For Quick Alerts
ALLOW NOTIFICATIONS  
For Daily Alerts

ತಂಪು ಪಾನೀಯಗಳ ಹಿಂದಿದೆ, ಬೆಚ್ಚಿ ಬೀಳಿಸುವ ಸತ್ಯ

By C.M. Prasad
|

ಈಗಿನ ಜನಾಂಗಕ್ಕೆ ಹವಾಮಾನದಲ್ಲಿ ಸ್ವಲ್ಪ ಏರುಪೇರಾದರೂ ಸಹ ಸಂಕುಚಿತಕ್ಕೆ ಒಳಗಾಗಿ ಆತಂಕ ಅನುಭವಿಸುತ್ತಾರೆ. ತಾಪಮಾನದ ಪ್ರಮಾಣ ಸ್ವಲ್ಪ ಹೆಚ್ಚಾದರೂ ದಾಹ ತಡೆಯಲಾರದೆ ತಂಪು ಪಾನೀಯಗಳತ್ತ ಜನ ಮುಗಿಬೀಳುತ್ತಿರುವುದು ಸರ್ವೇಸಾಮಾನ್ಯ. ಆದರೆ ಅವುಗಳಿ೦ದ ನಮ್ಮ ಶರೀರದ ಮೇಲು೦ಟಾಗಬಹುದಾದ ಪರಿಣಾಮಗಳು ಮಾತ್ರ ಬಹು ಅಪಾಯಕಾರಿ ಆಗಿರುತ್ತದೆ ಎಂಬುದನ್ನು ಮಾತ್ರ ಗಾಳಿಗೆ ತೂರಿ ಬಿಡುತ್ತಾರೆ. ತಂಪು ಪಾನೀಯ ಕುಡಿದರೆ ಕಿಡ್ನಿ ಹಾಳಾಗುವುದೇ?

ಗಾಢವಾದ ಬಣ್ಣಗಳುಳ್ಳ ಈ ಪಾನೀಯಗಳು ಕಲಕಲ ನಿನಾದಗೈಯ್ಯುವ ಸೀಸೆಗಳಲ್ಲಿ ಹಾಗೂ ಮನಮೋಹಕವಾದ ಕ್ಯಾನ್‌ಗಳಲ್ಲಿ ತು೦ಬಿಸಲ್ಪಟ್ಟಿರುತ್ತವೆಯಾದ್ದರಿ೦ದ ಅವು ಬಲು ಆಕರ್ಷಕವಾಗಿರುತ್ತವೆ ಹಾಗೂ ಅವುಗಳ ಸ್ವಾದವ೦ತೂ ಮೈಮನಗಳನ್ನು ಪುಳಕಗೊಳಿಸುವ೦ತಿರುತ್ತವೆ. ಎಷ್ಟೇ ಆದರೂ ಕೂಡಾ, ನಮ್ಮ ಕಣ್ಣುಗಳು ಹಾಗೂ ನಮ್ಮ ನಾಲಗೆಗಳಿಗೆ ಈ ಪಾನೀಯಗಳ ಕುರಿತ೦ತೆ ಗಮನಕ್ಕೆ ಬಾರದ ಸ೦ಗತಿಗಳಾವುವೆ೦ದರೆ, ಈ ಪಾನೀಯಗಳಿ೦ದ ನಮ್ಮ ಶರೀರದ ಒಟ್ಟಾರೆ ಆರೋಗ್ಯದ ಮೇಲೆ ಉ೦ಟಾಗಬಹುದಾದ ದುಷ್ಪರಿಣಾಮಗಳು. ಅದರಲ್ಲೂ ಬೆಚ್ಚಿ ಬೀಳಿಸುವ ಸಂಗತಿಯೆಂದರೆ, ಪೇಂಟ್ ಮತ್ತು ತುಕ್ಕನ್ನು ಕರಗಿಸುವ ಹಾಗೂ ಕೈಗಾರಿಕೆಗಳಲ್ಲಿ ಬಳಕೆಗೆ ಯೋಗ್ಯವಾದ ಈ ಪಾನೀಯಗಳನ್ನು ನೀವು ಸೇವಿಸುತ್ತಿರುವುದು ನಿಜಕ್ಕೂ ದುರದೃಷ್ಟಕರ...! ಬನ್ನಿ ತಂಪು ಪಾನೀಯದ ಹಿಂದಿರುವ ಕರಳಾ ಸತ್ಯವನ್ನು ನಿಮ್ಮ ಮುಂದಿಡುತ್ತಿದ್ದೇವೆ ಮುಂದೆ ಓದಿ....

ಪೇಂಟ್‌ನ ಕಲೆಗಳನ್ನು ತೆಗೆಯಲು ಬಳಕೆ

ಪೇಂಟ್‌ನ ಕಲೆಗಳನ್ನು ತೆಗೆಯಲು ಬಳಕೆ

ಲೋಹದ ಪೀಟೋಪಕರಣಗಳ ಮೇಲೆ ಅಂಟಿಕೊಂಡಿರುವ ಪೇಂಟ್ ನ ಕಲೆಗಳನ್ನು ತೆಗೆಯಲು ತಂಪು ಪಾನೀಯಗಳನ್ನು ಬಳಸಲಾಗುತ್ತದೆ. ಟವಲ್ ಬಟ್ಟೆಯಿಂದ ಸ್ವಲ್ಪ ಪಾನೀಯವನ್ನು ನೆನೆಸಿ ಪೇಂಟ್ ಅಂಟಿರುವ ಭಾಗಕ್ಕೆ ಹಚ್ಚಿ ತಿಕ್ಕಿದರೆ, ಕಲೆಯು ಸುಲಭವಾಗಿ ಹೋಗುತ್ತದೆ. ಇದನ್ನು ನೋಡಿದರೆ ಇದರ ಸೇವನೆಯಿಂದ ನಿಮ್ಮ ದೇಹದ ಮೇಲೆ ಉಂಟಾಗುವ ಪರಿಣಾಮದ ಬಗ್ಗೆ ತಿಳಿಯಬಹುದು.

ತುಕ್ಕನ್ನು ತೆಗೆಯಬಹುದು

ತುಕ್ಕನ್ನು ತೆಗೆಯಬಹುದು

ನಿಮ್ಮ ಪ್ರಿಯವಾದ ತಂಪು ಪಾನೀಯದಿಂದ ಲೋಹದ ಮೇಲಿರುವ ತುಕ್ಕನ್ನು ಸುಲಭವಾಗಿ ತೆಗೆಯಬಹುದೆಂದು ನಿಮಗೆ ತಿಳಿದಿದೆಯೇ. ಸಾಮಾನ್ಯವಾಗಿ ತುಕ್ಕನ್ನು ಸುಲಭವಾಗಿ ತೆಗೆಯಲು ಸಾಧ್ಯವಿಲ್ಲ. ಆದರೆ ಈ ಪಾನೀಯಗಳಲ್ಲಿ ತುಕ್ಕನ್ನು ಸುಲಭವಾಗಿ ತೆಗೆಯಬಹುದಾದ ಗುಣವಿದ್ದು, ನಿಮ್ಮ ಆರೋಗ್ಯಕ್ಕೆ ಅತ್ಯಂತ ಹಾನಿಕಾರಕ.

ಶೌಚಾಲಯದ ಸ್ವಚ್ಛತೆಗೆ

ಶೌಚಾಲಯದ ಸ್ವಚ್ಛತೆಗೆ

ಶೌಚಾಲಯದಲ್ಲಿ ಉಂಟಾಗುವ ಕಠಿಣ ಕಲೆಗಳನ್ನು ತೆಗೆಯಲು ಈ ಪಾನೀಯಗಳನ್ನು ಬಳಸಲಾಗುತ್ತದೆ. ಈ ಪಾನೀಯವನ್ನು ನಿಮ್ಮ ಶೌಚಾಲಯದಲ್ಲಿ ಹರಿಸಿ ಸ್ವಲ್ಪ ಸಮಯ ಹಾಗೇ ಬಿಡಿ. 15 ರಿಂದ 20 ನಿಮಿಷದ ನಂತರ ಅದನ್ನು ಸ್ವಚ್ಛಗೊಳಿಸಿ. ಈಗ ನಿಮ್ಮ ಶೌಚಾಲಯವು ಸ್ವಚ್ಛವಾಗಿದ್ದು, ಕಲೆಗಳು ಮಾಯ. ಈ ಗುಣವು ನಿಮ್ಮ ಆರೋಗ್ಯಕ್ಕೆ ಯೋಗ್ಯವಲ್ಲ ಎಂದು ತಿಳಿಯಬಹುದಾಗಿದೆ.

ವಾಹನಗಳ ಯಂತ್ರವನ್ನು ಸ್ವಚ್ಛಗೊಳಿಸಲು

ವಾಹನಗಳ ಯಂತ್ರವನ್ನು ಸ್ವಚ್ಛಗೊಳಿಸಲು

ನಿಮ್ಮ ವಾಹನಗಳ ಯಂತ್ರವನ್ನು ಈ ಪಾನೀಯಗಳಿಂದ ಸ್ವಚ್ಛಗೊಳಿಸಬಹುದಾಗಿದೆ. ಪಾನೀಯಗಳ ಸರಬರಾಜುದಾರರು ಸಹ ಈ ಬಳಕೆಯನ್ನು ಅನುಸರಿಸುತ್ತಿದ್ದಾರೆ. ಈ ಸಂಗತಿಯಿಂದ ತಂಪು ಪಾನೀಯಕರ ಸೇವನೆಯು ಆರೋಗ್ಯಕ್ಕೆ ಅತ್ಯಂತ ಅಪಾಯಕಾರಿಯೆಂದು ಸಾಬೀತುಪಡಿಸುತ್ತದೆ.

ಅಡುಗೆ ಮನೆಯನ್ನು ಸ್ವಚ್ಛಗೊಳಿಸುವುದು

ಅಡುಗೆ ಮನೆಯನ್ನು ಸ್ವಚ್ಛಗೊಳಿಸುವುದು

ತಂಪು ಪಾನೀಯಗಳಿಂದ ನಿಮ್ಮ ಅಡುಗೆ ಮನೆಯನ್ನು ಸಹ ಸ್ವಚ್ಛಗೊಳಿಸಬಹುದು. ಸುಟ್ಟು ಸೀದು ಹೋದಂತಹ ಪಾತ್ರೆಗಳನ್ನು ಈ ಪಾನೀಯಗಳಿಂದ ಸ್ವಚ್ಛಗೊಳಿಸಬಹುದು. ಸದರಿ ಸುಟ್ಟ ಪಾತ್ರೆಯ ಮೇಲೆ ಈ ಪಾನೀಯವನ್ನು ಹಾಕಿ ಬ್ರಶ್ ನಿಂದ ಚೆನ್ನಾಗಿ ತಿಕ್ಕಿ. ಸುಟ್ಟ ಕಲೆಗಳು ಸುಲಭವಾಗಿ ಹೋಗುತ್ತದೆ.

ರಕ್ತದ ಕಲೆಗಳನ್ನು ತೆಗೆಯಬಹುದು

ರಕ್ತದ ಕಲೆಗಳನ್ನು ತೆಗೆಯಬಹುದು

ನಿಮ್ಮ ಬಟ್ಟೆಗಳ ಮೇಲಿರುವಂತಹ ರಕ್ತದ ಕಲೆಗಳನ್ನು ಸುಲಭವಾಗಿ ಈ ಪಾನೀಯಗಳಿಂದ ತೆಗೆಯಬಹುದು. ಪಾನೀಯವಿರುವಂತಹ ಬಕೆಟ್ ನಲ್ಲಿ ನಿಮ್ಮ ಬಟ್ಟೆಗಳನ್ನು ಅದ್ದಿ ಜಾಲಿಸಿ ನಂತರ ತೊಳೆಯಿರಿ. ಆಶ್ಚರ್ಯವೆಂಬಂತೆ ಬಟ್ಟೆಗಳ ಮೇಲಿದ್ದಂತಹ ರಕ್ತದ ಕಲೆಗಳು ಮಾಯ. ಆದ್ದರಿಂದ ತಂಪು ಪಾನೀಯಗಳನ್ನು ಸೇವಿಸಬೇಕೆ ಅಥವಾ ಬೇಡವೇ ಎಂಬುದನ್ನು ಈಗ ನಿರ್ಧರಿಸಿ.

ವಾಹನಗಳನ್ನು ಸ್ವಚ್ಛಗೊಳಿಸಲು ಬಳಕೆ

ವಾಹನಗಳನ್ನು ಸ್ವಚ್ಛಗೊಳಿಸಲು ಬಳಕೆ

ಸ್ವಚ್ಛಗೊಳಿಸುವ ಬಟ್ಟೆಯನ್ನು ಸ್ವಲ್ಪ ಪಾನೀಯದೊಂದಿಗೆ ನೆನೆಸಿ ನಿಮ್ಮ ವಾಹನದ ಹೊರಭಾಗವನ್ನು ಚೆನ್ನಾಗಿ ಉಜ್ಜಿ. ನಿಮ್ಮ ವಾಹನದ ಹೊಳಪನ್ನು ಹೆಚ್ಚಿಸಿ, ಗ್ರೀಸ್ ಕಲೆಗಳನ್ನು ಸುಲಭವಾಗಿ ತೆಗೆಯುತ್ತದೆ. ತಂಪು ಪಾನೀಯವನ್ನು ಸೇವಿಸಬಾರದೆಂದು ಹೇಳುವುದಕ್ಕೆ ಇದೂ ಒಂದು ಸಕಾರಣವಾಗಿದೆ.

English summary

Facts Which Prove That Soft Drinks Are Harmful For Health

We all love soft drinks and despite of all the health warnings, we go on drinking it. We pay a deaf ear to the harmful effects of soft drinks and don't bother much about why soft drinks are not good for health. In this article, we have collected some evidence against soft drinks, which prove that soft drinks are not fit for drinking but may be useful only in other cases.
X
Desktop Bottom Promotion