For Quick Alerts
ALLOW NOTIFICATIONS  
For Daily Alerts

ಚಳಿಗಾಲದ ಆಹಾರ ಶೈಲಿ, ಸ್ವಲ್ಪ ವೆರೈಟಿಯಾಗಿರಲಿ

|

ಚಳಿಗಾಲದಲ್ಲಿ ಬೆಚ್ಚಗೆ ಹೊದ್ದುಕೊಂಡು ಬೆಂಕಿಯ ಶಾಖವನ್ನು ಆಸ್ವಾದಿಸುತ್ತಾ ಬಿಸಿಬಿಸಿಯಾದ ಮಸಾಲಾ ಟೀ ಹೀರುತ್ತಿದ್ದರೆ ಆಹಾ, ಸ್ವರ್ಗವೇ ಧರೆಗಿಳಿದಂತಹ ಅನುಭವ. ವರ್ಷವಿಡೀ ಬಿಸಿಯ ಧಗೆಯಲ್ಲಿಯೇ ಇರುವ ನಗರಗಳ ಜನರು ವರ್ಷಕ್ಕೊಂದು ಬಾರಿಯಾದರೂ ಎತ್ತರದ ಪರ್ವತತಾಣಗಳಲ್ಲಿ ಕೆಲಕಾಲ ಕಳೆದು ಚಳಿಯ ಅನುಭವ ಅನುಭವಿಸದಿದ್ದರೆ ಏನನ್ನೋ ಕಳೆದುಕೊಂಡ ಭಾವನೆ.

ಕೆಲವೊಮ್ಮೆ ಬೆಚ್ಚಗಿನ ದಿರಿಸು ಧರಿಸಿಯೂ, ಬೆಂಕಿಯ ಶಾಖವನ್ನು ಸಾಕಷ್ಟು ಪಡೆದರೂ ದೇಹ ಶೀತ ನೆಗಡಿಯಿಂದ ಬಳಲಿ ಸುಸ್ತು, ತಲೆಸುತ್ತುವುದು ಮೊದಲಾದ ತೊಂದರೆಗಳನ್ನು ಎದುರಿಸಿದರೆ ಅದು ಚಳಿಯ ತಪ್ಪಲ್ಲ, ಬದಲಿಗೆ ನಮ್ಮ ದೇಹದೊಳಗಿನ ಬಿಸಿ ಸಾಕಷ್ಟಿಲ್ಲದಿರುವುದೇ ಕಾರಣ. ಏಕೆಂದರೆ ಬಿಸಿರಕ್ತಪ್ರಾಣಿಗಳಾದ ನಮ್ಮ ಶರೀರ ಪ್ರತಿಕ್ಷಣ ಒಳಗಿನಿಂದ ಬೆಚ್ಚಗಿರುವುದು ಅವಶ್ಯಕ. ಹಾಗಾಗಿ ಚಳಿಗಾಲದಲ್ಲಿ ದೇಹ ಬೆಚ್ಚಗಿರಲು ನಮಗೆ ವಿಶೇಷ ಆಹಾರಗಳ ಅಗತ್ಯವಿದೆ. ಈ ಆಹಾರಗಳ ಮೂಲಕ ನಮ್ಮ ಕರುಳುಗಳು ಕ್ಯಾಲೋರಿಗಳನ್ನು ಒಮ್ಮೆಲೇ ನೀಡದೇ ನಿಧಾನವಾಗಿ ಬಿಡುಗಡೆ ಮಾಡುತ್ತವೆ. ಒಂದು ಮೇಣದಬತ್ತಿ ಬೆಂಕಿಗೆ ನಿಧಾನವಾಗಿ ಕರಗಿದ ಹಾಗೆ. ತನ್ಮೂಲಕ ದೇಹ ಹೆಚ್ಚು ಹೊತ್ತು ಬೆಚ್ಚರಿಗಲು ಹಾಗೂ ಆರೋಗ್ಯದಿಂದಿರಲು ಸಾಧ್ಯವಾಗುತ್ತದೆ. ವೈದ್ಯಕೀಯ ಭಾಷೆಯಲ್ಲಿ ಇದಕ್ಕೆ ಆಹಾರದ specific dynamic action ಎಂದು ಕರೆಯುತ್ತಾರೆ.

ಸಾಮಾನ್ಯವಾಗಿ ದೇಹದ ಉಷ್ಣತೆಯು ನಮ್ಮ ದೇಹದ ಜೀರ್ಣ ಶಕ್ತಿಯನ್ನು ಆಧರಿಸಿ ನಿರ್ಧಾರವಾಗುತ್ತದೆ, ಹಾಗಾಗಿ ದೇಹದ ಉಷ್ಣಾಂಶವನ್ನು ಅಧಿಕ ಮಾಡಿಕೊಳ್ಳಿ ಮತ್ತು ಋತುಮಾನಕ್ಕೆ ತಕ್ಕಂತೆ ಉಡುಗೆಗಳನ್ನು ಧರಿಸುವುದನ್ನು ಮರೆಯಬೇಡಿ, ಇದರಿಂದ ಚಳಿಯ ಆಘಾತಕ್ಕೆ ಸಿಲುಕುವ ಭಯ ನಿಮಗೆ ಇರುವುದಿಲ್ಲ. ಬನ್ನಿ ಇನ್ನು ಆ ಆಹಾರ ಪದಾರ್ಥಗಳು ಯಾವುವು ಎಂಬ ಕುತೂಹಲವನ್ನು ನಿವಾರಿಸಿಕೊಳ್ಳಲು ಮುಂದೆ ಓದಿ...

ಮೆಣಸಿನಕಾಯಿ

ಮೆಣಸಿನಕಾಯಿ

ಮೆಣಸಿನ ಕಾಯಿ ನಿಮ್ಮ ನಾಲಿಗೆಗೆ ಖಾರವಾಗಲು ಕಾರಣವೇನು? ಅದರಲ್ಲಿರುವ ಕ್ಯಾಪ್ಸಾಸಿನ್ ಎಂಬ ರಾಸಾಯನಿಕವೇ ಇದಕ್ಕೆ ಕಾರಣ. ಇದು ನಿಮ್ಮ ನಾಲಿಗೆಗೆ ಉರಿಯುವ ಅನುಭವವನ್ನು ತರುತ್ತದೆ. ಆ ಮೂಲಕ ದೇಹದ ಉಷ್ಣತೆಯನ್ನು ಹೆಚ್ಚಿಸಿ, ನಿಮ್ಮನ್ನು ಚಳಿಗಾಲದಲ್ಲಿ ಬೆಚ್ಚಗಿಡುತ್ತದೆ. ಮಲೆನಾಡಿನಲ್ಲಿ ಗದ್ದೆ ಕೆಲಸ ಮಾಡುವ ಹೆಂಗಸರು, ತಮ್ಮ ನಾಲಿಗೆಯ ಕೆಳಗೆ ಒಂದು ಬಗೆಯ ಮೆಣಸಿನ ಕಾಯಿಯ ತುಂಡನ್ನು ಇರಿಸಿಕೊಂಡು ಕೆಲಸ ಮಾಡುತ್ತಾರಂತೆ...! ಇದು ಅವರಿಗೆ ಅಲ್ಲಿನ ಚಳಿಯಿಂದ ರಕ್ಷಣೆ ನೀಡುತ್ತದೆಯಂತೆ.

ಈರುಳ್ಳಿಗಳು

ಈರುಳ್ಳಿಗಳು

ಈರುಳ್ಳಿಗಳು ನಿಮ್ಮ ದೇಹದಲ್ಲಿ ಬೆವರನ್ನು ಉತ್ಪಾದಿಸಲು ಪ್ರಮುಖ ಪಾತ್ರವನ್ನು ನಿರ್ವಹಿಸುತ್ತವೆ. ಅಲ್ಲದೆ ಇವು ನಿಮಗೆ ಚಳಿಗಾಲದಲ್ಲಿ ಬರುವ ಕಾಯಿಲೆಗಳಿಂದ ರಕ್ಷಣೆಯನ್ನು ನೀಡುತ್ತದೆ. ಜೊತೆಗೆ ಇದು ನಿಮ್ಮನ್ನು ಬೆಚ್ಚಗೆ ಸಹ ಇಡುತ್ತದೆ. ಈರುಳ್ಳಿ ಬಜ್ಜಿ, ಪಕೋಡಾಗಳು ಏಕೆ ಈ ಕಾಲದಲ್ಲಿ ಹೆಚ್ಚು ಬಿಕರಿಯಾಗುತ್ತವೆ ಎಂದು ತಿಳಿಯಿತಲ್ಲವೇ?

ಶುಂಠಿ ಟೀ

ಶುಂಠಿ ಟೀ

ನಿಮ್ಮನ್ನು ನೀವು ಚಳಿಗಾಲದಲ್ಲಿ ಬೆಚ್ಚಗೆ ಇರಿಸಿಕೊಳ್ಳಲು ಇರುವ ಅತ್ಯಂತ ಅಗ್ಗದ ಮಾರ್ಗ ಇದಾಗಿದೆ. ಚಳಿಯಾದರೆ ಒಂದು ಕಪ್ ಶುಂಠಿ ಟೀಯನ್ನು ಸೇವಿಸಿ, ಮೈ ಬೆಚ್ಚಗೆ ಆಗಿ, ನೀವು ಆಹ್ಲಾದಕರವಾಗಿ ಇರಬಹುದು.

ಅರಿಶಿನ

ಅರಿಶಿನ

ನೀವು ತಯಾರಿಸುವ ಎಲ್ಲಾ ಆಹಾರ ಪದಾರ್ಥಗಳಿಗೆ ಅರಿಶಿನವನ್ನು ಹಾಕುತ್ತೀರಲ್ಲವೆ? ಒಂದು ವೇಳೆ ನಿಮಗೆ ಅರಿಶಿನ ಹಿಡಿಸದಿದ್ದರು ಸಹ ಈ ಕಾಲದಲ್ಲಿ ಒಂದು ಚಿಟಿಕೆ ಅರಿಶಿನವನ್ನು ಹಾಕಿ. ಇದು ನಿಮ್ಮನ್ನು ಬೆಚ್ಚಗೆ ಇರಿಸಲು ಸಹಾಯ ಮಾಡುತ್ತದೆ.

ಖಾರವಾದ ಸೂಪ್

ಖಾರವಾದ ಸೂಪ್

ಚಳಿಗಾಲದಲ್ಲಿ ಸಂಜೆಯ ಹೊತ್ತು, ಒಂದು ಕಪ್ ಬಿಸಿ ಬಿಸಿ ಸೂಪನ್ನು ಆಸ್ವಾದಿಸಿ. ಸೂಪ್‌ಗಳು ನಿಮ್ಮ ದೇಹವನ್ನು ಬೆಚ್ಚಗೆ ಮಾಡುತ್ತವೆ. ಇವು ಪೋಷಕಾಂಶಭರಿತವು ಸಹ ಆಗಿರುತ್ತವೆ. ತರಕಾರಿಗಳ ಸೂಪ್ ಈ ಕಾಲದಲ್ಲಿ ಮತ್ತಷ್ಟು ಒಳ್ಳೆಯದು.

ಕೆಫಿನ್

ಕೆಫಿನ್

ಕೆಫಿನ್ ನಿಮ್ಮ ದೇಹದಲ್ಲಿ ಜೀರ್ಣಕ್ರಿಯೆಯನ್ನು ತಾತ್ಕಾಲಿಕವಾಗಿ ಹೆಚ್ಚಿಸುತ್ತವೆ ಎಂದು ನಂಬಲಾಗಿದೆ. ಇದು ನಿಮ್ಮ ದೇಹವನ್ನು ಬೆಚ್ಚಗೆ ಸಹ ಮಾಡುತ್ತದೆ. ಆದ್ದರಿಂದ ಚಳಿಗಾಲದಲ್ಲಿ ಒಂದು ಕಪ್ ಕಾಫಿಯನ್ನು ಸೇವಿಸಲು ಹಿಂಜರಿಯಬೇಡಿ. ಆದರೆ ಬೆಚ್ಚಗೆ ಇರಬೇಕು ಎಂದು ಹೆಚ್ಚಿನ ಕಾಫಿಯನ್ನು ಸಹ ಸೇವಿಸಬೇಡಿ. ಅದು ನಿಮ್ಮ ದೇಹದ ಮೇಲೆ ಪ್ರತಿಕೂಲ ಪರಿಣಾಮವನ್ನು ಬೀರುತ್ತದೆ.

ಮಸಾಲೆಗಳು

ಮಸಾಲೆಗಳು

ಮಸಾಲೆಗಳು ಸಹ ನಿಮ್ಮ ದೇಹವನ್ನು ಬೆಚ್ಚಗೆ ಇರಿಸುತ್ತವೆ. ಆದರೆ ಅಧಿಕವಾದ ಮಸಾಲೆ ಪದಾರ್ಥಗಳು ನಿಮ್ಮ ದೇಹಕ್ಕೆ ಒಳ್ಳೆಯದಲ್ಲ. ಮಸಾಲೆ ಪದಾರ್ಥಗಳನ್ನು ಸ್ವಲ್ಪ ನೀರಿಗೆ ಹಾಕಿ, ಅದನ್ನು ಕುದಿಸಿ. ಆಮೇಲೆ ಆ ನೀರನ್ನು ಸೇವಿಸಿ.

ಒಣ ಹಣ್ಣುಗಳು

ಒಣ ಹಣ್ಣುಗಳು

ಖರ್ಜೂರ, ಅಪ್ರಿಕೋಟ್‌ಗಳು ಮತ್ತು ಇತರೆ ಒಣ ಹಣ್ಣುಗಳು ನಿಮ್ಮ ದೇಹವನ್ನು ಬೆಚ್ಚಗೆ ಇರಿಸಲು ಸಹಾಯ ಮಾಡುತ್ತವೆ. ಒಣ ಹಣ್ಣುಗಳನ್ನು ಸಾಧ್ಯವಾದಷ್ಟು ಈ ಕಾಲದಲ್ಲಿ ಸಮಯ ಸಿಕ್ಕಾಗ ಸೇವಿಸಿ.

English summary

Foods That Keep You Warm In Winter

Yes, woolen clothes might surely keep you warm in winter season but heating yourself up from inside would be a better way. And what keeps you warm from inside? Your diet. Now, let us discuss about the diet to stay warm.
X
Desktop Bottom Promotion