗಿಲು ಮಾಡಲಿಕ್ಕೆ ಆಗುವುದಿಲ್ಲ, ಯಾವುದು? ಎಂಬ ಪ್ರಶ್ನೆಗೆ ತಲೆಕೆರೆದುಕೊಂಡಿರಾ? ಉತ್ತರ ತುಂಬಾ ಸುಲಭ. ಬಾಳೆಮರ. ಬಾಳೆಯ ಫಲ, ಎಲೆ, ಹೂವು ಎಲ್ಲವೂ ಅಡುಗೆಗೆ ಬಳಕೆಯಾಗುತ್ತದೆ. ಆದರೆ ದಿಂಡು ಮಾತ್ರ ಬಳಕೆಯಾಗುವುದು ಕಡಿಮೆ. ಆದರೆ ಈ ದಿಂಡಿನ ಒಳಭಾಗದಲ್ಲಿರುವ ಎಳೆಯ ದಿಂಡು ಮಾತ್ರ ಉತ್ತಮ ಆಹಾರವಾಗಿದೆ.

ಈ ದಿಂಡಿನ ಪಲ್ಯ ತೂಕ ಇಳಿಸಲು ಉತ್ತಮ ಆಹಾರವಾಗಿದೆ. ಈ ದಿಂಡನ್ನು ಹಿಂಡಿ ತೆಗೆದ ರಸವಂತೂ ಆರೋಗ್ಯಕ್ಕೆ ಅತ್ಯಂತ ಉತ್ತಮವಾಗಿದೆ. ಇದರ ಪ್ರಯೋಜನಗಳಲ್ಲಿ ಜೀರ್ಣಕ್ರಿಯೆ ಉತ್ತಮಗೊಳಿಸುವುದು, ಮಲಬದ್ಧತೆ ನಿವಾರಿಸುವುದು ಪ್ರಮುಖವಾಗಿವೆ. ಮಕ್ಕಳಿಗೂ ಈ ರಸ ಉತ್ತಮ ಆಹಾರವಾಗಿದೆ. ಮಕ್ಕಳ ಶರೀರದಲ್ಲಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಲು ನೆರವಾಗುವ ಮೂಲಕ ಮಕ್ಕಳನ್ನು ವಿವಿಧ ರೋಗಗಳಿಂದ ದೂರವಿಡುತ್ತದೆ. ಆದರೆ ಈ ರಸವನ್ನು ತಯಾರಿಸುವುದೇ ಪ್ರಮುಖವಾದ ಸವಾಲು ಆಗಿದೆ. ಏಕೆಂದರೆ ಹೇಳಿದಷ್ಟು ಸುಲಭವಾಗಿ ಲಿಂಬೆರಸದಂತೆ ಈ ದಿಂಡನ್ನು ಹಿಂಡಲು ಸಾಧ್ಯವಿಲ್ಲ.

ಬಾಳೆ ದಿಂಡಿನಲ್ಲಿರುವ ನಾರಿನ ಅಂಶ ಬಹಳ ದೃಢವಾಗಿದ್ದು ರಸವನ್ನು ಅಷ್ಟು ಸುಲಭವಾಗಿ ಬಿಟ್ಟುಕೊಡುವುದಿಲ್ಲ. ಅಲ್ಲದೇ ಈ ರಸ ಕೊಂಚ ಒಗರು ಮತ್ತು ಕಹಿಯಾಗಿರುವುದರಿಂದ ಕುಡಿಯಲು ಅಪ್ಯಾಯಮಾನವಂತೂ ಅಲ್ಲ. ಇದಕ್ಕಾಗಿ ವಿವಿಧ ಖಾರದ ಪುಡಿಗಳನ್ನು ಮತ್ತು ಇತರ ಮಸಾಲೆಗಳನ್ನು ಸೇರಿಸುವ ಮೂಲಕ ಕುಡಿಯಲು ಯೋಗ್ಯವಾದ ಪೇಯವನ್ನಾಗಿ ಮಾರ್ಪಾಡಿಸಿಕೊಳ್ಳಬಹುದು. ಹೇಗೆ ಎಂದು ತಿಳಿಯುವ ಬಯಕೆಯೇ? ಮುಂದೆ ಓದಿ.

ಬಾಳೆ ದಿಂಡಿನ ಜ್ಯೂಸ್ ಮಾಡುವ ವಿಧಾನ

ಬಾಳೆ ದಿಂಡಿನ ಜ್ಯೂಸ್ ಮಾಡುವ ವಿಧಾನ

ಅಗತ್ಯವಿರುವ ಸಾಮಾಗ್ರಿಗಳು: ಬಾಳೆದಿಂಡನ್ನು ಚಿಕ್ಕದಾದ ತುಂಡುಗಳನ್ನಾಗಿ ಕತ್ತರಿಸಿಕೊಳ್ಳಿ (ಸುಮಾರು ಅರ್ಧ ಕೇಜಿ)

*ನೀರು-ಸಮಪ್ರಮಾಣದಲ್ಲಿ

*ಬೆಲ್ಲ (ಕಪ್ಪು ಅಥವಾ ಕಂದುಬೆಲ್ಲ) ಅಥವಾ ಜೇನುತುಪ್ಪ-ರುಚಿಗೆ ತಕ್ಕಷ್ಟು

*ಏಲಕ್ಕಿ ಪುಡಿ -ರುಚಿಗೆ ತಕ್ಕಷ್ಟು

ವಿಧಾನ: ಮಿಕ್ಸಿಯಲ್ಲಿ ನೀರು ಮತ್ತು ಬಾಳೆದಿಂಡಿನ ತುಂಡುಗಳನ್ನು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ. ಬಳಿಕ ಬೆಲ್ಲ ಅಥವ ಜೇನುತುಪ್ಪ ಮತ್ತು ಏಲಕ್ಕಿ ಪುಡಿಯನ್ನು ಸೇರಿಸಿ ಇನ್ನಷ್ಟು ಗೊಟಾಯಿಸಿ. ಬಳಿಕ ಸ್ವಚ್ಛವಾದ ಬಟ್ಟೆಯಲ್ಲಿ ಸೋಸಿ ದೊಡ್ಡ ನಾರುಗಳನ್ನು ನಿವಾರಿಸಿ. ತಣ್ಣಗಿರುವಂತೆಯೇ ಕುಡಿಯಿರಿ.

ಬಾಳೆದಿಂಡಿನ ಜ್ಯೂಸ್ ಕುಡಿಯುವುದರಿಂದಾಗುವ ಪ್ರಯೋಜನಗಳು

ಬಾಳೆದಿಂಡಿನ ಜ್ಯೂಸ್ ಕುಡಿಯುವುದರಿಂದಾಗುವ ಪ್ರಯೋಜನಗಳು

*ಮೂತ್ರಪಿಂಡಗಳಲ್ಲಿರುವ ಕಲ್ಲುಗಳನ್ನು ಕರಗಿಸುತ್ತದೆ.

*ಮೂತ್ರಪಿಂಡಗಳಲ್ಲಿ ಕಲ್ಲುಗಳಾಗಿ ನೋವು ಕಾಣಿಸಿಕೊಂಡಿದ್ದರೆ ಈ ಜ್ಯೂಸ್ ಉತ್ತಮವಾದ ಹಾಗೂ ಶೀಘ್ರವಾಗಿ ಪರಿಣಾಮವನ್ನು ನೀಡುತ್ತದೆ.

ತೂಕ ಇಳಿಸಲು ನೆರವಾಗುತ್ತದೆ

ತೂಕ ಇಳಿಸಲು ನೆರವಾಗುತ್ತದೆ

ಬಾಳೆದಿಂಡಿನ ಅತ್ಯುತ್ತಮ ಪ್ರಯೋಜನವೆಂದರೆ ತೂಕ ಇಳಿಕೆ. ಇದರಲ್ಲಿರುವ ಪೋಷಕಾಂಶಗಳನ್ನು ಕರಗಿಸಲು ದೇಹ ಅತಿಹೆಚ್ಚು ಪ್ರಮಾಣದಲ್ಲಿ ಕೊಬ್ಬನ್ನು ಬಳಸುವುದರಿಂದ ತೂಕ ಇಳಿಯಲು ಸಾಧ್ಯವಾಗುತ್ತದೆ. ಜೊತೆಗೇ ಹೆಚ್ಚಿನ ಕ್ಯಾಲೋರಿಗಳನ್ನು ಬಳಸುವುದರಿಂದ ತೂಕ ಇನ್ನಷ್ಟು ಹೆಚ್ಚುವುದರಿಂದ ತಡೆಯುತ್ತದೆ.

ಹೊಟ್ಟೆಯಲ್ಲಿ ಆಮ್ಲೀಯತೆಯನ್ನು ಕಡಿಮೆಗೊಳಿಸುತ್ತದೆ

ಹೊಟ್ಟೆಯಲ್ಲಿ ಆಮ್ಲೀಯತೆಯನ್ನು ಕಡಿಮೆಗೊಳಿಸುತ್ತದೆ

ಹೊಟ್ಟೆಯಲ್ಲಿ ಆಮ್ಲೀಯತೆಯ ಕಾರಣ ಹೊಟ್ಟೆಯುರಿಯ ತೊಂದರೆ ಇರುವವರಿಗೆ ಬಾಳೆದಿಂಡಿನ ಜ್ಯೂಸ್ ಅತ್ಯುತ್ತಮ ಪರಿಹಾರವಾಗಿದೆ. ತುಂಬಾ ದಿನಗಳಿಂದ ವಿವಿಧ ಔಷಧಿಗಳಿಗೆ ಬಗ್ಗದ ತೊಂದರೆಯೂ ಈ ಜ್ಯೂಸಿಗೆ ಬಗ್ಗಿರುವುದನ್ನು ವೈದ್ಯರು ಗಮನಿಸಿದ್ದಾರೆ. ಜೊತೆಗೇ ಆಮ್ಲೀಯತೆಯ ಕಾರಣ ಉದ್ಭವವಾಗುವ ಎದೆಯುರಿ ಮತ್ತು ಹುಳಿತೇಗು ಮೊದಲಾದ ತೊಂದರೆಗಳೂ ನಿವಾರಣೆಯಾಗುತ್ತವೆ.

ಮಲಬದ್ಧತೆಯನ್ನು ನಿವಾರಿಸುತ್ತದೆ

ಮಲಬದ್ಧತೆಯನ್ನು ನಿವಾರಿಸುತ್ತದೆ

ಬಾಳೆದಿಂಡಿನ ಇನ್ನೊಂದು ಪ್ರಮುಖ ಪ್ರಯೋಜನವೆಂದರೆ ಮಲಬದ್ದತೆಯ ನಿವಾರಣೆ. ಈ ಜ್ಯೂಸ್ ನಲ್ಲಿ ಕರಗದ ನಾರು ಹೆಚ್ಚಿನ ಪ್ರಮಾಣದಲ್ಲಿರುವುದರಿಂದ ಮಲಬದ್ಧತೆಯಿಂದ ಮುಕ್ತಿ ದೊರಕುತ್ತದೆ. ನಿಯಮಿತ ಸೇವನೆಯಿಂದ ಮಲಬದ್ಧತೆ ದೂರಾಗುವ ಜೊತೆಗೇ ಸುಲಭ ವಿಸರ್ಜನೆಗೂ ನೆರವಾಗುತ್ತದೆ.

ಮಧುಮೇಹವನ್ನು ನಿಯಂತ್ರಿಸುತ್ತದೆ

ಮಧುಮೇಹವನ್ನು ನಿಯಂತ್ರಿಸುತ್ತದೆ

ದೇಹದಲ್ಲಿ ಉತ್ಪತ್ತಿಯಾದ ಇನ್ಸುಲಿನ್ ಬಳಕೆಯಾಗದೇ ವ್ಯರ್ಥವಾಗಿ ಹೋಗುವ ಟೈಪ್-2 ಮಧುಮೇಹಕ್ಕೆ ಬಾಳೆದಿಂಡಿನ ಜ್ಯೂಸ್ ಉತ್ತಮವಾದ ಪರಿಹಾರ ನೀಡುತ್ತದೆ. ಇದರಲ್ಲಿರುವ ಪೋಷಕಾಂಶಗಳು ಇನ್ಸುಲಿನ್ ಬಳಕೆಯಲ್ಲಿ ನೆರವಾಗಿ ಮಧುಮೇಹವನ್ನು ನಿಯ್ರಂತ್ರಣದಲ್ಲಿರಿಸಿಕೊಳ್ಳಲು ಸಾಧ್ಯವಾಗುತ್ತದೆ.

ಮೂತ್ರನಾಳದ ಸೋಂಕನ್ನು ನಿವಾರಿಸುತ್ತದೆ

ಮೂತ್ರನಾಳದ ಸೋಂಕನ್ನು ನಿವಾರಿಸುತ್ತದೆ

ಉರಿಮೂತ್ರಕ್ಕೆ ಮೂತ್ರನಾಳದೊಳಗಿನ ಸೋಂಕು ಮುಖ್ಯ ಕಾರಣವಾಗಿದೆ. ಇದಕ್ಕಾಗಿ ದಿನಕ್ಕೊಂದು ಅಥವಾ ಎರಡು ಲೋಟ (ಉರಿ ಹೆಚ್ಚಿರುವಾಗ) ಬಾಳೆದಿಂಡಿನ ಜ್ಯೂಸ್ ಕುಡಿಯುವುದರಿಂದ ಶೀಘ್ರವೇ ಉರಿ ಕಡಿಮೆಯಾಗುತ್ತದೆ.

ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ

ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ

ಬಾಳೆದಿಂಡಿನ ಜ್ಯೂಸ್ ನಲ್ಲಿ ಪೊಟ್ಯಾಶಿಯಂ ಪ್ರಮಾಣ ಅಧಿಕವಾಗಿರುವುದರಿಂದ ರೋಗ ನಿರೋಧಕ ಶಕ್ತಿ ಹೆಚ್ಚಲು ನೆರವಾಗುತ್ತದೆ.

ರಕ್ತದೊತ್ತಡವನ್ನು ನಿಯಂತ್ರಿಸುತ್ತದೆ

ರಕ್ತದೊತ್ತಡವನ್ನು ನಿಯಂತ್ರಿಸುತ್ತದೆ

ಅಧಿಕ ರಕ್ತದೊತ್ತಡದಿಂದ ಬಳಲುತ್ತಿರುವವರಿಗೆ ಬಾಳೆದಿಂಡಿನ ಜ್ಯೂಸ್ ಉತ್ತಮ ಆಹಾರ ಮತ್ತು ಔಷಧಿಯಾಗಿದೆ. ಅಧಿಕ ರಕ್ತದೊತ್ತಡಕ್ಕೆ ಕಾರಣವಾದ ಕೆಟ್ಟ ಕೊಲೆಸ್ಟ್ರಾಲ್, ನರಗಳ ಸೆಡೆತ ಮೊದಲಾದ ಕಾರಣಗಳಿಗೆ ಈ ಜ್ಯೂಸ್ ಉತ್ತಮ ಪರಿಹಾರ ನೀಡುತ್ತದೆ.

ದೇಹದಿಂದ ವಿಷಕಾರಿ ವಸ್ತುಗಳನ್ನು ಹೊರಹಾಕಲು ನೆರವಾಗುತ್ತದೆ

ದೇಹದಿಂದ ವಿಷಕಾರಿ ವಸ್ತುಗಳನ್ನು ಹೊರಹಾಕಲು ನೆರವಾಗುತ್ತದೆ

ವಾರಕ್ಕೊಮ್ಮೆ ಉಪವಾಸ ಮತ್ತು ಇಡಿಯ ಜೀರ್ಣಾಂಗಗಳನ್ನು ಖಾಲಿ ಮಾಡಲು ಆಯುರ್ವೇದ ಸೂಚಿಸುತ್ತದೆ. ಆದರೆ ಇದು ಅಷ್ಟು ಸುಲಭವಲ್ಲ. ಇದನ್ನು ಅನುಸರಿಸಲು ಬೆಳಿಗ್ಗೆ ಎದ್ದ ಬಳಿಕ ಖಾಲಿಹೊಟ್ಟೆಯಲ್ಲಿ ಒಂದು ಲೋಟ ಬಾಳೆದಿಂಡಿನ ಜ್ಯೂಸ್ ಕುಡಿಯಿರಿ. ಬಳಿಕ ಸಾಧ್ಯವಾದಷ್ಟು ದ್ರವ ಮತ್ತು ಸುಲಭ ಆಹಾರವನ್ನು ಮಾತ್ರ ಸೇವಿಸಿ.ಬಳಿಕ ಹೊಟ್ಟೆ ಪೂರ್ಣವಾಗಿ ಖಾಲಿಯಾಗುತ್ತದೆ. ವಾರಕ್ಕೊಮ್ಮೆ ಈ ವಿಧಾನವನ್ನು ಅನುಸರಿಸುವುದು ಆರೋಗ್ಯಕ್ಕೆ ಪೂರಕವಾಗಿದೆ.

ರಕ್ತ ಹೆಪ್ಪುಗಟ್ಟಲು ನೆರವಾಗುತ್ತದೆ

ರಕ್ತ ಹೆಪ್ಪುಗಟ್ಟಲು ನೆರವಾಗುತ್ತದೆ

ಗಾಯವಾದರೆ ಕೆಲವು ನಿಮಿಷಗಳಲ್ಲಿಯೇ ರಕ್ತ ಹೆಪ್ಪುಗಟ್ಟಬೇಕು. ಕೆಲವೊಮ್ಮೆ ವಿಟಮಿನ್ ಕೆ ಕೊರತೆಯಿಂದ ರಕ್ತ ಹೆಪ್ಪುಗಟ್ಟಲು ಹೆಚ್ಚಿನ ಸಮಯ ತೆಗೆದುಕೊಳ್ಳುತ್ತದೆ. ಬಾಳೆದಿಂಡಿನ ಜ್ಯೂಸ್ ಕುಡಿಯುವುದರಿಂದ ರಕ್ತ ಹೆಪ್ಪುಗಟ್ಟುವ ಕ್ಷಮತೆ ಹೆಚ್ಚುತ್ತದೆ. ಈ ಎಲ್ಲಾ ಕಾರಣಗಳಿಂದಾಗಿ ಬಾಳೆದಿಂಡಿನ ಜ್ಯೂಸ್ ಕುಡಿಯುವುದು ಆರೋಗ್ಯಕ್ಕೆ ಹಲವು ರೀತಿಯಲ್ಲಿ ಉತ್ತಮವಾಗಿದೆ.

English summary

Health Benefits Of Plantain Stem Juice

The ripe plantain is beneficial for health and so is the stem of the fruit. In India, there are many people who don't know the nutritional value of the plantain stem and it's juice. This stem juice is consumed to prevent diabetics, helps to beat constipation and all digestive problems
X
Desktop Bottom Promotion