For Quick Alerts
ALLOW NOTIFICATIONS  
For Daily Alerts

ಹಣ್ಣು ಮಾತ್ರವಲ್ಲ, ಅದರ ಸಿಪ್ಪೆಯೂ ಆರೋಗ್ಯದ ಕೀಲಿ ಕೈ

|

ಒಮ್ಮೆ ವೈದ್ಯರು ತಮ್ಮ ರೋಗಿಗೆ ಹಣ್ಣನ್ನು ಸಿಪ್ಪೆ ಸಹಿತ ತಿನ್ನಲು ಸಲಹೆ ಮಾಡಿದರಂತೆ. ಆಗ ರೋಗಿ ಅದು ಸಾಧ್ಯವಿಲ್ಲ, ಏಕೆಂದರೆ ತನಗೆ ತುಂಬಾ ಇಷ್ಟವಾದುದು ಹಲಸಿನ ಹಣ್ಣು ಎಂದನಂತೆ! ವಾಸ್ತವವಾಗಿ ಎಲ್ಲಾ ಹಣ್ಣುಗಳನ್ನು ಸಿಪ್ಪೆ ಸಹಿತ ತಿನ್ನಲು ಸಾಧ್ಯವಿಲ್ಲ. ಆದರೆ ನಾವು ಬಾಳೆಹಣ್ಣು, ದಾಳಿಂಬೆ, ಸೀತಾಫಲ, ಮೂಸಂಬಿ, ಕಿತ್ತಳೆ, ಚಕ್ಕೋತ ಮೊದಲಾದವುಗಳ ತಿರುಳನ್ನು ತಿಂದು ಸಿಪ್ಪೆಯನ್ನು ತ್ಯಜಿಸುತ್ತೇವೆ.

ಆದರೆ ಹೀಗೆ ಎಸೆಯುವ ಸಿಪ್ಪೆಯಲ್ಲೇ ಕೆಲವೊಂದು ಪೋಷಕಾಂಶಗಳ ಜೊತೆಗೆ ನಮ್ಮ ದೇಹಕ್ಕೆ ಬೇಕಾಗುವ ವಿಟಮಿನ್‌ಗಳಿರುತ್ತವೆ ಎಂಬುದನ್ನು ಮಾತ್ರ ಮರೆಯಬಾರದು. ಅದರಲ್ಲೂ ಸೇಬು, ಸೌತೆ ಕಾಯಿ ಮತ್ತು ಕಿತ್ತಳೆ ಹಣ್ಣುಗಳ ಸಿಪ್ಪೆಯನ್ನುತಿನ್ನುವುದರಿಂದ ಹೃದಯದ ಆರೋಗ್ಯ ಉತ್ತಮವಾಗಿರುವುದು ಮಾತ್ರವಲ್ಲದೆ, ರೋಗಗಳು ಬರದಂತೆ ತಡೆಗಟ್ಟಿ ಪ್ರತಿರೋಧಕ ಶಕ್ತಿಯನ್ನು ಬಲಿಷ್ಠವಾಗಿಸುತ್ತದೆ.

Fruit Peels That Are Healthy To Eat

ಕೆಲವೊಂದು ಹಣ್ಣುಗಳ ಸಿಪ್ಪೆಯನ್ನು ಸುಲಭವಾಗಿ ತಿನ್ನಬಹುದಾದರೆ ಇನ್ನು ಕೆಲವು ಹಣ್ಣುಗಳ ಸಿಪ್ಪೆಗಳು ತುಂಬಾ ಗಟ್ಟಿಯಾಗಿರುವುದರಿಂದ ಇದನ್ನು ಹಣ್ಣಿನೊಂದಿಗೆ ಮಿಕ್ಸಿಗೆ ಹಾಕಿ ಜ್ಯೂಸ್ ರೀತಿಯಲ್ಲಿಯೂ ಸೇವಿಸಬಹುದಾಗಿದೆ. ಬನ್ನಿ ಆರೋಗ್ಯಕ್ಕೆ ಉತ್ತಮವಾಗಿರುವ ಕೆಲವೊಂದು ಹಣ್ಣುಗಳ ಸಿಪ್ಪೆಗಳ ಬಗ್ಗೆ ಇಲ್ಲಿ ತಿಳಿದುಕೊಳ್ಳಿ.

ಸೂಚನೆ- ಹಣ್ಣುಗಳನ್ನು ಆರಿಸುವಾಗ ಅದರ ಸಿಪ್ಪೆಯ ಮೇಲೆ ತೆಳುವಾದ ಕೀಟನಾಶಕದ ಪದರ ಇದೆಯೇ ಎಂದು ನೋಡಿಕೊಳ್ಳಿ. ಒಂದು ವೇಳೆ ತೆಳುವಾಗಿ ಪೌಡರ್ ಅಂಟಿಸಿದಂತೆ ಪದರವೇನಾದರೂ ಇದ್ದರೆ ಈ ಸಿಪ್ಪೆಗಳನ್ನು ಬಳಸಬೇಡಿ. (ಹಣ್ಣುಗಳನ್ನು ಕೊಳ್ಳುವಾಗಲೇ ಇದನ್ನು ಗಮನಿಸಿ ಕೊಳ್ಳದೇ ಇರುವುದು ಮೇಲು). ಈ ಕೀಟನಾಶಕ ಸಿಪ್ಪೆಯ ಆಳಕ್ಕೆ ಇಳಿದಿರುವುದರಿಂದ ಇವುಗಳ ಬಳಕೆ ಒಳ್ಳೆಯದಲ್ಲ. ಈ ಹಣ್ಣುಗಳ ಸಿಪ್ಪೆ ಬಿಸಾಡಿದರೆ ಆರೋಗ್ಯಕ್ಕೆ ನಷ್ಟ!

ಕಿತ್ತಳೆ ಹಣ್ಣಿನ ಸಿಪ್ಪೆ
ಕಿತ್ತಳೆ ಸಿಪ್ಪೆಯಲ್ಲಿರುವ ಆಂಟಿ ಆಕ್ಸಿಡೆಂಟುಗಳು ಮತ್ತು ಉತ್ತಮ ಪ್ರಮಾಣದ ವಿಟಮಿನ್ ಸಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಇದರಿಂದ ವಿಶೇಷವಾಗಿ ಉಸಿರಾಟದ ತೊಂದರೆಗಳಾದ ಅಸ್ತಮಾ, ಬ್ರಾಂಕೈಟಿಸ್ ಮೊದಲಾದ ಉಸಿರು ಸಂಬಂಧಿ ರೋಗಗಳಿಂದ ರಕ್ಷಣೆ ಪಡೆಯಬಹುದು. ತನ್ಮೂಲಕ ಶ್ವಾಸಕೋಶದ ಕ್ಯಾನ್ಸರ್ ಬರದಂತೆ ತಡೆಯಬಹುದು. ಶೀತ, ಫ್ಲೂ ಮೊದಲಾದ ತೊಂದರೆಗಳಿಂದಲೂ ಕಿತ್ತಳೆ ಸಿಪ್ಪೆ ರಕ್ಷಣೆ ನೀಡುತ್ತದೆ.

ದಾಳಿಂಬೆ ಹಣ್ಣಿನ ಸಿಪ್ಪೆ
ಸಾಮಾನ್ಯವಾಗಿ ದಾಳಿಂಬೆಯ ಸಿಪ್ಪಿ ಮತ್ತು ಕಾಳುಗಳು ಕುಳಿತಿರುವ ತಿರುಳು ಕಹಿಯಾಗಿರುವುದರಿಂದ ನಾವು ಅದನ್ನು ಬಳಸದೇ ತ್ಯಾಜ್ಯದಲ್ಲಿ ಎಸೆಯುತ್ತೇವೆ. ಆದರೆ ಹಣ್ಣಿನಂತೆಯೇ ಈ ಸಿಪ್ಪೆ ಮತ್ತು ತಿರುಳಿನಲ್ಲಿಯೂ ಹಲವು ಔಷಧೀಯ ಗುಣಳಿವೆ ಹೌದು, ಈ ಸಿಪ್ಪೆ ನಮ್ಮ ನಾಲಿಗೆಗೆ ರುಚಿಯಾಗಿಲ್ಲದಿದ್ದರೂ, ಚರ್ಮ ಹಾಗೂ ಮೊಡವೆ ಅತ್ಯುತ್ತಮವಾಗಿದೆ.


ಉಪಯೋಗಿಸುವ ವಿಧಾನ

ದಾಳಿಂಬೆಯ ಸಿಪ್ಪೆಯ ಭಾಗಗಳನ್ನು ಚೆನ್ನಾಗಿ ಬಿಸಿಲಿನಲ್ಲಿ ಒಣಗಿಸಿ. ಒಂದು ಹಿಡಿಯಷ್ಟು ಒಣ ಸಿಪ್ಪೆಗಳನ್ನು ಚಿಕ್ಕದಾಗಿ ಪುಡಿ ಮಾಡಿಕೊಂಡು ದಪ್ಪತಳದ ಬಾಣಲೆಯಲ್ಲಿ ಸಣ್ಣ ಉರಿಯಲ್ಲಿ ಹುರಿಯಿರಿ. ಸ್ವಲ್ಪ ಕಂದುಬಣ್ಣ ಬಂದ ಬಳಿಕ ಪಾತ್ರೆಯ ಮುಚ್ಚಳದ ಮೇಲೆ ಹರಡಿ ತಣಿಯಲು ಬಿಡಿ. ತಣಿದ ಪುಡಿಯನ್ನು ನೀರಿಲ್ಲದೇ ಮಿಕ್ಸಿಯಲ್ಲಿ ನುಣ್ಣಗೆ ಪುಡಿಮಾಡಿ. ಈ ಪುಡಿಯನ್ನು ಗಾಳಿಯಾಡದ ಬಾಟಲಿಯಲ್ಲಿ ಹಾಕಿಡಿ. ಪ್ರತಿದಿನ ರಾತ್ರಿ ಮಲಗುವ ಮುನ್ನ ಸಮಪ್ರಮಾಣದ ಲಿಂಬೆರಸ ಅಥವಾ ಗುಲಾಬಿನೀರಿನಲ್ಲಿ ಮಿಶ್ರಣಮಾಡಿ ಲೇಪನ ತಯಾರಿಸಿಕೊಳ್ಳಿ.
ಈ ಲೇಪನವನ್ನು ಮೊಡವೆಗಳ ಮೇಲೆ ದಪ್ಪನಾಗಿಯೂ, ಇತರೆಡೆ ತೆಳುವಾಗಿಯೂ ಲೇಪಿಸಿ. ಸುಮಾರು ಅರ್ಧ ಗಂಟೆಯಿಂದ ಒಂದು ಗಂಟೆಯವರೆಗೆ ಹಾಗೇ ಒಣಗಲು ಬಿಟ್ಟು ಬಳಿಕ ತಣ್ಣೀರಿನಿಂದ ತೊಳೆದುಕೊಳ್ಳಿ (ಸೋಪು ಉಪಯೋಗಿಸದಿರಿ). ಒಂದು ವೇಳೆ ಮೊಡವೆಗಳು ತುಂಬಾ ಹೆಚ್ಚಿದ್ದರೆ ಲಿಂಬೆರಸದ ಪ್ರಮಾಣ ಕಡಿಮೆ ಮಾಡಿ, ಅಗತ್ಯವಿದ್ದಷ್ಟು ನೀರು ಸೇರಿಸಿ ಲೇಪನವನ್ನು ತೆಳುವಾಗಿ ಹಚ್ಚಿ ಇಡಿಯ ರಾತ್ರಿ ಬಿಡಿ, ಬೆಳಿಗ್ಗೆ ತಣ್ಣೀರಿನಿಂದ ತೊಳೆದುಕೊಳ್ಳಿ.

ಬಾಳೆಹಣ್ಣಿನ ಸಿಪ್ಪೆ
ಬಾಳೆಹಣ್ಣಿನ ಸಿಪ್ಪೆಯು ತ್ವಚೆಗೆ ಪೋಷಕಾಂಶಗಳನ್ನು ಒದಗಿಸುವುದರಲ್ಲಿ ಪ್ರಮುಖ ಪಾತ್ರವಹಿಸುತ್ತದೆ. ನೀವು ಮಾಡಬೇಕಾದದು ಇಷ್ಟೇ, ಬಾಳೆಹಣ್ಣಿನ ಸಿಪ್ಪೆಯನ್ನು ರುಬ್ಬಿಕೊಳ್ಳಿ ಮತ್ತು ಅದಕ್ಕೆ ಮೊಟ್ಟೆಯ ಹಳದಿ ಭಾಗವನ್ನು ಬೆರೆಸಿ ಪೇಸ್ಟ್ ಮಾಡಿಕೊಳ್ಳಿ. ಈ ಪೇಸ್ಟನ್ನು ಮುಖಕ್ಕೆ ಹಚ್ಚಿ 15 ನಿಮಿಷಗಳ ಕಾಲ ಬಿಡಿ ಮತ್ತು ನಂತರ ತೊಳೆಯಿರಿ. ಈ ಪ್ಯಾಕ್ ನಿಮ್ಮ ಮುಖದಲ್ಲಿರುವ ಕಲೆಗಳನ್ನು ಮತ್ತು ಸುಕ್ಕುಗಳನ್ನು ನಿವಾರಿಸುತ್ತದೆ.

ಸೌತೆಕಾಯಿ ಸಿಪ್ಪೆ

ಸೌತೆಕಾಯಿಯ ಸಿಪ್ಪೆಯಲ್ಲಿ ವಿಟಮಿನ್ ಎ ಮತ್ತು ಕೆ ಇದೆ. ಈ ಎರಡು ವಿಟಮಿನ್‌ಗಳನ್ನು ನಿಮ್ಮ ದೈನಂದಿನ ಆಹಾರಕ್ರಮದಲ್ಲಿ ಅಳವಡಿಸಿಕೊಂಡರೆ ತೂಕ ಕಡಿಮೆ ಮಾಡಲು, ದೃಷ್ಟಿ ಸರಿಯಾಗಿರಲು ಮತ್ತು ಎಲುಬಿನ ಆರೋಗ್ಯಕ್ಕೆ ನೆರವಾಗುತ್ತದೆ. ಸೌತೆಕಾಯಿ ನೆನೆಸಿದ ನೀರು, ಆಯಸ್ಸು ನೂರು!

ಸೇಬಿನ ಹಣ್ಣಿನ ಸಿಪ್ಪೆ
ಪ್ರತಿದಿನದ ಸೇಬು ಸೇವನೆಯಿಂದ ಹೃದಯ ಬಲಗೊಳ್ಳುವುದು, ಮೆದುಳಿನ ಕ್ಷಮತೆಯನ್ನು ಕ್ಷೀಣಿಸುವ ಕಾಯಿಲೆ , ಕ್ಯಾನ್ಸರ್, ಮಧುಮೇಹ ಮೊದಲಾದ ಕಾಯಿಲೆ ಗಳನ್ನು ದೂರವಿಡುವುದು. ದೇಹದಲ್ಲಿನ ಕೆಟ್ಟ ಕೊಲೆಸ್ಟ್ರಾಲ್ ಕಡಿಮೆ ಮಾಡುವುದು ಹಾಗೂ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವುದು. ಸೇಬು ಹಣ್ಣನ್ನು ಸಿಪ್ಪೆ ಸಮೇತ ತಿನ್ನುವುದು ಅಗತ್ಯ. ಏಕೆಂದರೆ ಸೇಬಿನ ಹೆಚ್ಚಿನ ಪೋಷಕಾಂಶಗಳು ತಿರುಳಿಗಿಂತ ಸಿಪ್ಪೆಯಲ್ಲಿಯೇ ಹೆಚ್ಚಾಗಿರುತ್ತವೆ. ಸೇಬು ಹಣ್ಣನ್ನು ಹಸಿಯಾಗಿಯೂ, ಹಾಲಿನೊಂದಿಗೆ ಜ್ಯೂಸ್ ಮಾಡಿಕೊಂಡು ಅಥವಾ ಬೇರೆ ಹಣ್ಣುಗಳೊಂದಿಗೆ ಮತ್ತು ರಸಾಯನದೊಂದಿಗೂ ಸೇವಿಸಬಹುದು. ಸೇಬುಹಣ್ಣಿಸ ಸೇವನೆಯ ಅದ್ಭುತ ಪ್ರಯೋಜನಗಳನ್ನು ನೋಡೋಣ

English summary

Fruit Peels That Are Healthy To Eat

Whenever we eat a fruit, the first thing most of us do is throw out the peel. Experts state that by doing so you are discarding most of the fruit's nutrients down the drain! Fruit peels are highly nutritional for your well being. By consuming these peels you are adding more vitamins and proteins to your diet.
Story first published: Tuesday, August 25, 2015, 20:08 [IST]
X
Desktop Bottom Promotion