For Quick Alerts
ALLOW NOTIFICATIONS  
For Daily Alerts

'ಆರೋಗ್ಯವೇ ಭಾಗ್ಯ' ಎಂಬ ಅರಿವು ಎಂದೆಂದಿಗೂ ಇರಲಿ!

|

ಊಟ ಬಲ್ಲವನಿಗೆ ರೋಗವಿಲ್ಲ ಎಂಬ ಮಾತಿನಂತೆ ನಾವು ತೆಗೆದುಕೊಳ್ಳಬೇಕಾದ ಆಹಾರ ಕ್ರಮದಲ್ಲಿ ಕೂಡ ನಮಗೆ ಹೆಚ್ಚಿನ ಕಾಳಜಿ ಇರಬೇಕು. ಹೊಟ್ಟೆ ತುಂಬಿಸಲು ಏನಾದರೊಂದನ್ನು ಸೇವಿಸಿದರಾಯಿತು ಎಂಬ ನಿರ್ಲಕ್ಷ್ಯವೇ ರೋಗಕ್ಕೆ ಆಹ್ವಾನವನ್ನು ನೀಡುತ್ತದೆ ಎಂಬುದನ್ನು ಮರೆಯಬೇಡಿ. ವ್ಯಕ್ತಿಯ ಆರೋಗ್ಯಕ್ಕೆ ಆಹಾರ ಒಂದು ಪ್ರಮುಖ ಅಂಶವಾಗಿರುವುದರಿಂದ, ಆರೋಗ್ಯಕರವಾಗಿರಲು ಆರೋಗ್ಯಕರ ಆಹಾರವನ್ನೇ ಸೇವಿಸುವುದು ಅತ್ಯವಶ್ಯಕ. ಅಷ್ಟೇ ಅಲ್ಲದೆ ಪ್ರತಿಯೊಂದು ಆಹಾರವೂ ತನ್ನದೇ ಆದ ಪ್ರಯೋಜನಗಳನ್ನು ಹೊಂದಿರುವುದರಿಂದ ಇದರಲ್ಲಿರುವ ವಿಟಮಿನ್ ಮತ್ತು ಖನಿಜಾಂಶಗಳು ನಮ್ಮ ದೇಹದಲ್ಲಿ ಸೇರಿ ಅಂಗಾಂಗಗಳು ಸರಿಯಾಗಿ ಕಾರ್ಯನಿರ್ವಹಿಸಲು ಸಕ್ರಿಯಗೊಳಿಸುತ್ತವೆ. ಆರೋಗ್ಯವೇ ಭಾಗ್ಯ ನಾಣ್ಣುಡಿ ಮರೆತು, ಕೊರಗಬೇಡಿ!

ಹಾಗಾಗಿ ಕಾಲಕಾಲಕ್ಕೆ ಆರೋಗ್ಯಕ್ಕೆ ಉತ್ತಮವಾದ ಆಹಾರವನ್ನು ಸೇವಿಸುವ ಹಾಗೂ ಶರೀರಕ್ಕೆ ಅಗತ್ಯವಾದ ವ್ಯಾಯಾಮ, ಆರಾಮ ಹಾಗೂ ಮಾನಸಿಕವಾಗಿ ಶಾಂತವಾಗಿರುವ ಮೂಲಕ ಉತ್ತಮ ಆರೋಗ್ಯವನ್ನು ಹೊಂದಬಹುದು. ಅಷ್ಟೇ ಅಲ್ಲದೆ ಇಂದು ನಮ್ಮ ದೇಹದ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವ, ಚರ್ಮದ, ಕೂದಲ ಕಾಂತಿಯನ್ನು ಹೆಚ್ಚಿಸುವ, ದೇಹದಾರ್ಢ್ಯತೆಯನ್ನು ಬಲಪಡಿಸುವ ಹಲವು ಆಹಾರಗಳು ನಮಗೆ ಲಭ್ಯವಿದೆ. ಅವುಗಳಲ್ಲಿ ಅತ್ಯುತ್ತಮವಾದ ಆಹಾರಗಳನ್ನು ಈ ಕೆಳಗೆ ನೀಡಲಾಗಿದೆ, ಮುಂದೆ ಓದಿ...

ಮೊಟ್ಟೆ

ಮೊಟ್ಟೆ

ಮೊಟ್ಟೆ ಎಂದರೆ ಸಾಧಾರಣವಾದ ಕೋಳಿಮೊಟ್ಟೆಯಲ್ಲಿ ಉತ್ತಮ ಆರೋಗ್ಯಕ್ಕೆ ಅಗತ್ಯವಾದ ಪೋಷಕಾಂಶಗಳು ಹಾಗೂ ಆಂಟಿಓಕ್ಸಿಡೆಂಟ್‌ಗಳು ಲಭ್ಯವಿದೆ. ಆದರೆ ಮೊಟ್ಟೆಯಲ್ಲಿರುವ ಹಳದಿ ಭಾಗ ಮಾತ್ರ ಹೆಚ್ಚಿನ ಕೊಲೆಸ್ಟ್ರಾಲ್ ಹೊಂದಿರುವುದರಿಂದ ಬಿಳಿಯ ಭಾಗವನ್ನು ಮಾತ್ರ ಸೇವಿಸುವುದು ಅರೋಗ್ಯಕ್ಕೆ ಉತ್ತಮ.

ಸಂಶೋಧನೆಗಳ ಪ್ರಕಾರ ಉತ್ತಮ ಆರೋಗ್ಯಕ್ಕೆ ವಾರಕ್ಕೆ ಮೂರು ಮೊಟ್ಟೆಗಳನ್ನು ಹಳದಿಭಾಗದೊಂದಿಗೆ ಸೇವಿಸಬಹುದು. ಬಿಳಿಯ ಭಾಗ ಮಾತ್ರವಾದರೆ ಎಷ್ಟು ಬೇಕಾದರೂ ಪ್ರತಿದಿನ ಸೇವಿಸಬಹುದು. ಸೇವನೆಯ ಬಗೆ: ಎರಡು ಮೊಟ್ಟೆಗಳ ಬಿಳಿಭಾಗ ಮತ್ತು ಒಂದು ಮೊಟ್ಟೆಯ ಬಿಳಿ ಮತ್ತು ಹಳದಿ ಭಾಗವನ್ನು ಜೊತೆಗೆ ಗೊಟಾಯಿಸಿ ಆಮ್ಲೆಟ್ ಮಾಡಿಕೊಂಡು ವಾರಕ್ಕೆ ಮೂರು ಬಾರಿ ಸೇವಿಸುವುದು ಉತ್ತಮ ಎಂದು ವೈದ್ಯಕೀಯ ಸಂಶೋಧನೆಗಳಿಂದ ಸಾಬೀತಾಗಿದೆ.

ಹಾಲು

ಹಾಲು

ನೈಸರ್ಗಿಕ ಹಾಲಿನಲ್ಲಿ ಕ್ಯಾಲ್ಸಿಯಂ ಹೇರಳವಾಗಿದ್ದರೂ ಅಷ್ಟೇ ಹೆಚ್ಚಾಗಿರುವ ಕೊಬ್ಬು ಆರೋಗ್ಯಕ್ಕೆ ಮಾರಕವಾಗಿದೆ. ಆ ಕಾರಣ ಕೊಬ್ಬು ರಹಿತವಾದ ಹಾಲಿನ ಸೇವನೆ ಉತ್ತಮ. ಸೇವನೆಯ ಬಗೆ: ದಿನದಲ್ಲಿ ಸೇವಿಸುವ ಟೀ ಕಾಫಿಗಳ ಹೊರತಾಗಿ ಬೆಳಗಿನ ಉಪಾಹಾರದೊಂದಿಗೂ ಸೇವಿಸಬಹುದು. ರಾತ್ರಿ ಮಲಗುವ ಮುನ್ನ ಒಂದು ಲೋಟ ಕೆನೆರಹಿತ ಹಾಲಿನ ಸೇವನೆಯಿಂದ ಉತ್ತಮ ನಿದ್ರೆಗೆ ಸಹಕಾರಿಯಾಗಿದೆ.

ಓಟ್ಸ್ ಧಾನ್ಯ

ಓಟ್ಸ್ ಧಾನ್ಯ

ಹಗುರವಾದ, ಅವಲಕ್ಕಿ ಪುಡಿಯಂತಿರುವ ಓಟ್ ಧಾನ್ಯ ಹೃದಯಸಂಬಂಧಿ ಕಾಯಿಲೆಗಳನ್ನು ತಡೆಗಟ್ಟಲು ಉತ್ತಮ ಆಹಾರವಾಗಿದೆ. ಸಿಹಿ ಸೇರಿಸದ ಓಟ್ ಧಾನ್ಯವನ್ನು ನಿಯಮಿತವಾಗಿ ಸೇವಿಸುವುದರಿಂದ 2ನೇ ವಿಧದ ಮಧುಮೇಹ ಹತೋಟಿಗೆ ಬಂದಿರುವುದು ಸಂಶೋಧನೆಗಳಿಂದ ತಿಳಿದುಬಂದಿದೆ. ಓಟ್ಸ್ ನಲ್ಲಿರುವ ಹೆಚ್ಚಿನ ಪ್ರಮಾಣದ ನಾರಿನಂಶ ಜೀರ್ಣಕ್ರಿಯೆಯನ್ನೂ ಸರಾಗಗೊಳಿಸುತ್ತದೆ.

ಸೇವನೆಯ ಬಗೆ: ಓಟ್ಸ್ ಧಾನ್ಯ ಹಗುರವಾಗಿರುವುದರಿಂದ ಹಾಗೂ ನೀರು, ಹಾಲು, ಮೊಸರುಗಳಲ್ಲಿ ಸುಲಭವಾಗಿ ಕರಗುವುದರಿಂದ ಈ ಎಲ್ಲಾ ದ್ರವಗಳೊಂದಿಗೆ ಸೇವಿಸಬಹುದು. ಹಣ್ಣುಗಳ ತುಂಡುಗಳ ಮೇಲೆ ಚಿಮಿಕಿಸಿಯೂ ಸೇವಿಸಬಹುದು. ಮೀನನ್ನು ಹುರಿಯುವ ಮೊದಲು ಓಟ್ಸ್‌ನಲ್ಲಿ ಅದ್ದಿ ಹುರಿದ ಬಳಿಕ ಸೇವಿಸಬಹುದು.

ಆಲಿವ್ ಎಣ್ಣೆ

ಆಲಿವ್ ಎಣ್ಣೆ

ದೇಹದಲ್ಲಿರುವ ಕೆಟ್ಟ ಕೊಲೆಸ್ಟ್ರಾಲ್ ಅನ್ನು ಕಡಿಮೆಗೊಳಿಸುವಲ್ಲಿ ಮತ್ತು ಉತ್ತಮ ಕೊಲೆಸ್ಟ್ರಾಲ್ ಅನ್ನು ಹೆಚ್ಚಿಸುವ ಮೂಲಕ ಆಲಿವ್ ಎಣ್ಣೆ ದೇಹಕ್ಕೆ ಅತಿ ಅಗತ್ಯವಾದ ಆಹಾರವಾಗಿದೆ. ಈ ಎಣ್ಣೆಯಲ್ಲಿರುವ ಹೆಚ್ಚಿನ ಪ್ರಮಾಣದ MUFA (MonoUnsaturated Fatty Acid) ಹಳೆಯ ಕಾಯಿಲೆಗಳನ್ನು ಗುಣಪಡಿಸುವಲ್ಲಿಯೂ, ಕ್ಯಾನ್ಸರ್ ತಡೆಗಟ್ಟುವಲ್ಲಿಯೂ ಸಹಕಾರಿಯಾಗಿದೆ. ಸೇವನೆಯ ಬಗೆ: ಈ ಎಣ್ಣೆಯನ್ನು ಹಸಿಯಾಗಿ ಸಲಾಡ್ ನೊಂದಿಗೆ ಸೇವಿಸಬಹುದು. ದಿನನಿತ್ಯದ ಕರಿಯುವ, ಹುರಿಯುವ ಎಣ್ಣೆಯಾಗಿಯೂ ಉಪಯೋಗಿಸಬಹುದು. ಚಪಾತಿ ರೊಟ್ಟಿಗಳ ಮೇಲೆ ಸವರಿಯೂ ಉಪಯೋಗಿಸಬಹುದು.

ಮೊಸರು

ಮೊಸರು

ಆದಿಕಾಲದಿಂದಲೂ ಮೊಸರು ಒಂದು ಉತ್ತಮ ಆಹಾರವೆಂದು ಪರಿಗಣಿಸಲ್ಪಟ್ಟಿದೆ. ವಾಸ್ತವವಾಗಿ ಹಾಲನ್ನು ಮೊಸರಾಗಿಸುವ ಕ್ರಿಯೆಯಲ್ಲಿ ಜಠರ ಮಾಡಬೇಕಾದ ಅರ್ಧ ಕೆಲಸ ಆಗಿರುವುದರಿಂದ ಮೊಸಲು ಜಠರದಲ್ಲಿ ಸುಲಭವಾಗಿ ಜೀರ್ಣವಾಗುತ್ತದೆ. ಇದರಲ್ಲಿರುವ ಹೆಚ್ಚಿನ ಕ್ಯಾಲ್ಸಿಯಂ ಮೂಳೆಗಳನ್ನು ದೃಢವಾಗಿಸುತ್ತದೆ ಹಾಗೂ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.

ಆದರೆ ಹಾಲಿನಂತೆಯೇ ಮೊಸರಿನಲ್ಲಿಯೂ ಕೊಬ್ಬು ಹೆಚ್ಚಿರುವುದರಿಂದ ಕೊಬ್ಬುರಹಿತ ಮೊಸರನ್ನು ಸೇವಿಸುವುದು ಸೂಕ್ತ. ಸೇವನೆಯ ಬಗೆ: ಮೊಸರನ್ನು ಯಾವುದೇ ಹಣ್ಣುಗಳೊಂದಿಗೆ ರಸಾಯನ ಮಾಡಿಕೊಂಡು ಸೇವಿಸಬಹುದು, ಅನ್ನದೊಂದಿಗೆ, ರೊಟ್ಟಿ, ಚಪಾತಿಗಳೊಂದಿಗೆ ಸಹಾ ಸೇವಿಸಬಹುದು.

English summary

Foods that can improve your life

These foods packed with nutrients and are considered great not only at fending off serious diseases but are also known to fortify your immune system and take care of your skin and hair. Maybe you have already included some of this into your daily diet, but if you haven't now is the time to begin. have a look
Story first published: Friday, October 9, 2015, 19:13 [IST]
X
Desktop Bottom Promotion