For Quick Alerts
ALLOW NOTIFICATIONS  
For Daily Alerts

ಯಮಯಾತನೆ ನೀಡುವ ಮೊಣಕಾಲು ನೋವಿಗೆ ಪರಿಹಾರವೇನು?

ಮೊಣಕಾಲು ನೋವನ್ನು ಹೇಗೆ ಸ್ವಾಭಾವಿಕವಾಗಿ ಗುಣಪಡಿಸಿಕೊಳ್ಳುವುದು? ಎಂಬ ನಿಮ್ಮ ಪ್ರಶ್ನೆಗೆ ಬೋಲ್ಡ್‌ಸ್ಕೈ ಕೆಲವೊಂದು ಪರಿಣಾಮಕಾರಿಯಾದ ಮನೆಮದ್ದುಗಳನ್ನು ನಿಮ್ಮೊಂದಿಗೆ ಇಂದು ಹಂಚಿಕೊಳ್ಳುತ್ತಿದೆ....

|

ಮೊಣಕಾಲು ನೋವು (ಮಂಡಿ ನೋವು) ಬಂದರೆ ಮುಗಿಯಿತು, ಅದು ನಮ್ಮ ದೇಹವನ್ನು ದುರ್ಬಲಗೊಳಿಸಿಬಿಡುತ್ತದೆ. ಇದು ವಯಸ್ಸು ಮತ್ತು ಇನ್ನಿತರ ಕಾರಣಗಳ ಸಲುವಾಗಿ ಮಂಡಿಗಳಲ್ಲಿ ಈ ನೋವು ಕಾಣಿಸಿಕೊಳ್ಳುತ್ತದೆ. ಇದಕ್ಕಾಗಿ ಮನೆಯಲ್ಲಿಯೇ ಪರಿಣಾಮಕಾರಿಯಾದ ಕೆಲವೊಂದು ಮನೆಮದ್ದುಗಳು ದೊರೆಯುತ್ತವೆ. ಅವು ಈ ನೋವುಗಳಿಗೆ ಖಂಡಿತ ಉಪಶಮನವನ್ನು ನೀಡುತ್ತವೆ.

ಮೊಣಕಾಲು ನೋವು ಎರಡು ಕಾರಣಗಳಿಂದ ಸಂಭವಿಸುತ್ತದೆ. ಒಂದು ಅಪಘಾತದಿಂದ ಅಂದರೆ ಮೂಳೆ ಮುರಿತ, ಮೂಳೆಕಟ್ಟು (ಲಿಗಮೆಂಟ್) ಮುರಿತ, ಮಂಡಿಗಳ ಸ್ಥಾನ ಪಲ್ಲಟ, ಉಳುಕು ಮತ್ತು ಆಯಾಸಗಳಿಂದ ಸಂಭವಿಸುತ್ತದೆ. ಜೊತೆಗೆ ಅರ್ಥರಿಟಿಸ್‍ನಂತಹ ವೈದ್ಯಕೀಯ ಪರಿಸ್ಥಿತಿಯಲ್ಲೂ ಸಹ ಮೊಣಕಾಲು ನೋವು ಸಂಭವಿಸುತ್ತದೆ.

ಅಂತಹ ಪರಿಸ್ಥಿತಿಗಳಲ್ಲಿ, ನಡೆಯುವಾಗ ಮತ್ತು ನಿಲ್ಲುವಾಗ ಅಧಿಕ ಪ್ರಮಾಣದ ನೋವು, ಬಿಗಿತ ಮತ್ತು ಮಂಡಿಗಳಲ್ಲಿ ಊತ ಕಂಡು ಬರುತ್ತದೆ. ಹಾಗಾದರೆ ಮೊಣಕಾಲು ನೋವು ಮತ್ತು ಊತ ಬಂದಾಗ ಏನು ಮಾಡುವುದು? ಮೊಣಕಾಲು ನೋವು ಬಂದರೆ ಅದು ನಮ್ಮನ್ನು ಒಂದೇ ಕಡೆಯಲ್ಲಿ ಕೂರುವಂತೆ ಮಾಡುವುದು ಖಂಡಿತ. ಆದ್ದರಿಂದ ಮನೆಯಲ್ಲಿಯೇ ದೊರೆಯುವ ಕೆಲವೊಂದು ಮನೆಮದ್ದುಗಳಿಂದ ಇದನ್ನು ನಿವಾರಿಸಿಕೊಳ್ಳುವ ಕೆಲಸವನ್ನು ಮಾಡಬೇಕು. ಈ ಮನೆಮದ್ದುಗಳನ್ನು ಪ್ರತಿನಿತ್ಯ ಬಳಸುತ್ತಿದ್ದರೆ, ಪವಾಡ ಸದೃಶ್ಯ ಬೆಳವಣಿಗೆಯನ್ನು ನಾವು ಕಾಣಬಹುದು. ಕಂಗಾಲಾಗದಿರಿ ಕೀಲು ನೋವಿಗೆ: ಇಲ್ಲಿದೆ ಶೀಘ್ರ ಪರಿಹಾರ

ಮೊಣಕಾಲು ನೋವನ್ನು ಹೇಗೆ ಸ್ವಾಭಾವಿಕವಾಗಿ ಗುಣಪಡಿಸಿಕೊಳ್ಳುವುದು? ಎಂಬ ನಿಮ್ಮ ಪ್ರಶ್ನೆಗೆ ಬೋಲ್ಡ್‌ಸ್ಕೈ ಕೆಲವೊಂದು ಪರಿಣಾಮಕಾರಿಯಾದ ಮನೆಮದ್ದುಗಳನ್ನು ನಿಮ್ಮೊಂದಿಗೆ ಇಂದು ಹಂಚಿಕೊಳ್ಳುತ್ತಿದೆ. ಬಹುಶಃ ನೀವು ಎಲ್ಲಾ ಬಗೆಯ ನಿವಾರಣೋಪಾಯಗಳನ್ನು ಪ್ರಯತ್ನಿಸಿ ನೋಡಿರಬಹುದು ಆದ್ರೆ ಇದನ್ನು ಒಮ್ಮೆ ಪ್ರಯತ್ನಿಸಿ ನೋಡಿ. ಫಲಿತಾಂಶ ನಿಮಗೆ ಗೊತ್ತಾಗುತ್ತದೆ...

ಶುಂಠಿ

ಶುಂಠಿ

ಇದರಲ್ಲಿ ನೋವು ನಿವಾರಕ ಮತ್ತು ಉರಿಯೂತ ನಿರೋಧಕ ಗುಣಗಳು ಇರುವುದರಿಂದ ಇವು ಮಂಡಿನೋವನ್ನು ನಿವಾರಿಸಲು ಸಹಾಯ ಮಾಡುತ್ತದೆ. ಸ್ವಲ್ಪ ಶುಂಠಿ ಎಣ್ಣೆಯನ್ನು ತೆಗೆದುಕೊಂಡು ಅದನ್ನು ನೋವು ಇರುವ ಭಾಗದಲ್ಲಿ ಲೇಪಿಸಿ, ಮಸಾಜ್ ಮಾಡಿ. ನಿಮಗೆ ಬೇಕಾದಲ್ಲಿ ಶುಂಠಿ ಪೇಸ್ಟ್ ಸಹ ಲೇಪಿಸಬಹುದು.

 ನೀಲಗಿರಿ ಎಣ್ಣೆ

ನೀಲಗಿರಿ ಎಣ್ಣೆ

ಇದೊಂದು ಸುಲಭವಾಗಿ ಸಿಗುವ ಪರಿಣಾಮಕಾರಿ ನೊವು ನಿವಾರಕ ಎಣ್ಣೆಯಾಗಿರುತ್ತದೆ. ಇದು ನಿಮ್ಮ ಸ್ನಾಯುಗಳಿಗೆ ವಿಶ್ರಾಂತಿಯನ್ನು ಒದಗಿಸಲು ನೆರವಾಗುತ್ತದೆ. ಇದು ಮೊಣಕಾಲುಗಳಿಗೆ ರಕ್ತ ಪರಿಚಲನೆಯನ್ನು ಹೆಚ್ಚಿಸುತ್ತದೆ. ಹೀಗೆ ಇದು ಉರಿಯೂತ ಮತ್ತು ನೋವನ್ನು ಕಡಿಮೆ ಮಾಡುತ್ತದೆ. ನೋವು ಇರುವ ಭಾಗಕ್ಕೆ ಇದನ್ನು ನೇರವಾಗಿ ಲೇಪಿಸಿ, ಮಸಾಜ್ ಮಾಡಿ. ಮೊಣಕಾಲು ನೋವಿಗೆ ಇದು ಒಂದು ಅತ್ಯಂತ ಪರಿಣಾಮಕಾರಿಯಾದ ಮನೆ ಮದ್ದಾಗಿರುತ್ತದೆ.

ಕರ್ಪೂರದ ಎಣ್ಣೆ

ಕರ್ಪೂರದ ಎಣ್ಣೆ

ಕರ್ಪೂರದ ಎಣ್ಣೆಯು ತುಂಬಾ ಪರಿಣಾಮಕಾರಿಯಾಗಿ ಮಂಡಿ ನೋವನ್ನು ನಿವಾರಿಸುತ್ತದೆ. ಇದು ತ್ವಚೆಯನ್ನು ತಂಪುಗೊಳಿಸುತ್ತದೆ ಮತ್ತು ಈ ತಂಪುಕಾರಕ ಗುಣದಿಂದ ತ್ವಚೆಯ ಮೇಲೆ, ತುರಿಕೆ ತಂದು ಆ ಮೂಲಕ ನೋವನ್ನು ನಿವಾರಿಸುತ್ತದೆ. ನೋವಿಗೆ ಪ್ರತಿರೋಧ ಒದಗಿಸುವ ತುರಿಕೆಯು ತ್ವಚೆಯನ್ನು ಮರಗಟ್ಟಿಸುವಂತೆ ಮಾಡಿ, ನೋವನ್ನು ನಿವಾರಿಸುತ್ತದೆ.

ಅರಿಶಿನ

ಅರಿಶಿನ

ಇದು ಸಹ ಉರಿಯೂತ ನಿವಾರಕ ಗುಣಗಳನ್ನು ಹೊಂದಿದೆ. ಇದರಿಂದಾಗಿ ಇದು ಸಹ ಮಂಡಿ ನೋವು ಮತ್ತು ಉರಿಯೂತವನ್ನು ನಿವಾರಿಸಲು ಸಹಾಯ ಮಾಡುತ್ತದೆ. ಇದು ಎಲ್ಲರ ಮನೆಯಲ್ಲಿ ಲಭ್ಯವಿರುವ ಒಂದು ಅದ್ಭುತವಾದ ಮನೆ ಮದ್ದಾಗಿರುತ್ತದೆ.

ಎಪ್ಸಂ ಸಾಲ್ಟ್ (ಮೆಗ್ನಿಷಿಯಂ ಸಲ್ಫೇಟ್)

ಎಪ್ಸಂ ಸಾಲ್ಟ್ (ಮೆಗ್ನಿಷಿಯಂ ಸಲ್ಫೇಟ್)

ಎಪ್ಸಂ ಸಾಲ್ಟ್‌ನಲ್ಲಿರುವ ಅಧಿಕ ಪ್ರಮಾಣದ ಮೆಗ್ನಿಷಿಯಂ ನೋವನ್ನು ನಿವಾರಿಸುತ್ತದೆ. ಇದನ್ನು ಹಿಂದಿಯಲ್ಲಿ ಸೆಂದಾ ನಮಕ್ ಎಂದು ಕರೆಯುತ್ತಾರೆ. ಇದನ್ನು ನೀರಿನಲ್ಲಿ ಹಾಕಿ ಕರಗುವಂತೆ ಮಾಡಿ. ನಿಮ್ಮ ಮೊಣಕಾಲನ್ನು ಈ ಮಿಶ್ರಣದಲ್ಲಿ ನೆನೆಸಿ, ನಿಮ್ಮ ನೋವು ನಿವಾರಣೆಯಾಗುವುದನ್ನು ನೀವೇ ನೋಡಿ. ನಿಮಗೆ ಇಷ್ಟವಿದ್ದಲ್ಲಿ ಎಪ್ಸಂ ಸಾಲ್ಟ್ ನೀರಿನಲ್ಲಿ ಸ್ನಾನ ಸಹ ಮಾಡಬಹುದು.

ಎಕ್ಸ್‌ಟ್ರಾ ವರ್ಜಿನ್ ಆಲೀವ್ ಎಣ್ಣೆ

ಎಕ್ಸ್‌ಟ್ರಾ ವರ್ಜಿನ್ ಆಲೀವ್ ಎಣ್ಣೆ

ಎಕ್ಸ್‌ಟ್ರಾ ವರ್ಜಿನ್ ಆಲೀವ್ ಎಣ್ಣೆಯಲ್ಲಿ ಒಲಿಯೊಕ್ಯಾಂಥಲ್ ಎಂಬ ಒಂದು ರಾಸಾಯನಿಕವು ಕಂಡು ಬರುತ್ತದೆ. ಇದು ಉರಿಯೂತವನ್ನು ಇತರ ನೋವು ನಿವಾರಕಗಳಂತೆಯೇ ನಿವಾರಿಸುತ್ತದೆ. ಎಕ್ಸ್‌ಟ್ರಾ ವರ್ಜಿನ್ ಆಲೀವ್ ಎಣ್ಣೆಯಿಂದ ಉರಿಯೂತ ಮತ್ತು ಮಂಡಿ ನೋವು ಇರುವ ಭಾಗಕ್ಕೆ ಮಸಾಜ್ ಮಾಡುವುದರಿಂದ ಸಹ ನೋವನ್ನು ನಿವಾರಿಸಿಕೊಳ್ಳಬಹುದು.

ಡಾಂಡೆಲಿಯನ್ ಎಲೆಗಳು

ಡಾಂಡೆಲಿಯನ್ ಎಲೆಗಳು

ಡಾಂಡೆಲಿಯನ್ ಎಲೆಗಳಲ್ಲಿ ವಿಟಮಿನ್ ಎ ಮತ್ತು ಸಿ ಗಳು ಅಧಿಕ ಪ್ರಮಾಣದಲ್ಲಿರುತ್ತವೆ. ಇವು ಹಾನಿಯಾಗಿರುವ ಕೋಶಗಳನ್ನು ರಿಪೇರಿ ಮಾಡಲು ನೆರವು ನೀಡುತ್ತವೆ. ಇದರಲ್ಲಿ ಉರಿಯೂತ ನಿವಾರಕ ಮತ್ತು ನೋವು ನಿವಾರಕ ಗುಣಗಳನ್ನು ಹೊಂದಿರುವ ಲಿನೊಲೆಕ್ ಮತ್ತು ಲಿನೊಲೆಕ್ ಆಮ್ಲಗಳು ಇವೆ. ಆದ್ದರಿಂದ ಈ ಎಲೆಗಳ ಟೀಯನ್ನು ಮಾಡಿಕೊಂಡು ಸೇವಿಸುವುದರಿಂದ ಅಥವಾ ಸಲಾಡ್ ಮಾಡಿಕೊಂಡು ಸೇವಿಸುವುದರಿಂದ ಇದರ ಪ್ರಯೋಜನವನ್ನು ನೀವು ಪಡೆಯಬಹುದು.

ಪುದಿನಾ ಎಣ್ಣೆ

ಪುದಿನಾ ಎಣ್ಣೆ

ಪುದಿನಾ ಎಣ್ಣೆಯನ್ನು ನಿಮಗೆ ನೋವು ಇರುವ ಮಂಡಿಯ ಮೇಲೆ ಹಾಕಿ ಮಸಾಜ್ ಮಾಡಿ. ಇದರಲ್ಲಿರುವ ತಂಪುಕಾರಕ ಗುಣಗಳು ನೋವನ್ನು ನಿವಾರಿಸುತ್ತದೆ. ಹೀಗಾಗಿ ಪುದಿನಾ ಎಣ್ಣೆಯು ಸಹ ಒಂದು ಪರಿಣಾಮಕಾರಿಯಾದ ಮನೆಮದ್ದಾಗಿದೆ.

ಗೋಲ್ಡನ್ ರೈಸಿನ್ಸ್

ಗೋಲ್ಡನ್ ರೈಸಿನ್ಸ್

ಗೋಲ್ಡನ್ ರೈಸಿನ್ಸ್‌ಗಳಿಗೆ ಅವುಗಳ ಪ್ರತ್ಯೇಕ ಬಣ್ಣ ಬರಲು ಸಲ್ಫೈಡ್‍ಗಳನ್ನು ( ಅವುಗಳ ಪ್ರಕ್ರಿಯೆಯಲ್ಲಿ ಸೇರಿಸಲ್ಪಟ್ಟಿರುತ್ತವೆ) ಸೇರಿಸಿರುತ್ತಾರೆ. ಇವು ಸಹ ಒಂದು ಉತ್ತಮ ನೋವು ನಿವಾರಕವಾಗಿ ಕೆಲಸ ಮಾಡುತ್ತದೆ.

ಐಸ್‍ಪ್ಯಾಕ್

ಐಸ್‍ಪ್ಯಾಕ್

ನೋವು ಮತ್ತು ಬಾವನ್ನು ಕಡಿಮೆ ಮಾಡಲು ಐಸ್‍ಪ್ಯಾಕ್ ಅಥವಾ ಕೋಲ್ಡ್ ಪ್ಯಾಕ್‍ಗಳನ್ನು ಬಳಸಿ. ನೋವು ಇರುವ ಭಾಗದಲ್ಲಿ ದಿನಕ್ಕೆ ಮೂರು ಅಥವಾ ಅದಕ್ಕಿಂತ ಹೆಚ್ಚು ಬಾರಿ, ಐಸ್‍ಪ್ಯಾಕನ್ನು 10 ರಿಂದ 20 ನಿಮಿಷಗಳ ಕಾಲ ಇಡಿ. ಇದು ಮನೆಯಲ್ಲಿಯೇ ಸಿಗುವ ತಕ್ಷಣದ ಮಂಡಿ ನೋವು ನಿವಾರಕ.

ದ್ರಾಕ್ಷಿ ರಸದೊಂದಿಗೆ ಪೆಕ್ಟಿನ್

ದ್ರಾಕ್ಷಿ ರಸದೊಂದಿಗೆ ಪೆಕ್ಟಿನ್

ಪೆಕ್ಟಿನ್ ಪುಡಿಯ ರೂಪದಲ್ಲಿ ಅಥವಾ ದ್ರವ ರೂಪದಲ್ಲಿ ದೊರೆಯುತ್ತದೆ. ಇದೊಂದು ಸಿಟ್ರಸ್ ಹಣ್ಣುಗಳಲ್ಲಿ ದೊರೆಯುವ ಕಾರ್ಬೋಹೈಡ್ರೇಟ್‍ ಆಗಿರುತ್ತದೆ. ದ್ರಾಕ್ಷಿ ರಸದೊಂದಿಗೆ ಮಿಶ್ರಣ ಮಾಡಿಕೊಂಡು ಪೆಕ್ಟಿನ್ ಅನ್ನು ಸೇವಿಸಿ. ಇದು ನಿಮಗೆ ನೋವು ಮತ್ತು ಉರಿಯೂತದಿಂದ ನಿವಾರಣೆಯನ್ನು ತಪ್ಪದೆ ನೀಡುತ್ತದೆ.

ಕ್ಯಾಪ್ಸೈಸಿನ್

ಕ್ಯಾಪ್ಸೈಸಿನ್

ಇದು ಮೆಣಸಿನ ಕಾಯಿ ಮತ್ತು ಮೆಣಸಿನ ಗಿಡಗಳಿಂದ ಲಭಿಸುತ್ತದೆ. ಇದು ಸಹ ಹಲವಾರು ಮಸಾಜ್ ಮತ್ತು ಮುಲಾಮುಗಳಲ್ಲಿ ತಪ್ಪದೆ ಇರುವ ರಾಸಾಯನಿಕವಾಗಿದೆ. ಇದರಲ್ಲಿ ಸಹ ಉರಿಯೂತ ಮತ್ತು ನೋವು ನಿವಾರಕ ಗುಣಗಳಿದ್ದು, ಮಂಡಿ ನೋವನ್ನು ನಿವಾರಿಸುತ್ತವೆ.

ವ್ಯಾಯಾಮ

ವ್ಯಾಯಾಮ

ಮಂಡಿ ನೋವು, ಬಿಗಿತ ಅಥವಾ ಅರ್ಥರಿಟಿಸ್‌ನಂತಹ ನೋವುಗಳಿಂದ ಬಳಲುತ್ತಿರುವವರಿಗೆ ವ್ಯಾಯಾಮವು ಸಹ ನೋವು ನಿವಾರಕವಾಗಿರುತ್ತದೆ. ವ್ಯಾಯಾಮವು ತೂಕವನ್ನು ನಿಯಂತ್ರಿಸುತ್ತದೆ, ಮಂಡಿಗಳಲ್ಲಿರುವ ಸ್ನಾಯುಗಳನ್ನು ಬಲಪಡಿಸುತ್ತದೆ ಮತ್ತು ಅವುಗಳನ್ನು ಸುಲಭವಾಗಿ ಕಾರ್ಯ ನಿರ್ವಹಿಸಲು ಸಹಾಯ ಮಾಡುತ್ತದೆ. ನೀವು ಮನೆಯಲ್ಲಿಯೇ ಮಾಡಬಹುದಾದ ಕೆಲವು ಸಾಮಾನ್ಯ ವ್ಯಾಯಾಮಗಳಿಗಾಗಿ ಮುಂದಿನ ಸ್ಲೈಡ್ ಕ್ಲಿಕ್ ಮಾಡಿ

ಸ್ಟ್ರೆಚಿಂಗ್

ಸ್ಟ್ರೆಚಿಂಗ್

ಸ್ನಾಯುಗಳ ಸ್ಟ್ರೆಚಿಂಗ್ ಯಾವಾಗಲೂ ವಿಶ್ರಾಂತಿ ಮತ್ತು ನೋವನ್ನು ತಪ್ಪಿಸಲು ಉತ್ತಮ ವ್ಯಾಯಾಮವಾಗಿವೆ. ಮಂಡಿಗಳಿಗೆ ಒಳ್ಳೆಯದಾದ ಅನೇಕ ಸ್ಟ್ರೆಚಿಂಗ್ ವ್ಯಾಯಾಮಗಳಿವೆ. ಕೆಲವು ಉತ್ತಮ ಸ್ಟ್ರೆಚಿಂಗ್ ವ್ಯಾಯಾಮಗಳಲ್ಲಿ ಮೊಣಕಾಲನ್ನು ಸಡಿಲಗೊಳಿಸಿ ಸ್ನಾಯುಗಳ ನೋವನ್ನು ದೂರಮಾಡುವ ಹಮ್ ಸ್ಟ್ರಿಂಗ್ ಸ್ಟ್ರೆಚಿಂಗ್ ಉತ್ತಮವಾಗಿದೆ. ನೀವು ಮುಂದೆ ಒಂದು ಕಾಲನ್ನು ಇರಿಸಿ ಮತ್ತು ನೀವು ಒತ್ತಡ ಅಭಿಪ್ರಾಯವಾಗುವ ತನಕ ಇನ್ನೊಂದು ಕಾಲಿನ ಮಂಡಿಯನ್ನು ಬಾಗಿ ಕುಳಿತುಕೊಳ್ಳಬೇಕು. ಇಂತಹ ಇತರ ಹಲವು ವ್ಯಾಯಾಮಗಳಿವೆ.

ಯೋಗ

ಯೋಗ

ಯಾವುದೇ ಮೊಣಕಾಲು ಗಾಯ ಸಂಭವಿಸಿದಾಗ ಮಾಡಬಹುದಾದ ಮತ್ತೊಂದು ಉತ್ತಮ ವ್ಯಾಯಾಮ ಯೋಗ. ಯೋಗ ನಿಧಾನವಾಗಿ ಸ್ನಾಯುಗಳನ್ನು ಸಡಿಲಗೊಳಿಸಿ, ಮಂಡಿಗಳ ಮೇಲೆ ಯಾವುದೇ ಒತ್ತಡ ಅಥವಾ ತೀವ್ರತೆಯನ್ನು ಕಡಿಮೆ ಮಾಡುತ್ತದೆ. ಕೇವಲ ಕಾಲುಗಳು ಮತ್ತು ಮೊಣಕಾಲುಗಳ ವಿಶ್ರಾಂತಿಗೆ ಮೀಸಲಾದ ಅನೇಕ ಯೋಗ ಆಸನಗಳಿವೆ. ಯೋಗ, ಇತರ ವ್ಯಾಯಾಮಗಳಿಗೆ ಹೋಲಿಸಿದರೆ ದೀರ್ಘಾವಧಿ ಪರಿಣಾಮಗಳನ್ನು ಹೊಂದಿದೆ. ಕೇವಲ " ಸೂರ್ಯ ನಮಸ್ಕಾರ" ಒಂದೇ ಮಂಡಿ ನೋವು ನಿವಾರಿಸಲು ಸಹಾಯ ಮಾಡಬಹುದು.

ಸ್ಟೆಪ್ ಅಪ್

ಸ್ಟೆಪ್ ಅಪ್

ಮೆಟ್ಟಿಲು ಅಥವಾ ಸ್ಟೆಪ್ ಅಪ್ ವ್ಯಾಯಾಮ ಅನೇಕ ಪ್ರಯೋಜನಗಳನ್ನು ಹೊಂದಿದ್ದು ಹೃದಯ ವ್ಯಾಯಾಮವಾಗಿದೆ. ಈ ವ್ಯಾಯಾಮ, ಹೃದಯ ಬಡಿತಗಳನ್ನು ಹೆಚ್ಚಿಸುತ್ತದೆ, ದೇಹದಲ್ಲಿ ಶಾಖ ಉತ್ಪಾದನೆಯನ್ನು ಪ್ರಚೋದಿಸುತ್ತದೆ ಮತ್ತು ಇಡೀ ದೇಹಕ್ಕೆ ಶಕ್ತಿಯನ್ನು ತುಂಬುತ್ತದೆ. ಸ್ಟೆಪ್ ಅಪ್ ಮಾಡುವಾಗ ಮಂಡಿಯನ್ನು ಬಗ್ಗಿಸಕೂಡದು. ಇದು ನೇರ ಮತ್ತು ಸ್ಥಿರವಾಗಿರಬೇಕು. ಒಂದು ನಿಮಿಷಗಳ ನಿರಂತರ ಸ್ಟೆಪ್ ಅಪ್ ವ್ಯಾಯಾಮ ಮಂಡಿಗಳಿಗೆ ಲಾಭಕರವಾಗಿರುತ್ತದೆ. ಸ್ಟೆಪ್ ಅಪ್ ವ್ಯಾಯಾಮ ಮೊಣಕಾಲನ್ನು ಬೆಚ್ಚಗಾಗಿಸುವ ಮತ್ತು ಅದರ ಮೇಲೆ ಯಾವುದೇ ತೀವ್ರವಾದ ಒತ್ತಡ ಬೀಳದಂತೆ ಕಡಿಮೆ ಮಾಡುತ್ತದೆ. ಇದು ಯಾವುದೇ ರೀತಿಯ ಮೊಣಕಾಲು ಗಾಯದಿಂದ ಬಳಲುತ್ತಿರುವ ನೀವು ಮಾಡಬಹುದಾದ ಒಂದು ತ್ವರಿತ ವ್ಯಾಯಾಮ.

ಪಾರ್ಸ್ಲೆ

ಪಾರ್ಸ್ಲೆ

ಅಜ್ವಾನ ಎಂದು ಸಹ ಕರೆಯಲ್ಪಡುವ ಇದರಲ್ಲಿ ಉರಿಯೂತ ನಿರೋಧಕ ಮತ್ತು ಅರಿವಳಿಕೆ ಗುಣಗಳು ಇರುತ್ತವೆ. ಅಜ್ವಾನದ ಕೆಲವೊಂದು ಬೀಜಗಳನ್ನು ಬಿಸಿನೀರಿನಲ್ಲಿ ನೆನೆಸಿ, ಅದರಲ್ಲಿ ನೋವಿನಿಂದ ಕೂಡಿದ ಮಂಡಿಯನ್ನು ನೆನೆಸಿ. ಇಲ್ಲವಾದಲ್ಲಿ ತಕ್ಷಣ ಉಪಶಮನಕ್ಕಾಗಿ ಅಜ್ವಾನದ ಬೀಜಗಳನ್ನು ಜಜ್ಜಿ ಅದನ್ನು ನೋವಿರುವ ಭಾಗಕ್ಕೆ ಹಚ್ಚಿ.

ಮ್ಯಾಟ್ ವ್ಯಾಯಾಮ

ಮ್ಯಾಟ್ ವ್ಯಾಯಾಮ

ಲೆಗ್ ಲಿಫ್ಟ್, ಮೊಣಕಾಲು ಲಿಫ್ಟ್ ಮುಂತಾದವು ಕೆಲವು ಮ್ಯಾಟ್ ವ್ಯಾಯಾಮಗಳು ಇವು ಮೊಣಕಾಲು ನೋವು ಕಡಿಮೆಗೊಳಿಸಲು ಸಾಕಷ್ಟು ಸಹಾಯಕವಾಗಿವೆ. ಮ್ಯಾಟ್ ವ್ಯಾಯಾಮ, ಮನೆಯಲ್ಲಿ ಯಾವುದೇ ಸಮಯದಲ್ಲಿ ಮಾಡಬಹುದು. ಕಾಲನ್ನು ಎತ್ತುವಾಗ ನಿಮ್ಮ ಮಂಡಿಗಳನ್ನು ಬಗ್ಗಿಸುವಂತಿಲ್ಲ. ಕೆಲವು ಇಂಚುಗಳಷ್ಟು ಕಾಲನ್ನು ಮೇಲೇರಿಸಿ. ಈ ವ್ಯಾಯಾಮ ಮೊಣಕಾಲಿನ ನೋವು ನಿವಾರಣೆಗೆ ಅತ್ಯುತ್ತಮವಾದದ್ದು.

ತೆಂಗಿನೆಣ್ಣೆಯ ಮಸಾಜ್

ತೆಂಗಿನೆಣ್ಣೆಯ ಮಸಾಜ್

ಬೆಚ್ಚಗಿನ ತೆಂಗಿನೆಣ್ಣೆಯನ್ನು ನೋವಿರುವ ಮಂಡಿಗೆ ಮಸಾಜ್ ಮಾಡುವುದೂ ಕೂಡ ಮಂಡಿ ನೋವಿನಿಂದ ತುರಂತ ಪರಿಹಾರವನ್ನು ಒದಗಿಸುತ್ತದೆ. ಉಗುರು ಬೆಚ್ಚನೆಯ ತೆಂಗಿನೆಣ್ಣೆಯಿಂದ ಮಸಾಜ್ ಮಾಡುವುದರಿಂದ ನೋವಿನಿಂದ ತುರ್ತು ಪರಿಹಾರ ನಿಮ್ಮದಾಗುತ್ತದೆ.

ಅರಶಿನ ಬೆರೆತ ಹಾಲು ಸೇವನೆ

ಅರಶಿನ ಬೆರೆತ ಹಾಲು ಸೇವನೆ

ಅರಶಿನ ಬೆರೆತ ಹಾಲು ಸೇವನೆ ಮಂಡಿ ನೋವಿಗೆ ಉಪಶಮನವನ್ನು ಒದಗಿಸುವ ಒಂದು ಮನೆಮದ್ದಾಗಿದ್ದು ನಿಮಗೆ ತಕ್ಷಣ ಆರಾಮವನ್ನು ನೀಡುತ್ತದೆ. ದಿನವೂ ಅರಶಿನ ಬೆರೆತ ಹಾಲನ್ನು ಕುಡಿಯಿರಿ. ಈ ಸಾಂಬಾರು ಪದಾರ್ಥವು ಉತ್ಕರ್ಷಣ ನಿರೋಧಿ, ಆಂಟಿಸೆಪ್ಟಿಕ್ ಆಗಿದೆ. ಹಾಲು ಮೂಳೆಗಳಿಗೆ ಅತ್ಯುತ್ತಮ.

English summary

Effective Home Remedies For Knee Pain

Knee pain is a debilitating condition. It is caused by wear and tear of knee joint due to ageing or some other factors. There are some effective home remedies for knee pain that can give you immediate relief. Boldsky shares with you some effective home remedies for knee pain if you have tried all the medications and still are suffering from it. Take a look.
X
Desktop Bottom Promotion