For Quick Alerts
ALLOW NOTIFICATIONS  
For Daily Alerts

ಅರೆ ವಾಹ್! ಹೊಟ್ಟೆಯ ಕೊಬ್ಬು ಕರಗಿಸಲು ಅದ್ಭುತ ಹಸಿರು ಜ್ಯೂಸ್‌ಗಳು

By Super
|

ನಮ್ಮ ದೇಹದಲ್ಲಿ ಅತ್ಯಂತ ಕಷ್ಟಕರವಾಗಿ ಮತ್ತು ಅತ್ಯಂತ ಕಡೆಯದಾಗಿ ಕರಗುವ ಕೊಬ್ಬು ಎಂದರೆ ಹೊಟ್ಟೆ ಮತ್ತು ಸೊಂಟದ ಕೊಬ್ಬು. ಇದನ್ನು ಕರಗಿಸುವುದು ಅಷ್ಟು ಸುಲಭವಲ್ಲ. ಕಠಿಣ ಪರಿಶ್ರಮದ ಬಳಿಕ ಕರಗಿದ್ದ ಹೊಟ್ಟೆ ಒಂದು ಸ್ವಲ್ಪ ಸಡಿಲ ಬಿಟ್ಟರೆ ಮತ್ತು ಶೀಘ್ರದಲ್ಲಿಯೇ ತುಂಬಿಕೊಂಡು ನಿಮ್ಮ ಕನ್ನಡಿಯನ್ನೇ ಪರಿಹಾಸ್ಯ ಮಾಡುತ್ತದೆ.

ಇದಕ್ಕೆ ಒಂದು ಪರ್ಯಾಯ ಮಾರ್ಗವಿದೆ. ಮಿಶ್ರಾಹಾರಿಗಳಾದ ನಮಗೆ ಹಸಿರು ಸೊಪ್ಪುಗಳನ್ನು ಜೀರ್ಣಿಸಲು ಸಾಧ್ಯವಿಲ್ಲ. ಏಕೆಂದರೆ ಹಸಿರು ಸೊಪ್ಪಿನಲಿರುವ ಸೆಲ್ಯುಲೋಸ್ ಎಂಬ ವಸ್ತುವನ್ನು ಕರಗಿಸಬಲ್ಲ ದ್ರವ ನಮ್ಮ ಹೊಟ್ಟೆಯಲ್ಲಿಲ್ಲ. ನಿಮ್ಮ ದೇಹದ ಕೊಬ್ಬು ಕರಗಿಸುವ ಅತ್ಯದ್ಭುತ ಸೂಪರ್ ಫುಡ್

ಆದರೆ ಈ ಸೆಲ್ಲ್ಯುಲೋಸ್ ಕಡಿಮೆ ಪ್ರಮಾಣದಲ್ಲಿರುವ ಹಣ್ಣಿನ ಸಿಪ್ಪೆ, ಎಲೆ ಮೊದಲಾದವುಗಳನ್ನು ನಾವು ಜೀರ್ಣಿಸಿಕೊಳ್ಳಬಲ್ಲೆವು. ಉದಾಹರಣೆಗೆ ಸೌತೆಕಾಯಿ ಸಿಪ್ಪೆ. ಆದರೆ ಇದನ್ನು ಜೀರ್ಣಿಸಿಕೊಳ್ಳಲು ಹೆಚ್ಚಿನ ಕೊಬ್ಬು ಅಗತ್ಯವಿದೆ. ಅಂತೆಯೇ ವಿವಿಧ ಹಸಿರು ಹಣ್ಣಿನ ರಸ, ತರಕಾರಿಗಳನ್ನು ಸೇವಿಸುವ ಮೂಲಕ ನಾವು ಕೊಬ್ಬನ್ನು ಹೆಚ್ಚು ಹೆಚ್ಚು ಕರಗಿಸಲು ಸಾಧ್ಯವಿದೆ. ಈ ನಿಟ್ಟಿನಲ್ಲಿ ಫಲಕಾರಿಯಾದ ಕೆಲವು ಸಂಯೋಜನೆಗಳನ್ನು ಇಲ್ಲಿ ವಿವರಿಸಲಾಗಿದೆ. ಇದರಲ್ಲಿ ನಿಮಗಿಷ್ಟವಾದ ಯಾವುದನ್ನೂ ಬಳಸಿ, ಶೀಘ್ರವಾಗಿ ಹೊಟ್ಟೆಯ ಬೊಜ್ಜು ಕಳೆದುಕೊಳ್ಳಿರಿ.

ಪ್ರಾರಂಭಿಕ ಹಂತದ ಹಸಿರು ರಸ

ಪ್ರಾರಂಭಿಕ ಹಂತದ ಹಸಿರು ರಸ

ಇದುವರೆಗೆ ಹಸಿರು ರಸವನ್ನು ಸೇವಿಸದೇ ಇದ್ದಲ್ಲಿ ಮೊದಲು ಈ ಸಂಯೋಜನೆಯನ್ನು ಆಯ್ಕೆ ಮಾಡಿಕೊಳ್ಳಿ. ಇದರಲ್ಲಿ ಸೂಕ್ತ ಪ್ರಮಾಣದ ವಿಟಮಿನ್ ಮತ್ತು ಖನಿಜಗಳಿವೆ ಹಾಗೂ ಅಲ್ಪಪ್ರಮಾಣದಲ್ಲಿ ಸೆಲ್ಯುಲೋಸ್ ಇದೆ. ಸಮಪ್ರಮಾಣದಲ್ಲಿ ಅನಾನಾಸ್, ಹಸಿರು ಸೇಬು ಮತ್ತು ಒಂದು ಲೋಟಕ್ಕೆ ಅರ್ಧ ಇಂಚು ಗಾತ್ರದ ಶುಂಠಿ ಮತ್ತು ಎರಡು ದೊಡ್ಡ ಚಮಚದಷ್ಟು ಅಚ್ಚು ಮೂಡ ಸೊಪ್ಪು (ಅಥವಾ parsley leaves) (ಇದು ನೋಡಲು ಕೊತ್ತಂಬರಿ ಸೊಪ್ಪಿನಂತೆಯೇ ಇರುತ್ತದೆ, ಆದರೆ ರುಚಿಯಲ್ಲಿ ಬದಲಾವಣೆ ಇರುತ್ತದೆ) ಮತ್ತು ಇಷ್ಟೇ ಪ್ರಮಾಣದ ಕೇಲ್ ಎಲೆಗಳನ್ನು ಹಾಕಿ ಮಿಕ್ಸಿಯಲ್ಲಿ ಗೊಟಾಯಿಸಿ. ದಿನಕ್ಕೊಂದು ಲೋಟ ಈ ಜ್ಯೂಸ್ ಕುಡಿಯುವುದರಿಂದ ಬೊಜ್ಜು ನಿಧಾನವಾಗಿ ಕರಗುತ್ತದೆ.

ಸೌತೆ, ಗುಡ್ಡದಸೊಪ್ಪು, ಕೇಲ್ ಎಲೆಗಳ ರಸ

ಸೌತೆ, ಗುಡ್ಡದಸೊಪ್ಪು, ಕೇಲ್ ಎಲೆಗಳ ರಸ

ಒಟ್ಟು ಪ್ರಮಾಣದಲ್ಲಿ ಅರ್ಧಭಾಗದಷ್ಟು ಸೌತೆಕಾಯಿ (ಸಿಪ್ಪೆಸಹಿತ), ಇನ್ನುಳಿದಂತೆ ಹಸಿರು ದ್ರಾಕ್ಷಿ (ಬೀಜ ತೆಗೆದಿರುವುದು), ಗುಡ್ಡದ ಸೊಪ್ಪು (celery leaves), ಕೇಲ್ ಎಲೆಗಳನ್ನು ಸಮಪ್ರಮಾಣದಲ್ಲಿ ಹಾಕಿ ಮಿಕ್ಸಿಯಲ್ಲಿ ಗೊಟಾಯಿಸಿ. ಪೌಷ್ಟಿಕ ಹಾಗೂ ಹಲವು ಖನಿಜಗಳನ್ನೊಳಗೊಂಡ ಈ ರಸ ನಿಮ್ಮ ಆರೋಗ್ಯವನ್ನು ಕಾಪಾಡುವುದು ಹಾಗೂ ಕೊಬ್ಬನ್ನು ಶೀಘ್ರವಾಗಿ ಕರಗಿಸಲು ನೆರವಾಗುವುದು. ಹುಳಿ ಎನಿಸಿದರೆ ಸೇಬು ಹಣ್ಣಿನ ಅರ್ಧಭಾಗವನ್ನೂ ಸೇರಿಸಬಹುದು. (ಸಕ್ಕರೆ ಸೇರಿಸಬೇಡಿ)

ಸೇಬು ಮತ್ತು ದೊಡ್ಡಜೀರಿಗೆ ರಸ

ಸೇಬು ಮತ್ತು ದೊಡ್ಡಜೀರಿಗೆ ರಸ

ಒಂದು ಸೇಬಿಗೆ ಒಂದು ಚಮಚದ ಪ್ರಮಾಣದಲ್ಲಿ ದೊಡ್ಡಜೀರಿಗೆಯನ್ನು ಕೊಂಚಕಾಲ ನೆನೆಸಿಟ್ಟು ಅದೇ ನೀರಿಗೆ ಸೇಬುಹಣ್ಣನ್ನು ಕತ್ತರಿಸಿ ಮಿಕ್ಸಿಯಲ್ಲಿ ಗೊಟಾಯಿಸಿ. ಇದು ಒಂದು ವಿಶಿಷ್ಟವಾದ ರುಚಿಯ ಜೊತೆ ಆರೋಗ್ಯವನ್ನೂ ನೀಡುವುದು ಮತ್ತು ಕೊಬ್ಬನ್ನೂ ಕರಗಿಸುವುದು.

ಲಿಂಬೆ, ಸೇಬು, ಕೇಲ್ ಎಲೆಗಳ ರಸ

ಲಿಂಬೆ, ಸೇಬು, ಕೇಲ್ ಎಲೆಗಳ ರಸ

ಕೊಬ್ಬನ್ನು ಶೀಘ್ರವಾಗಿ ಕರಗಿಸಲು ಈ ರಸ ಉತ್ತಮವಾಗಿದೆ. ಆದರೆ ಪ್ರಾರಂಭಿಕ ಹಂತದಲ್ಲಿ ಇದನ್ನು ಸೇವಿಸುವುದು ತರವಲ್ಲ. ಒಂದು ಪ್ರಮಾಣದಲ್ಲಿ ಒಂದು ಲಿಂಬೆ, ಮೂರು ಸೇಬುಗಳು ಮತ್ತು ನಾಲ್ಕು ಚಮಚ ಕೇಲ್ ಎಲೆಗಳನ್ನು ಚಿಕ್ಕದಾಗಿ ಹೆಚ್ಚಿ ಮಿಕ್ಸಿಯಲ್ಲಿ ಗೊಟಾಯಿಸಿ. ಇದು ರುಚಿಕರವೂ, ಸಿಹಿಯಾಗಿಯೂ ಇರುವ ಜೊತೆ ಹಲವು ಪೋಷಕಾಂಶಗಳ ಆಗರವಾಗಿದೆ. ವಿಟಮಿನ್ ಎ, ಸಿ ಮತ್ತು ಮೆಗ್ನೀಶಿಯಂ, ಪೊಟ್ಯಾಶಿಯಂನತಹ ಖನಿಜಗಳಿವೆ. ಮುಖ್ಯವಾಗಿ ನಿಯಮಿತ ಸೇವನೆಯಿಂದ ಕೊಬ್ಬು ಶೀಘ್ರವಾಗಿ ಕರಗುತ್ತದೆ.

ಪ್ರೈಮಾವೇರಾ ಹಸಿರು ಜ್ಯೂಸ್

ಪ್ರೈಮಾವೇರಾ ಹಸಿರು ಜ್ಯೂಸ್

ಪ್ರೈಮಾವೇರಾ ಕಿಚನ್ ಎಂಬ ಸಂಸ್ಥೆಯ ಕೊಡುಗೆಯಾದ ಈ ಸಂಯೋಜನೆಯಲ್ಲಿ ವಿವಿಧ ಹಸಿರು ಹಣ್ಣು ಮತ್ತು ಸೊಪ್ಪುಗಳಿವೆ. ಒಂದು ಪ್ರಮಾಣದ ರಸಕ್ಕಾಗಿ ಎರಡು ಹಸಿರು ಸೇಬು, ನಾಲ್ಕು ದಂಟು ಗುಡ್ಡದ ಸೊಪ್ಪು (celery leaves), ಒಂದು ಚಿಕ್ಕ ಸೌತೆಕಾಯಿ (ಸಿಪ್ಪೆರಹಿತ), ರೋಮೈನೆ ಎಲೆಗಳು (romaine leaves) ಆರು, ಕೇಲ್ ಎಲೆಗಳು ಐದು, ಒಂದು ಲಿಂಬೆಹಣ್ಣಿನ ರಸ (ಅಥವಾ ಸಿಪ್ಪೆಸುಲಿದು ಉಳಿದ ತಿರುಳು) ಬಳಕೆಯಾಗುತ್ತದೆ. ಇವೆಲ್ಲವನ್ನೂ ಸೇರಿಸಿ ಮಿಕ್ಸಿಯಲ್ಲಿ ಗೊಟಾಯಿಸಿ ದಿನಕ್ಕೊಂದು ಲೋಟ ಕುಡಿಯಿರಿ. ಒಂದು ಲೋಟಕ್ಕೆ ಒಂದು ಬಸಲೆಯ ಎಲೆಯನ್ನು ಸೇರಿಸಿದರೆ ರುಚಿ ಸ್ವಲ್ಪ ಒಗರಾಗಬಹುದು, ಆದರೆ ಕಬ್ಬಿಣದ ಅಂಶ ತುಂಬಾ ಹೆಚ್ಚುತ್ತದೆ. ಕೆಲವು ಪುದಿನಾ ಎಲೆಗಳನ್ನೂ ಸೇರಿಸಿ ರುಚಿಯನ್ನು ಹೆಚ್ಚಿಸಬಹುದು. ಈ ರಸದಲ್ಲಿ ವಿಟಮಿನ್ ಎ, ಸಿ ಮತ್ತು ವಿವಿಧ ಖನಿಜಗಳಿರುವ ಕಾರಣ ಆರೋಗ್ಯಕರವೂ ಬೊಜ್ಜು ಕರಗಿಸಲು ಪೂರಕವೂ ಆಗಿದೆ. ಕ್ರೀಡಾಪಟುಗಳು ಬಹಳ ಸುಸ್ತಾದಾದ ಈ ರಸವನ್ನು ಕುಡಿಯುವ ಮೂಲಕ ಶೀಘ್ರವೇ ಪೂರ್ಣತ್ರಾಣವನ್ನು ಪಡೆಯುತ್ತಾರೆ.

ವಿಷಕಾರಿ ವಸ್ತುಗಳನ್ನು ಹೊರಹಾಕಲು ಹಸಿರು ರಸ

ವಿಷಕಾರಿ ವಸ್ತುಗಳನ್ನು ಹೊರಹಾಕಲು ಹಸಿರು ರಸ

ನಮ್ಮ ದೇಹದಲ್ಲಿರುವ ವಿಷಕಾರಿ ವಸ್ತುಗಳನ್ನು ಹೊರಹಾಕಲು ಹಲವು ಹಣ್ಣುಗಳು ನೆರವಾಗುತ್ತವೆ. ಇದಕ್ಕಾಗಿ ನೈಸರ್ಗಿಕವಾಗಿ ಬೆಳೆಸಿದ ತರಕಾರಿಗಳನ್ನೇ ಆಯ್ದುಕೊಳ್ಳಿ. ಒಂದು ಪ್ರಮಾಣಕ್ಕೆ ಒಂದು ಸೇಬು, ಐದು ಕೇಲ್ ಎಲೆಗಳು, ಐದು ಗುಡ್ಡದ ಸೊಪ್ಪಿನ ಎಲೆಗಳು (celery leaves), ಒಂದು ಚಿಕ್ಕ ಸೌತೆ ಮತ್ತು ಸುಮಾರು ಎಂಟು ತುಳಸಿ ಎಲೆಗಳನ್ನು ಸೇರಿಸಿ ಮಿಕ್ಸಿಯಲ್ಲಿ ಗೊಟಾಯಿಸಿ. ಈ ರಸ ಮಾರುಕಟ್ಟೆಯಲ್ಲಿ ಎಲ್ಲೂ ಸಿಗದು. ತುಳಸಿ ಎಲೆಗಳ ಕಾರಣ ರುಚಿಯಲ್ಲಿ ಕೊಂಚ ವ್ಯತ್ಯಾಸವಿದ್ದರೂ ಇದರಲ್ಲಿರುವ ಆಂಟಿ ಆಕ್ಸಿಡೆಂಟುಗಳು ಈ ರಸವನ್ನು ಅತ್ಯಂತ ಆರೋಗ್ಯಕರವಾಗಿಸಿವೆ. ದಿನಕ್ಕೊಂದು ಲೋಟವನ್ನು ಕುಡಿದರೆ ದೇಹದ ವಿಷಕಾರಿ ವಸ್ತುಗಳು ನಿಧಾನವಾಗಿ ವಿಸರ್ಜಿಸಲ್ಪಡುತ್ತಾ ಬರುತ್ತದೆ. ಪ್ರಾರಂಭಿಕ ಹಂತಕ್ಕೆ ಈ ರಸ ಸೂಕ್ತವಲ್ಲ. ಕ್ರೀಡಾಪಟುಗಳು, ಹೆಚ್ಚು ಬೊಜ್ಜು ಇದ್ದವರಿಗೆ ಸೂಕ್ತವಾಗಿದೆ.

ಹಸಿರು ಪಾಲಕ್ ಮತ್ತು ಲಿಂಬೆ

ಹಸಿರು ಪಾಲಕ್ ಮತ್ತು ಲಿಂಬೆ

ಈ ರಸದಲ್ಲಿ ದಪ್ಪನೆಯ ಪಾಲಕ್ ಸೊಪ್ಪು ಮತ್ತು ಲಿಂಬೆಯನ್ನು ಪ್ರಮುಖವಾಗಿ ಬಳಸಲಾಗಿದೆ. ಒಂದು ಪ್ರಮಾಣಕ್ಕೆ ನಾಲ್ಕು ಪಾಲಕ್ ಸೊಪ್ಪು ಮತ್ತು ಒಂದು ಲಿಂಬೆಹಣ್ಣಿನ ರಸವನ್ನು ಸೇರಿಸಿ. ಕೊಂಚ ನೀರು ಸೇರಿಸಿ ನಿಮಗೆ ಅಗತ್ಯವಿದ್ದಷ್ಟು ಗಾಢವಾಗಿಸಿಕೊಳ್ಳಿ. ರುಚಿಯಲ್ಲಿ ಹುಳಿ,ಒಗರು ಇರುವ ಈ ಜ್ಯೂಸ್ ಕೊಬ್ಬು ಕರಗಿಸಲು ಅತ್ಯುತ್ತಮವಾಗಿದೆ. ಆದರೆ ಕ್ರೀಡಾಪಟುಗಳಿಗೆ ಇದು ಸೂಕ್ತವಲ್ಲ, ಏಕೆಂದರೆ ಇದರಲ್ಲಿ ತಕ್ಷಣವೇ ರಕ್ತಕ್ಕೆ ಬಿಡುಗಡೆಯಾಗುವಂತಹ ಪೋಷಕಾಂಶಗಳಿಲ್ಲ. ಆದ್ದರಿಂದ ಕೇವಲ ಸ್ಥೂಲಕಾಯ ಕರಗಿಸಲು ರಾತ್ರಿ ಮಲಗುವ ಮುನ್ನ ಸೇವಿಸುವುದು ಉತ್ತಮ. ಲಿಂಬೆ ಹಣ್ಣು ಸಿಗದಿದ್ದರೆ ಸಿದ್ಧರೂಪದಲ್ಲಿ ದೊರಕುವ ಲಿಂಬೆಯ ಗಾಢರಸವನ್ನೂ ಬಳಸಬಹುದು.

ಚಕ್ಕೋತ, ಅನಾನಾಸ್ ರಸ

ಚಕ್ಕೋತ, ಅನಾನಾಸ್ ರಸ

ಒಂದು ಪ್ರಮಾಣದಲ್ಲಿ ಅರ್ಧದಷ್ಟು ಚಕ್ಕೋತ ಹಣ್ಣಿನ ತಿರುಳು (ಕೆಂಪು ಚಕ್ಕೋತ ಉತ್ತಮ), ಇನ್ನುಳಿದ ಭಾಗದಲ್ಲಿ ಬಹುತೇಕವಾಗಿ ಅನಾನಾಸ್ ಹಣ್ಣಿನ ತಿರುಳು ಮತ್ತು ಉಳಿದ ಒಂದು ಭಾಗ ನಿಮಗಿಷ್ಟವಾದ ಹಸಿರು ತರಕಾರಿಗಳನ್ನು ಸೇರಿಸಿ ಮಿಕ್ಸಿಯಲ್ಲಿ ಗೊಟಾಯಿಸಿ. ಅತೀವ ಹುಳಿ ಇರುವ ಕಾರಣ ಕುಡಿಯಲು ಕೊಂಚ ಇರಿಸುಮುರಿಸಾದರೂ ಆರೋಗ್ಯದ ಮಟ್ಟಿಗೆ ಇದು ಉತ್ತಮವಾಗಿದೆ. ಇದನ್ನು ಪ್ರಾರಂಭಿಕ ಹಂತದಲ್ಲಿ ಬಿಟ್ಟು ಬೇರೆ ಎಲ್ಲರೂ ಸೇವಿಸಬಹುದು. ಆದರೆ ಹೊಟ್ಟೆಯಲ್ಲಿ ಹುಣ್ಣು, ಹುಳಿತೇಗು ಮೊದಲಾದ ತೊಂದರೆ ಇರುವವರು ಸೇವಿಸಬಾರದು.

ಲಿಂಬೆ, ಪಾಲಕ್, ಶುಂಠಿ ಮತ್ತು ಕೇಲ್ ಎಲೆಗಳು

ಲಿಂಬೆ, ಪಾಲಕ್, ಶುಂಠಿ ಮತ್ತು ಕೇಲ್ ಎಲೆಗಳು

ಒಂದು ಪ್ರಮಾಣದಲ್ಲಿ ಹತ್ತರಲ್ಲಿ ಆರು ಭಾಗದಷ್ಟು ಪಾಲಕ್ ಎಲೆಗಳು, ಇನ್ನುಳಿದಂತೆ ಲಿಂಬೆ, ಹಸಿಶುಂಠಿ, ಕೇಲ್ ಎಲೆಗಳನ್ನು ನಿಮ್ಮ ಅಭಿರುಚಿಗನುಸಾರವಾಗಿ ಮಿಶ್ರಣ ಮಾಡಿ ಮಿಕ್ಸಿಯಲ್ಲಿ ಗೊಟಾಯಿಸಿ. ಕೊಬ್ಬು ಕರಗಿಸಲು ಈ ರಸ ಉತ್ತಮವಾಗಿದೆ. ಆದರೆ ಕ್ರೀಡಾಪಟುಗಳಿಗೆ ಸಲ್ಲದು. ಇದರಲ್ಲಿ ಅಪಾರ ಪ್ರಮಾಣದ ಕರಗದ ನಾರು ಇರುವುದರಿಂದ ಕೊಬ್ಬು ಸಹಾ ಹೆಚ್ಚಿನ ಪ್ರಮಾಣದಲ್ಲಿ ಕರಗುತ್ತದೆ. ಶುಂಠಿ ಜೀರ್ಣಕ್ರಿಯೆಗೆ ನೆರವಾದರೆ ಲಿಂಬೆಯಲ್ಲಿರುವ ವಿಟಮಿನ್ ಸಿ ಮತ್ತು ಪಾಲಕ್ ಸೊಪ್ಪಿನಲ್ಲಿರುವ ವಿಟಮಿನ್ ಇ ದೇಹಕ್ಕೆ ಹೆಚ್ಚಿನ ಪೋಷಕಾಂಶಗಳನ್ನು ನೀಡುತ್ತದೆ.

English summary

Green Juice Recipes to Get Rid of Belly Fat

Similar to the green smoothie trend, mean green juice is taking over. Lighter than a smoothie and containing different ingredients, many are finding just how refreshing it can be to drink your fruits and vegetables.so experiment until you find your favorite.
Story first published: Friday, February 6, 2015, 17:18 [IST]
X
Desktop Bottom Promotion