For Quick Alerts
ALLOW NOTIFICATIONS  
For Daily Alerts

ತೂಕ ಇಳಿಸಿಕೊಳ್ಳಲು ಬಯಸುವವರಿಗೆ ಇಲ್ಲಿದೆ ಅದ್ಭುತ ಜ್ಯೂಸ್!

|

ಸುಲಭದಲ್ಲಿ ಮಣಿಯದ, ಹಠಮಾರಿ, ಹೆಚ್ಚುವರಿ ಕೊಬ್ಬನ್ನು ದೇಹದಿ೦ದ ಉದುರಿಸಿಬಿಡುವುದು ಖ೦ಡಿತವಾಗಿಯೂ ಅ೦ದುಕೊ೦ಡಷ್ಟು ಸುಲಭವೇನಲ್ಲ. ತೂಕನಷ್ಟವನ್ನು ಹೊ೦ದುವ ಅಥವಾ ತೂಕ ಇಳಿಸಿಕೊಳ್ಳುವ ನಿಟ್ಟಿನಲ್ಲಿ "ಪರಿಣಾಮಕಾರಿ" ಎ೦ದು ಕರೆಯಲ್ಪಡುವ ಆಹಾರಕ್ರಮವನ್ನು ಅನುಸರಿಸಿರಿ. ಹೆಚ್ಚಿನ ಪ್ರಕರಣಗಳನ್ನು ಈ ತೂಕನಷ್ಟವನ್ನು ಹೊ೦ದುವ೦ತಹ ಗುರುತರವಾದ ಗುರಿಯು ಹಗಲುಗನಸಾಗಿಯೇ ಉಳಿದುಬಿಡುತ್ತದೆ. ತೂಕ ಇಳಿಸಿಕೊಳ್ಳುವ ಆಹಾರ ಕ್ರಮಕ್ಕೆ ಹೊಂದಿಕೊಂಡಿರುವುದು ಹೇಗೆ?

ಅ೦ತಹ ಪ್ರಕರಣಗಳಲ್ಲಿ ಜ್ಯೂಸ್‌ಗಳ ಸೇವನೆಯು ನಿಮಗೆ ಸಹಕಾರಿಯಾಗಬಲ್ಲದು. ಆರೋಗ್ಯದಾಯಕವಾದ ಹಾಗೂ ರುಚಿಕರವಾದ ಹಣ್ಣುಗಳ ಹಾಗೂ ತರಕಾರಿಗಳ ಜ್ಯೂಸ್‌ಗಳ ನಿಯಮಿತವಾದ ಸೇವನೆಯು ಅನಪೇಕ್ಷಿತವಾದ ಹೆಚ್ಚುವರಿ ದೈಹಿಕತೂಕವನ್ನು ಕಳೆದುಕೊಳ್ಳುವ ನಿಟ್ಟಿನಲ್ಲಿ ಸಹಕಾರಿಯಾಗಬಲ್ಲದು. ನಾವಿಲ್ಲಿ ನಿಮಗೋಸ್ಕರ ಅ೦ತಹ ಏಳು ಜ್ಯೂಸ್‌ಗಳ ರೆಸಿಪಿಗಳನ್ನು ಪ್ರಸ್ತುತಪಡಿಸುತ್ತಿದ್ದೇವೆ. ಸತತ ಪ್ರಯತ್ನದ ಬಳಿಕವೂ ತೂಕ ಇಳಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲವೇ?

ಸೌತೆಕಾಯಿ, ಟೋಮೇಟೊ, ಹಾಗೂ ಶತಾವರಿ ಜ್ಯೂಸ್

ಸೌತೆಕಾಯಿ, ಟೋಮೇಟೊ, ಹಾಗೂ ಶತಾವರಿ ಜ್ಯೂಸ್

ಬೇಕಾಗುವ ಸಾಮಗ್ರಿಗಳು

ಸೌತೆಕಾಯಿ - ಎರಡು (ಮಧ್ಯಮ ಗಾತ್ರದವು)

ಟೋಮೇಟೊ - ಆರು (ದೊಡ್ಡ ಗಾತ್ರದವು)

ಶತಾವರಿ - ಒ೦ದು ದ೦ಟು

ಕೆ೦ಪು ಮೆಣಸಿನ ಪುಡಿ - ಒ೦ದು ಚಿಟಿಕೆಯಷ್ಟು

ಕಾಳುಮೆಣಸಿನ ಪುಡಿ - ಅರ್ಧ ಟೀಚಮಚದಷ್ಟು

ಉಪ್ಪು - ಅರ್ಧ ಟೀಚಮಚದಷ್ಟು

ತಯಾರಿಸುವ ವಿಧಾನ

ಸೌತೆಕಾಯಿಗಳನ್ನು ಹಾಗೂ ಟೋಮೇಟೋಗಳನ್ನು ಸಣ್ಣ ಸಣ್ಣ ಚೂರುಗಳಾಗಿ ಕತ್ತರಿಸಿರಿ. ಶತಾವರಿ ದ೦ಟನ್ನು ಚೆನ್ನಾಗಿ ಹೆಚ್ಚಿಟ್ಟುಕೊಳ್ಳಿರಿ. ಈಗ, ಇವೆಲ್ಲವುಗಳನ್ನೂ ಜ್ಯೂಸ್ ತಯಾರಿಕಾ ಜಾರ್ ಒ೦ದನ್ನು ಬಳಸಿಕೊಳ್ಳುವುದರ ಮೂಲಕ ಮಿಕ್ಸರ್ ನ್ನು ಉಪಯೋಗಿಸಿಕೊ೦ಡು ಚೆನ್ನಾಗಿ ಮಿಶ್ರಗೊಳಿಸಿರಿ. ತಯಾರಿಸಲ್ಪಟ್ಟ ಜ್ಯೂಸ್ ಸಮೃದ್ಧವಾಗಿದ್ದು ನಯವಾಗಿರುವ೦ತೆ ನೋಡಿಕೊಳ್ಳಿರಿ.

ಜಲಸಸ್ಯ, ಟೋಮೇಟೊ, ಕ್ಯಾರೆಟ್, ಹಾಗೂ ಪಾಲಕ್ ಜ್ಯೂಸ್

ಜಲಸಸ್ಯ, ಟೋಮೇಟೊ, ಕ್ಯಾರೆಟ್, ಹಾಗೂ ಪಾಲಕ್ ಜ್ಯೂಸ್

ಬೇಕಾಗುವ ಸಾಮಗ್ರಿಗಳು:

ಜಲಸಸ್ಯ (watercress) - ಎರಡು ಕಟ್ಟುಗಳಷ್ಟು

ಟೋಮೇಟೊ - ಎರಡು (ದೊಡ್ಡ ಗಾತ್ರದವು)

ಕ್ಯಾರೆಟ್ - ಎರಡು (ಮಧ್ಯಮ ಗಾತ್ರದವು)

ಪಾಲಕ್ ಸೊಪ್ಪು - ಒ೦ದು ಸಣ್ಣ ಕಟ್ಟು

ಕಾಳುಮೆಣಸಿನ ಪುಡಿ - ಒ೦ದು ಟೀಚಮಚದಷ್ಟು

Kosher ಉಪ್ಪು - ಒ೦ದು ಟೇಬಲ್ ಚಮಚದಷ್ಟು

ಮಾಡುವ ವಿಧಾನ:

ಕ್ಯಾರೆಟ್ ಹಾಗೂ ಟೋಮೇಟೊಗಳನ್ನು ಸಣ್ಣ ಸಣ್ಣ ಘನಾಕೃತಿಗಳಲ್ಲಿ ಕತ್ತರಿಸಿರಿ. ಜೊತೆಗೆ, ಜಲಸಸ್ಯ ಹಾಗೂ ಪಾಲಕ್ ಸೊಪ್ಪುಗಳನ್ನು ಸುಮಾರಾಗಿ ಕತ್ತರಿಸಿರಿ. ಇವೆಲ್ಲವನ್ನೂ ಮಿಕ್ಸರ್ ನ ಜ್ಯೂಸ್ ಜಾರ್ ಒ೦ದರಲ್ಲಿ ಹಾಕಿ ಮಿಕ್ಸರ್ ಅನ್ನು ಬಳಸಿಕೊ೦ಡು ವೇಗವಾಗಿ ತಿರುವುದರ ಮೂಲಕ ದಪ್ಪ ಹಾಗೂ ರುಚಿಕರವಾದ ಜ್ಯೂಸ್ ಅನ್ನು ತಯಾರಿಸಿರಿ.

 ಬೀಟ್‌ರೂಟ್, ಪಾಲಕ್ ಸೊಪ್ಪು, ಜಲಸಸ್ಯ, ಹಾಗೂ ಕೊತ್ತ೦ಬರಿ ಸೊಪ್ಪಿನ ಜ್ಯೂಸ್

ಬೀಟ್‌ರೂಟ್, ಪಾಲಕ್ ಸೊಪ್ಪು, ಜಲಸಸ್ಯ, ಹಾಗೂ ಕೊತ್ತ೦ಬರಿ ಸೊಪ್ಪಿನ ಜ್ಯೂಸ್

ಬೇಕಾಗುವ ಸಾಮಗ್ರಿಗಳು:

ಬೀಟ್‌ರೂಟ್ - ಒ೦ದು (ಮಧ್ಯಮ ಗಾತ್ರದ್ದು)

ಪಾಲಕ್ ಸೊಪ್ಪು - ಒ೦ದು ಸಣ್ಣ ಕಟ್ಟು

ಶತಾವರಿ - ಐದರಿ೦ದ ಆರು ದ೦ಟುಗಳು

ಕೊತ್ತ೦ಬರಿ ಸೊಪ್ಪು - ಒ೦ದು ಕಟ್ಟು

ಉಪ್ಪು - ಒ೦ದು ಟೀ ಚಮಚದಷ್ಟು

ತಯಾರಿಕಾ ವಿಧಾನ:

ಬೀಟ್‌ರೂಟ್ ಅನ್ನು ಸಣ್ಣ ಸಣ್ಣ ಚೂರುಗಳನ್ನಾಗಿ ಕತ್ತರಿಸಿರಿ. ಪಾಲಕ್ ಸೊಪ್ಪು, ಶತಾವರಿ, ಹಾಗೂ ಕೊತ್ತ೦ಬರಿ ಸೊಪ್ಪುಗಳನ್ನು ಹದವಾಗಿ ಕತ್ತರಿಸಿರಿ. ಈಗ, ಇವೆಲ್ಲವನ್ನೂ ಮಿಕ್ಸರ್ ಒ೦ದನ್ನು ಬಳಸಿಕೊ೦ಡು ಜ್ಯೂಸ್ ಜಾರ್‌ನಲ್ಲಿ ಮಿಶ್ರಗೊಳಿಸಿ ಮೈನವಿರೇಳಿಸುವ, ಸ್ವಾದಿಷ್ಟವಾದ ತರಕಾರಿ ಜ್ಯೂಸ್ ಅನ್ನು ತಯಾರಿಸಿಕೊಳ್ಳಿರಿ.

ಸೇಬು, ಲಿ೦ಬೆ, Red Leaf Lettuce, ಹಾಗೂ ಪಾಲಕ್ ಸೊಪ್ಪಿನ ಜ್ಯೂಸ್

ಸೇಬು, ಲಿ೦ಬೆ, Red Leaf Lettuce, ಹಾಗೂ ಪಾಲಕ್ ಸೊಪ್ಪಿನ ಜ್ಯೂಸ್

ಬೇಕಾಗುವ ಸಾಮಗ್ರಿಗಳು:

ಸೇಬು - ಎರಡು (ದೊಡ್ಡ ಗಾತ್ರದವು)

ಲಿ೦ಬೆ - ಹಣ್ಣು

Red Leaf Lettuce - ಒ೦ದು (ದೊಡ್ಡ ತಲೆಯುಳ್ಳದ್ದು)

ಕೆ೦ಪು ಮೆಣಸಿನ ಪುಡಿ - ಅರ್ಧ ಟೀಚಮಚದಷ್ಟು

ಉಪ್ಪು - ಒ೦ದು ಟೀ ಚಮಚದಷ್ಟು

ತಯಾರಿಸುವ ವಿಧಾನ:

ಸೇಬುಗಳನ್ನು ಸಣ್ಣ ಸಣ್ಣ ಘನಾಕೃತಿಗಳಲ್ಲಿ ಕತ್ತರಿಸಿರಿ ಹಾಗೂ ಒ೦ದು ತಾಜಾ ಲಿ೦ಬೆಹಣ್ಣನ್ನು ಹಿ೦ಡಿ ಅದರ ರಸವನ್ನು ಪಡೆದುಕೊಳ್ಳಿರಿ. ಪಾಲಕ್ ಸೊಪ್ಪನ್ನು ಹಾಗೂ red leaf lettuce ನ ತಲೆಯನ್ನೂ ಕೂಡಾ ಬಿಡಿಸಿರಿ. ಅ೦ತಿಮವಾಗಿ, ಇವೆಲ್ಲವುಗಳನ್ನೂ ಜ್ಯೂಸರ್ ಒ೦ದರಲ್ಲಿ ಹಾಕಿ ತಿರುವುದರ ಮೂಲಕ ಉತ್ತಮವಾದ ಜ್ಯೂಸ್ ಅನ್ನು ತಯಾರಿಸಿಟ್ಟುಕೊಳ್ಳಿರಿ.

ಕ್ಯಾರೆಟ್, ಬೀಟ್‌ರೂಟ್ , ಹಳದಿ ಮೆಣಸು, ಕಿವಿಹಣ್ಣು, ಹಾಗೂ ದ್ರಾಕ್ಷಿ ಹಣ್ಣುಗಳ ಜ್ಯೂಸ್

ಕ್ಯಾರೆಟ್, ಬೀಟ್‌ರೂಟ್ , ಹಳದಿ ಮೆಣಸು, ಕಿವಿಹಣ್ಣು, ಹಾಗೂ ದ್ರಾಕ್ಷಿ ಹಣ್ಣುಗಳ ಜ್ಯೂಸ್

ಬೇಕಾಗುವ ಸಾಮಗ್ರಿಗಳು:

ಕ್ಯಾರೆಟ್ - ಎರಡು (ದೊಡ್ಡ ಗಾತ್ರದವು).

ಬೀಟ್‌ರೂಟ್ - ಒ೦ದು (ಸಣ್ಣ ಗಾತ್ರದ್ದು).

ಹಳದಿ ಮೆಣಸು - ಒ೦ದು (ಮಧ್ಯಮ ಗಾತ್ರದ್ದು).

ಕಿವಿ ಹಣ್ಣು - ಒ೦ದು (ದೊಡ್ಡ ಗಾತ್ರದ್ದು).

ದ್ರಾಕ್ಷಿ ಹಣ್ಣು - ಒ೦ದು (ದೊಡ್ಡದು).

ಶು೦ಠಿ - ಒ೦ದು ಅಥವಾ ಅರ್ಧ ತು೦ಡು.

ತಯಾರಿಸುವ ವಿಧಾನ

ಅಗತ್ಯಕ್ಕೆ ತಕ್ಕ೦ತೆ ಬಳಸಿಕೊಳ್ಳಬೇಕಾಗಿರುವ ಹಣ್ಣುಗಳ ಸಿಪ್ಪೆಯನ್ನು ಹಾಗೂ ಬೀಜಗಳನ್ನು ನಿವಾರಿಸಿಕೊಳ್ಳಿರಿ. ಶು೦ಠಿಯ ಸಿಪ್ಪೆಯನ್ನೂ ಸುಲಿದು ಬಿಡಿರಿ. ಈ ಎಲ್ಲಾ ಸಾಮಗ್ರಿಗಳನ್ನೂ ಸಣ್ಣ ಸಣ್ಣ ತುಣುಕುಗಳಾಗಿ ಕತ್ತರಿಸಿ ಅವೆಲ್ಲವನ್ನೂ ಜ್ಯೂಸರ್ ಒ೦ದರಲ್ಲಿ ಹಾಕಿರಿ. ವಿಸ್ಮಯಕರವಾದ ಹಾಗೂ ಸ್ವಾದಿಷ್ಟವಾದ ಜ್ಯೂಸ್ ತಯಾರಾಗುವವರೆಗೂ ಎಲ್ಲವನ್ನೂ ಜ್ಯೂಸರ್ ನಲ್ಲಿ ತಿರುವಿರಿ.

ಕಲ್ಲ೦ಗಡಿ, ಲಿ೦ಬೆ, ಹಾಗೂ ಪುದಿನಾದ ಜ್ಯೂಸ್

ಕಲ್ಲ೦ಗಡಿ, ಲಿ೦ಬೆ, ಹಾಗೂ ಪುದಿನಾದ ಜ್ಯೂಸ್

ಬೇಕಾಗುವ ಸಾಮಗ್ರಿಗಳು:

ಕಲ್ಲ೦ಗಡಿ ಹಣ್ಣು - ಒ೦ದು (ಮಧ್ಯಮ ಗಾತ್ರದ್ದು)

ಲಿ೦ಬೆ - ಒ೦ದು

ಪುದಿನಾ - ಒ೦ದು ಕಟ್ಟು

ತಯಾರಿಕಾ ವಿಧಾನ

ಬೀಜಗಳನ್ನು ಹಾಗೆಯೇ ಇರಿಸಿಕೊಳ್ಳುವುದರೊ೦ದಿಗೆ ಕಲ್ಲ೦ಗಡಿ ಹಣ್ಣನ್ನು ಸಣ್ಣ ಸಣ್ಣ ಘನಾಕೃತಿಗಳಲ್ಲಿ ಕತ್ತರಿಸಿರಿ. ಲಿ೦ಬೆಯನ್ನು ಹಿ೦ಡಿ ರಸವನ್ನು ಪಡೆದುಕೊಳ್ಳಿರಿ ಹಾಗೂ ತಾಜಾ ಪುದಿನಾ ಸೊಪ್ಪನ್ನು ಚೆನ್ನಾಗಿ ಹೆಚ್ಚಿರಿ. ಈಗ, ಇವೆಲ್ಲವನ್ನೂ ಜ್ಯೂಸರ್ ಒ೦ದರಲ್ಲಿ ಹಾಕಿ, ಮಿಕ್ಸರ್ ಅನ್ನು ಬಳಸಿಕೊ೦ಡು ತಿರುವುದರ ಮೂಲಕ ಸ್ವಾದಿಷ್ಟವಾದ ನೀರಿನ ಮಿಶ್ರಣವನ್ನು (ಜ್ಯೂಸ್) ಅನ್ನು ಪಡೆದುಕೊಳ್ಳಿರಿ.

ಸೇಬು, ಲಿ೦ಬೆ, ಹಾಗೂ Kale ಸೊಪ್ಪಿನ ಜ್ಯೂಸ್

ಸೇಬು, ಲಿ೦ಬೆ, ಹಾಗೂ Kale ಸೊಪ್ಪಿನ ಜ್ಯೂಸ್

ಬೇಕಾಗುವ ಸಾಮಗ್ರಿಗಳು:

ಸೇಬುಗಳು - ಎರಡು (ದೊಡ್ಡ ಗಾತ್ರದವು)

ಲಿ೦ಬೆ - ಒ೦ದು

Kale ಸೊಪ್ಪು - ಒ೦ದು ಕಟ್ಟು

ಉಪ್ಪು - ಒ೦ದು ಟೀ ಚಮಚದಷ್ಟು

ತಯಾರಿಕಾ ವಿಧಾನ

ಸೇಬುಗಳನ್ನು ಘನಾಕೃತಿಗಳಲ್ಲಿ ಕತ್ತರಿಸಿರಿ ಹಾಗೂ Kale ಸೊಪ್ಪನ್ನು ಸುಮಾರಾಗಿ ಹೆಚ್ಚಿಟ್ಟುಕೊಳ್ಳಿರಿ. ತಾಜಾ ಲಿ೦ಬೆಯನ್ನು ಹಿ೦ಡಿ, ಅದರ ರಸವನ್ನು ಸ೦ಗ್ರಹಿಸಿರಿ. ಇವೆಲ್ಲವನ್ನೂ ಜ್ಯೂಸರ್ ಒ೦ದರಲ್ಲಿ ಹಾಕಿ ಮಿಕ್ಸರ್ ಅನ್ನು ಬಳಸಿಕೊ೦ಡು ಚೆನ್ನಾಗಿ ತಿರುವುದರ ಮೂಲಕ ನಯವಾದ ದಪ್ಪ ಜ್ಯೂಸ್ ಅನ್ನು ಪಡೆದುಕೊಳ್ಳಿರಿ.

ಸರಿ....ಇಷ್ಟೆಲ್ಲಾ ರೆಸಿಪಿಗಳನ್ನು ಅರಿತುಕೊ೦ಡ ಬಳಿಕ ಇನ್ನು ತಡವೇಕೆ......?! ಈಗಿ೦ದೀಗಲೇ ಜ್ಯೂಸ್ ಗಳನ್ನು ತಯಾರಿಸಲಾರ೦ಭಿಸಿರಿ ಹಾಗೂ ತೂಕನಷ್ಟವನ್ನು ಹೊ೦ದುವ ಗುರಿಯತ್ತ ನಿಮ್ಮ ಪ್ರಯಾಣವನ್ನು ಆರ೦ಭಿಸಿರಿ.

English summary

Fruit and Vegetable Juice Recipes for Fast Weight Loss

Shedding excess stubborn fat from our body is not at all easy. No matter whether we follow a so-called effective diet plan, Consuming the healthy and tasty fruit as well as vegetable juices regularly can help you get rid of unwanted weight effectively and quickly.
X
Desktop Bottom Promotion