For Quick Alerts
ALLOW NOTIFICATIONS  
For Daily Alerts

ಕಹಿ ಸಂಜೀವಿನಿ ಬೇವಿನ ಮಹತ್ವ ಮತ್ತು ಆರೋಗ್ಯದ ಮಹಾತ್ಮೆ

By Arshadh
|

ಜೀವನದ ಸುಖ ದುಃಖಗಳನ್ನು ಸಮಾನವಾಗಿ ಸ್ವೀಕರಿಸಲು ಸಾಂಕೇತಿಕವಾಗಿ ಬೇವು, ಬೆಲ್ಲವನ್ನು ಪ್ರತಿ ಯುಗಾದಿಯಂದು ಹಂಚಲಾಗುತ್ತದೆ. ಅಂದರೆ ಯುಗಾದಿಯಂದು ಮಾತ್ರ ಬೇವನ್ನು ಸೇವಿಸಿ ಎಂದರ್ಥವಲ್ಲ.

ವರ್ಷದ ಪ್ರತಿದಿನವೂ ಅಲ್ಪಪ್ರಮಾಣದಲ್ಲಿ ಬೇವನ್ನು ಸೇವಿಸುತ್ತಾ ಬರುವುದರಿಂದ ಆರೋಗ್ಯ ಉತ್ತಮಗೊಳ್ಳುತ್ತದೆ. ನಮ್ಮ ಪುರಾತನ ಗ್ರಂಥದಲ್ಲಿ ಇದರ ಉಲ್ಲೇಖವಿದೆ. ಇದರಲ್ಲಿ ninbinene, nimandial, nimbolide, nimbinen, nimbin, nimbidol, gedunin ಮೊದಲಾದ ಪೋಷಕಾಂಶಗಳಿದ್ದು ಕಹಿ ರುಚಿಗೆ ಕಾರಣವಾಗಿದೆ.

ಬೇವಿನ ಉತ್ತಮ ಗುಣಗಳಲ್ಲಿ ಉರಿಯೂತ ನಿವಾರಕ, ಬ್ಯಾಕ್ಟೀರಿಯಾ ನಿವಾರಕ ಮತ್ತು ಶಿಲೀಂಧ್ರ ನಿವಾರಕಗಳೂ ಸೇರಿವೆ. ಈ ಗುಣಗಳು ನಿಮ್ಮ ಆರೋಗ್ಯಕ್ಕೆ ಹೇಗೆ ಉತ್ತಮ ಎಂಬ ಇಪ್ಪತ್ತು ಮಾಹಿತಿಗಳನ್ನು ಇಲ್ಲಿ ನೀಡಲಾಗಿದೆ...

ಯಕೃತ್‌ನ (ಲಿವರ್) ಸಮಸ್ಯೆಗೆ ರಾಮಬಾಣ

ಯಕೃತ್‌ನ (ಲಿವರ್) ಸಮಸ್ಯೆಗೆ ರಾಮಬಾಣ

ಬೇವಿನ ಎಲೆಗಳನ್ನು ಸೇವಿಸುವುದರಿಂದ ಯಕೃತ್‌ನ ಕ್ಷಮತೆ ಹೆಚ್ಚುತ್ತದೆ, ರೋಗ ನಿರೋಧಕ ಶಕ್ತಿಯೂ ಹೆಚ್ಚುತ್ತದೆ. ರಕ್ತದಿಂದ ವಿಷಕಾರಿ ವಸ್ತುಗಳನ್ನು ಹೊರಹಾಕಲು ನೆರವಾಗುತ್ತದೆ. ಜೊತೆಗೇ ಜೀರ್ಣ ಮತ್ತು ಶ್ವಾಸವ್ಯವಸ್ಥೆಯನ್ನೂ ಉತ್ತಮಗೊಳಿಸುತ್ತದೆ.

ಬೇವಿನ ಎಣ್ಣೆ

ಬೇವಿನ ಎಣ್ಣೆ

ಬೇವಿನ ಎಣ್ಣೆ ಮತ್ತು ಬೇವಿನ ರಸಗಳನ್ನು ಸೇವಿಸುವುದರಿಂದ ಅವು ದೇಹದಲ್ಲಿದ್ದ ಬ್ಯಾಕ್ಟೀರಿಯಾಗಳನ್ನು ಹೀರಿ ದೇಹದಿಂದ ವಿಸರ್ಜಿಸಲ್ಪಡುತ್ತವೆ. ಬೇವಿನ ಎಲೆಗಳನ್ನು ಅರೆದ ಲೇಪನವನ್ನು ಗಾಯಗಳ ಮೇಲೆ ಹಚ್ಚುವುದರಿಂದ ಅವು ಬೇಗನೇ ಮಾಗುತ್ತವೆ. ಸಿಡುಬು (chicken pox), ಅಮ್ಮ (small pox), ದದ್ದು, ಕಾಲಿನ ಮೊಳೆ ಮೊದಲಾದ ತೊಂದರೆಗಳು ಬೇವಿನಿಂದ ಬೇಗನೇ ಕೊನೆಗೊಳ್ಳುತ್ತವೆ. ಸುಲಭವಾಗಿ ಬಗ್ಗದ ಹರ್ಪೆಸ್ ವೈರಸ್ (herpes virus) ಸಹಾ ಬೇವಿಗೆ ಬಗ್ಗುತ್ತದೆ.

ರಕ್ತ ಶುದ್ಧೀಕರಣಗೊಳ್ಳುತ್ತದೆ

ರಕ್ತ ಶುದ್ಧೀಕರಣಗೊಳ್ಳುತ್ತದೆ

ಬೇವಿನ ಸೇವನೆಯಿಂದ ರಕ್ತ ಶುದ್ಧೀಕರಣಗೊಳ್ಳುತ್ತದೆ ಹಾಗೂ ರಕ್ತದೊತ್ತಡ ಕಡಿಮೆಯಾಗುತ್ತದೆ. ರಕ್ತದಲ್ಲಿರುವ ವಿಷಕಾರಿ ವಸ್ತುಗಳನ್ನು ಹೊರದಬ್ಬಲ್ಪಡುವುದರಿಂದ ರಕ್ತಸಂಚಾರ ಉತ್ತಮಗೊಳ್ಳುತ್ತದೆ ಹಾಗೂ ಆರೋಗ್ಯವೂ ಸುಧಾರಿಸುತ್ತದೆ.

ವೃದ್ಧಾಪ್ಯ

ವೃದ್ಧಾಪ್ಯ

ವೃದ್ಧಾಪ್ಯ ಬೇಗನೇ ಆವರಿಸಲು ಕಾರಣವಾಗುವ free radical ಎಂಬ ಕಣಗಳನ್ನು ಕೊಲ್ಲುವುದರಿಂದ ತಾರುಣ್ಯ ಬಹುಕಾಲ ಉಳಿಯುತ್ತದೆ.

ಚರ್ಮರೋಗದ ಸಮಸ್ಯೆಗೆ

ಚರ್ಮರೋಗದ ಸಮಸ್ಯೆಗೆ

ಬೇವಿನ ಎಣ್ಣೆಯನ್ನು ಸೇರಿಸಿದ ಬಿಸಿಬಿಸಿ ನೀರಿನಿಂದ ಸ್ನಾನ ಮಾಡುವುದರಿಂದ ವಿವಿಧ ಚರ್ಮರೋಗಗಳು, ತುರಿಕೆ, ಹುಳಕಡ್ಡಿ ಮೊದಲಾದ ತೊಂದರೆಗಳು ನಿವಾರಣೆಯಾಗುತ್ತದೆ. ಜೊತೆಗೇ ಶೀತ ಮತ್ತು ಎಕ್ಸಿಮಾದಂತಹ ಚರ್ಮರೋಗವೂ ವಾಸಿಯಾಗುತ್ತದೆ.

ಕೆಟ್ಟ ಕೊಲೆಸ್ಟ್ರಾಲ್ ನಿವಾರಿಸುತ್ತದೆ

ಕೆಟ್ಟ ಕೊಲೆಸ್ಟ್ರಾಲ್ ನಿವಾರಿಸುತ್ತದೆ

ರಕ್ತನಾಳಗಳಲ್ಲಿ ಸಂಗ್ರಹವಾಗಿದ್ದ ಕೆಟ್ಟ ಕೊಲೆಸ್ಟ್ರಾಲ್ ನಿವಾರಿಸುವ ಮೂಲಕ ಹಾಗೂ ರಕ್ತನಾಳಗಳು ಸೆಟೆದುಕೊಂಡು ಒಳಭಾಗ ಕಿರಿದಾಗಿದ್ದರೆ ಅವನ್ನು ಸಡಿಲಗೊಳಿಸುವ ಮೂಲಕ ರಕ್ತಸಂಚಾರವನ್ನು ಸುಗಮಗೊಳಿಸುವ ಮೂಲಕ ಹೃದಯದ ಮೇಲೆ ಬೀಳುವ ಒತ್ತಡ ಕಡಿಮೆಯಾಗುತ್ತದೆ.

ಮಲೇರಿಯಾ

ಮಲೇರಿಯಾ

ಮಲೇರಿಯಾ ಜ್ವರವನ್ನು ಕಡಿಮೆಗೊಳಿಸಲು ಬೇವಿನಲ್ಲಿರುವ ಜೆಡ್ಯುನಿನ್ (Gedunin) ಎಂಬ ರಾಸಾಯನಿಕ ನೆರವಾಗುತ್ತದೆ. ಹೇಗೆಂದರೆ ಬೇವಿನ ಎಲೆಗಳನ್ನು ಜಜ್ಜಿ ಮನೆಯ ಸುತ್ತ ಮುತ್ತ ಹರಡುವುದರಿಂದ ಆ ವಾಸನೆಗೆ ಸೊಳ್ಳೆಗಳು ಮೊಟ್ಟೆ ಇಡಲಾಗುವುದಿಲ್ಲ.

ಕಾಡುವ ಸೊಂಕಿನ ಸಮಸ್ಯೆಗೆ

ಕಾಡುವ ಸೊಂಕಿನ ಸಮಸ್ಯೆಗೆ

ಹಲವು ಶಿಲೀಂಧ್ರಗಳು ಉಗುರುಗಳ ಒಳಭಾಗದಲ್ಲಿ, ಚರ್ಮದಡಿ ಮತ್ತು ಕೂದಲ ಬುಡದಲ್ಲಿ ಸೋಂಕು ಹರಡುತ್ತವೆ. ಇದನ್ನು ತಡೆಗಟ್ಟಲು ಬೇವಿನ ಎಣ್ಣೆ ಅತ್ಯುತ್ತಮವಾಗಿದೆ. ಪಾದದಲ್ಲಿ ಆಗುವ ವ್ರಣ, ಕೈಗಳಲ್ಲಿ ಆಗುವ ವ್ರಣ ಮತ್ತು ಚರ್ಮ ಸುಲಿಯುವಿಕೆಗೂ ಬೇವಿನೆಣ್ಣೆ ಉತ್ತಮವಾಗಿದೆ.

ಕ್ಯಾನ್ಸರ್‌ನ್ನು ನಿಯಂತ್ರಸಲು

ಕ್ಯಾನ್ಸರ್‌ನ್ನು ನಿಯಂತ್ರಸಲು

ನಿಯಮಿತವಾಗಿ ಬೇವಿನ ಎಲೆಗಳನ್ನು ಹಸಿಯಾಗಿ ಸೇವಿಸುತ್ತಾ ಬಂದಿರುವವರಲ್ಲಿ ಕ್ಯಾನ್ಸರ್ ನ ಸಂಭವ ಕಡಿಮೆ. ಬೇಮಿನ ಮರದ ತೊಗಟೆಯಲ್ಲಿ ಕಂಡುಬರುವ Limonoids ಮತ್ತು polysaccharides ಎಂಬ ರಾಸಾಯನಿಕಗಳು ಕ್ಯಾನ್ಸರ್ ಮತ್ತು ಗಡ್ಡೆಯುಂಟಾಗುವುದನ್ನು ತಡೆಯುತ್ತದೆ.

ಸಂಧಿವಾತಕ್ಕೆ

ಸಂಧಿವಾತಕ್ಕೆ

ಸಂಧಿವಾತಕ್ಕೆ ಬೇವಿನ ಎಲೆ ಮತ್ತು ಬೇವಿನ ತೊಗಟೆಯನ್ನು ಅರೆದು ತಯಾರಿಸಿದ ಲೇಪನ ಉತ್ತಮ ಪರಿಹಾರ ನೀಡುತ್ತದೆ. ಸಂದುಗಳಲ್ಲಿ ಬಾವು, ನೋವು ಸಹಾ ಕಡಿಮೆಯಾಗುತ್ತದೆ.

ಬೇವಿನ ಎಣ್ಣೆಯ ಮಸಾಜ್

ಬೇವಿನ ಎಣ್ಣೆಯ ಮಸಾಜ್

ಬೇವಿನ ಎಣ್ಣೆಯಿಂದ ಮೈಯನ್ನು ಮಸಾಜ್ ಮಾಡುವುದರಿಂದ ಕೆಳಬೆನ್ನಿನ ನೋವು, ಸಂಧಿವಾತ, ಸ್ನಾಯುಗಳಲ್ಲಿ ನೋವು ಮೊದಲಾದ ವಿವಿಧ ನೋವುಗಳು ಕಡಿಮೆಯಾಗುತ್ತವೆ.

 ಚರ್ಮದ ಕಾಂತಿಗೆ ಸಹಕಾರಿ

ಚರ್ಮದ ಕಾಂತಿಗೆ ಸಹಕಾರಿ

ಬೇವಿನ ಎಲೆಗಳಲ್ಲಿ ಚರ್ಮಕ್ಕೆ ಆರ್ದ್ರತೆ ನೀಡುವ ಗುಣಗಳಿರುವುದರಿಂದ ಚರ್ಮ ಕಾಂತಿಯುಕ್ತವಾಗಿರಲು ಮತ್ತು ಸೌಮ್ಯವಾಗಿರಲು ನೆರವಾಗುತ್ತದೆ.

ತ್ವಚೆಯ ಕಲೆ ನಿವಾರಿಸಲು

ತ್ವಚೆಯ ಕಲೆ ನಿವಾರಿಸಲು

ಗಾಯ ಮತ್ತು ಮೊಡವೆಗಳು ಮಾಗಿದ ಬಳಿಕ ಚರ್ಮದಲ್ಲಿ ಉಳಿಯುವ ಕಲೆಗಳನ್ನು ನಿವಾರಿಸಲು ಬೇವು ನೆರವಾಗುತ್ತದೆ. ಅಲ್ಲದೇ ಮುಖದಲ್ಲಿ ಇನ್ನಷ್ಟು ಮೊಡವೆಗಳಾಗದಂತೆ ತಡೆಯುತ್ತದೆ. ಚಿಕ್ಕಪುಟ್ಟ ಗಾಯಗಳಿಗೆ ಬೇವಿನಎಲೆಗಳ ರಸ ಅಥವಾ ಎಲೆಗಳನ್ನು ಅರೆದ ಲೇಪನವನ್ನು ನೇರವಾಗಿ ಬಳಸಬಹುದು.

ಮೊಡವೆಗಳನ್ನು ನಿಯಂತ್ರಿಸಲು

ಮೊಡವೆಗಳನ್ನು ನಿಯಂತ್ರಿಸಲು

ನಿತ್ಯವೂ ಸ್ನಾನ ಮಾಡುವ ನೀರಿಗೆ ಬೇವಿನ ಎಣ್ಣೆಯ ಕೆಲವು ತೊಟ್ಟುಗಳನ್ನು ಸೇರಿಸುವುದರಿಂದ ತ್ವಚೆಯ ದುರ್ಗಂಧ, ಸೋಂಕುಗಳು ನಿವಾರಣೆಯಾಗುತ್ತದೆ ಹಾಗೂ ಚರ್ಮದಲ್ಲಿ ದದ್ದು, ಮೊಡವೆಗಳು ಬರದಂತೆ ತಡೆಯುತ್ತದೆ.

ಮುಖದ ಕಾಂತಿ ಹೆಚ್ಚಿಸಲು

ಮುಖದ ಕಾಂತಿ ಹೆಚ್ಚಿಸಲು

ಬೇವಿನ ಎಲೆಗಳನ್ನು ಹಾಕಿ ಕುದಿಸಿದ ನೀರನ್ನು ಅದ್ದಿದ ಬಟ್ಟೆಯನ್ನು ಇಡಿಯ ರಾತ್ರಿ ಮುಖದ ಮೇಲಿರಿಸುವುದರಿಂದ ಮುಖದ ಕಾಂತಿ ಹೆಚ್ಚುತ್ತದೆ. ಇದೇ ನೀರನ್ನು ಕೂದಲು ಉದುರುವುದನ್ನು ತಡೆಯಲು ಹಾಗೂ ತಲೆಹೊಟ್ಟಿನ ನಿವಾರಣೆಗೂ ಬಳಸಬಹುದು.

English summary

Health Benefits of Neem

Neem is a magic herb. With naturally occurring compounds like ninbinene, nimandial, nimbolide, nimbinen, nimbin, nimbidol, gedunin etc. that have strong anti-inflammatory, anti-bacterial and anti-fungal properties. Here is a list of top health benefits provided by Neem
X
Desktop Bottom Promotion