For Quick Alerts
ALLOW NOTIFICATIONS  
For Daily Alerts

ವೈರಲ್ ಜ್ವರದಿಂದ ಶೀಘ್ರ ಗುಣಮುಖರಾಗಲು ಒಂದಿಷ್ಟು ಟಿಪ್ಸ್

By Arshad
|

ವೈರಸ್ಸುಗಳ ಮೂಲಕ ಬರುವ ವೈರಲ್ ಜ್ವರ ಇಂದು ಸಾಮಾನ್ಯವಾದ ಸಂಗತಿಯಾಗಿದೆ. ಇದು ಲಿಂಗಬೇಧವಿಲ್ಲದೇ ಯಾವುದೇ ವಯಸ್ಸಿನವರನ್ನೂ ಬಾಧಿಸಬಹುದು. ವಾಸ್ತವವಾಗಿ ಇದು ರೋಗವಲ್ಲ, ನಮ್ಮ ರೋಗ ನಿರೋಧಕ ವ್ಯವಸ್ಥೆಯ ಒಂದು ಏರ್ಪಾಡು. ಪ್ರತಿಬಾರಿಯೂ ನಮಗೆ ಹೊಸ ಹೊಸ ವೈರಸ್ಸಿನಿಂದಲೇ ಜ್ವರ ಮತ್ತು ಶೀತ ಬರುತ್ತದೆ. ಏಕೆಂದರೆ ಒಮ್ಮೆ ಒಂದು ವೈರಸ್ಸಿಗೆ ದೇಹ ಪ್ರತಿರೋಧಶಕ್ತಿಯನ್ನು ಪಡೆಯಿತೋ, ಜೀವಮಾನವಿಡೀ ಆ ವೈರಸ್ಸು ನಮ್ಮನ್ನು ಬಾಧಿಸಲು ಸಾಧ್ಯವಿಲ್ಲ. ಮುಂದಿನ ಬಾರಿ ಬರುವ ಜ್ವರಕ್ಕೆ ಬೇರೆಯೇ ವೈರಸ್ಸು ಕಾರಣವಾಗುತ್ತದೆ.

ರೋಗ ನಿರೋಧಕ ಶಕ್ತಿಯನ್ನು ಬಲಪಡಿಸಲು ವೈದ್ಯರು ಹೆಚ್ಚು ದ್ರವಾಹಾರ ಸೇವಿಸಲು ಸಲಹೆ ಮಾಡುತ್ತಾರೆ. ಇದುವರೆಗೆ ಅನುಸರಿಸಿ ಫಲಪ್ರದವೆಂದು ಕಂಡುಕೊಂಡ ವಿಧಾನಗಳನ್ನು ಅನುಸರಿಸುವ ಮೂಲಕ ಹತ್ತು ದಿನಗಳ ಒಳಗೆ ಈ ಜ್ವರವನ್ನು ಕಡಿಮೆಗೊಳಿಸಬಹುದು. ಜ್ವರ ಬಂದ ಬಳಿಕ ಇದರ ಸೋಂಕು ನಮ್ಮ ರೋಗ ನಿರೋಧಕ ಶಕ್ತಿಗೇ ಸವಾಲೆಸೆಯುತ್ತದೆ. ಇದಕ್ಕೆ ಕಾರಣವಾದ ವೈರಸ್ಸಿಗನುಗುಣವಾಗಿ ನಮ್ಮ ಶರೀರ ಈ ಸೋಂಕಿನ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ.

ಸಾಮಾನ್ಯವಾಗಿ ನೀರಿನ ಕೊರತೆ ಮತ್ತು ಅದರ ಪರಿಣಾಮಗಳು, ದೇಹದ ತಾಪಮಾನದಲ್ಲಿ ಅತಿ ಹೆಚ್ಚಳ, ಚರ್ಮದಲ್ಲಿ ತುರಿಕೆ, ಚರ್ಮ ಕೆಂಪಗಾಗುವುದು, ಕೆರೆದಲ್ಲಿ ಗೀರುಗಳಾಗುವುದು, ಕೂದಲು ಉದುರುವುದು ಮತ್ತು ಇಡಿಯ ದಿನ ಸುಸ್ತು ಆವರಿಸಿರುವುದು ಮೊದಲಾದ ತೊಂದರೆಯನ್ನು ದೇಹ ಸಹಿಸಬೇಕಾಗುತ್ತದೆ. ಸಾಮಾನ್ಯ ಜ್ವರಕ್ಕೆಲ್ಲಾ ಮನೆಮದ್ದಿರುವಾಗ ವೈದ್ಯರ ಹಂಗೇಕೆ?

ಯಾವುದೇ ವೈರಸ್ಸಿಗೆ ನೇರವಾದ ಔಷಧಿಯೇ ಇಲ್ಲ. ಹಾಗಾಗಿ ವೈದ್ಯರು ಕಾಯಿಲೆಯ ಗುಣಲಕ್ಷಣಗಳನ್ನು ಗಮನಿಸಿ ಇದು ಯಾವ ವೈರಸ್ಸಿನಿಂದ ಉಂಟಾಗಿರಬಹುದೆಂಬುದನ್ನು ಸ್ಥೂಲವಾಗಿ ಅಂದಾಜಿಸಿ ಆ ನಿಟ್ಟಿನಲ್ಲಿ ದೇಹದ ರೋಗನಿರೋಧಕ ಶಕ್ತಿಯನ್ನು ಬಲಪಡಿಸುವ ಪೂರಕ ಔಷಧಿ ಮತ್ತು ಆಹಾರಗಳನ್ನು ಸಲಹೆ ಮಾಡುತ್ತಾರೆ. ಇದರಿಂದ ಜ್ವರಕ್ಕೆ ಕಾರಣವಾಗಿದ್ದ ವೈರಸ್ಸನ್ನು ದೇಹ ಎದುರಿಸಿ ಹಿಮ್ಮೆಟ್ಟಿಸಲು ಸಾಧ್ಯವಾಗುತ್ತದೆ. ಈ ಜ್ವರಗಳು ಬಂದರೆ ಪ್ರಾಣಕ್ಕೆ ಅಪಾಯ

ಈ ಜ್ವರಕ್ಕೆ ಹಲವಾರು ಮನೆಮದ್ದುಗಳೂ ಲಭ್ಯವಿದ್ದು ಇವುಗಳೊಂದಿಗೆ ಸಾಕಷ್ಟು ವಿಶ್ರಾಂತಿ ಪಡೆಯುವ ಮೂಲಕ ಹತ್ತು ದಿನಗಳ ಒಳಗೆ ಹತೋಟಿ ಪಡೆಯಬಹುದು. ಆದರೆ ವೈದ್ಯರಿಗೆ ತಿಳಿಸದೇ ಯಾವುದೇ ಔಷಧಿಗಳನ್ನು ಸೇವಿಸುವುದು ತಪ್ಪಾಗುತ್ತದೆ. ಯಾವ ಕ್ರಮಗಳನ್ನು ಅನುಸರಿಸಿದರೆ ಜ್ವರವನ್ನು ಹತ್ತು ದಿನಗಳ ಒಳಗೇ ನಿಯಂತ್ರಣಕ್ಕೆ ತರಬಹುದು ಎಂಬ ಮಾಹಿತಿಯನ್ನು ಕೆಳಗಿನ ಸ್ಲೈಡ್ ಶೋ ಮೂಲಕ ನೋಡೋಣ..

ಹೆಚ್ಚು ನೀರು ಕುಡಿಯಿರಿ

ಹೆಚ್ಚು ನೀರು ಕುಡಿಯಿರಿ

ವೈರಲ್ ಜ್ವರದ ಮೂಲಕ ಶರೀರ ಅತಿಹೆಚ್ಚು ನೀರನ್ನು ಕಳೆದುಕೊಳ್ಳುತ್ತದೆ. ಇದಕ್ಕೆ ಉತ್ತಮ ಉಪಾಯವೆಂದರೆ ಇಡಿಯ ದಿನ ಸ್ವಲ್ಪಸ್ವಲ್ಪವಾಗಿ ನೀರು ಕುಡಿಯುತ್ತಲೇ ಇರುವುದು. ಕೊಂಚ ಉಗುರು ಬೆಚ್ಚನೆಯ ನೀರಿನಲ್ಲಿ ಲಿಂಬೆರಸ ಸೇರಿಸಿ ಅಥವಾ ಜೀರಿಗೆಯನ್ನು ಕುದಿಸಿ ತಣಿಸಿದ ನೀರನ್ನು ಕುಡಿಯುತ್ತಲೇ ಬರುವುದು ಹತ್ತೇ ದಿನದಲ್ಲಿ ಜ್ವರ ಪೂರ್ಣವಾಗಿ ವಾಸಿಯಾಗಲು ನೆರವಾಗುತ್ತದೆ. ಪರ್ಯಾಯವಾಗಿ ಅನ್ನದ ಗಂಜಿ, ಹಣ್ಣಿನ ರಸಗಳನ್ನೂ ನಡುನಡುವೆ ಸೇವಿಸಬಹುದು.

ಸ್ವಚ್ಛತೆಗೆ ಹೆಚ್ಚಿನ ಆದ್ಯತೆ ನೀಡಿ

ಸ್ವಚ್ಛತೆಗೆ ಹೆಚ್ಚಿನ ಆದ್ಯತೆ ನೀಡಿ

ನಿಮ್ಮಿಂದ ಈ ಸೋಂಕು ಇತರರಿಗೂ ಹರಡಬಹುದಾದ ಸಾಧ್ಯತೆ ಇರುವುದರಿಂದ ನಿಮ್ಮ ಸ್ವಚ್ಛತೆಗೆ ಅತಿ ಹೆಚ್ಚಿನ ಪ್ರಾಮುಖ್ಯತೆ ನೀಡಿ. ಸೀನುವುದು, ಕೆಮ್ಮುವುದು ಮೊದಲಾದ ಸಂದರ್ಭಗಳಲ್ಲಿ ಕಡ್ಡಾಯವಾಗಿ ಮುಖಕ್ಕೆ ವಸ್ತವನ್ನು ಅಡ್ಡ ಹಿಡಿಯಿರಿ. ಪ್ರತಿದಿನ ಸ್ನಾನ ಮಾಡಿ ಬಟ್ಟೆಗಳನ್ನು ಬಿಸಿನೀರಿನಲ್ಲಿ ಕುದಿಸಿ ತೊಳೆಯಿರಿ. ಮಲಗುವ ಸ್ಥಳದಲ್ಲಿಯೂ ಅತಿ ಹೆಚ್ಚಿನ ಸ್ವಚ್ಛತೆ ಕಾಪಾಡಿ.

ಸಾಕಷ್ಟು ವಿಶ್ರಾಂತಿ ಪಡೆಯಿರಿ

ಸಾಕಷ್ಟು ವಿಶ್ರಾಂತಿ ಪಡೆಯಿರಿ

ಜ್ವರವಿದ್ದ ಅವಧಿಯಲ್ಲಿ ಯಾವುದೇ ದೈಹಿಕ ಚಟುವಟಿಕೆಗಳನ್ನು ನಡೆಸದಿರಿ. ಇದು ನಿಮ್ಮನ್ನು ಇನ್ನಷ್ಟು ನಿಸ್ತೇಜರನ್ನಾಗಿಸುತ್ತದೆ. ಸಾಕಷ್ಟು ವಿಶ್ರಾಂತಿ ಮತ್ತು ಮಾನಸಿಕವಾಗಿ ಒತ್ತಡರಹಿತರಾಗಿರಿ. ಇದರಿಂದ ಸೊರಗಿದ್ದ ದೇಹಕ್ಕೆ ಚೈತನ್ಯ ದೊರೆತು ಮೊದಲಿನಂತಾಗಲು ಹೆಚ್ಚಿನ ಸಮಯ ಬೇಕಾಗಿಲ್ಲ.

ಆರೋಗ್ಯಕರವಾದ ಆಹಾರ ಸೇವಿಸಿ

ಆರೋಗ್ಯಕರವಾದ ಆಹಾರ ಸೇವಿಸಿ

ಈ ಹತ್ತು ದಿನಗಳ ಕಾಲ ನಿಮ್ಮ ಆಹಾರದ ಬಗ್ಗೆ ಹೆಚ್ಚಿನ ಕಾಳಜಿ ವಹಿಸಿ. ತೂಕ ಇಳಿಸುವ ಇರಾದೆಯನ್ನು ಮುಂದಕ್ಕೆ ಹಾಕಿ. ಕಾರ್ಬೋಹೈಡ್ರೇಟ್, ಪ್ರೋಟೀನ್, ವಿಟಮಿನ್ ಮತ್ತು ಕೊಬ್ಬುಗಳಿರುವ ಆರೋಗ್ಯಕರ ಆಹಾರಗಳನ್ನು ಹೆಚ್ಚು ಹೆಚ್ಚಾಗಿ ಸೇವಿಸಿ. ಅದರಲ್ಲೂ ಸುಲಭವಾಗಿ ಜೀರ್ಣವಾಗುವ ಆಹಾರಗಳನ್ನೇ ಹೆಚ್ಚು ಸೇವಿಸಿ. ವೈದ್ಯರ ಸಲಹೆ ಮೇರೆಗೆ ಮೊಸರನ್ನು ಹೆಚ್ಚಾಗಿ ಸೇವಿಸಿ.

ಚರ್ಮದ ವ್ರಣಗಳ ಬಗ್ಗೆ ಕಾಳಜಿ ವಹಿಸಿ

ಚರ್ಮದ ವ್ರಣಗಳ ಬಗ್ಗೆ ಕಾಳಜಿ ವಹಿಸಿ

ಚರ್ಮದಲ್ಲಾದ ವ್ರಣಗಳಿಂದ ಸೂಸುವ ಕೀವು ಇತರರಲ್ಲಿಯೂ ಸೋಂಕು ಉಂಟುಮಾಡುವುದು ಖಚಿತ. ಆದುದರಿಂದ ನಿಮ್ಮ ಚರ್ಮಕ್ಕೆ ತಗುಲಿದ ಯಾವುದೇ ಬಟ್ಟೆ ಅಥವಾ ವಸ್ತುವನ್ನು ಬೇರೆಯವರಿಗೆ ನೀಡದಿರಿ. ನಿಮ್ಮ ವೈದ್ಯರೇ ಈ ತೊಂದರೆಗೆ ಸರಿಯಾದ ಔಷಧ ಮತ್ತು ಆರೈಕೆ ಸೂಚಿಸುತ್ತಾರೆ. ಅವರ ಸಲಹೆ ಮೀರಿ ಯಾವುದೇ ಕ್ರಮ ಕೈಗೊಳ್ಳದಿರಿ.

ರೋಗ ನಿರೋಧಕ ಶಕ್ತಿಯನ್ನು ವೃದ್ಧಿಸುವ ಆಹಾರ ಸೇವಿಸಿ

ರೋಗ ನಿರೋಧಕ ಶಕ್ತಿಯನ್ನು ವೃದ್ಧಿಸುವ ಆಹಾರ ಸೇವಿಸಿ

ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಲು ವಿಟಮಿನ್ ಸಿ, ಸತು, ವಿಟಮಿನ್ ಡಿ ಇರುವ ಆಹಾರಗಳನ್ನೇ ಹೆಚ್ಚು ಹೆಚ್ಚಾಗಿ ಸೇವಿಸಿ. ಕಿತ್ತಳೆ ಮತ್ತು ಲಿಂಬೆರಸಗಳು ಇದಕ್ಕೆ ಅತ್ಯುತ್ತಮ ಆಯ್ಕೆಯಾಗಿವೆ.

ಸ್ವತಃ ಔಷಧಿಗಳನ್ನು ಬಳಸಬೇಡಿ

ಸ್ವತಃ ಔಷಧಿಗಳನ್ನು ಬಳಸಬೇಡಿ

ಹಿಂದೆ ಅವರಿಗೆ ಹೀಗಾಗಿದ್ದಾಗ ಇಂತಹ ಮಾತ್ರೆ ತಿಂದು ಕಡಿಮೆಯಾಗಿತ್ತು ಎಂದು ಸಮರ್ಥಿಸಿಕೊಂಡು ಯಾವುದೇ ಮಾತ್ರೆ ಅಥವಾ ಔಷಧಿಯನ್ನು ಸೇವಿಸದಿರಿ. ಏಕೆಂದರೆ ಪ್ರತಿ ಬಾರಿಯೂ ನಿಮ್ಮ ಜ್ವರಕ್ಕೆ ಬೇರೆಯೇ ವೈರಸ್ಸು ಕಾರಣವಾಗಿರುತ್ತದೆ. ಇದರ ಹೊರತಾಗಿ ಅನುಸರಿಸಿದ ಕ್ರಮ ನಿಮ್ಮ ಆರೋಗ್ಯವನ್ನು ಇನ್ನಷ್ಟು ಕೆಡಿಸಬಹುದು. ನೆನಪಿಡಿ, ಆಂಟಿ ಬಯೋಟಿಕ್ ಔಷಧಿಗಳು ಬ್ಯಾಕ್ಟ್ರೀರಿಯಾಗಳಿಗೇ ಹೊರತು ವೈರಸ್ಸುಗಳಿಗಲ್ಲ!

ಗಿಡಮೂಲಿಕೆಗಳ ಚಹಾ ಸೇವಿಸಿ

ಗಿಡಮೂಲಿಕೆಗಳ ಚಹಾ ಸೇವಿಸಿ

ಗಿಡಮೂಲಿಕೆಗಳನ್ನು ಕುದಿಸಿ ಮಾಡಿದ ಚಹಾ ವೈರಸ್ಸುಗಳನ್ನು ಹಿಮ್ಮೆಟ್ಟಿಸಲು ಅತ್ಯುತ್ತಮವಾಗಿವೆ. ಮಗುವಿಗೆ ಹಾಲೂಡಿಸುತ್ತಿರುವ ತಾಯಂದಿರು ಮಾತ್ರ ಈ ಚಹಾ ಸೇವಿಸುವ ಮುನ್ನ ತಮ್ಮ ವೈದ್ಯರ ಅನುಮತಿ ಪಡೆಯುವುದು ಅಗತ್ಯ. ಹಸಿರು ಟೀ, ಚೆಕ್ಕೆ ಪುಡಿ ಹಾಕಿದ ಟೀ, ಶುಂಠಿ, ಕಾಳುಮೆಣಸು, ಬೆಲ್ಲ, ಲವಂಗ ಹಾಕಿ ತಯಾರಿಸಿದ ಕಷಾಯ, ಪುದೀನ ಚಹಾ ಮೊದಲಾದವು ಉತ್ತಮವಾಗಿವೆ.

English summary

Fast Ways To Recover From Viral Fever

Viral fever is nowadays a common health issue. This can affect any age and any gender. Most of the viral fevers are self-subsiding; they need no medication. Most doctors recommend rest and plenty of fluid intake for a person suffering from viral fever. With some effective tried and proven methods, you can easily heal your system within 10 days.
Story first published: Monday, November 9, 2015, 19:23 [IST]
X
Desktop Bottom Promotion