For Quick Alerts
ALLOW NOTIFICATIONS  
For Daily Alerts

ಪದೇ ಪದೇ ಕಾಡುವ ಕಣ್ಣಿನ ನೋವಿಗೆ ಕಾರಣ ತಿಳಿದುಕೊಳ್ಳಿ

By Super
|

ನಮ್ಮ ಶರೀರದಲ್ಲಿ ಅತಿ ಸೂಕ್ಷ್ಮವಾದ ಮತ್ತು ಅಮೂಲ್ಯವಾದ ಅಂಗಗಳೆಂದರೆ ಕಣ್ಣುಗಳು. ದೇಹದ ಯಾವುದೇ ಭಾಗಕ್ಕೆ ಪೆಟ್ಟಾದರೂ ಸಹಿಸುವ ನಾವು ಕಣ್ಣುಗಳಿಗೆ ಯಾವುದೇ ತೊಂದರೆ ಸಹಿಸುವುದಿಲ್ಲ. ಹಾಗಾಗಿ ಈ ಅಂಗಗಳನ್ನು ಅತ್ಯಂತ ಜತನದಿಂದ ಕಾಪಾಡಿಕೊಳ್ಳಬೇಕು.

ಆದರೆ ಇಂದಿನ ವೇಗದ ಜೀವನದಲ್ಲಿ ಕಣ್ಣುಗಳಿಗೆ ಗರಿಷ್ಟ ಒತ್ತಡ ನೀಡಿ ದಿನದ ಕೆಲಸವನ್ನು ಮುಗಿಸಲೇಬೇಕಾದ ಅವಶ್ಯಕತೆ ಎಲ್ಲರಿಗೂ ಇದೆ. ಜನಬಿನಿಡ ರಸ್ತೆಗಳ ಕಾರಣ ಒಂದು ಕ್ಷಣವೂ ವಿರಾಮ ನೀಡದೇ ಎಚ್ಚರಿಕೆಯಿಂದ ತಡರಾತ್ರಿಯವರೆಗೂ ಕಣ್ಣುಗಳಿಗೆ ಕೆಲಸ ನೀಡುವ ನಿಬಿಡತೆ, ಕುಂಠಿತವಾದ ನಿದ್ದೆ, ದಿನವಿಡೀ ಕಂಪ್ಯೂಟರ್ ಮಾನಿಟರ್ ವೀಕ್ಷಿಸುವುದು, ಕಡಿಮೆ ಬೆಳಕಿನಲ್ಲಿ ಅಥವಾ ಹೆಚ್ಚು ಬೆಳಕಿನಲ್ಲಿ ಕೆಲಸ ಮಾಡಬೇಕಾಗಿ ಬರುವುದು, ಸತತವಾಗಿ ಚಿಕ್ಕ ಅಕ್ಷರಗಳನ್ನು ಓದುವುದು ಮೊದಲಾದವು ಅನಿವಾರ್ಯವಾದ ಒತ್ತಡಗಳಾದರೆ ಕಣ್ಣಿಗೆ ಅಲರ್ಜಿಯುಂಟುವಾಡುವ ವಸ್ತುಗಳ ಜೊತೆ ಕೆಲಸ ಮಾಡಬೇಕಾಗಿ ಬರುವುದು, ವೈದ್ಯರು ನೀಡಿದ ಕನ್ನಡಕದ ಸಂಖ್ಯೆಯಲ್ಲಿ ಏರುಪೇರು, ಕಣ್ಣಿನಲ್ಲಿ ಯಾವುದೋ ಕಾರಣದಿಂದಾದ ಕಣ್ಣುಗಳು ಅಗತ್ಯಕ್ಕಿಂತ ಹೆಚ್ಚು ಶ್ರಮಪಡಬೇಕಾಗಿ ಬರುತ್ತದೆ. ಈ ಶ್ರಮದ ಕಾರಣ ಕಣ್ಣುಗಳು ಹೆಚ್ಚು ಆಯಾಸಗೊಳ್ಳುವುದರ ಜೊತೆಗೆ ಅನೇಕ ರೀತಿಯ ತೊಂದರೆಗಳಿಗೆ ಗುರಿಯಾಗುತ್ತದೆ, ಇದರಿಂದಾಗಿ ಯುವಜನತೆಯಲ್ಲಿ ಹೆಚ್ಚಾಗಿ ಕಣ್ಣು ನೋವು ಕಾಣಿಸಿಕೊಳ್ಳುತ್ತದೆ. ಈಗೆಲ್ಲಾ ಚಿಕ್ಕ ಪ್ರಾಯದಲ್ಲಿಯೇ ದೃಷ್ಟಿ ದೋಷ, ಏಕೆ?

ಆದರೆ ವಿಪರ್ಯಾಸವೇನೆಂದರೆ ನಮ್ಮಲ್ಲಿ ಅನೇಕರು ಇಂತಹ ಸಮಸ್ಯೆಗಳನ್ನು ತಲೆಕೆಡಿಸಿಕೊಳ್ಳದೇ ಸಣ್ಣ ಪ್ರಾಯದಲ್ಲೇ ದೃಷ್ಟಿಯನ್ನು ಕಳೆದುಕೊಳ್ಳುತ್ತಾರೆ. ಬನ್ನಿ ಇಂದು ಬೋಲ್ಡ್ ಸ್ಕೈ ಸಾಮಾನ್ಯವಾಗಿ ಕಣ್ಣು ನೋವು ಬರುವುದಕ್ಕೆ ಕಾರಣವೇನು ಎಂಬುದರ ಕುರಿತು ಚರ್ಚಿಸಲಿದೆ ಮುಂದೆ ಓದಿ...

ಅಕ್ಯುಲಾರ್ (ಕಣ್ಣಿನ) ನೋವು

ಅಕ್ಯುಲಾರ್ (ಕಣ್ಣಿನ) ನೋವು

ಇದು ನಿಮ್ಮ ಕಣ್ಣುಗಳ ಮೇಲ್ಮೈಭಾಗದಲ್ಲಿ ಸಂಭವಿಸುತ್ತದೆ. ಹಾಗಾದಾಗ ಕಣ್ಣು ಕೆರೆದುಕೊಳ್ಳುವಂತೆ, ಉರಿ ಅಥವಾ ಕೆರೆದುಕೊಳ್ಳುವ ಸಂವೇದನೆಗೆ ಗುರಿಯಾಗಬಹುದು. ಇದು ಸಾಮಾನ್ಯವಾಗಿ ನಿಮ್ಮ ಕಣ್ಣಿಗೆ ಗಾಯವಾದಾಗ ಸಂಭವಿಸಬಹುದು. ಇಂತಹ ಪರಿಸ್ಥಿತಿಗೆ ಐ ಡ್ರಾಪ್ಸ್ (ಕಣ್ಣಿನ ಡ್ರಾಪ್ಸ್) ಹಾಕಿಕೊಳ್ಳುವ ಮೂಲಕ ಸುಲಭವಾಗಿ ಚಿಕಿತ್ಸೆ ನೀಡಬಹುದು.

ಕಕ್ಷೀಯ ನೋವು

ಕಕ್ಷೀಯ ನೋವು

ಇದು ಕಣ್ಣುಗಳೊಳಗೆ ಇರಿಯುವ ಅಥವಾ ಹಿಂಸಾತ್ಮಕ ಅನುಭವಗಳಿಂದ ಕಾಣಬಹುದು. ಹೀಗಾದರೆ ತಕ್ಷಣ ನೀವು ಕಣ್ಣಿನ ವೈದ್ಯರನ್ನು ಕಾಣುವುದು ಅತ್ಯಂತ ಮುಖ್ಯ, ಏಕೆಂದರೆ ಕೆಲವು ಗಂಭೀರ ಸ್ಥಿತಿಯ ಕಾರಣಗಳಿಂದ ಕಕ್ಷೀಯ ನೋವು ಬಂದಿರುವ ಸಾಧ್ಯತೆ ಇರುತ್ತದೆ.

ವಾತಾವರಣದ ಕಲ್ಮಶಗಳಿಂದ

ವಾತಾವರಣದ ಕಲ್ಮಶಗಳಿಂದ

ವಾತಾವರಣದ ಧೂಳು ಅಥವ ಕೊಳಕು ನಿಮ್ಮ ಕಣ್ಣಿಗೆ ಬಿದ್ದಾಗ ಕೂಡ ಒಂದು ರೀತಿಯ ಸಾಮಾನ್ಯ ನೋವು ಕಾಣುತ್ತದೆ. ಹೀಗೆ ಧೂಳು ಅಥವ ಕಸ ಕಣ್ಣೊಳಗೆ ಹೋಗಿ ಸೇರಿಕೊಂಡಾಗ ಕಣ್ಣು ಕೆರಳುವುದು ಮತ್ತು ಕೆಂಪಾಗುವುದಕ್ಕೆ ಕಾರಣವಾಗಿ ಕಣ್ಣಿನಿಂದ ನೀರು ಸುರಿಯುದಕ್ಕೆ ಕಾರಣವಾಗುತ್ತದೆ.ಇಂತಹ ಸಂದರ್ಭದಲ್ಲಿ ಕೂಡಲೇ ವೈದ್ಯರ ಸಲಹೆ ಪಡೆದುಕೊಳ್ಳುವುದು ಸೂಕ್ತ.

ಕಣ್ಣುರೆಪ್ಪೆಯ ಕುಟಿಕೆ ಅಥವಾ ಕಣ್ಣೆವೆಯ ಮೇಲಿನ ಕುರು

ಕಣ್ಣುರೆಪ್ಪೆಯ ಕುಟಿಕೆ ಅಥವಾ ಕಣ್ಣೆವೆಯ ಮೇಲಿನ ಕುರು

ಮೇದಸ್ಸಿನ ಗ್ರಂಥಿಗಳ ತಡೆಯಿಂದ ಸಂಭವಿಸುವ ಕಣ್ಣಿನ ರೆಪ್ಪೆಯ ಮೇಲೆ ಕಂಡು ಬರುವ ಕೆಂಪು ಗುಳ್ಳೆಗೆ ಸ್ಟೈ ಎಂದು ಕರೆಯುತ್ತಾರೆ. ಇದು ಸಾಮಾನ್ಯವಾಗಿ ಕಣ್ಣು ರೆಪ್ಪೆಯ ಒಳಗಡೆ ಅಥವಾ ಕೊನೆಯಲ್ಲಿ ಕಾಣುತ್ತದೆ.ಈ ಪರಿಸ್ಥಿತಿ ಅಷ್ಟೊಂದು ತೀವ್ರವಲ್ಲ ಮತ್ತು ತಾನಾಗಿಯೇ ಕೆಲವು ದಿನಗಳಲ್ಲಿ ಕಡಿಮೆಯಾಗುತ್ತದೆ. ಇಂತಹ ಸ್ಥಿತಿಯಲ್ಲಿ ಕಣ್ಣು ಅತ್ಯಂತ ಸೂಕ್ಷ್ಮವಾಗಿಬಿಡುತ್ತದೆ ಮತ್ತು ನೀವು ಸ್ವಲ್ಪ ನೋವನ್ನು ಕೂಡ ಅನುಭವಿಸಬಹುದು. ಹಾಗೆ ಕಣ್ಣುಗುಡ್ಡೆ ಕಾಣಿಸಿಕೊಂಡಾಗ ಕಣ್ಣನ್ನು ಆಗಾಗ್ಗೆ ಮುಟ್ಟಬಾರದು ಮತ್ತು ಅದು ತಾನಾಗಿಯೇ ಕಡಿಮೆಯಾಗಲು ಬಿಟ್ಟುಬಿಡಿ.

ಕಾಂಟಾಕ್ಟ್ ಲೆನ್ಸ್ ಬಳಕೆಯಿಂದಾಗುವ ಉರಿತ

ಕಾಂಟಾಕ್ಟ್ ಲೆನ್ಸ್ ಬಳಕೆಯಿಂದಾಗುವ ಉರಿತ

ನೀವು ಕಾಂಟಾಕ್ಟ್ ಲೆನ್ಸ್ ನಿಯಮಿತವಾಗಿ ಬಳಸುವರಾಗಿದ್ದರೆ ಮತ್ತು ದಿನವಿಡೀ ಬಳಸುತ್ತಿದ್ದರೆ ನಿಮಗೆ ಕಣ್ಣುಗಳಲ್ಲಿ ಉರಿ ಉಂಟಾಗುವುದು ಖಚಿತ. ಕಾಂಟಾಕ್ಟ್ ಲೆನ್ಸನ್ನು ಮಧ್ಯೆ ಮಧ್ಯೆ ಶುಚಿಗೊಳಿಸದಿದ್ದರೆ ನಿಮ್ಮ ಕಣ್ಣುರಿತ ಇಮ್ಮಡಿಯಾಗುತ್ತದೆ. ಕಣ್ಣುರಿತದಿಂದ ಕಣ್ಣು ನೋವು, ಸೋಂಕು ತಗಲುವುದಕ್ಕೆ ಕಾರಣವಾಗುತ್ತದೆ. ಹಳೆಯ ಮತ್ತು ಅವಧಿ ಮುಗಿದಿರುವ ಕಾಂಟಾಕ್ಟ್ ಲೆನ್ಸ್ ಬಳಸಿದಾಗ್ಯೂ ಕಣ್ಣುಗಳಲ್ಲಿ ನೋವು ಕಾಣಿಸಿಕೊಳ್ಳಬಹುದು.

ಗ್ಲುಕೋಮಾ

ಗ್ಲುಕೋಮಾ

ಗ್ಲುಕೋಮಾ ಅತ್ಯಂತ ಗಂಭೀರ ಪರಿಸ್ಥಿತಿ ಮತ್ತು ಅದರಿಂದ ಕಣ್ಣಿನೊಳಗೆ ಒತ್ತಡ ಹೆಚ್ಚಾಗಿ ಕಣ್ಣಿನ ನರಕ್ಕೆ ಹಾನಿಯುಂಟಾಗುತ್ತದೆ. ಅದರ ಪರಿಣಾಮದಿಂದ ಕಣ್ಣುಗಳಿಗೆ ಕಡುಯಾತನೆಯಾಗುತ್ತದೆ ಮತ್ತು ಅದಕ್ಕೆ ಚಿಕಿತ್ಸೆ ಕೊಡದಿದ್ದರೆ ದೃಷ್ಟಿ ನಷ್ಟವಾಗಲು ಕಾರಣವಾಗಬಹುದು.

ಸಾಕಷ್ಟು ವಿಶ್ರಾಂತಿ

ಸಾಕಷ್ಟು ವಿಶ್ರಾಂತಿ

ನೀವು ಯಾವುದೇ ರೀತಿಯ ಕಿರಿಕಿರಿ ಅಥವಾ ಕಣ್ಣಿನಲ್ಲಿ ನೋವು ಅನುಭವಿಸಿದ ಪಕ್ಷದಲ್ಲಿ ವಿಶ್ರಾಂತಿ ತೆಗೆದುಕೊಳ್ಳುವುದು ಅತ್ಯಂತ ಅಗತ್ಯ ಮತ್ತು ಕಣ್ಣುಗಳಿಗೆ ಆಯಾಸಮಾಡಬಾರದು. ಟೆಲಿವಿಷನ್ ನೋಡುವುದನ್ನು, ಕಂಪ್ಯೂಟರ್ ಅಥವಾ ಮೊಬೈಲ್ ಫೋನ್ ಬಳಸುವುದನ್ನು ತಪ್ಪಿಸಬೇಕು, ಇಲ್ಲದಿದ್ದಲ್ಲಿ ನಿಮ್ಮ ಕಣ್ಣಿನ ಪರಿಸ್ಥಿತಿ ಮತ್ತಷ್ಟೂ ಹದಗೆಡುತ್ತದೆ.

ನೀರಿನ ಚಿಕಿತ್ಸೆ

ನೀರಿನ ಚಿಕಿತ್ಸೆ

ನಿಮ್ಮ ಕಣ್ಣುಗಳನ್ನು ಸ್ವಚ್ಛಗೊಳಿಸಲು ಮತ್ತು ಕಿರಿಕಿರಿಯಾಗುವುದನ್ನು ಶಮನಗೊಳಿಸಲು ತಣ್ಣಗಿರುವ ನೀರನ್ನು ಕಣ್ಣುಗಳೊಳಗೆ ಮೆಲ್ಲಗೆ ಎರಚುಕೊಳ್ಳಿ. ನಿಮ್ಮ ಕಣ್ಣಿನ ನೋವು ಅದಾಗಿಯೇ ಕಡಿಮೆಯಾಗದೆ ಮರುಕಳಿಸುತ್ತಿದ್ದರೆ ನೀವು ಕಣ್ಣಿನ ವೈದ್ಯರನ್ನು ಭೇಟಿ ಮಾಡುವುದು ಅತ್ಯಂತ ಸೂಕ್ತ ಮತ್ತು ಕಣ್ಣುಗಳ ಸಂಪೂರ್ಣ ಪರಿಶೀಲನೆ ಮಾಡಿಸಿಕೊಳ್ಳಿ. ಸ್ವತಃ ನೀವೇ ಔಷಧಿಗಳನ್ನು ಬಳಸುವುದನ್ನು ತಪ್ಪಿಸಿ.

English summary

Have eye pain? Here’s what you should know

If you experience pain or any kind of discomfort in your eyes, you should not neglect it because if the condition worsens, you might even lose your eyesight.Here are some of the common reasons for eye pain. As eye sight is important, it is very important to find out the real reason for eye pain.
X
Desktop Bottom Promotion