For Quick Alerts
ALLOW NOTIFICATIONS  
For Daily Alerts

ಸ್ತನ ಕ್ಯಾನ್ಸರ್‌‌‌ನ ಹೆಡೆಮುರಿ ಕಟ್ಟಿ ಹಾಕುವ ಸೂಪರ್ ಫುಡ್! ‌

|

ಕ್ಯಾನ್ಸರ್ ನಿವಾರಣೆಗೆಗಾಗಿ ನಡೆಯುತ್ತಿರುವ ಬಹುತೇಕ ಅಧ್ಯಯನಗಳು ಇಂದು ನಮ್ಮ ಜೀವನ ಶೈಲಿ ಮತ್ತು ಆಹಾರಗಳ ಸುತ್ತ ಮುತ್ತ ನಡೆಯುತ್ತಿವೆ. ಈ ಅಧ್ಯಯನಗಳನ್ನು ನಡೆಸುತ್ತಿರುವವರು ಖಚಿತ ಪಡಿಸಿರುವಂತೆ, ನಮ್ಮ ಜೀವನ ಶೈಲಿಯಲ್ಲಿ ಮತ್ತು ಆಹಾರ ಸೇವನೆಯಲ್ಲಿ ಒಂದು ಸ್ವಲ್ಪ ಬದಲವಾಣೆಯನ್ನು ಮಾಡಿಕೊಳ್ಳುವುದರಿಂದ ಆರೋಗ್ಯದಲ್ಲಿ ಗಣನೀಯ ಸುಧಾರಣೆಯನ್ನು ತಂದುಕೊಳ್ಳಬಹುದಂತೆ. ಸ್ತನ ಕ್ಯಾನ್ಸರನ್ನು ನಿವಾರಿಸಲು ಹಲವಾರು ಆಹಾರ ಪದಾರ್ಥಗಳಿವೆ. ಬ್ರೆಸ್ಟ್ ಕ್ಯಾನ್ಸರ್ ನಿಯಂತ್ರಿಸಲು ಐದು ಬೆಸ್ಟ್ ಆಹಾರ

ಮುಟ್ಟು ನಿಂತ ಅಧಿಕ ಕೊಬ್ಬನ್ನು ಸೇವಿಸುವ ಮಹಿಳೆಯರಲ್ಲಿ ಸ್ತನ ಕ್ಯಾನ್ಸರ್ ಬರುವ ಸಾಧ್ಯತೆ ಹೆಚ್ಚು. ಈ ಕೊಬ್ಬು ಅಧಿಕವಾಗಿರುವ ಆಹಾರಗಳು ಎಂದರೆ, ಎಣ್ಣೆ, ಬೆಣ್ಣೆ, ಮಾರ್ಗರೈನ್ ಮತ್ತು ಮಾಂಸದಲ್ಲಿರುವ ಕೊಬ್ಬುಗಳು ಆಗಿರಬಹುದು. ಇದರ ಜೊತೆಗೆ ಮೀನು, ಒಣ ಹಣ್ಣು ಮತ್ತು ಸಂಸ್ಕರಿಸಿದ ಆಹಾರಗಳು ಹಾಗು ಜಂಕ್ ಫುಡ್‍ಗಳು ಇದರಲ್ಲಿ ಸೇರಿರುತ್ತವೆ. ಇವೆಲ್ಲವು ನಿಮಗೆ ಕ್ಯಾನ್ಸರ್‌ನ ಕೊಡುಗೆಯನ್ನು ನೀಡುತ್ತವೆ. ಅದಕ್ಕಾಗಿ ನಾವು ಸೂಚಿಸುವ ಆಹಾರ ಪದಾರ್ಥಗಳನ್ನು ನಿಮ್ಮ ಡಯಟ್‌ನಲ್ಲಿ ಸೇರಿಸಿ, ಕ್ಯಾನ್ಸರ್‌ನಿಂದ ದೂರ ಉಳಿಯಿರಿ.

ದಾಳಿಂಬೆ ಹಣ್ಣು

ದಾಳಿಂಬೆ ಹಣ್ಣು

ದಾಳಿಂಬೆ ಹಣ್ಣುಗಳು ಸಹ ಅದ್ಭುತವಾದ ಆಂಟಿಆಕ್ಸಿಡೆಂಟ್‍ಗಳಾಗಿರುತ್ತವೆ. ಇವುಗಳಲ್ಲಿರುವ ಅಂಶವು ನಮ್ಮ ದೇಹದಲ್ಲಿನ ಕ್ಯಾನ್ಸರ್ ಕಾರಕ ಕಿಣ್ವಗಳನ್ನು ನಾಶ ಮಾಡುತ್ತವೆ ಮತ್ತು ಸ್ತನ ಕ್ಯಾನ್ಸರ್

ಬೆಳವಣಿಗೆಯಾಗದಂತೆ ಕಾಪಾಡುತ್ತವೆ. ಇದರ ಜೊತೆಗೆ ಇದು ಹೃದಯದ ಆರೋಗ್ಯದ ಮೇಲೆ ಸಹ ಒಳ್ಳೆಯ ಪರಿಣಾಮವನ್ನು ಬೀರುತ್ತದೆ.

ವಾಲ್‍ನಟ್‍ಗಳು

ವಾಲ್‍ನಟ್‍ಗಳು

ವಾಲ್‌ನಟ್‍ಗಳು ಸಹ ಸ್ತನ ಕ್ಯಾನ್ಸರನ್ನು ದೂರವಿರಿಸುವ ಸಾಮರ್ಥ್ಯವನ್ನು ಹೊಂದಿರುವ ಆಹಾರ ಪದಾರ್ಥಗಳಾಗಿವೆ. 2 ಔನ್ಸ್‌ನಷ್ಟು ಪ್ರಮಾಣದ ವಾಲ್‍ನಟ್‌ಗಳು ನಿಮ್ಮ ದೇಹದಲ್ಲಿ ಕ್ಯಾನ್ಸರ್‌ಕಾರಕ ಕೋಶಗಳ ಬೆಳವಣಿಗೆಯನ್ನು ನಿಧಾನ ಮಾಡುತ್ತವೆ. ಇವುಗಳಲ್ಲಿ ಒಮೆಗಾ-3, ಆಂಟಿ ಆಕ್ಸಿಡೆಂಟ್‌ಗಳು ಮತ್ತು ಫೈಟೊ‌ಸ್ಟೆರೊಲ್‌ಗಳು ಇರುತ್ತವೆ.

ಬ್ಲೂಬೆರ್ರಿಗಳು

ಬ್ಲೂಬೆರ್ರಿಗಳು

ಫೈಟೊನ್ಯೂಟ್ರಿಯೆಂಟ್‍ಗಳು ಸಹ ಕ್ಯಾನ್ಸರ್ ಟ್ಯೂಮರ್ ಬೆಳವಣಿಗೆಯನ್ನು ತಡೆಯುತ್ತವೆ. ಇವುಗಳ ಸ್ವಯಂ-ನಾಶದ ಪ್ರಕ್ರಿಯೆಯನ್ನು ಅಪೊಟೊಸಿಸ್ ಎಂದು ಪರಿಗಣಿಸಲಾಗಿದೆ. ಇದು ಬ್ಲೂಬೆರ್ರಿಗಳಲ್ಲಿ ಅಧಿಕ ಪ್ರಮಾಣದಲ್ಲಿ ಕಂಡು ಬರುತ್ತವೆ. ಇದರ ಜೊತೆಗೆ ಇವುಗಳಲ್ಲಿ ಪೋಷಕಾಂಶಗಳು ಅಧಿಕ ಪ್ರಮಾಣದಲ್ಲಿರುತ್ತವೆ.

ಬ್ರೊಕ್ಕೊಲಿ ಮೊಳಕೆಗಳು

ಬ್ರೊಕ್ಕೊಲಿ ಮೊಳಕೆಗಳು

ಇದು ಸ್ತನ ಕ್ಯಾನ್ಸರನ್ನು ದೂರವಿಡಲು ಅತ್ಯಂತ ಉಪಯೋಗಕಾರಿಯಾದ ಆಹಾರ ಪದಾರ್ಥ. ಇದಕ್ಕೆ ಮುಖ್ಯ ಕಾರಣ, ಇದರಲ್ಲಿ ಸಲ್ಫೊರಫೇನ್ ಎಂಬ ಆಂಟಿ ಆಕ್ಸಿಡೆಂಟ್ ಅಧಿಕ ಪ್ರಮಾಣದಲ್ಲಿರುತ್ತದೆ. ಈ ಮೊಳಕೆಗಳು ಕ್ಯಾನ್ಸರ್ ಕಾರಕ ಟ್ಯೂಮರ್ ಕೋಶಗಳನ್ನು ನಾಶಮಾಡುತ್ತವೆ.

English summary

Foods That Prevent Breast Cancer

Foods That Prevent Breast Cancer, Foods That Prevent Breast Cancer, Foods for Breast Cancer Prevention , Can Food Reduce Your Risk of Breast Cancer? ಸ್ತನ ಕ್ಯಾನ್ಸರ್‌ಗೆ ರಾಮಬಾಣ ಈ ಆಹಾರಗಳು, ಸ್ತನ ಕ್ಯಾನ್ಸರ್ ಅನ್ನು ನಿಯಂತ್ರಿಸಬಹುದೇ? ಸ್ತನ ಕ್ಯಾನ್ಸರ್ ಗೆ ಮನೆಮದ್ದು 
Story first published: Monday, April 20, 2015, 19:39 [IST]
X
Desktop Bottom Promotion