For Quick Alerts
ALLOW NOTIFICATIONS  
For Daily Alerts

ಅಯ್ಯೋ ವಿಪರೀತ ಹಲ್ಲು ನೋವು, ನಿದ್ದೆಯೇ ಬರುತ್ತಿಲ್ಲ

By Arshad
|

ದೇಹಕ್ಕೆ ಅತಿ ಹೆಚ್ಚು ನೋವು ನೀಡುವ ಸ್ಥಳಗಳೆಂದರೆ ಉಗುರು, ಹಲ್ಲು ಮತ್ತು ವೃಷಣ. ಒಂದು ವೇಳೆ ಹಲ್ಲಿನ ಬೇರಿನ ಸೋಂಕಿನಿಂದಾಗಿ ನೋವು ಉಂಟಾದರೆ (Root Canal) ಆ ನೋವು ಸಹಿಸಲಸಾಧ್ಯವಾಗಿದ್ದು ನಿತ್ಯದ ಚಟುವಟಿಕೆಗಳನ್ನೇ ಸ್ಥಗಿತಗೊಳಿಸಿಬಿಡುತ್ತದೆ. ಅದರಲ್ಲೂ ಮೇಲ್ದವಡೆಯ ಹಲ್ಲಿನ ನೋವು ಎಂತಹ ಜಟ್ಟಿಯನ್ನಾದರೂ ನೆಲಕ್ಕುರುಳಿಸುತ್ತದೆ. ಅದರಲ್ಲೂ ರಾತ್ರಿ ಸಮಯದಲ್ಲಿ ಹೆಚ್ಚಾಗಿ ಕಾಡುವ ಈ ಹಲ್ಲು ನೋವು ನಿಮ್ಮ ನಿದ್ದೆಯನ್ನೇ ಹಾಳು ಮಾಡಿಬಿಡುತ್ತದೆ. ಚಿಂತಿಸಬೇಡಿ ಈ ನೋವನ್ನು ಶಮನಗೊಳಿಸಲು ಹಲವು ಮನೆಮದ್ದುಗಳು ಲಭ್ಯವಿವೆ.
ಈ ನೋವು ಹೇಗೆ ಬರುತ್ತದೆ?
ಈ ತೊಂದರೆಗೆ ಹಲವು ಕಾರಣಗಳಿವೆ. ಇದನ್ನು ಅರಿಯುವ ಮುನ್ನ ಹಲ್ಲಿನ ರಚನೆ ಅರಿತುಕೊಳ್ಳುವುದು ಮುಖ್ಯ. ಹಲ್ಲು ಗಟ್ಟಿಯಾದ ಒಂದೇ ತುಂಡಿನಂತೆ ಕಂಡರೂ ಒಳಭಾಗ ಮೃದುವಾಗಿದ್ದು ಮೇಲ್ಕವಚವಷ್ಟೇ ದೃಢವಾಗಿದೆ. ಇದಕ್ಕೆ ಮೂರು ಬೇರುಗಳಿದ್ದು ಒಸಡಿನೊಳಗೆ ನಾಟಿಕೊಂಡಿರುತ್ತದೆ. ಒಸಡಿನ ಮೂಲಕ ಹಾದು ಬರುವ ರಕ್ತನಾಳಗಳು ಈ ಬೇರಿನೊಂದಿಗೆ ಸಂಪರ್ಕ ಹೊಂದಿರುತ್ತವೆ.

ಒಂದು ವೇಳೆ ಗಟ್ಟಿಯಾದ ಆಹಾರಗಳನ್ನು ಜಗಿಯುವಾಗ ಹಲ್ಲಿನ ಮೇಲ್ಭಾಗದಲ್ಲಿ ಚಿಕ್ಕ ತುಂಡು ಕಿತ್ತುಕೊಂಡು ಹೋದರೆ ಒಳಭಾಗದ ಮೃದು ಭಾಗ ಪ್ರಕಟಗೊಳ್ಳುತ್ತದೆ. ಇಲ್ಲಿ ಮೂಡಿದ ಚಿಕ್ಕ ಸಂದಿಯಲ್ಲಿ ಆಹಾರದ ತುಣುಕುಗಳು ಉಳಿದು ಬ್ಯಾಕ್ಟೀರಿಯಾಗಳ ಆಗಮನಕ್ಕೆ ಕಾರಣವಾಗುತ್ತದೆ. ಸೂಕ್ತವಾದ ಆರೈಕೆ (ಹಲ್ಲು ಸ್ವಚ್ಛಗೊಳಿಸುವಿಕೆ) ಇಲ್ಲದಿದ್ದಲ್ಲಿ ಸೋಂಕು ತಗಲುತ್ತದೆ ಹಾಗೂ ಒಳಗಿನ ಮೃದುಭಾಗ ಕೊಳೆಯಲು ತೊಡಗುತ್ತದೆ. ಹಲ್ಲು ನೋವಿನ ಶಮನಕ್ಕೆ ಮನೆ ಮದ್ದು

ಐಸ್ ಪ್ಯಾಕ್ ಬಳಸಿ

ಐಸ್ ಪ್ಯಾಕ್ ಬಳಸಿ

ಸಾಮಾನ್ಯವಾಗಿ ಹಲ್ಲಿನ ಒಸಡಿನಲ್ಲಿ ಕೀವು ಉಂಟಾದರೆ ಆ ಭಾಗ ಬಾತುಕೊಳ್ಳುತ್ತದೆ. ಈ ಭಾಗ ಬೆರಳಿನಿಂದ ಮುಟ್ಟಲೂ ಸಾಧ್ಯವಿಲ್ಲದಷ್ಟು ನೋವಿನಿಂದ ಕೂಡಿರುತ್ತದೆ. ಮಂಜುಗಡ್ಡೆಯ ತುಂಡನ್ನು ನೇರವಾಗಿ ಅಥವಾ ಟವೆಲೊಂದರಲ್ಲಿ ಸುತ್ತಿ ಬಾತುಕೊಂಡಿರುವ ಭಾಗದ ಮೇಲಿರಿಸುವುದರಿಂದ ನೋವು ಸಾಕಷ್ಟು ಕಡಿಮೆಯಾಗುತ್ತದೆ. ಆದರೆ ಪ್ರತಿ ಬಾರಿ ಮಂಜುಗಡ್ಡೆಯನ್ನು ಹತ್ತು ನಿಮಿಷಕ್ಕಿಂತ ಹೆಚ್ಚು ಕಾಲ ಇರಿಸದಿರಿ. ಒಂದೆರಡು ನಿಮಿಷಗಳ ಅಂತರದ ನಂತರ ಮತ್ತೆ ಇರಿಸಬಹುದು.

ದ್ರವಾಹಾರಗಳನ್ನೇ ಸೇವಿಸಿ

ದ್ರವಾಹಾರಗಳನ್ನೇ ಸೇವಿಸಿ

ಹಲ್ಲು ನೋವಿದ್ದಾಗ ಆಹಾರ ಜಗಿಯುವ ಕೆಲಸವನ್ನು ಕೈಬಿಡುವುದು ಲೇಸು. ಬದಲಿಗೆ ಹೆಚ್ಚಿನ ಪೋಷಕಾಂಶಗಳಿರುವ ಹಣ್ಣಿನ ರಸಗಳನ್ನು ಸೇವಿಸಿ. ಕಿತ್ತಳೆ, ಕ್ಯಾರೆಟ್ ಮೊದಲಾದ ವಿಟಮಿನ್ ಸಿ ಹೆಚ್ಚಿರುವ ಹಣ್ಣುಗಳ ರಸವನ್ನು ಕುಡಿಯುವುದು ಉತ್ತಮ. ಆದರೆ ಇವು ಅತಿ ತಣ್ಣಗೂ ಇರಬಾರದು ಮತ್ತು ಬಿಸಿಯಾಗಿಯೂ ಇರಬಾರದು. ಸ್ಟ್ರಾ ಬಳಸಿ ನೋವಿರುವ ಹಲ್ಲುಗಳಿಗೆ ತಾಗದಂತೆ ರಸವನ್ನು ಸೇವಿಸಿ.

ಉಪ್ಪು ನೀರಿನಿಂದ ಮುಕ್ಕಳಿಸಿ

ಉಪ್ಪು ನೀರಿನಿಂದ ಮುಕ್ಕಳಿಸಿ

ಒಂದು ಲೋಟ ಉಗುರುಬೆಚ್ಚನೆಯ ನೀರಿಗೆ ಒಂದು ದೊಡ್ಡ ಚಮಚ ಕಲ್ಲುಪ್ಪು ಹಾಕಿ ಮಿಶ್ರಣ ಮಾಡಿ (ಪುಡಿ ಉಪ್ಪಾದರೆ ಒಂದೂವರೆ ಚಮಚ). ಈ ನೀರಿನಿಂದ ದಿನಕ್ಕೆ ಮೂರು ಬಾರಿ ಮುಕ್ಕಳಿಸಿ ಗಳಗಳ ಮಾಡಿ. ಸಾಧ್ಯವಾದರೆ ಮುಕ್ಕಳಿಸಿ ಉಗಿಯುವ ಮುನ್ನ ನೋವಿರುವ ಹಲ್ಲು ಈ ನೀರಿನಲ್ಲಿ ಸಂಪೂರ್ಣ ತೋಯುವಂತೆ ಹಲವು ಬಾರಿ ಮುಕ್ಕಳಿಸಿ ಉಗಿಯಿರಿ. ಇದರಿಂದ ನೋವಿಗೆ ಕಾರಣವಾದ ಬ್ಯಾಕ್ಟೀರಿಯಾಗಳು ನಾಶವಾಗಿ ನೋವಿನಿಂದ ಶಮನ ದೊರಕುತ್ತದೆ.

ಟೀ ಟ್ರೀ ಎಣ್ಣೆ ಬಳಸಿ

ಟೀ ಟ್ರೀ ಎಣ್ಣೆ ಬಳಸಿ

ಟೀ ಟ್ರೀ ಆಯಿಲ್ ಎಂದು ಔಷಧಿ ಅಂಗಡಿಯಲ್ಲಿ ಸಿಗುವ ತೈಲವನ್ನು ಬಳಸಿದಾಗಲೂ ಹಲ್ಲುನೋವು ಶಮನವಾಗುತ್ತದೆ. ಈ ಎಣ್ಣೆ ಹಲ್ಲುನೋವಿಗೆ ಮಾತ್ರವಲ್ಲದೇ ಮೊಡವೆ, ಕಲೆ ನಿವಾರಣೆ ಮೊದಲಾದವುಗಳಿಗೂ ಬಳಕೆಯಾಗುತ್ತದೆ. ಹಲ್ಲುನೋವಿದ್ದಾಗ ಉಗುರುಬೆಚ್ಚನೆಯ ಒಂದು ಲೋಟ ನೀರಿಗೆ ಕೆಲವು ಹನಿಗಳನ್ನು ಹಾಕಿ ಮಿಶ್ರಣ ಮಾಡಿ ಬಾಯಿ ತುಂಬುವಷ್ಟು ತುಂಬಿ ನುಂಗದೇ ಹಾಗೇ ನಿಮಗೆ ಸಾಧ್ಯವಿದ್ದಷ್ಟು ಹೊತ್ತು ಹಾಗೇ ಇರಿ. ಲೋಟದ ನೀರು ಖಾಲಿಯಾಗುವಷ್ಟರಲ್ಲಿ ನೋವು ಕಡಿಮೆಯಾಗುತ್ತದೆ. ದಿನಕ್ಕೆ ಮೂರು ಬಾರಿ ಈ ಪ್ರಕ್ರಿಯೆ ನಡೆಸಿ.

ಸೌತೆಕಾಯಿ ಬಳಸಿ

ಸೌತೆಕಾಯಿ ಬಳಸಿ

ಎಳೆಸೌತೆಯನ್ನು ಅಡ್ಡಲಾಗಿ ಕತ್ತರಿಸಿ ಬಿಲ್ಲೆಯೊಂದನ್ನು ಪಡೆಯಿರಿ. ಬಾವು ಬಂದಿರುವ ಗಲ್ಲ ಮೇಲೆ ಬರುವಂತೆ ಮಲಗಿ ಈ ಬಿಲ್ಲೆಯನ್ನು ಬಾತುಕೊಂಡಿರುವ ಭಾಗದ ಮೇಲಿರಿಸಿ ವಿಶ್ರಾಂತಿ ಪಡೆಯಿರಿ. ಸೌತೆಕಾಯಿ ಈ ಭಾಗವನ್ನು ತಣಿಸಿ ನೋವಿನಿಂದ ಶಮನ ನೀಡುತ್ತದೆ.

ಆಲಿವ್ ಎಣ್ಣೆ ಬಳಸಿ

ಆಲಿವ್ ಎಣ್ಣೆ ಬಳಸಿ

ಹತ್ತಿಯ ಒಂದು ಚಿಕ್ಕ ಉಂಡೆಯನ್ನು ಆಲಿವ್ ಎಣ್ಣೆಯಲ್ಲಿ ಮುಳುಗಿಸಿ ನೋವಿರುವ ಒಸಡಿಗೆ ನಯವಾಗಿ ಹಚ್ಚಿರಿ. ತಕ್ಷಣವೇ ಅಲ್ಲದಿದ್ದರೂ ನಿಧಾನವಾಗಿ ಆಲಿವ್ ಎಣ್ಣೆ ಹಲ್ಲುನೋವನ್ನು ಕಡಿಮೆಗೊಳಿಸುತ್ತಾ ಬರುತ್ತದೆ. ಆಲಿವ್ ಎಣ್ಣೆಯ ಉರಿಯೂತ ನಿವಾರಕ ಗುಣ ಹಲ್ಲುನೋವು ಶಮನಗೊಳಿಸಲು, ಬಾವು ಕಡಿಮೆಗೊಳಿಸಲು ಹಾಗೂ ಶೀಘ್ರವಾಗಿ ಗಾಯ ಮಾಗಲು ನೆರವಾಗುತ್ತದೆ

 ಲವಂಗದ ಎಣ್ಣೆ ಬಳಸಿ

ಲವಂಗದ ಎಣ್ಣೆ ಬಳಸಿ

ಲವಂಗದ ಎಣ್ಣೆಯಲ್ಲಿಯೂ ಉರಿಯೂತ ನಿವಾರಕ, ಜೀವಿರೋಧಿ, ಮತ್ತು ಅರವಳಿಕಾ ಗುಣಗಳಿದ್ದು ಹಲ್ಲುನೋವಿಗೆ ಉತ್ತಮವಾದ ಶಮನಕಾರಿ ಔಷಧಿಯಾಗಿದೆ. ಹತ್ತಿಯ ಒಂದು ಚಿಕ್ಕ ಉಂಡೆಯನ್ನು ಲವಂಗದ ಎಣ್ಣೆಯಲ್ಲಿ ಅದ್ದಿ ನೋವಿರುವ ಭಾಗಕ್ಕೆ ನವಿರಾಗಿ ಹಚ್ಚಿ. ಬಳಿಕ ಈ ಹತ್ತಿಯ ತುಂಡನ್ನು ನೋವಿರುವ ಹಲ್ಲು ಕಚ್ಚಿ ಹಿಡಿಯುವಂತೆ ಕಚ್ಚಿ ವಿಶ್ರಾಂತಿ ಪಡೆಯಿರಿ. ನಿಧಾನವಾಗಿ ಹಲ್ಲುನೋವು ಕಡಿಮೆಯಾಗುತ್ತದೆ.

ಈರುಳ್ಳಿ ಬೆಳ್ಳುಳ್ಳಿಯ ಮಿಶ್ರಣ ಬಳಸಿ

ಈರುಳ್ಳಿ ಬೆಳ್ಳುಳ್ಳಿಯ ಮಿಶ್ರಣ ಬಳಸಿ

ಬೆಳ್ಳುಳ್ಳಿಯ ಪ್ರತಿಜೀವಕ ಗುಣ ಮತ್ತು ಈರುಳ್ಳಿಯ ನಂಜುನಿರೋಧಕ ಗುಣಗಳು ಜೊತೆಯಾಗಿ ಹಲ್ಲುನೋವಿಗೆ ಕಾರಣವಾದ ಬ್ಯಾಕ್ಟ್ರೀರಿಯಾಗಳ ವಿರುದ್ದ ಹೋರಾಡುತ್ತವೆ. ಸಮಪ್ರಮಾಣದಲ್ಲಿ ಬೆಳ್ಳುಳ್ಳಿ ಮತ್ತು ನೀರುಳ್ಳಿಯನ್ನು ಜಜ್ಜಿ ನೋವಿರುವ ಹಲ್ಲನ್ನೇ ಬಳಸಿ ಜಗಿಯಿರಿ. ಕೊಂಚ ಖಾರವಾದಂತೆ ಅನ್ನಿಸಿದರೂ ಸ್ವಲ್ಪ ಹೊತ್ತಿನಲ್ಲಿಯೇ ನೋವು ಕಡಿಮೆಯಾಗುವುದು ಕಂಡುಬರುತ್ತದೆ.

ಗೋಧಿ ತೆನೆಯ ರಸ

ಗೋಧಿ ತೆನೆಯ ರಸ

ಹಲ್ಲು ಹಾಗೂ ಒಸಡಿನ ನೋವಿನ ನಿವಾರಣೆಗೆ ಗೋಧಿ ತೆನೆಯ ರಸ ಬಹಳ ಒಳ್ಳೆಯ ಔಷಧಿ.ಇದು ಹಲ್ಲಿನ ನೋವನ್ನು ತೆಗೆದು ಹಾಕುತ್ತದೆ ಹಾಗೂ ಬ್ಯಾಕ್ಟೀರಿಯಾಗಳನ್ನು ತೊಲಗಿಸುತ್ತದೆ.

English summary

Effective Home Remedies For Root Canal Pain

Are you suffering from the intense pain due to a recent root canal procedure? Has your search for effective medication been futile? You can now stop worrying, as we have a few home remedies that help deal with the pain a root canal procedure brings.Would you like to know more? Read on.
X
Desktop Bottom Promotion