For Quick Alerts
ALLOW NOTIFICATIONS  
For Daily Alerts

ಮುಟ್ಟಿನ ನೋವನ್ನು ಕ್ಷಣ ಮಾತ್ರದಲ್ಲಿ ನಿಯಂತ್ರಿಸುವ ಸೂಪರ್ ಫುಡ್

|

ಯಾವುದೇ ಮಹಿಳೆಯು ಪ್ರತಿ ತಿಂಗಳು ಋತುಚಕ್ರದ ಅವಧಿಯಲ್ಲಿ ಕಂಡು ಬರುವ ನೋವಿನಿಂದ ಕೂಡಿದ ದಿನಗಳಿಂದ ತಪ್ಪಿಸಿಕೊಳ್ಳಲು ಸಾಧ್ಯವಾಗುವುದಿಲ್ಲ. ಆದ್ದರಿಂದ ಯಾವಾಗ ಅದರಿಂದ ತಪ್ಪಿಸಿಕೊಳ್ಳಲು ಸಾಧ್ಯವಾಗುವುದಿಲ್ಲವೋ, ಆಗ ಅವರು ಅದನ್ನು ನಿಯಂತ್ರಣದಲ್ಲಿರಿಸಿಕೊಳ್ಳುವ ಕೆಲಸವನ್ನು ಮಾಡಬೇಕು.

ಈ ನಿಟ್ಟಿನಲ್ಲಿ ಅವರ ಸಹಾಯಕ್ಕೆ ಬರುವುದು ಕೆಲವೊಂದು ಆಹಾರಗಳು. ಇದು ಮಹಿಳೆಯರಿಗೆ ಮುಟ್ಟಿನ ಜೊತೆಗೆ ಬರುವ ನೋವು, ಹೊಟ್ಟೆಯುಬ್ಬರ ಮತ್ತು ಅಸೌಖ್ಯವನ್ನು ಕಡಿಮೆ ಮಾಡುತ್ತವೆ. ಒಂದು ವೇಳೆ ನೀವು ಒಬ್ಬ ಆರೋಗ್ಯಕರ ಮಹಿಳೆಯಾಗಿದ್ದು, ಸಾಮಾನ್ಯವಾದ ಜೀವನವನ್ನು ಸಾಗಿಸುತ್ತಿದ್ದಲ್ಲಿ, ನಿಮ್ಮ ಋತುಚಕ್ರದ ಅವಧಿಯಲ್ಲಿ ಕಂಡು ಬರುವ ಸಮಸ್ಯೆಗಳಿಂದ ಖಂಡಿತ ನಿವಾರಣೆಯನ್ನು ಪಡೆಯಬಹುದು. ಆದರೆ ಒಂದು ವಿಚಾರ ಮರೆಯಬೇಡಿ. ಸಾಮಾನ್ಯವಾದ ಮುಟ್ಟಿನಲ್ಲೂ ಸಹ ನೋವು ಇದ್ದೇ ಇರುತ್ತದೆ.

ಋತುಚಕ್ರದ ಅವಧಿಯಲ್ಲಿ ಕಂಡು ಬರುವ ನೋವಿನ ಪ್ರಮಾಣದಲ್ಲಿ ವ್ಯತ್ಯಾಸಗಳು ಕಂಡು ಬರಬಹುದು. ಆದರೆ ಯಾರೇ ಆಗಲಿ ನೋವಿನಿಂದ ಮುಕ್ತರಾಗಲು ಸಾಧ್ಯವಿಲ್ಲ. ಹಾಗಾಗಿ ಇಂತಹ ಆರೋಗ್ಯಕರವಾದ ಆಹಾರ ಪದಾರ್ಥಗಳು ನಿಮಗೆ ಮುಟ್ಟಿನ ಅವಧಿಯಲ್ಲಿ ನೋವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತವೆ. ಹಾಗೆಂದು ಇವುಗಳು ಅಪರೂಪದ ಆಹಾರ ಪದಾರ್ಥಗಳೇನಲ್ಲ.

Foods To Eat During Periods

ಇವು ಸಾಧಾರಣವಾಗಿ ನಮಗೆ ದೊರೆಯುವ ಆಹಾರ ಪದಾರ್ಥಗಳೇ ಆಗಿವೆ. ಇದಕ್ಕೆ ನೀವು ಮಾಡಬೇಕಾಗಿರುವುದು ಇಷ್ಟೇ, ಮುಟ್ಟಿನ ನೋವಿನ ದಿನಗಳಲ್ಲಿ ಈ ಆಹಾರ ಪದಾರ್ಥಗಳನ್ನು ತಪ್ಪದೆ ಸೇವಿಸಿ. ಯಮಯಾತನೆ ನೀಡುವ ಮುಟ್ಟಿನ ನೋವಿಗೆ ಪರಿಹಾರವೇನು?

ನೀರು
ಕುಡಿಯುವ ನೀರಿನ ಸಾಮಾರ್ಥ್ಯವನ್ನು ಕಡಿಮೆಯಾಗಿ ಅಂದಾಜು ಮಾಡಬೇಡಿ. ಮುಟ್ಟಿನ ಅವಧಿಯಲ್ಲಿ ಆದಷ್ಟು ಹೆಚ್ಚಾಗಿ ನೀರು ಕುಡಿಯಿರಿ. ಪ್ರತಿ ದಿನ ಕನಿಷ್ಠ ಎರಡು ಲೀಟರ್ ನೀರು ಕುಡಿದರೆ, ನೀವು ಕಳೆದುಕೊಂಡಿರುವ ಚೈತನ್ಯವನ್ನು ಪುನಃ ಪಡೆಯಬಹುದು. ಇದು ನಿಮ್ಮ ದೇಹದ ಆರೋಗ್ಯದ ಸಮತೋಲವನ್ನು ಕಾಪಾಡುತ್ತದೆ. ಒಂದು ವೇಳೆ ನೀವು ಈ ಅವಧಿಯಲ್ಲಿ ಕಾಫಿ ಅಥವಾ ಟೀಯಂತಹ ಕೆಫಿನ್ ಇರುವ ಪಾನೀಯಗಳನ್ನು ಸೇವಿಸಲು ಹೋದರೆ, ಅವುಗಳು ನಿಮ್ಮ ಅಸೌಖ್ಯವನ್ನು ಹೆಚ್ಚು ಮಾಡುತ್ತವೆ.

ಬಾಳೆಹಣ್ಣುಗಳು
ಇದು ಪೊಟಾಶಿಯಂನ ಒಂದು ಸಮೃದ್ಧ ಮೂಲವಾಗಿದೆ. ಇದರಲ್ಲಿ ವಿಟಮಿನ್ ಬಿ ಅಧಿಕ ಪ್ರಮಾಣದಲ್ಲಿದ್ದು, ಇದು ಜೀರ್ಣ ಕ್ರಿಯೆಯನ್ನು ಸುಗಮಗೊಳಿಸುತ್ತದೆ. ನೀವು ಮುಟ್ಟಿನ ಅವಧಿಯಲ್ಲಿದ್ದಾಗ ಪ್ರತಿ ದಿನ ಎರಡು ಬಾಳೆಹಣ್ಣುಗಳನ್ನು ಸೇವಿಸಿ. ಇದರಿಂದ ನಿಮಗೆ ಸ್ವಲ್ಪ ಆರಾಮ ದೊರೆಯುತ್ತದೆ. ನಿಮಗೆ ಅನುಕೂಲವಾಗಿದ್ದಲ್ಲಿ, ಬಾಳೆಹಣ್ಣಿನ ಸ್ಮೂಥಿಯನ್ನು ಸಹ ಸೇವಿಸಿ, ದುಪ್ಪಟ್ಟು ಪ್ರಯೋಜನವನ್ನು ನಿಮ್ಮದಾಗಿಸಿಕೊಳ್ಳಿ. ಆಗ ಅಧಿಕ ಪ್ರಮಾಣದ ಕ್ಯಾಲ್ಸಿಯಂ ನಿಮ್ಮ ದೇಹ ಸೇರುತ್ತದೆ.

ಬೆರ್ರಿಗಳು
ರಾಸ್ಪ್‌ಬೆರ್ರಿಗಳು, ಕ್ರಾನ್‌ಬೆರ್ರಿಗಳು, ಸ್ಟ್ರಾಬೆರ್ರಿಗಳು, ಬ್ಲೂಬೆರ್ರಿಗಳು, ಚೆರ್ರಿಗಳು- ಈ ಅವಧಿಯಲ್ಲಿ ನಿಮ್ಮ ಉಪಯೋಗಕ್ಕೆ ಬರುತ್ತವೆ. ಇವುಗಳು ಈ ಅವಧಿಯಲ್ಲಿ ನಿಮಗೆ ರುಚಿಯನ್ನು ಒದಗಿಸುವುದರ ಜೊತೆಗೆ ಆರೋಗ್ಯಕ್ಕು ಸಹ ಒಳ್ಳೆಯದನ್ನು ಮಾಡುತ್ತವೆ. ಮುಟ್ಟಿನ ಅವಧಿಯಲ್ಲಿ ಸ್ನ್ಯಾಕ್ಸ್ ರೂಪದಲ್ಲಿ ಇದನ್ನು ಸೇವಿಸಿ.

ಚಾಕೊಲೆಟ್‍ಗಳು
ಕೆಫಿನ್ ಮತ್ತು ಸಕ್ಕರೆ ಅಧಿಕವಾಗಿರುವ ಚಾಕೊಲೆಟನ್ನು ಈ ಅವಧಿಯಲ್ಲಿ ಸೇವಿಸುವುದು ನಿಜಕ್ಕೂ ಚರ್ಚಾರ್ಹ ಸಂಗತಿಯಾಗಿರುತ್ತದೆ. ಆದರೆ ಮುಟ್ಟಿನ ಅವಧಿಯಲ್ಲಿ ಡಾರ್ಕ್ ಚಾಕೊಲೆಟ್ ಸೇವಿಸುವುದರಿಂದ ನಿಮ್ಮ ದೇಹಕ್ಕೆ ಅಗತ್ಯ ಪ್ರಮಾಣದ ಮೆಗ್ನಿಶಿಯಂ ದೊರೆಯುತ್ತದೆ. ಇದು ಈ ಅವಧಿಯಲ್ಲಿ ನಿಮಗೆ ಅತ್ಯಾವಶ್ಯಕ. ಇದರ ಜೊತೆಗೆ ಚಾಕೊಲೆಟ್ ಸೆರೊಟೊನಿನ್ ಬಿಡುಗಡೆ ಮಾಡುತ್ತದೆ. ಇದು ಉತ್ಸಾಹದಾಯಕವಾದ ರಾಸಾಯನಿಕವಾಗಿದ್ದು, ಅದು ಈ ಅವಧಿಯಲ್ಲಿ ನಿಮ್ಮ ಮೂಡ್ ಅನ್ನು ಲವಲವಿಕೆಯಿಂದ ಇರಿಸುತ್ತದೆ. ಅನಿಯಮಿತ ಮುಟ್ಟಿನ ಸಮಸ್ಯೆಗಳನ್ನು ನಿವಾರಿಸುವುದು ಹೇಗೆ?

ಒಣ ಹಣ್ಣುಗಳು
ಈ ಅಸೌಖ್ಯಕರವಾದ ದಿನಗಳಲ್ಲಿ, ನೀವು ಸ್ವಲ್ಪ ಸ್ನ್ಯಾಕ್ಸ್ ಸೇವಿಸಬೇಕು ಎಂದು ಇಷ್ಟಪಡುವುದರಲ್ಲಿ ತಪ್ಪೇನಿಲ್ಲ. ಆದರೆ ಅದಕ್ಕಾಗಿ ಕರಿದ ಮತ್ತು ಕೊಬ್ಬಿನ ಅಂಶದಿಂದ ಕೂಡಿದ ತಿಂಡಿಗಳನ್ನು ಸೇವಿಸಬೇಡಿ. ಬದಲಿಗೆ ಒಣ ಹಣ್ಣುಗಳನ್ನು ಸೇವಿಸಿ. ಇದು ನಿಮ್ಮ ದೇಹಕ್ಕೆ ಅಧಿಕ ಸಕ್ಕರೆ, ಉಪ್ಪು, ಎಣ್ಣೆ, ಕೊಬ್ಬು ಯಾವುದನ್ನು ಸೇರ್ಪಡೆ ಮಾಡುವುದಿಲ್ಲ. ಈ ಆಹಾರ ಪದಾರ್ಥಗಳನ್ನು ಸೇವಿಸಿ. ನಿಮ್ಮ ಆ ನೋವಿನ ದಿನಗಳಲ್ಲಿ ಸ್ವಲ್ಪ ಮಟ್ಟಿಗೆ ಆರಾಮವನ್ನು ಪಡೆಯಿರಿ. ಇದರ ಜೊತೆಗೆ ನಿಮ್ಮ ದೇಹವನ್ನು ಸುಸ್ಥಿತಿಯಲ್ಲಿಡಲು, ವ್ಯಾಯಾಮವನ್ನು ಮಾಡಲು ಮರೆಯಬೇಡಿ. ವ್ಯಾಯಾಮ ಮಾಡುವ ದೇಹವು ಈ ನೋವನ್ನು ಸುಲಭವಾಗಿ ತಡೆಯುತ್ತದೆ. ಜೊತೆಗೆ ನಿಮಗೆ ಕನಿಷ್ಠ ಮಟ್ಟದ ಅಸೌಖ್ಯವನ್ನು ಒದಗಿಸುತ್ತದೆ.

ತುಳಸಿ
ತುಳಸಿ ಪ್ರಬಲ ನೋವುನಿವಾರಕ ಕೆಫಿಕ್ ಆಮ್ಲ ಒಳಗೊಂಡಿರುವುದರಿಂದ ನೀವು ಮುಟ್ಟಿನ ನೋವು ಕಾಣಿಸಿಕೊಂಡ ಸಮಯದಲ್ಲಿ ತುಳಸಿಯನ್ನು ಹೆಚ್ಚಾಗಿ ಸೇವಿಸುವುದು ಒಳ್ಳೆಯದು. ಮಸಾಲೆಗಳಲ್ಲಿ ಅದನ್ನು ಬಳಸಿ ಅಥವಾ ನಿಮ್ಮ ಹರ್ಬಲ್ ಚಹಾದೊಂದಿಗೆ ತುಳಸಿಯನ್ನು ಸೇರಿಸಿ , ಮತ್ತು ಇದು ಹೇಗೆ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ ಎಂಬುದನ್ನು ನೀವೇ ನೋಡಿ!

ಶುಂಠಿ
ಶುಂಠಿ ಋತುಚಕ್ರದ ಸಮಯದಲ್ಲಿ ಒಂದು ನೋವು ನಿವಾರಕ ಏಜೆಂಟ್ ರೀತಿಯಲ್ಲಿ ಕೆಲಸ ಮಾಡುತ್ತದೆ. ಜೊತೆಗೆ, ಇದು ನಿಮ್ಮ ಅನಿಯಮಿತ ಋತುಚಕ್ರವನ್ನು ನಿಯಮಿತವಾಗಿ ನಡೆಯಲು ಸಹಾಯಮಾಡುತ್ತದೆ. ಪರಿಣಾಮಕಾರಿ ಪ್ರಯೋಜನಗಳನ್ನು ಕಾಣಲು ಚಹಾ ಶುಂಠಿ ಸೇವಿಸುವುದು ಉತ್ತಮ.

English summary

Foods To Eat During Periods

Every woman there is no escaping that painful part of the month. And to make this period pass comfortably there are foods to eat during periods that ease the pain, bloating and discomfort. All that you need to do is to make sure to include them in your diet especially during these painful days.
X
Desktop Bottom Promotion