For Quick Alerts
ALLOW NOTIFICATIONS  
For Daily Alerts

ಕಣ್ತುಂಬ ನಿದ್ದೆ-ರಾತ್ರಿಯ ಆಹಾರ ಕ್ರಮ ಹೀಗಿರಲಿ

|

ಇ೦ದು, ಸರಿಸುಮಾರು ಶೇ. 40 ರಷ್ಟು ನಗರವಾಸಿಗಳು ಕ್ರಮೇಣವಾಗಿ ಕಾಣಿಸಿಕೊಳ್ಳುವ ಹಾಗೂ ದೀರ್ಘಕಾಲೀನ ಪರಿಣಾಮಗಳನ್ನು೦ಟು ಮಾಡಬಲ್ಲ ನಿದ್ರಾಹೀನತೆಯಿ೦ದ ಬಳಲುತ್ತಿದ್ದಾರೆ. ಬದಲಾಗುತ್ತಿರುವ ಜೀವನ ಶೈಲಿ, ಒತ್ತಡ, ಹಾಗೂ ಇತರ ಅನೇಕ ಸ೦ಗತಿಗಳು ನಮ್ಮನ್ನು ಈ ಮಟ್ಟದ ನಿದ್ರಾಹೀನ ಸ್ಥಿತಿಗೆ ತ೦ದು ನಿಲ್ಲಿಸಿವೆ.

ಇಂತಹ ಸಮಸ್ಯೆಯಿಂದ ಮುಕ್ತಿ ಪಡೆಯಲು ಹಲವಾರು ಮಂದಿ ನಿದ್ದೆ ಮಾತ್ರೆಗಳನ್ನು ಸೇವಿಸುವುದು ಸಹ ಅಭ್ಯಾಸವಾಗಿ ಬಿಟ್ಟಿದೆ. ಆದರೆ ಇಂತಹ ಮಾತ್ರೆಗಳನ್ನು ಸೇವಿಸುವುದನ್ನು ಮುಂದುವರಿಸಿದರೆ, ಮುಂದೆ ಅದು ಚಟವಾಗಿ ಆರೋಗ್ಯಕ್ಕೆ ಅಪಾರ ಹಾನಿಯುಂಟು ಮಾಡುವುದು ಖಂಡಿತ. ಸುಖ ನಿದ್ದೆ ಬರಲು ಡಯಟ್ ಹೀಗಿರಲಿ

ಹೌದು ದೋಷಪೂರಿತವಾದ ನಿದ್ರಾಲಹರಿಯು ನಿಮ್ಮ ಜೀವನದ ಇತರ ಆಯಾಮಗಳ ಮೇಲೆ ದುಷ್ಪ್ರಭಾವವನ್ನು ಬೀರುವ ಸಾಧ್ಯತೆಗಳಿವೆ. ನಿದ್ರೆಯನ್ನು ಒತ್ತಾಯಪೂರ್ವಕವಾಗಿ ಪಡೆದುಕೊಳ್ಳಲು ಔಷಧಗಳ ಬಳಕೆಯು ಅಪಾಯಕಾರಿಯಾಗಬಲ್ಲದು. ಏಕೆ೦ದರೆ, ನಿಮ್ಮ ಶರೀರವು ನಿದ್ರೆ ತರುವ ಔಷಧಗಳಿಗೆ ದಾಸನಾಗಿ ಬಿಡುವ ಸಾಧ್ಯತೆಯಿರುತ್ತದೆ. ಹಾಗಾಗಿ ಇವುಗಳೆಲ್ಲಾ ಸಮಸ್ಯೆಯಿಂದ, ಮುಕ್ತಿ ಹೊಂದಿ ಸ್ವಾಭಾವಿಕವಾಗಿ ನಿದ್ದೆಯನ್ನು ಪಡೆಯುವಂತಾಗಲು ಆಹಾರ ಕ್ರಮವೂ ಕೂಡ ಅಷ್ಟೇ ಪ್ರಮುಖ ಪಾತ್ರವಹಿಸುತ್ತದೆ. ಬನ್ನಿ ಅವು ಯಾವುದು ಎಂಬುದನ್ನು ನೋಡೋಣ... ನಿದ್ದೆಯೆಂಬ ಅಮೂಲ್ಯ ವರಕ್ಕಿರುವ ಕರಾಮತ್ತೇನು?

ಹಾಲು

ಹಾಲು

ರಾತ್ರಿ ಮಲಗುವ ಮುನ್ನ ನಿಮ್ಮ ತಾಯಿ ನಿಮಗೆ ಒಂದು ಲೋಟ ಹಾಲನ್ನು ನೀಡುತ್ತಾರೆ. ಅದರ ಹಿಂದೆ ಇರುವ ಸತ್ಯಾಂಶವೇನೆಂದರೆ, ಹಾಲು ನಿದ್ದೆಯನ್ನು ಉತ್ತೇಜಿಸುತ್ತದೆ. ನಿದ್ರಾಹೀನತೆಯನ್ನು ತಡೆಗಟ್ಟತ್ತದೆ. ಹಾಲಿನಲ್ಲಿ ಟ್ರೈಪ್ಟೊಫಾನ್ ಎಂಬ ಅಮೈನೊ ಆಮ್ಲವು ಇರುತ್ತದೆ. ಇದು ಮೆದುಳಿನಲ್ಲಿ ಸೆರೊಟೊನಿನ್ ಅನ್ನು ಉತ್ಪಾದಿಸುತ್ತದೆ. ಇದೊಂದು ಸಂತೋಷವನ್ನುಂಟು ಮಾಡುವ ರಾಸಾಯನಿಕವಾಗಿದ್ದು, ನಿಮಗೆ ವಿಶ್ರಾಂತಿಯನ್ನು ನೀಡಿ, ಚೆನ್ನಾಗಿ ನಿದ್ದೆ ಮಾಡಲು ಸಹಕರಿಸುತ್ತದೆ.

ಓಟ್ಸ್

ಓಟ್ಸ್

ಇವು ದೇಹದಲ್ಲಿ ನಿಧಾನಗತಿಯಲ್ಲಿ ಮತ್ತು ನಿರಂತರವಾಗಿ ಶಕ್ತಿಯನ್ನು ಹೆಚ್ಚಿಸುತ್ತವೆ. ಇದಕ್ಕೆ ಇವುಗಳಲ್ಲಿರುವ ಮೆಲಾಟೊನಿನ್ ಎಂಬ ನಿದ್ದೆಯನ್ನು ತರಿಸುವ ಹಾರ್ಮೊನ್ ಕಾರಣವಾಗಿರುತ್ತದೆ. ಓಟ್ಸ್ ಸೇವಿಸಿದ ನಂತರ ನಿಮ್ಮ ದೇಹ ವಿಶ್ರಾಂತಿಯನ್ನು ಹೊಂದಿ, ನಿದ್ದೆಗೆ ಜಾರುತ್ತದೆ.

ಬಾದಾಮಿ

ಬಾದಾಮಿ

ಬಾದಾಮಿಗಳಲ್ಲಿ ಟ್ರೈಪ್ಟೊಫಾನ್ ಮತ್ತು ಮೆಗ್ನಿಶಿಯಂ ಅಧಿಕ ಪ್ರಮಾಣದಲ್ಲಿರುತ್ತವೆ. ಇವು ಮೆದುಳು ಮತ್ತು ಸ್ನಾಯುಗಳನ್ನು ವಿಶ್ರಾಂತಿ ಸ್ಥಿತಿಗೆ ಕೊಂಡೊಯ್ಯುತ್ತವೆ. ರಾತ್ರಿಯ ಸಮಯದಲ್ಲಿ ಸ್ವಲ್ಪ ಬಾದಾಮಿಗಳನ್ನು ಸೇವಿಸಿದರೆ ಸಾಕು ನಿದ್ದೆಗೆ ಜಾರುವುದು ಖಂಡಿತ.

ಜೇನು ತುಪ್ಪ

ಜೇನು ತುಪ್ಪ

ಚೆನ್ನಾಗಿ ನಿದ್ದೆ ಮಾಡಲು ರಾತ್ರಿಯ ಹೊತ್ತು ಮಲಗುವ ಮುನ್ನ ಒಂದು ಟೇಬಲ್ ಚಮಚ ಜೇನು ತುಪ್ಪವನ್ನು ಸೇವಿಸಿ. ಜೇನು ತುಪ್ಪವು ನಿಮ್ಮ ದೇಹಕ್ಕೆ ಅಗತ್ಯವಾದ ಗ್ಲೂಕೋಸನ್ನು ನೀಡುವುದರ ಜೊತೆಗೆ ಇದು ಮೆದುಳಿಗೆ ವಿಶ್ರಾಂತಿಯನ್ನು ನೀಡುತ್ತದೆ.

ಬಾಳೆಹಣ್ಣುಗಳು

ಬಾಳೆಹಣ್ಣುಗಳು

ಬಾಳೆಹಣ್ಣುಗಳಲ್ಲಿ ಅಧಿಕ ಪ್ರಮಾಣದ ಮೆಗ್ನಿಷಿಯಂ ಮತ್ತು ಪೊಟಾಶಿಯಂಗಳು ಇರುತ್ತವೆ. ಇವು ಸ್ನಾಯುಗಳನ್ನು ವಿಶ್ರಾಂತಿ ಸ್ಥಿತಿಗೆ ಕೊಂಡೊಯ್ಯುತ್ತವೆ. ಅಲ್ಲದೆ ಅವುಗಳಲ್ಲಿರುವ ಅಧಿಕ ಪ್ರಮಾಣದ ಕಾರ್ಬೊಹೈಡ್ರೇಟ್‌ಗಳು ಸಹ ನಿದ್ದೆಯನ್ನು ತರುತ್ತವೆ. ಪೊಟಾಶಿಯಂ ಸಹ ಆರೋಗ್ಯಕ್ಕೆ ಮತ್ತು ಸ್ಮರಣೆ ಶಕ್ತಿಗೆ ಒಳ್ಳೆಯದು.

ಚಾಮೊಮಿಲ್ಲೆ ಟೀ

ಚಾಮೊಮಿಲ್ಲೆ ಟೀ

ಇದು ನಿಮ್ಮ ದೇಹ ಮತ್ತು ಮೆದುಳಿನ ಮೇಲೆ ಉತ್ತಮ ಪರಿಣಾಮವನ್ನು ಬೀರಿ, ವಿಶ್ರಾಂತಿಯನ್ನು ನೀಡುತ್ತದೆ. ಜೊತೆಗೆ ಇದು ಉದ್ವೇಗವನ್ನು ಸಹ ನಿಯಂತ್ರಿಸುತ್ತದೆ. ರಾತ್ರಿ ಮಲಗುವಾಗ ಈ ಟೀಯನ್ನು ಸೇವಿಸುವುದರಿಂದ, ನೀವು ಚೆನ್ನಾಗಿ ನಿದ್ದೆ ಮಾಡಬಹುದು.

ಸಿಹಿ ಗೆಣಸುಗಳು

ಸಿಹಿ ಗೆಣಸುಗಳು

ಸಿಹಿ ಗೆಣಸುಗಳು ಸಹ ನಿದ್ದೆಯನ್ನು ತರುತ್ತವೆ. ಇವುಗಳಲ್ಲಿ ಕಾರ್ಬೊಹೈಡ್ರೇಟ್‌ಗಳು ಮತ್ತು ಪೊಟಾಶಿಯಂಗಳು ಅಧಿಕ ಪ್ರಮಾಣದಲ್ಲಿರುತ್ತವೆ. ಇವು ದೇಹಕ್ಕೆ ವಿಶ್ರಾಂತಿಯನ್ನು ನೀಡುತ್ತವೆ. ರಾತ್ರಿ ಮಲಗುವ ಮುನ್ನ ಸ್ನ್ಯಾಕ್ಸ್ ರೂಪದಲ್ಲಿ ಬೇಯಿಸಿದ ಸಿಹಿ ಗೆಣಸುಗಳನ್ನು ಸೇವಿಸಿ.

English summary

Foods For A Better Sleep

Sleep during night is very important for your well being. Sleeplessness may cause weight gain, anxiety, tiredness, lack of concentration, weak hair, dull skin, dark circles, decreased function of body organs such as kidney and liver.
X
Desktop Bottom Promotion