For Quick Alerts
ALLOW NOTIFICATIONS  
For Daily Alerts

ಪಕ್ಕಾ ದೇಸಿ ತುಪ್ಪ, ಆರೋಗ್ಯದ ಲವಲವಿಕೆಯ ಕೀಲಿಕೈ

By Deepu
|

ಯಾವುದೇ ಸಸ್ಯಜನ್ಯ ಕೊಬ್ಬು ಅಥವಾ ಸಂರಕ್ಷಕಗಳನ್ನು ಸೇರಿಸದೇ ಇರುವ ಕಾರಣ ಅಡುಗೆಯ ವಿವಿಧ ಬಳಕೆಯಲ್ಲಿ ತುಪ್ಪವನ್ನು ಎಣ್ಣೆಯ ಬದಲಾಗಿ ಉಪಯೋಗಿಸಬಹುದು. ಏಕೆ? ಎಂದು ಕೇಳಿದವರ ಕುತೂಹಲವನ್ನು ಕೆಳಗಿನ ಸ್ಲೈಡ್ ಶೋ ನಲ್ಲಿ ವಿವರಿಸಿರುವ ಮಾಹಿತಿಗಳು ತಣಿಸಲಿವೆ..

ಇದರಲ್ಲಿದೆ ವಿಟಮಿನ್‌ಗಳ ಭಂಡಾರ

ಇದರಲ್ಲಿದೆ ವಿಟಮಿನ್‌ಗಳ ಭಂಡಾರ

ದೇಸೀ ತುಪ್ಪದಲ್ಲಿ ಹೆಚ್ಚಿನ ಪ್ರಮಾಣದ ವಿಟಮಿನ್‌ಗಳಿವೆ. ವಿಶೇಷವಾಗಿ ವಿಟಮಿನ್ ಎ, ಇ, ಕೆ ಮತ್ತು ಡಿ ಇತರ ಆಹಾರಗಳಿಗಿಂತ ಹೆಚ್ಚಿನ ಅನುಪಾತದಲ್ಲಿವೆ. ಈ ವಿಟಮಿನ್‌ಗಳು ಕೊಬ್ಬಿನಲ್ಲಿ ಸುಲಭವಾಗಿ ಕರಗುವ ಕಾರಣ ಆಹಾರದೊಡನೆ ಜಠರಕ್ಕೆ ಸೇರಿದ ಅಲ್ಪಸಮಯದಲ್ಲಿಯೇ ರಕ್ತದಲ್ಲಿ ಲಭ್ಯವಾಗುತ್ತದೆ. ಮುಂದಿನ ಸ್ಲೈಡ್ ಕ್ಲಿಕ್ ಮಾಡಿ

ಇದರಲ್ಲಿದೆ ವಿಟಮಿನ್‌ಗಳ ಭಂಡಾರ

ಇದರಲ್ಲಿದೆ ವಿಟಮಿನ್‌ಗಳ ಭಂಡಾರ

ಇವು ಜೀವಕೋಶಗಳು ಘಾಸಿಗೊಳ್ಳುವುದನ್ನು ತಡೆದು ಹೊಸ ಜೀವಕೋಶಗಳ ಬೆಳವಣಿಗೆಗೆ ನೆರವಾಗುತ್ತದೆ. ಅಲ್ಲದೇ ಕ್ಯಾನ್ಸರ್ ಗೆ ಕಾರಣವಾಗುವ ಕಣಗಳ ಬೆಳವಣಿಗೆಯನ್ನು ತಡೆದು ಮುಂದೆ ಬರಬಹುದಾದ ತೊಂದರೆಯಿಂದ ರಕ್ಷಿಸುತ್ತದೆ. ಅಲ್ಲದೇ ವಿಟಮಿನ್ ಕೆ ರಕ್ತ ಹೆಪ್ಪುಗಟ್ಟುವಿಕೆಯಲ್ಲಿ ನೆರವಾಗುತ್ತದೆ.

Wikimedia Commons

ಪರಿಪೂರ್ಣ ಕೊಬ್ಬು(saturated fat) ಹೆಚ್ಚಿನ ಪ್ರಮಾಣದಲ್ಲಿದೆ

ಪರಿಪೂರ್ಣ ಕೊಬ್ಬು(saturated fat) ಹೆಚ್ಚಿನ ಪ್ರಮಾಣದಲ್ಲಿದೆ

ಸಾಮಾನ್ಯವಾಗಿ ಪರಿಪೂರ್ಣ ಕೊಬ್ಬು ಎಂದರೆ ಅನಾರೋಗ್ಯಕರ ಕೊಬ್ಬುಗಳು ಎಂದು ಪರಿಗಣಿಸಲಾಗುತ್ತದೆ. ಇವು ಸಾಮಾನ್ಯ ಚಳಿಗೆ ಗಟ್ಟಿಯಾಗಿಬಿಡುತ್ತವೆ. ಡಾಲ್ಡಾ, ವನಸ್ಪತಿ, ಪಾಮ್ ಎಣ್ಣೆ ಮೊದಲಾದವು ಚಳಿಯಲ್ಲಿ ಗಟ್ಟಿಯಾಗಿರುವುದನ್ನು ಗಮನಿಸಬಹುದು. ಇವೆಲ್ಲಾ ಅನಾರೋಗ್ಯಕರ ಆಹಾರಗಳಾಗಿದ್ದು ಹೃದಯಕ್ಕೆ ಹೆಚ್ಚಿನ ತೊಂದರೆಯನ್ನು ಒಡ್ಡುತ್ತವೆ. ಆದರೆ ಚಳಿಗೆ ಗಟ್ಟಿಯಾಗುವ ದೇಸಿ ತುಪ್ಪ ಇದಕ್ಕೊಂದು ಅಪವಾದ. ಏಕೆಂದರೆ ಇದು ಒಂದು ಪರಿಪೂರ್ಣ ಕೊಬ್ಬು ಆಗಿದ್ದರೂ, ಇದರ ಕೊಬ್ಬುಗಳು ವಿವಿಧ ಆರೋಗ್ಯಕರ ಪರಿಪೂರ್ಣ ಕೊಬ್ಬುಗಳಿಂದ ಕೂಡಿದೆ.

ಪರಿಪೂರ್ಣ ಕೊಬ್ಬು(saturated fat) ಹೆಚ್ಚಿನ ಪ್ರಮಾಣದಲ್ಲಿದೆ

ಪರಿಪೂರ್ಣ ಕೊಬ್ಬು(saturated fat) ಹೆಚ್ಚಿನ ಪ್ರಮಾಣದಲ್ಲಿದೆ

ಉದಾಹರಣೆಗೆ ಒಮೆಗಾ-3 ಕೊಬ್ಬಿನ ಆಮ್ಲ, ಒಮೆಗಾ-6 ಕೊಬ್ಬಿನ ಆಮ್ಲ, Conjugated Linoleic Acid (CLA), butanoic acid ಮೊದಲಾದವು. ಇವು ರಕ್ತದಲ್ಲಿ ಸೇರಿದ ಬಳಿಕ ಸಾಮಾನ್ಯ ತೊಂದರೆ ನೀಡುವ ಬ್ಯಾಕ್ಟೀರಿಯಾಗಳಿಂದ ಹಿಡಿದು ಮಾರಕ ಕ್ಯಾನ್ಸರ್ ನ ಕಣಗಳ ವಿರುದ್ಧ ಹೋರಾಡುತ್ತವೆ. ನರಗಳ ಒಳಗೆ ಕೊಲೆಸ್ಟ್ರಾಲ್ ಅಂಟಿಕೊಳ್ಳುವುದನ್ನು ತಪ್ಪಿಸುತ್ತದೆ, ಜೀವಕೋಶಗಳ ಹೊರಕವಚವನ್ನು ಇನ್ನಷ್ಟು ದೃಢಗೊಳಿಸುತ್ತದೆ. ಇಂತಹ ಇನ್ನೂ ಹಲವಾರು ವಿಧದಿಂದ ಆರೋಗ್ಯವನ್ನು ವೃದ್ದಿಸುತ್ತವೆ.

 ಜೀರ್ಣಕ್ರಿಯೆಯನ್ನು ಉತ್ತಮಗೊಳಿಸುತ್ತದೆ

ಜೀರ್ಣಕ್ರಿಯೆಯನ್ನು ಉತ್ತಮಗೊಳಿಸುತ್ತದೆ

ತುಪ್ಪ ಒಂದು ಪರಿಪೂರ್ಣ ಕೊಬ್ಬು ಆಗಿದ್ದರೂ ಇದರಲ್ಲಿಯೂ ಕೊಂಚ ಕೊಲೆಸ್ಟ್ರಾಲ್ ಮತ್ತು ಲ್ಯಾಕ್ಟೋಸ್ ಇದೆ. ಆದರೆ ಅಡುಗೆಯ ಬಿಸಿಯಲ್ಲಿ ಈ ಕಣಗಳು ಸುಟ್ಟು ಹೋಗುವುದರಿಂದ ಆರೋಗ್ಯಕ್ಕೆ ಆಗಬಹುದಾದ ಹಾನಿ ತಪ್ಪುತ್ತದೆ. ಪರಿಪೂರ್ಣ ಕೊಬ್ಬು ಆಗಿದ್ದರೂ ಅರೋಗ್ಯಕರವಾಗಿರಲು ಇದೇ ಕಾರಣ. ಇದರಲ್ಲಿ ಬೆಂದ ಆಹಾರ ಸುಲಭವಾಗಿ ಜೀರ್ಣವಾಗುತ್ತದೆ. ಅಲ್ಲದೇ ಜೀರ್ಣಾಂಗಗಳ ಒಳಭಾಗದಲ್ಲಿ ಕೊಂಚ ಪ್ರಚೋದನೆ ನೀಡಿ ಹೆಚ್ಚಿನ ಜೀರ್ಣರಸಗಳು ಸ್ರವಿಸುವಂತೆ ಮಾಡುತ್ತದೆ.

 ಜೀರ್ಣಕ್ರಿಯೆಯನ್ನು ಉತ್ತಮಗೊಳಿಸುತ್ತದೆ

ಜೀರ್ಣಕ್ರಿಯೆಯನ್ನು ಉತ್ತಮಗೊಳಿಸುತ್ತದೆ

ಇದು ಜೀರ್ಣಕ್ರಿಯೆಯನ್ನು ಚುರುಕುಗೊಳಿಸಿ ಆಹಾರದಲ್ಲಿರುವ ಪೋಷಕಾಂಶಗಳ ಗರಿಷ್ಟ ಪ್ರಮಾಣವನ್ನು ಶೀಘ್ರವಾಗಿ ಹೀರಿಕೊಳ್ಳಲು ನೆರವಾಗುತ್ತದೆ. ಇದು ಜೀವರಾಸಾಯನಿಕ ಕ್ರಿಯೆಯನ್ನು ಉತ್ತಮಗೊಳಿಸಿ ಇಡಿಯ ದಿನದ ಚಟುವಟಿಕೆಯನ್ನು ಸುಲಭ, ನಿರಾಯಾಸವಾಗಿ ಪೂರೈಸಲು ನೆರವಾಗುತ್ತದೆ.

ತೂಕ ಕಳೆದುಕೊಳ್ಳಲು ನೆರವಾಗುತ್ತದೆ

ತೂಕ ಕಳೆದುಕೊಳ್ಳಲು ನೆರವಾಗುತ್ತದೆ

ತುಪ್ಪ ತಿಂದವರು ದಪ್ಪಗಾಗುತ್ತಾರೆ ಎಂಬ ಭಾವನೆ ಇದೆ. ಆದರೆ ತುಪ್ಪ ತಿಂದವರೆಲ್ಲಾ ದಪ್ಪಗಾಗುವುದಿಲ್ಲ, ತುಪ್ಪವನ್ನು ಭಾರೀ ಪ್ರಮಾಣದಲ್ಲಿ ತಿಂದವರು ಮಾತ್ರ ದಪ್ಪಗಾಗುತ್ತಾರೆ. ಏಕೆಂದರೆ ತುಪ್ಪ ರುಚಿಕರವಾಗಿರುವುದರಿಂದ ಕೆಲವರು ತಮ್ಮ ನಾಲಿಗೆಯ ಚಪಲವನ್ನು ತಾಳಲಾರದೇ ಅತಿ ಹೆಚ್ಚಿನ ಪ್ರಮಾಣದಲ್ಲಿ ತುಪ್ಪ ಮತ್ತು ಸಿಹಿತಿಂಡಿಗಳನ್ನು ತಿನ್ನುತ್ತಾರೆ.

ತೂಕ ಕಳೆದುಕೊಳ್ಳಲು ನೆರವಾಗುತ್ತದೆ

ತೂಕ ಕಳೆದುಕೊಳ್ಳಲು ನೆರವಾಗುತ್ತದೆ

ಈ ಸಕ್ಕರೆ ಮತ್ತು ತುಪ್ಪದ ಕೊಬ್ಬುಗಳು ಸಂಗ್ರಹವಾಗಿ ದಪ್ಪವಾಗಿದ್ದೇ ಹೊರತು ಕೇವಲ ತುಪ್ಪದಿಂದಲ್ಲ. ವಾಸ್ತವವಾಗಿ ಸಂತುಲಿತ ಆಹಾರದೊಡನೆ ನಿತ್ಯವೂ ತುಪ್ಪವನ್ನು ಸೂಕ್ತ ಪ್ರಮಾಣದಲ್ಲಿ ಸೇವಿಸಿದರೆ ಇವನ್ನು ಕರಗಿಸಲು ಹೆಚ್ಚಿನ ಕೊಬ್ಬು ಬಳಕೆಯಾಗುವ ಕಾರಣ ತೂಕ ಕರಗುತ್ತದೆ. ಕ್ರೀಡಾಪಟುಗಳು ನಿತ್ಯವೂ ತುಪ್ಪದ ಸೇವನೆ ಮಾಡಿದರೂ ದಪ್ಪಗಾಗದೇ ಇರುವುದಕ್ಕೆ ಇದೇ ಕಾರಣ.

ಬಿಸಿಯಾದರೂ ತನ್ನ ಗುಣಗಳನ್ನು ಕಳೆದುಕೊಳ್ಳದ ತುಪ್ಪ

ಬಿಸಿಯಾದರೂ ತನ್ನ ಗುಣಗಳನ್ನು ಕಳೆದುಕೊಳ್ಳದ ತುಪ್ಪ

ಸಾಮಾನ್ಯವಾಗಿ ಪ್ರತಿ ಎಣ್ಣೆಯೂ ತಾಪಮಾನತೊಡನೆ ತನ್ನ ಕೆಲವು ಗುಣಗಳನ್ನು ಬದಲಿಸಿಕೊಳ್ಳುತ್ತದೆ. ಇದಕ್ಕೆ ಉತ್ತಮ ಉದಾಹರಣೆ ಎಂದರೆ ಬೆಣ್ಣೆ. ಬೆಣ್ಣೆ ಕಾದು ಹೊಗೆ ಬರುತ್ತಿದ್ದಂತೆಯೇ ಕಾದ ಬೆಣ್ಣೆಯ ದ್ರವ ಕ್ಯಾನ್ಸರ್ ಕಾರಕ ಗುಣವನ್ನು ಹೊಂದುತ್ತದೆ. ಪಾಮ್ ಎಣ್ಣೆ, ಡಾಲ್ಡಾ ಮೊದಲಾದ ಘನ ಎಣ್ಣೆಗಳು ಸಹಾ ಕ್ಯಾನ್ಸರ್ ಕಾರಕವಾಗುತ್ತವೆ. ಆದರೆ ತುಪ್ಪ ಇದಕ್ಕೆ ಅಪವಾದವಾಗಿದೆ.

ಬಿಸಿಯಾದರೂ ತನ್ನ ಗುಣಗಳನ್ನು ಕಳೆದುಕೊಳ್ಳದ ತುಪ್ಪ

ಬಿಸಿಯಾದರೂ ತನ್ನ ಗುಣಗಳನ್ನು ಕಳೆದುಕೊಳ್ಳದ ತುಪ್ಪ

ತಣ್ಣಗಿದ್ದಾಗ ಇರುವ ಗುಣಗಳು ಬಿಸಿಯಾದ, ಕುದಿದ ಬಳಿಕವೂ ಅಂತೆಯೇ ಇರುತ್ತವೆ. ವಾಸ್ತವದಲ್ಲಿ 375°F (190.5 ಡಿಗ್ರಿ ಸೆಲ್ಸಿಯಸ್) ನಷ್ಟು ತಾಪಮಾನದಲ್ಲಿಯೂ ತನ್ನ ಗುಣಗಳನ್ನು ಕಳೆದುಕೊಳ್ಳದಿರುವುದು ದೇಸಿ ತುಪ್ಪದ ಹೆಗ್ಗಳಿಕೆಯಾಗಿದೆ. ಇದರಲ್ಲಿ ತಯಾರಿಸಿದ ಅಡುಗೆಗಳೂ ಹಲವು ಬಾರಿ ಬಿಸಿ ಮಾಡಿದ ಬಳಿಕವೂ ತಮ್ಮ ಉತ್ತಮ ಗುಣಗಳನ್ನು ಉಳಿಸಿಕೊಳ್ಳುತ್ತವೆ.

Wikimedia Commons

ಉರಿಯೂತವನ್ನು ಕಡಿಮೆಗೊಳಿಸುತ್ತದೆ

ಉರಿಯೂತವನ್ನು ಕಡಿಮೆಗೊಳಿಸುತ್ತದೆ

ದೇಸಿ ತುಪ್ಪವನ್ನು 'ಉರಿಯೂತ ಕಡಿಮೆಗೊಳಿಸುವ ಕಟ್ಟಕಡೆಯ ಆಹಾರ' ಎಂದು ಪರಿಗಣಿಸಲಾಗುತ್ತದೆ. ಅಂದರೆ ಉರಿಯೂತವನ್ನು ಕಡಿಮೆಗೊಳಿಸಲು ತುಪ್ಪಕ್ಕಿಂತ ಪರಿಣಾಮಕಾರಿಯಾದ ಆಹಾರ ಈ ಜಗತ್ತಿನಲ್ಲಿ ಇನ್ನೊಂದಿಲ್ಲ. ಉರಿಯೂತಕ್ಕೆ ಕಾರಣವಾಗುವ prostaglandin (ಹಾರ್ಮೋನಿನಂತೆ ವರ್ತಿಸುವ ಕೆಲವು ಕೊಬ್ಬುಗಳು) ಎಂಬ ಕಣಗಳ ಪ್ರಭಾವವನ್ನು leukotriene ಎಂಬ ಪ್ರತಿ ಹಾರ್ಮೋನು ಸ್ರವಿಸುವ ಮೂಲಕ ನಿಸ್ತೇಜಗೊಳಿಸುತ್ತದೆ.

ಉರಿಯೂತವನ್ನು ಕಡಿಮೆಗೊಳಿಸುತ್ತದೆ

ಉರಿಯೂತವನ್ನು ಕಡಿಮೆಗೊಳಿಸುತ್ತದೆ

ಜಠರದಲ್ಲಿ ಜೀರ್ಣಗೊಂಡ ತುಪ್ಪ ಈ ಲ್ಯೂಕೋಟ್ರೀನ್ ಅನ್ನು ಸಂತುಲಿತ ಪ್ರಮಾಣದಲ್ಲಿ ಸ್ರವಿಸಲು ನೆರವಾಗುವ ಮೂಲಕ ಅತ್ಯುತ್ತಮ ಉರಿಯೂತ ನಿವಾರಕ ಎಂಬ ಪ್ರಶಸ್ತಿ ಪಡೆದಿದೆ. ಇದು ವೃದ್ದಾಪ್ಯದ ಲಕ್ಷಣಗಳನ್ನು ತೀರಾ ನಿಧಾನಗೊಳಿಸಿ ತಾರುಣ್ಯವನ್ನು ಕಾಪಾಡುತ್ತದೆ. ದೇಸೀ ತುಪ್ಪ ತಿಂದವರ ಚರ್ಮ ಬಹಳ ವರ್ಷಗಳ ವರೆಗೆ ತನ್ನ ಸಹಜಕಾಂತಿ ಮತ್ತು ಸೆಳೆತವನ್ನು ಉಳಿಸಿಕೊಳ್ಳುವುದಕ್ಕೆ ಇದೇ ಕಾರಣ.

ಅತಿಸೂಕ್ಷ್ಮ ಪೋಷಕಾಂಶಗಳನ್ನು ನೀಡುತ್ತದೆ

ಅತಿಸೂಕ್ಷ್ಮ ಪೋಷಕಾಂಶಗಳನ್ನು ನೀಡುತ್ತದೆ

ನಮ್ಮ ದೇಹಕ್ಕೆ ಪೋಷಕಾಂಶಗಳ ಜೊತೆಗೇ ಕೆಲವು ಅತಿಸೂಕ್ಷ್ಮ ಪೋಷಕಾಂಶಗಳ ಅಗತ್ಯವೂ ಇದೆ. Conjugated Linoleic Acid (CLA) ಮತ್ತು ವಿಟಮಿನ್ K2 ಎಂಬ ಅತಿಸೂಕ್ಷ್ಮ ಪೋಷಕಾಂಶಗಳು ಆಂಟಿ ಆಕ್ಸಿಡೆಂಟು ಗುಣಗಳನ್ನು ಹೊಂದಿದ್ದು ನಮ್ಮ ನರಗಳ ಗೋಡೆಗಳು ಕ್ಯಾಲ್ಸಿಯಂ ಅನ್ನು ಹೀರಿ ದೃಢವಾಗದಂತೆ ರಕ್ಷಿಸುತ್ತವೆ. ದೇಸೀ ತುಪ್ಪದಲ್ಲಿ ಈ ಅತಿಸೂಕ್ಷ್ಮ ಪೋಷಕಾಂಶಗಳು ಉತ್ತಮ ಪ್ರಮಾಣದಲ್ಲಿದ್ದು ಆರೋಗ್ಯವನ್ನು ವೃದ್ಧಿಸುತ್ತವೆ.

Wikimedia Commons

ಕೊಲೆಸ್ಟ್ರಾಲ್ ಮಟ್ಟವನ್ನು ನಿಯಂತ್ರಣದಲ್ಲಿರಿಸುತ್ತದೆ

ಕೊಲೆಸ್ಟ್ರಾಲ್ ಮಟ್ಟವನ್ನು ನಿಯಂತ್ರಣದಲ್ಲಿರಿಸುತ್ತದೆ

ಬೆಣ್ಣೆಗಿಂತಲೂ ತುಪ್ಪದಲ್ಲಿ ಕೊಲೆಸ್ಟ್ರಾಲ್ ಕಡಿಮೆ ಪ್ರಮಾಣದಲ್ಲಿದೆ. ಅಲ್ಲದೇ ಇದು ಪರಿಪೂರ್ಣ ಕೊಬ್ಬು ಆದುದರಿಂದ ಇದು ಕಡಿಮೆ ಹಾನಿಕರವಾಗಿದೆ. ಅಂದರೆ ಸೂಕ್ತ ಪ್ರಮಾಣದಲ್ಲಿ ಸೇವಿಸುವ ತುಪ್ಪ ಆರೋಗ್ಯಕರ.

ಕೊಲೆಸ್ಟ್ರಾಲ್ ಮಟ್ಟವನ್ನು ನಿಯಂತ್ರಣದಲ್ಲಿರಿಸುತ್ತದೆ

ಕೊಲೆಸ್ಟ್ರಾಲ್ ಮಟ್ಟವನ್ನು ನಿಯಂತ್ರಣದಲ್ಲಿರಿಸುತ್ತದೆ

ಆದರೆ ಅತಿಯಾದರೆ ಅಮೃತವೂ ವಿಷ ಎಂಬಂತೆ ಹೆಚ್ಚಿನ ಪ್ರಮಾಣದಲ್ಲಿ ತುಪ್ಪ ಸೇವಿಸುವುದೂ ಅನಾರೋಗ್ಯಕರವಾಗಿದೆ. ಈಗಾಗಲೇ ಕೊಲೆಸ್ಟ್ರಾಲ್ ತೊಂದರೆ ಇರುವವರಿಗೆ ಬೆಣ್ಣೆಗಿಂತ ತುಪ್ಪವೇ ಹೆಚ್ಚು ಸುರಕ್ಷಿತವಾಗಿದೆ.

ಹೃದಯಕ್ಕೂ ಒಳ್ಳೆಯದು

ಹೃದಯಕ್ಕೂ ಒಳ್ಳೆಯದು

ತುಪ್ಪದಲ್ಲಿರುವ ಪರಿಪೂರ್ಣ ಕೊಬ್ಬು ರಕ್ತದಲ್ಲಿರುವ ಕೆಟ್ಟ ಕೊಲೆಸ್ಟ್ರಾಲ್ ಗಳನ್ನು ಓಡಿಸುವ ಮತ್ತು ನಿಯಂತ್ರಣದಲ್ಲಿರಿಸುವ ಗುಣವನ್ನು ಹೊಂದಿದೆ. ಇದು ಹೃದಯಕ್ಕೆ ಪೂರಕವಾಗಿದೆ. ಅಲ್ಲದೇ ಇದರಲ್ಲಿ ಉಪ್ಪು ಇಲ್ಲದೇ ಇರುವ ಕಾರಣ ಹೆಚ್ಚಿನ ಶ್ರಮವೂ ಬೇಕಾಗಿಲ್ಲ. ನಿತ್ಯವೂ ತಮ್ಮ ಊಟದಲ್ಲಿ ಕೊಂಚ ಪ್ರಮಾಣದಲ್ಲಿ ತುಪ್ಪವನ್ನು ಸೇವಿಸುತ್ತಾ ಬಂದವರು ಹೃದಯದ ತೊಂದರೆಗೆ ಒಳಗಾಗುವ ಸಾಧ್ಯತೆ ಕಡಿಮೆ ಎಂದು ಸಂಶೋಧನೆಗಳಿಂದ ಕಂಡುಬಂದಿದೆ.

ಶಕ್ತಿ ಮತ್ತು ಬಾಗುವಿಕೆಯನ್ನು ಹೆಚ್ಚಿಸುತ್ತದೆ

ಶಕ್ತಿ ಮತ್ತು ಬಾಗುವಿಕೆಯನ್ನು ಹೆಚ್ಚಿಸುತ್ತದೆ

ತುಪ್ಪದ ಸೇವನೆಯಿಂದ ದೈಹಿಕ ಮತ್ತು ಮಾನಸಿಕವಾಗಿ ಸಶಕ್ತರಾಗಲು ನೆರವಾಗುತ್ತದೆ. ಅಲ್ಲದೇ ನಮ್ಮ ಎಲ್ಲಾ ಅಂಗಾಂಶಗಳಲ್ಲಿ ನುಣುಪು ನೀಡುವ ಮೂಲಕ ಅಂಗಾಂಶಗಳು ಸುಲಭವಾಗಿ ಜಾರಲು ನೆರವಾಗುತ್ತದೆ. ಇದು ನಮ್ಮ ಅಂಗಗಳನ್ನು ಹೆಚ್ಚು ಬಾಗಿಸಲು ಸಾಧ್ಯವಾಗುತ್ತದೆ.

ಶಕ್ತಿ ಮತ್ತು ಬಾಗುವಿಕೆಯನ್ನು ಹೆಚ್ಚಿಸುತ್ತದೆ

ಶಕ್ತಿ ಮತ್ತು ಬಾಗುವಿಕೆಯನ್ನು ಹೆಚ್ಚಿಸುತ್ತದೆ

ವ್ಯಾಯಾಮದಲ್ಲಿ ಪೂರ್ಣಪ್ರಮಾಣದ ಸೆಳೆತವನ್ನು ಪಡೆಯಲು, ತನ್ಮೂಲಕ ಉತ್ತಮ ಆರೋಗ್ಯವನ್ನು ಹೊಂದಲು ಸಾಧ್ಯವಾಗುತ್ತದೆ. ವಿಶೇಷವಾಗಿ ಸೊಂಟದ ಸ್ನಾಯುಗಳು ಪೂರ್ಣವಾಗಿ ದೇಹ ಬಾಗಲು ಅನುವುಮಾಡಿಕೊಡುತ್ತದೆ.

English summary

Factors to Consider ‘Desi Ghee’ as a Plus for Our Health

Desi ghee or clarified butter is the processed milk solids obtained from regular butter. It does not contain vegetable fats or any sort of preservative, which makes it a healthier substitute of various cooking oils and butter. Here are reasons why desi ghee is a plus for our health:
X
Desktop Bottom Promotion