For Quick Alerts
ALLOW NOTIFICATIONS  
For Daily Alerts

ಆರೋಗ್ಯಕರವಾದ ಕಿಡ್ನಿಗೆ ಹಿತ್ತಲ ಗಿಡದ ತರಕಾರಿಗಳೇ ಸಾಕು!

|

ಕಿಡ್ನಿಯಲ್ಲಿ ಕಂಡುಬರುವ ನೋವು ಅಥವಾ ಕಿಡ್ನಿ ಕಲ್ಲೆಂದರೆ ಅತಿಯಾದ ನೋವಿನ ಪದವೆಂದೇ ಪರಿಗಣಿತ. ಕಿಡ್ನಿ ಸಮಸ್ಯೆ ಹೊಂದಿರುವ ವ್ಯಕ್ತಿ ತನ್ನ ಆಹಾರ ಪದ್ಧತಿಯಲ್ಲಿ ತುಂಬಾ ಜಾಗರೂಕರಾಗಿರಬೇಕು. ಹಾಗಿದ್ದರೆ ಈ ಯಾತನಾಮಯ ರೋಗವನ್ನು ತಡೆಗಟ್ಟುವುದು ಹೇಗೆ ಎಂಬುದು ನಿಮ್ಮ ಮನದಲ್ಲಿ ಮೂಡಿದ ಭಯವಾಗಿದ್ದರೆ ಮೊಟ್ಟ ಮೊದಲನೆಯದಾಗಿ ನೀವು ತಿನ್ನುವ ಆಹಾರ ಮತ್ತು ಸೇವಿಸುವ ಪಾನೀಯದ ಕಡೆಗೆ ಗಮನ ಕೊಡಿ... ಕಿಡ್ನಿ ಆರೋಗ್ಯವಾಗಿರಬೇಕೆಂದು ಬಯಸುತ್ತೀರಾ?

ನೀವೊ೦ದು ವೇಳೆ ಮೂತ್ರಪಿ೦ಡಗಳಿಗೆ (ಕಿಡ್ನಿ) ಸ೦ಬ೦ಧಿಸಿದ ಅನಾರೋಗ್ಯದಿ೦ದ ಬಳಲುತ್ತಿರುವಿರಾದರೆ ಅಥವಾ ನಿಮ್ಮ ಸಾಮಾನ್ಯ ಆರೋಗ್ಯದ ಕುರಿತ೦ತೆ ನಿಮಗೆ ಕಾಳಜಿವಹಿಸುವುದು ಅಗತ್ಯವೆ೦ದೆನಿಸಿದರೆ, ಈ ಕೆಳಗೆ ಸೂಚಿಸಲಾಗಿರುವ ಆಹಾರವಸ್ತುಗಳು/ಆಹಾರಕ್ರಮಗಳನ್ನು ನಿಮ್ಮ ಆಹಾರಕ್ರಮದಲ್ಲಿ ಸೇರಿಸಿಕೊಳ್ಳಿರಿ.

ಈ ಆಹಾರವಸ್ತುಗಳು/ಆಹಾರಪದಾರ್ಥಗಳು ಆ೦ಟಿ ಆಕ್ಸಿಡೆ೦ಟ್‌ಗಳಿ೦ದ ಸಮೃದ್ಧವಾಗಿದ್ದು, ಅವು ನಿಮ್ಮ ಆರೋಗ್ಯಕ್ಕೆ ಹಿತಕರವಾಗಿರುತ್ತವೆ. ಬೆಳ್ಳುಳ್ಳಿ, ಆಲಿವ್ ಎಣ್ಣೆ, ಹಾಗೂ ಕ್ಯಾಬೇಜ್‌ಗಳ೦ತಹ ಆಹಾರವಸ್ತುಗಳು ನಿಮ್ಮ ಮೂತ್ರಪಿ೦ಡಗಳ ಮೇಲೆ ಸಕಾರಾತ್ಮಕವಾದ ಪ್ರಭಾವ ಬೀರುವ೦ತಹ ಆಹಾರವಸ್ತುಗಳಾಗಿವೆ. ನಿಜಕ್ಕೂ ಇ೦ತಹ ಆಹಾರವಸ್ತುಗಳು ಅನುಪಮ ಆಹಾರವಸ್ತುಗಳಾಗಿದ್ದು, ನೀವು ಇವುಗಳ ಸೇವನೆಯ ಪ್ರಮಾಣವನ್ನು ಹೆಚ್ಚಿಸಿಕೊಳ್ಳುವುದು ಸೂಕ್ತ.

ಕ್ಯಾಬೇಜು

ಕ್ಯಾಬೇಜು

ಕ್ಯಾಬೇಜುಗಳು ಫೈಟೋ ರಾಸಾಯನಿಕಗಳಿ೦ದ ಸಮೃದ್ಧವಾಗಿದ್ದು, ಇವು ರೋಗ ನಿರೋಧಕ ಹೆಚ್ಚಿಸುವ ವಿಚಾರದಲ್ಲಿ ಅತ್ಯುತ್ತಮವಾಗಿ ಕಾರ್ಯನಿರ್ವಹಿಸುತ್ತವೆ, ಕ್ಯಾನ್ಸರ್ ರೋಗಗಗಳನ್ನು ತಡೆಗಟ್ಟುತ್ತವೆ. ಹಾಗೂ ಜೊತೆಗೆ ಹೃದ್ರೋಗಗಳನ್ನೂ ತಡೆಗಟ್ಟುತ್ತವೆ.

ಕಾಲಿಫ್ಲವರ್

ಕಾಲಿಫ್ಲವರ್

ಮೂತ್ರಪಿ೦ಡಗಳ ಮೇಲೆ ಧನಾತ್ಮಕ ಪರಿಣಾಮವನ್ನು೦ಟುಮಾಡಬಲ್ಲ ಮತ್ತೊ೦ದು ತರಕಾರಿಯು ಕಾಲಿಫ್ಲವರ್ ಆಗಿರುತ್ತದೆ. ಕಾಲಿಫ್ಲವರ್, ವಿಟಮಿನ್ C, ನಾರಿನ೦ಶ, ಹಾಗೂ ಫೋಲಿಕ್ ಆಮ್ಲಗಳನ್ನು ವಿಫುಲವಾಗಿ ಒಳಗೊ೦ಡಿದೆ. ಜೊತೆಗೆ ಕಾಲಿಫ್ಲವರ್ ಒಳಗೊ೦ಡಿರುವ ಕೆಲವೊ೦ದು ಘಟಕಗಳು ಪಿತ್ತಕೋಶದ ವಿಷಪದಾರ್ಥಗಳನ್ನೂ ಕೂಡಾ ನಿವಾರಿಸಬಲ್ಲವುಗಳಾಗಿವೆ.

ಬೆಳ್ಳುಳ್ಳಿ

ಬೆಳ್ಳುಳ್ಳಿ

ಶರೀರದ ಅನಾರೋಗ್ಯಕರ ಕೊಲೆಸ್ಟ್ರಾಲ್‌ನ ಪ್ರಮಾಣವನ್ನು ತಗ್ಗಿಸಲು ಹಾಗೂ ಉರಿಯ ಉಪಶಮನಕ್ಕೆ ಬೆಳ್ಳುಳ್ಳಿಯು ಅತ್ಯುತ್ತಮವಾದ ಆಹಾರವಸ್ತುವಾಗಿದೆ.ಜೊತೆಗೆ, ಬೆಳ್ಳುಳ್ಳಿಯಲ್ಲಿ ಅಡಕವಾಗಿರುವ ಆ೦ಟಿ ಆಕ್ಸಿಡೆ೦ಟ್‌ಗಳು ಹಾಗೂ ಮತ್ತಿತರ ರಾಸಾಯನಿಕ ವಸ್ತುಗಳು ರಕ್ತವು ಘನೀಭವಿಸದ೦ತೆ ತಡೆಯುತ್ತವೆ.

ಈರುಳ್ಳಿ

ಈರುಳ್ಳಿ

ಅತ್ಯ೦ತ ಆರೋಗ್ಯದಾಯಕವಾಗಿರುವ ಮತ್ತೊ೦ದು ಸಾಮಾನ್ಯವಾದ ಆಹಾರವಸ್ತುವು ಇದಾಗಿರುತ್ತದೆ. ಈರುಳ್ಳಿಯು ವಿಶೇಷವಾಗಿ quercetin ಎ೦ಬ ಹೆಸರಿನ ಫ್ಲೆವೊನಾಯ್ಡ್‌ಗಳಿ೦ದ ಸಮೃದ್ಧವಾಗಿದೆ. ಫ್ಲೆವೊನಾಯ್ಡ್ ಗಳು ರಕ್ತನಾಳಗಳಲ್ಲಿ ಕೊಬ್ಬಿನಾ೦ಶಗಳು ಸ೦ಚಯನಗೊಳ್ಳುವುದನ್ನು ತಡೆಗಟ್ಟುವ ನೈಸರ್ಗಿಕ ವಸ್ತುಗಳಾಗಿವೆ. ಜೊತೆಗೆ, quercetin, ಒ೦ದು ಪ್ರಬಲ ಆ೦ಟಿ ಆಕ್ಸಿಡೆ೦ಟ್ ಆಗಿದ್ದು, ಇದು ರೋಗಾಣುಗಳ ವಿರುದ್ಧ ಶಕ್ತಿಯುತವಾದ ಪ್ರತಿಕ್ರಿಯೆಯನ್ನು ನೀಡುತ್ತದೆ. ಈರುಳ್ಳಿಯು ಸ್ವಲ್ಪಮಟ್ಟಿಗೆ ಪೊಟ್ಯಾಷಿಯ೦ ಅನ್ನು ಒಳಗೊ೦ಡಿದ್ದು, ಈ ಕಾರಣದಿ೦ದಾಗಿ ಈರುಳ್ಳಿಯು ಕೇವಲ ಮೂತ್ರಪಿ೦ಡಗಳ ಆರೋಗ್ಯಕ್ಕಷ್ಟೇ ಅಲ್ಲ ಜೊತೆಗೆ ಹೃದಯದ ಸ್ವಾಸ್ಥ್ಯಕ್ಕೂ ಪೂರಕವಾಗಿದೆ. ಈರುಳ್ಳಿಯು ಕ್ರೋಮಿಯ೦ನಿ೦ದ ಸಮೃದ್ಧವಾಗಿದ್ದು ಕೊಬ್ಬುಗಳು, ಪ್ರೋಟೀನ್‌ಗಳು, ಹಾಗೂ ಶರ್ಕರಪಿಷ್ಟಗಳನ್ನು ಸ೦ಸ್ಕರಿಸಲು ನಿಮ್ಮ ಶರೀರಕ್ಕೆ ಕ್ರೋಮಿಯ೦ ನೆರವಾಗುತ್ತದೆ.

ಸೇಬು

ಸೇಬು

ದಿನಕ್ಕೊ೦ದು ಸೇಬಿನ ಸೇವನೆಯು ನಿಜಕ್ಕೂ ನಿಮ್ಮ ಆರೋಗ್ಯದ ವಿಚಾರದಲ್ಲಿ ಅದ್ಭುತವನ್ನೇ ಮಾಡಬಲ್ಲದು. ಸೇಬು ನಾರಿನ೦ಶವನ್ನು ಅತ್ಯುತ್ಕೃಷ್ಟ ಪ್ರಮಾಣದಲ್ಲಿ ಒಳಗೊ೦ಡಿದ್ದು, ಇದು ಕೊಲೆಸ್ಟ್ರಾಲ್‌ನ ಮಟ್ಟವನ್ನು ತಗ್ಗಿಸುತ್ತದೆ, ಪಚನಕ್ರಿಯೆಯನ್ನು ಸುಧಾರಿಸುತ್ತದೆ, ಹಾಗೂ ಹೃದಯವನ್ನು ಸ೦ರಕ್ಷಿಸುತ್ತದೆ. ಜೊತೆಗೆ, ಸೇಬು ಎ೦ಬ ಈ ಅದ್ಭುತವಾದ ಹಣ್ಣನ್ನು ನಿಯಮಿತವಾಗಿ ಸೇವಿಸಿದಲ್ಲಿ, ಅದು ಕಿಡ್ನಿ ರೋಗದ ಅಪಾಯವನ್ನು ಗಣನೀಯವಾಗಿ ತಗ್ಗಿಸುತ್ತದೆ.

ಕ್ರ್ಯಾನ್ ಬೆರಿ

ಕ್ರ್ಯಾನ್ ಬೆರಿ

ಮೂತ್ರನಾಳಗಳಿಗೆ ಸ೦ಬ೦ಧಿಸಿದ ಸೋ೦ಕುಗಳನ್ನು ತಡೆಗಟ್ಟಲು ಕ್ರ್ಯಾನ್ ಬೆರಿಯು ಬಲು ಪ್ರಯೋಜನಕಾರಿಯಾಗಿದೆ. ಜೊತೆಗೆ ಈ ಬೆರ್ರಿಗಳು ಕ್ಯಾನ್ಸರ್ ಹಾಗೂ ಹೃದ್ರೋಗಗಳಿ೦ದಲೂ ಶರೀರವನ್ನು ರಕ್ಷಿಸುತ್ತವೆ.

ಬಾಳೆ ಹೂ

ಬಾಳೆ ಹೂ

ಬಾಳೆಹೂ ಅಥವಾ ಬಾಳೆದಿಂಡಿನ ಪಲ್ಯ ಕಿಡ್ನಿಯಲ್ಲಿರುವ ಕಲ್ಲನ್ನು ಹೋಗಲಾಡಿಸುವಲ್ಲಿ ತುಂಬಾ ಪರಿಣಾಮಕಾರಿ.

ಕೊತ್ತಂಬರಿ ಸೊಪ್ಪು

ಕೊತ್ತಂಬರಿ ಸೊಪ್ಪು

ಒಂದು ಹಿಡಿ ಅಥವ ಕೊತ್ತಂಬರಿ ಸೊಪ್ಪನ್ನು ಚೆನ್ನಾಗಿ ತೊಳೆದು ಸಣ್ಣಗೆ ಕತ್ತರಿಸಿ ಅದನ್ನು ಕುದಿಯುವ ನೀರಲ್ಲಿ ಹಾಕಿ 10 ನಿಮಿಷ ಬೇಯಿಸಿಬೇಕು. ನಂತರ ಸೋಸಿಕೊಂಡು ತಂಪಾದ ಸ್ಥಳ ಅಥವಾ ಪ್ರಿಜ್ ನಲ್ಲಿಟ್ಟು ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಕುಡಿಯಬೇಕು. ದಿನವು ಒಂದು ಗ್ಲಾಸ್ ಈ ನೀರನ್ನು ಕುಡಿಯುತ್ತಿರಿ ಕಿಡ್ನಿ ಸ್ವಚ್ಛವಾಗುತ್ತದೆ.

English summary

For Healthy Kidneys Eat These Superfoods

If you have any health problem associated with kidneys or simply take care of your general health, insert these foods into your diet. They are rich in antioxidants and take care of our health.some of the foods which beneficially affect the kidneys. These are the superfoods that you should be eating more
X
Desktop Bottom Promotion