For Quick Alerts
ALLOW NOTIFICATIONS  
For Daily Alerts

ಸರ್ವರೋಗಕ್ಕೂ ಹಿತ್ತಲಗಿಡವೇ ಪರಿಣಾಮಕಾರಿ ಮನೆಮದ್ದು

|

ಆಧುನೀಕತೆ ನಮಗೆ ಹೊಸದಾದ ಪ್ರಪಂಚದ ಪರಿಚಯವನ್ನು ಮಾಡಿಕೊಟ್ಟಿದೆ. ನಮ್ಮ ದೈನಂದಿನ ಜೀವನ ಈ ತೆರನಾಗಿ ಮಾರ್ಪಾಡನ್ನು ಪಡೆದುಕೊಳ್ಳುತ್ತಿದ್ದು ಆಧುನಿಕವಾಗಿ ನಾವು ಬದಲಾಗುತ್ತಿದ್ದೇವೆ. ಆದರೆ ಈ ಲೋಕ ನಮಗೆ ಅನುಕೂಲಕರವಾಗಿ ಹೇಗೆ ಪ್ರತಿಕ್ರಿಯಿಸುತ್ತದೆಯೋ ಅಂತೆಯೇ ಅನಾನುಕೂಲವಾಗಿ ಕೂಡ ಕಾರ್ಯನಿರ್ವಹಿಸುತ್ತದೆ.

ಅತಿಯಾದ ಮಾರ್ಪಾಡಿನ ಪರಿಣಾಮ ಎಂಬಂತೆ ಸೋಮಾರಿತನ ನಮ್ಮನ್ನು ಬಹುವಾಗಿ ಆವರಿಸಿಕೊಳ್ಳುತ್ತಿದೆ. ಎಲ್ಲಾ ಕೆಲಸವನ್ನು ಯಂತ್ರಗಳನ್ನು ಅವಲಂಬಿಸಿ ನಾವು ಮಾಡಿಕೊಳ್ಳುತ್ತಿರುವುದರಿಂದ ಯಾಂತ್ರಿಕ ಜೀವನ ನಮ್ಮ ಪಾಲಿಗೆ ಮುಳುವಾಗಿಬಿಟ್ಟಿದೆ. ಇದರಿಂದಾಗಿ ರೋಗ ರುಜಿನಗಳ ಗೂಡು ನಾವಾಗಿ ಬಿಟ್ಟಿದ್ದೇವೆ. ಸಣ್ಣ ಪುಟ್ಟ ಕೆಲಸಗಳನ್ನು ಮಾಡಿಕೊಳ್ಳಲಾರದಷ್ಟು ಕಂಗಾಲಾಗಿ ನಾವು ಬದಲಾಗುತ್ತಿದ್ದೇವೆ. ಇದರಿಂದಾಗಿ ಸಣ್ಣ ಕಾಯಿಲೆಗಳಿಗೂ ದುಬಾರಿ ಬೆಲೆಯ ಔಷಧವನ್ನು ಪಡೆದುಕೊಳ್ಳುವ ಸ್ಥಿತಿ ಬಂದೊದಗಿಬಿಟ್ಟಿದೆ.

ಆದರೂ ಇನ್ನೂ ಕಾಲಮಿಂಚಿಲ್ಲ. ಇಂಗ್ಲೀಷ್ ಔಷಧಕ್ಕೆ ತಿಲಾಂಜಲಿ ಇಟ್ಟು ಹಿತ್ತಲ ಮದ್ದನ್ನೇ ಸರ್ವರೋಗಕ್ಕೂ ರಾಮಬಾಣವಾಗಿ ಬಳಬಹುದಾಗಿದೆ. ನೀವು ನಿಯಮಿತವಾಗಿ ಬಳಸುವ ಸಾಂಬಾರ ಪದಾರ್ಥಗಳು, ತರಕಾರಿ, ಹಣ್ಣುಹಂಪಲುಗಳೇ ನಿಮ್ಮನ್ನು ಕಾಡುವ ರೋಗಗಳಿಗೆ ರಾಮಬಾಣವಾಗಿದೆ. ಅದು ಹೇಗೆ ಎಂಬುದನ್ನು ಈ ಕೆಳಗೆ ನೀಡಲಾಗಿದೆ ನೋಡಿ..

ಅಜೀರ್ಣ ಸಮಸ್ಯೆಗೆ ಜೇನು

Foods That Have Surprising Medicinal Benefits

ಜೇನನ್ನು ಶತಮಾನಗಳಿಂದ ನಾವು ಔಷಧಗಳ ಉದ್ದೇಶಕ್ಕಾಗಿ ಬಳಸಿಕೊಂಡು ಬರುತ್ತಿದ್ದೇವೆ. ಇದು ತನ್ನ ಉಪಶಮನಕಾರಿ ಗುಣಗಳಿಂದಾಗಿ ಮತ್ತು ಗಾಯಗಳನ್ನು ಇನ್‍ಫೆಕ್ಷನ್ ಆಗದೆ ತಡೆಯುವ ಗುಣಗಳಿಂದಾಗಿ ಖ್ಯಾತಿ ಪಡೆದಿದೆ. ಜೇನಿನ ಸವಿಯ ಜೊತೆಗೆ ಅದರಲ್ಲಿರುವ ಔಷಧ ಗುಣಗಳು ಇದನ್ನು ಜನಪ್ರಿಯಗೊಳಿಸಿವೆ.
ಜಠರ ಮತ್ತು ಕರುಳುಗಳಲ್ಲಿ ಸಾಕಷ್ಟು ಪ್ರಮಾಣದ ಜಠರರಸ ಉತ್ಪತ್ತಿಯಾಗದೇ ಅಜೀರ್ಣದ ತೊಂದರೆ ಅನುಭವಿಸುವವರು ಊಟಕ್ಕೂ ಮೊದಲು ಕೊಂಚ ಜೇನು ಸೇವಿಸುವುದರಿಂದ ಉತ್ತಮ ಪರಿಹಾರ ದೊರಕುತ್ತದೆ.

ರೋಗ ನಿರೋಧ ಶಕ್ತಿ ಹೆಚ್ಚಿಸುವ ಮೂಲಂಗಿ ಎಲೆಗಳು
ಮೂಲಂಗಿ ಎಲೆಗಳು ಸಮೃದ್ಧವಾದ ಬೀಟಾ ಕೆರೋಟಿನ್‌ಗಳ ಜೊತೆ (ವಿಟಮಿನ್ ಎ ನ ನಿಷ್ಕ್ರಿಯ ರೂಪ) ಜೊತೆಗೆ ವಿಟಮಿನ್ ಕೆ ಮತ್ತು ಸಿ ಯನ್ನು ಕೂಡ ಸಾಕಷ್ಟು ಪ್ರಮಾಣದಲ್ಲಿ ಒಳಗೊಂಡಿದೆ, ಅಷ್ಟೇ ಏಕೆ ಕ್ಯಾಲ್ಸಿಯಂ ಮತ್ತು ನಾರಿನಂಶವನ್ನು ಕೂಡ ಅಗಣಿತ ಪ್ರಮಾಣದಲ್ಲಿ ತನ್ನಲ್ಲಿರಿಸಿಕೊಂಡಿದೆ. ಇವುಗಳಲ್ಲಿರುವ ಪೋಷಕಾಂಶಗಳು ಮೂಳೆಗಳಿಗೆ, ಕಣ್ಣುಗಳಿಗೆ, ರಕ್ತಕ್ಕೆ ಮತ್ತು ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವ ಗುಣಗಳನ್ನು ಹೊಂದಿರುತ್ತವೆ.

ಮಧುಮೇಹ ಹಾಗೂ ರಕ್ತದೊತ್ತಡಕ್ಕೆ ಬಾದಾಮಿ


ಕಡಿಮೆ ಕ್ಯಾಲರಿವುಳ್ಳ ಆಹಾರದೊ೦ದಿಗೆ ನೆನೆಸಿಟ್ಟಿರುವ ಬಾದಾಮಿ ಕಾಳುಗಳನ್ನು ಸೇವಿಸಿದಲ್ಲಿ, ಅವು ನಿಮ್ಮ ರಕ್ತದಲ್ಲಿನ ಸಕ್ಕರೆಯ ಅ೦ಶ, ಇನ್ಸುಲಿನ್‌ನ ಅ೦ಶ, ಹಾಗೂ ಸೋಡಿಯ೦ನ ಮಟ್ಟಗಳನ್ನು ತಗ್ಗಿಸುತ್ತವೆ ಹಾಗೂ ಮಧುಮೇಹ ಹಾಗೂ ಅಧಿಕ ರಕ್ತದೊತ್ತಡದ ಸ೦ಭಾವ್ಯವನ್ನು ನಿಯ೦ತ್ರಿಸಬಲ್ಲ ಮೆಗ್ನೀಷಿಯ೦ನ ಮಟ್ಟವನ್ನು ಶರೀರದಲ್ಲಿ ಹೆಚ್ಚಿಸುತ್ತವೆ.

ಹಲ್ಲುನೋವು, ಗಂಟಲು ನೋವಿಗೆ ಪೇರಳೆ ಎಲೆಗಳು


ಪೇರಳೆ ಎಲೆಗಳನ್ನು ಜಜ್ಜಿ ಕಡಿಮೆ ನೀರಿನಲ್ಲಿ ಬೇಯಿಸಿ ಸೋಸಿದ ನೀರಿನಿಂದ ಬೆಳಿಗ್ಗೆ ಮತ್ತು ಪ್ರತಿಬಾರಿ ಊಟದ ಬಳಿಕ ಮುಕ್ಕಳಿಸುವುದರಿಂದ ಬಾಯಿಯೊಳಗಣ ಬ್ಯಾಕ್ಟೀರಿಯಾಸಹಿತ ಇತರ ಕ್ರಿಮಿಗಳು ಹೊರದಬ್ಬಲ್ಪಡುತ್ತವೆ. ಇದೇ ಕಾರಣದಿಂದ ಹಲ್ಲುನೋವು, ಗಂಟಲು ನೋವು ಕಡಿಮೆಯಾಗುವುದು. ಒಸಡುಗಳ ನಡುವೆ ಮನೆಮಾಡಿಕೊಂಡು ಹಾಯಾಗಿದ್ದ ಕ್ರಿಮಿಗಳೆಲ್ಲಾ ನಾಶವಾಗಿರುವುದರಿಂದ ಒಸಡುಗಳು ಪುನಃಶ್ಚೇತನಗೊಳ್ಳುವುವು. ಇದೇ ಕಾರಣದಿಂದಾಗಿ ಹಲವು ಆಯುರ್ವೇದ ಹಲ್ಲು ಮಾರ್ಜಕಗಳಲ್ಲಿ ಪೇರಳೆ ಎಲೆಗಳನ್ನು ಬಳಸುತ್ತಾರೆ. ಪೇರಳೆ ಎಲೆಗಳನ್ನು ಜಜ್ಜಿ ಗಾಢವಾದ ಮಿಶ್ರಣಮಾಡಿಕೊಂಡು ಹಲ್ಲುಜ್ಜುವ ಬ್ರಶ್ ಮೂಲಕ ನೇರವಾಗಿ ಹಲ್ಲು ಮತ್ತು ಒಸಡುಗಳನ್ನು ಉಜ್ಜಲೂ ಬಳಸಬಹುದು.

ಬೆಳ್ಳುಳ್ಳಿ


ಜ್ವರವಿದ್ದಾಗ ಬೆಳಿಗ್ಗೆ ಎದ್ದ ಕೂಡಲೇ ಖಾಲಿಹೊಟ್ಟೆಯಲ್ಲಿ ಎರಡು ಎಸಳು ಹಸಿ ಬೆಳ್ಳುಳ್ಳಿಯನ್ನು ಉಗುರುಬೆಚ್ಚನೆಯ ನೀರಿನೊಂದಿಗೆ ಸೇವಿಸಿದರೆ, ತ್ವರಿತವಾಗಿ ಜ್ವರ ಕಡಿಮೆಯಾಗಿ ರೋಗ ನಿರೋಧಕ ಶಕ್ತಿಯೂ ಹೆಚ್ಚುತ್ತದೆ.

ಕೊತ್ತಂಬರಿ ಸೊಪ್ಪು


ಕೊತ್ತಂಬರಿ ಸೊಪ್ಪು ಕೇವಲ ರುಚಿಯನ್ನು ಹೆಚ್ಚಿಸುತ್ತದೆ ಎಂದು ಭಾವಿಸಿದರೆ ಅದು ದೊಡ್ಡ ತಪ್ಪಾಗುತ್ತದೆ. ಏಕೆಂದರೆ ಕೊತ್ತಂಬರಿ ಸೊಪ್ಪಿನಲ್ಲಿ ಹೇರಳವಾದ ಪೋಷಕಾಂಶಗಳಿದ್ದು ಆರೋಗ್ಯಕ್ಕೆ ಪೂರಕವಾಗಿವೆ. ಮುಖ್ಯವಾಗಿ ಚರ್ಮದ ತುರಿಕೆ, ರಕ್ತದಲ್ಲಿ ಹೆಚ್ಚಿರುವ ಕೆಟ್ಟ ಕೊಲೆಸ್ಟ್ರಾಲ್ ಕಡಿಮೆ ಮಾಡಲು, ಅತಿಸಾರ, ಬಾಯಿಯ ಹುಣ್ಣು, ರಕ್ತಹೀನತೆ, ಅಜೀರ್ಣ, ಋತುಚಕ್ರದಲ್ಲಿ ಏರುಪೇರು, ರಕ್ತದಲ್ಲಿ ಸಕ್ಕರೆಯ ಪ್ರಮಾಣದಲ್ಲಿ ಏರುಪೇರು ಹಾಗೂ ಕಣ್ಣಿನ ಆರೋಗ್ಯ ಕಾಪಾಡುವಲ್ಲಿ ಕೊತ್ತಂಬರಿ ಸೊಪ್ಪು ಉಪಯುಕ್ತವಾಗಿದೆ.
English summary

Foods That Have Surprising Medicinal Benefits

Whenever you can eat something delicious and boost your health at the same time, it's a very good thing. And while you know, for example, that fiber-packed grub can keep you fuller longer and vitamin C-filled chow amps up your immunity, certain foods have impressive advantages you might not be aware of. Get ready to have your mind blown.
Story first published: Wednesday, July 1, 2015, 20:04 [IST]
X
Desktop Bottom Promotion