For Quick Alerts
ALLOW NOTIFICATIONS  
For Daily Alerts

ಪ್ರಯಾಣದ ವೇಳೆಯಲ್ಲಿ ವಾಂತಿಯ ಸಮಸ್ಯೆಗೆ ಪರಿಹಾರವೇನು?

By Super
|

ಪ್ರಯಾಣವೆಂದರೆ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ? ಪ್ರತಿಯೊಬ್ಬರಿಗೂ ದೂರ ದೂರ ಪ್ರಯಾಣ ಮಾಡಿ ಹೊಸ ಹೊಸ ಊರುಗಳನ್ನು ನೋಡಬೇಕೆಂದಿರುತ್ತದೆ. ಕೆಲವರಿಗೆ ತಮ್ಮ ಕಾರ್ಯಚಟುವಟಿಕೆಗಳಿಂದ ಇದು ಸಾಧ್ಯವಾಗದೆ ಇದ್ದರೆ, ಮತ್ತೆ ಕೆಲವರಿಗೆ ದೂರ ಪ್ರಯಾಣವೆಂದರೆ ಅದೊಂದು ದೊಡ್ಡ ತಲೆನೋವು.

ಕೆಲವರಿಗೆ ಪ್ರಯಾಣಿಸುವಾಗ ಪಿತ್ತೋದ್ರೇಕವಾಗಿ ವಾಂತಿ ಮತ್ತು ತಲೆನೋವು ಉಂಟಾಗುತ್ತದೆ. ಇದನ್ನು ಪ್ರಯಾಣದ ರೋಗವೆನ್ನುತ್ತಾರೆ. ಪ್ರಯಾಣ ಮಾಡುವಾಗ ಕಿವಿಯೊಳಗಿನ ಆಂತರಿಕ ಅಂಗವ್ಯೂಹಕ್ಕೆ ತೊಂದರೆಯಾಗುವ ಕಾರಣದಿಂದಾಗಿ ಇದು ಉಂಟಾಗುತ್ತದೆ.

ಪ್ರಯಾಣಿಸುವಾಗ ವ್ಯಕ್ತಿಯೊಬ್ಬ ವಾಂತಿ ಮಾಡಿಕೊಳ್ಳಬಹುದು ಮತ್ತು ಇದರಿಂದ ಆತನಿಗೆ/ಆಕೆಗೆ ಪ್ರಯಾಣದ ಅತ್ಯಂತ ಕೆಟ್ಟ ಅನುಭವ ಉಂಟುಮಾಡಬಹುದು. ವಾಂತಿ ಮಾಡಿಕೊಳ್ಳುವುದರಿಂದ ನಿಶ್ಯಕ್ತಿ, ನಿರ್ಜಲೀಕರಣ ಮತ್ತು ದೇಹದಲ್ಲಿನ ಎಲೆಕ್ಟ್ರೋಲೈಟ್ಸ್ ನಾಶವಾಗುತ್ತದೆ. ಒಂದೇ ಸಮನೆ ವಾಂತಿ ಮಾಡಿಕೊಳ್ಳುವುದರಿಂದ ದೊಡ್ಡ ಮಟ್ಟದ ನಿರ್ಜಲೀಕರಣ ಉಂಟಾಗಬಹುದು. ಮುಜುಗರವನ್ನುಂಟು ಮಾಡುವ ವಾಂತಿ ಸಮಸ್ಯೆಗೆ ಫಲಪ್ರದ ಮನೆಮದ್ದುಗಳು

ಕೆಲವರು ಪ್ರಯಾಣದ ವೇಳೆ ಪಿತ್ತ ಉದ್ರೇಕವಾಗದಂತೆ ಮತ್ತು ವಾಂತಿ ಮಾಡಿಕೊಳ್ಳದಂತೆ ಮಾತ್ರೆ ತೆಗೆದುಕೊಳ್ಳುತ್ತದೆ. ಆದರೆ ಈ ಮಾತ್ರೆಗಳಿಂದ ಅರೆನಿದ್ರಾವಸ್ಥೆ ಉಂಟಾಗುತ್ತದೆ.ಇಂತಹ ಮಾತ್ರೆಗಳನ್ನು ತೆಗೆದುಕೊಂಡ ಬಳಿಕ ವ್ಯಕ್ತಿಯೊಬ್ಬ ಪ್ರಯಾಣದ ವೇಳೆ ಹೆಚ್ಚು ಚಟುವಟಿಕೆಯಿಂದ ಇರಲು ಸಾಧ್ಯವಿಲ್ಲ.

ಪ್ರಯಾಣದ ವೇಳೆ ಕೆಲವೊಂದು ಮನೆಮದ್ದುಗಳನ್ನು ತೆಗೆದುಕೊಳ್ಳುವುದರಿಂದ ಪಿತ್ತ ಮತ್ತು ವಾಂತಿಯನ್ನು ಕಡಿಮೆ ಮಾಡಬಹುದಾಗಿದೆ. ಈ ಮನೆಮದ್ದನ್ನು ತೆಗೆದುಕೊಳ್ಳುವುದರಿಂದ ನೀವು ಅರೆನಿದ್ರಾವಸ್ಥೆಯಲ್ಲಿ ಇರುವುದು ತಪ್ಪುವುದು. ಪ್ರಯಾಣದ ವೇಳೆ ಪಿತ್ತ ಮತ್ತು ವಾಂತಿಯನ್ನು ತಡೆಯಬಲ್ಲ ಕೆಲವೊಂದು ಮನೆಮದ್ದುಗಳನ್ನು ನೀವು ಪರೀಕ್ಷಿಸಬಹುದು.

ಶುಂಠಿ

ಶುಂಠಿ

ಶುಂಠಿ ವಾಂತಿ ನಿರೋಧಕ(ಇದು ವಾಂತಿ ಬರದಂತೆ ತಡೆಯುವುದು). ಇದು ಜೀರ್ಣಕ್ರಿಯೆಗೂ ಒಳ್ಳೆಯದು.ವಾಂತಿ ಮಾಡಿಕೊಳ್ಳುವ ಲಕ್ಷಣವಿದ್ದರೆ ಪ್ರಯಾಣಕ್ಕೆ ಮೊದಲು ಶುಂಠಿ ಚಾ ಕುಡಿಯಿರಿ. ಗರ್ಭಧಾರಣೆ ವೇಳೆ ಉಂಟಾಗುವಂತಹ ವಾಂತಿಯನ್ನು ತಡೆಯಲು ಇದು ಅತೀ ಉತ್ತಮ ಮತ್ತು ಸುರಕ್ಷಿತ ನೈಸರ್ಗಿಕ ವಿಧಾನ.

ಆ್ಯಪಲ್ ಸಿಡರ್ ವಿನೇಗರ್

ಆ್ಯಪಲ್ ಸಿಡರ್ ವಿನೇಗರ್

ಒಂದು ಕಪ್ ನೀರಿಗೆ ಒಂದು ಚಮಚದಷ್ಟು ಆ್ಯಪಲ್ ಸೀಡರ್ ವಿನೇಗರ್ ಹಾಕಿ. ನೀವು ಪ್ರಯಾಣಿಸುವ ಮೊದಲು ಅಥವಾ ನಿಮಗೆ ಪ್ರಯಾಣದ ವೇಳೆ ಪಿತ್ತೋದ್ರೇಕವಾಗುವಂತಿದ್ದರೆ ಈ ನೀರಿನಿಂದ ಬಾಯಿ ತೊಳೆಯಿರಿ. ಇದು ಪಿತ್ತೋದ್ರೇಕ ಮತ್ತು ವಾಂತಿಯಾಗುವುದನ್ನು ನಿಲ್ಲಿಸುತ್ತದೆ.

ಪುದೀನಾ

ಪುದೀನಾ

ವಾಂತಿಯಾಗುವುದನ್ನು ತಡೆಯಲು ಪುದೀನಾ ಚಾ ತುಂಬಾ ಸಹಾಯಕಾರಿ. ಹಸಿ ಅಥವಾ ಒಣಗಿಸಿದ ಪುದೀನಾ ಎಲೆಗಳನ್ನು ನೀರಿನಲ್ಲಿ ಕುದಿಸಿ ಅದಕ್ಕೆ ಜೇನಿನ ಹನಿಯನ್ನು ಹಾಕಿದರೆ ಸುಲಭವಾಗಿ ಪುದೀನಾ ಚಹಾ ತಯಾರಿಸಬಹುದು. ಪ್ರಯಾಣದ ವೇಳೆ ಪುದೀನಾ ಎಲೆಗಳನ್ನು ಜಗಿಯಬಹುದು. ಇದರ ಸುವಾಸನೆಯಿಂದಲೂ ವಾಂತಿಯನ್ನು ತಡೆಯಬಹುದು.

ಅಕ್ಕಿ ನೀರು

ಅಕ್ಕಿ ನೀರು

ಅಕ್ಕಿ ನೀರು ಪಿಷ್ಟಭರಿತವಾಗಿದೆ ಮತ್ತು ಹೊಟ್ಟೆಯಲ್ಲಿ ತಳಮಳ ಉಂಟುಮಾಡುವ ಆ್ಯಸಿಡ್ ಗಳನ್ನು ಇದು ತಟಸ್ಥಗೊಳಿಸುತ್ತದೆ ಇದರಿಂದ ಪಿತ್ತೋದ್ರೇಕ ಮತ್ತು ವಾಂತಿ ನಿಲ್ಲುತ್ತದೆ. ನೀರಿನಲ್ಲಿ ಬಿಳಿ ಅಕ್ಕಿಯನ್ನು ಬೇಯಿಸಿ ಮತ್ತು ಸ್ವಲ್ಪ ಸಮಯ ಬೇಯಲು ಬಿಡಿ. ಅದು ತಂಪಾದ ಬಳಿಕ ಅಕ್ಕಿಯ ನೀರನ್ನು ತೆಗೆಯಿರಿ. ಇದು ವಾಂತಿಯಿಂದ ತಕ್ಷಣ ಪರಿಹಾರ ನೀಡುತ್ತದೆ.

ಈರುಳ್ಳಿ ರಸ

ಈರುಳ್ಳಿ ರಸ

ಇದು ವಾಂತಿ ಮತ್ತು ಪಿತ್ತೋದ್ರೇಕವನ್ನು ಕ್ಷಣಮಾತ್ರದಲ್ಲಿ ನಿಲ್ಲಿಸುತ್ತದೆ. ಮಿಕ್ಸಿಗೆ ಹಾಕಿ ಕೆಲವು ಈರುಳ್ಳಿಗಳನ್ನು ಪುಡಿಮಾಡಿ ಮತ್ತು ಅದರಿಂದ ರಸ ತೆಗೆಯಿರಿ. ಇದಕ್ಕೆ ನೀವು ಪುದೀನಾ ಸಾರವನ್ನು ಸೇರಿಸಬಹುದು. ಈ ಮಿಶ್ರಣವು ಪಿತ್ತೋದ್ರೇಕ ಮತ್ತು ವಾಂತಿಯನ್ನು ನಿಲ್ಲಿಸುವಲ್ಲಿ ಅದ್ಭುತವಾಗಿ ಕೆಲಸ ಮಾಡಲಿದೆ.

ಕಾಳುಮೆಣಸು ಮತ್ತು ಲಿಂಬೆ

ಕಾಳುಮೆಣಸು ಮತ್ತು ಲಿಂಬೆ

ಇದು ತಲೆನೋವು, ಪಿತ್ತೋದ್ರೇಕ ಮತ್ತು ತಲೆತಿರುಗುವಿಕೆಯನ್ನು ತಡೆಯುತ್ತದೆ. ಉಪ್ಪು ಅಥವಾ ಕರಿಮೆಣಸನ್ನು ಬಿಸಿಯಾದ ಲಿಂಬೆರಸದೊಂದಿಗೆ ಮಿಶ್ರಣ ಮಾಡಿ ಮತ್ತು ಪ್ರಯಾಣಕ್ಕೆ ಮೊದಲು ಇದನ್ನು ಕುಡಿಯಿರಿ. ಇದು ಪಿತ್ತೋದ್ರೇಕ ಮತ್ತು ವಾಂತಿಯನ್ನು ತಡೆಯುತ್ತದೆ.

English summary

Foods That Stop Vomiting During Travel

Some people get nausea, vomiting and dizziness while travelling. This is called motion sickness and is caused by the disturbance of the vestibular apparatus in ears during to motion (travel). Take a look at some home remedies that stop nausea and vomiting before travel.
Story first published: Tuesday, June 30, 2015, 19:31 [IST]
X
Desktop Bottom Promotion