For Quick Alerts
ALLOW NOTIFICATIONS  
For Daily Alerts

ಸೂಕ್ತ ಆಹಾರ ಪದ್ಧತಿಯೇ ಎಲ್ಲಾ ರೋಗಕ್ಕೂ ರಾಮಬಾಣ!

|

ಊಟ ಬಲ್ಲವನಿಗೆ ರೋಗವಿಲ್ಲ ಎಂಬ ಮಾತಿನಂತೆ ನಾವು ತೆಗೆದುಕೊಳ್ಳಬೇಕಾದ ಆಹಾರ ಕ್ರಮದಲ್ಲಿ ನಮಗೆ ಹೆಚ್ಚಿನ ಕಾಳಜಿ ಇರಬೇಕು. ಹೊಟ್ಟೆ ತುಂಬಿಸಲು ಏನಾದರೊಂದನ್ನು ಸೇವಿಸಿದರಾಯಿತು ಎಂಬ ನಿರ್ಲಕ್ಷ್ಯವೇ ರೋಗಕ್ಕೆ ಆಹ್ವಾನವನ್ನು ನೀಡುತ್ತದೆ.

ನಮ್ಮ ಸುತ್ತಮುತ್ತ ಯಥೇಚ್ಛವಾಗಿ ಸಿಗುವ ಹಸಿರು ತರಕಾರಿ, ಹಣ್ಣು ಹಂಪಲುಗಳು, ಸೊಪ್ಪುಗಳು ಅತ್ಯಧಿಕ ಪ್ರಮಾಣದ ಪ್ರೋಟೀನ್ ಅಂಶಗಳನ್ನು ಹೊಂದಿದ್ದು ದೇಹದ ಕೊಬ್ಬನ್ನು ಕಡಿಮೆ ಮಾಡುವಲ್ಲಿ ಹಾಗೂ ಕೊಲೆಸ್ಟ್ರಾಲ್‌ಗಳನ್ನು ನಿಯಂತ್ರಿಸುವಲ್ಲಿ ಇದು ಸಹಕಾರಿಯಾಗಿದೆ. ನಿಮ್ಮ ದಿನ ನ್ಯೂಟ್ರೀನ್ ಬೆರೆತ ಆಹಾರಗಳಿಂದ ಕೂಡಿದ್ದರೆ ಯಾವ ರೀತಿಯ ಕಾಯಿಲೆ ಕೂಡ ನಿಮ್ಮನ್ನು ಸೋಕುವುದಿಲ್ಲ.

ಹಾಗಾಗಿ ಕೆಲವೊಂದು ಆಹಾರಗಳನ್ನು ಇಲ್ಲಿ ಪಟ್ಟಿ ಮಾಡಲಾಗಿದೆ. ನಿಮ್ಮನ್ನು ಆರೋಗ್ಯಕರವಾಗಿಸಲು ಅಗತ್ಯವಾಗಿರುವ ಪೋಷಕಾಂಶಗಳು ಇವುಗಳು ಒಳಗೊಂಡಿವೆ. ದಿನವೂ ಈ ಆಹಾರಗಳನ್ನು ನಿಮಗೆ ಸೇವಿಸಬಹುದು. ಅವುಗಳು ಯಾವುವು ಎಂಬುದನ್ನು ನೋಡೋಣ ಬನ್ನಿ... ಎಚ್ಚರ: ಮೂತ್ರದ ಬಣ್ಣದಲ್ಲಿ ಏರುಪೇರಾದರೆ ಅಪಾಯ ಕಟ್ಟಿಟ್ಟ ಬುತ್ತಿ..!

ಪಾಲಕ್

Easy Tips for Planning a Healthy life

ಶಕ್ತಿವರ್ಧಿಸುವ ಗುಣದೊಂದಿಗೆ ಪಾಲಕ್ ನಮ್ಮ ಚರ್ಮಕ್ಕೂ ಒಳ್ಳೆಯದು. ಪಾಲಕ್ ನಲ್ಲಿರುವ ವಿಟಮಿನ್ ಮತ್ತು ಪೋಷಕಾಂಶಗಳು ಆರೋಗ್ಯ ಮತ್ತು ಚರ್ಮ ಹೊಳೆಯಲು ಪ್ರಮುಖ ಪಾತ್ರ ವಹಿಸುತ್ತದೆ. ಪಾಲಕ್ ನಿಂದ ಮೊಡವೆ, ಹಾನಿಗೊಳಗಾದ ಚರ್ಮದ ಸರಿಪಡಿಸುವಿಕೆ ಮತ್ತು ಸೂರ್ಯನ ಕಿರಣಗಳಿಂದ ರಕ್ಷಣೆ ನೀಡುತ್ತದೆ. ಪಾಲಕ್ ತ್ವಚೆಯ ಆರೈಕೆಗೆ ಅತ್ಯಂತ ಉಪಯುಕ್ತ ತರಕಾರಿ.

ದಾಳಿಂಬೆ


ದಾಳಿಂಬೆಯು ತಾಜಾ, ಕಡು ಕೆಂಪುಬಣ್ಣವುಳ್ಳದ್ದಾಗಿದೆ. ಅವುಗಳಲ್ಲಿ ನಾರಿನಂಶ ಮತ್ತು ಆಂಟಿಆಕ್ಸಿಡೆಂಟ್ ಗಳು ಉತ್ತಮ ಪ್ರಮಾಣದಲ್ಲಿದ್ದು, ಅವು ನಿಮ್ಮ ಮೆದುಳನ್ನು ಸ್ವಸ್ಥ ಮತ್ತು ಚುರುಕಾಗಿರಿಸುತ್ತವೆ. ಸ್ವಸ್ಥ ಮೆದುಳು ಎಂಬುದು ಆರೋಗ್ಯದಿಂದಿರುವ ಹಾಗೂ ಒತ್ತಡರಹಿತರಾದ ನಿಮ್ಮನ್ನೇ ಸೂಚಿಸುತ್ತದೆ. ಆಹಾ! ಬಿಸಿ ಬಿಸಿ ಶುಂಠಿ ಚಹಾದ ಅತ್ಯುನ್ನತ ಪ್ರಯೋಜನಗಳೇನು?

ಬ್ರೊಕೋಲಿ


ಮಹಿಳೆಯರಲ್ಲಿ ಸಾಮಾನ್ಯವಾಗಿ ಕಾಣುವ ಸ್ತನ ಕ್ಯಾನ್ಸರ್ ಮತ್ತು ಗರ್ಭಕೋಶದ ಕ್ಯಾನ್ಸರ್ ಗಳಿಗೆ ಇದು ರಾಮಬಾಣ. ಕ್ಯಾನ್ಸರ್ ರೋಗಕ್ಕೆ ಕಾರಣವಾಗುವ ಅಪಾಯಕಾರಿ ಟಾಕ್ಸಿನ್ ಗಳನ್ನು ಬೇರಿನಲ್ಲಿಯೇ ಚಿವುಟಿ ಹಾಕುವ ಎನ್ ಜೈಮ್ ಗಳನ್ನು ಈ ತರಕಾರಿ ಬಿಡುಗಡೆ ಮಾಡುತ್ತದೆ. ಕ್ಯಾನ್ಸರ್ ಇದ್ದರೂ ಕೂಡ ಹರಡದಂತೆ ತಡೆಗೋಡೆಯನ್ನು ಇದು ಒಡ್ಡುತ್ತದೆ. ಬೇಯಿಸಿ ಅಥವಾ ಹಸಿಯಾಗಿಯೇ ತಿನ್ನಬಹುದು. ಇದರಲ್ಲಿ ಫೊಲೇಟ್ ಎಂಬ ವಿಟಮಿನ್ ಬಿ ಅತ್ಯಧಿಕವಿದ್ದು, ಡಿಎನ್ಎಯನ್ನು ರಕ್ಷಿಸುತ್ತದೆ, ಹೊಸ ರಕ್ತ ಉತ್ಪತ್ತಿಯಾಗುವಲ್ಲಿ ಸಹಕಾರ ನೀಡುತ್ತದೆ. ಗರ್ಭಿಣಿಯರಿಗೆ ಇದು ಅತ್ಯಧಿಕ ಪೋಷಕಾಂಶ ಒದಗಿಸುವುದರ ಜೊತೆಗೆ ನರಮಂಡಲದಲ್ಲಿ ತೊಂದರೆಯಾಗದಂತೆ ಮತ್ತು ಮಕ್ಕಳಲ್ಲಿ ಯಾವುದೇ ಅಂಗ ದೋಷವಿರದಂತೆ ನೋಡಿಕೊಳ್ಳುತ್ತದೆ.

ಮುಳ್ಳುಸೌತೆ


ನಿಮ್ಮ ದೇಹಕ್ಕೆ ಅಗತ್ಯವಾಗಿ ಬೇಕಾಗಿರುವ ಅಂಶ ವಿಟಮಿನ್ ಆಗಿದೆ. ಮುಳ್ಳುಸೌತೆ ಎ, ಬಿ ಹಾಗೂ ಸಿ ಮತ್ತು ಕೆ ಸತ್ವಗಳಿಂದ ಕೂಡಿದ್ದು ದೇಹಕ್ಕೆ ವಿಟಮಿನ್‌ನ ಉತ್ತಮ ಪೂರೈಕೆಯನ್ನು ಮಾಡುತ್ತದೆ. ವಿಟಮಿನ್‌ಗಳು ಪ್ರಮುಖ ಆರೋಗ್ಯ ಸಮಸ್ಯೆಗಳನ್ನು ದೂರೀಕರಿಸಿ ನಿಮ್ಮ ತ್ವಚೆಯನ್ನು ಹೊಳೆಯುವಂತೆಮಾಡುತ್ತದೆ.

ಸಿಹಿ ಕುಂಬಳ


ಇದರಲ್ಲಿರುವ ಅಗಾಧ ಪ್ರಮಾಣದ beta carotene ಗೆ ಇದರ ಕಿತ್ತಳೆ ಬಣ್ಣವೇ ಸಾಕ್ಷಿ. ಇದು ಹೃದಯ ಕಾಯಿಲೆಯನ್ನು ತಡೆಯುತ್ತದೆ. ಇದು ಕಡಿಮೆ ಕ್ಯಾಲೋರಿಗಳುಳ್ಳದ್ದಾಗಿದ್ದು, ವಿಟಮಿನ್ A ಮತ್ತು ನಾರಿನಂಶದಿಂದ ಸಮೃದ್ಧವಾಗಿದೆ

ನೇರಳೆ ಹಣ್ಣು


ನೇರಳೆ ಬಣ್ಣದ ಈ ಹಣ್ಣು, ಆಂಟಿಆಕ್ಸಿಡೆಂಟ್ ಮತ್ತು ನಾರಿನಂಶದಿಂದ ಸಮೃದ್ಧ. ನೇರಳೆ ಹಣ್ಣು ನಿಮ್ಮ ಶಕ್ತಿಯು ಕ್ಷಯವನ್ನು ತಡೆದು ಮೆದುಳನ್ನು ಆರೋಗ್ಯವಾಗಿರಿಸುತ್ತದೆ ಮತ್ತು ಶಕ್ತಿಯುತವಾಗಿರಿಸುತ್ತದೆ. ಅಲ್ಲದೇ ಇದು ಬೊಜ್ಜನ್ನು ತಡೆಯುತ್ತದೆ, ರಕ್ತದೊತ್ತಡದ ಅಪಾಯವನ್ನು ಕಡಿಮೆ ಮಾಡುತ್ತದೆ, ಮತ್ತು ಮುಖ್ಯ ರಕ್ತನಾಳಗಳ ಗಡುಸಾಗುವಿಕೆಯನ್ನು ತಡೆಯುತ್ತದೆ. ಇದರ ರಸ ಕುಡಿದರೆ ಹೊಟ್ಟೆಯ ಉರಿ, ಅಜೀರ್ಣ ಕಡಿಮೆ ಆಗುತ್ತದೆ ತೂಕ ಇಳಿಕೆಯಲ್ಲಿ ಹಸಿರು ಚಿನ್ನ ವೀಳ್ಯದೆಲೆಯ ಕರಾಮತ್ತೇನು?

ಗೆಣಸು


ಗೆಣಸಿನ ಬಣ್ಣವು ಬಿಳಿ, ಹಳದಿ, ಕೆಂಪು, ಅಥವಾ ಕಂದು ಬಣ್ಣದ್ದಾಗಿರುತ್ತದೆ. ಅವುಗಳಲ್ಲಿ beta - carotene, ಕಬ್ಬಿಣ, C ವಿಟಮಿನ್ , ಮತ್ತು E ವಿಟಮಿನ್ ಗಳು ಸಮೃದ್ಧವಾಗಿವೆ. ಗೆಣಸಿನ ನಿಯಮಿತ ಸೇವನೆಯು ನಿಮ್ಮ ಶರೀರವನ್ನು ಕೋಶಗಳ ನಾಶದಿಂದ ಕಾಪಾಡುತ್ತದೆ. ಸ್ನಾಯುಗಳ ಮರುಚೇತನಕ್ಕೆ ಅವು ಅತ್ಯುತ್ತಮ ಆಹಾರ ಪದಾರ್ಥ. ಅಲ್ಲದೆ ಇದರಲ್ಲಿ ಕಾರ್ಬೋಹೈಡ್ರೇಟ್, ಫೈಬರ್, ಬೀಟಾ-ಕ್ಯಾರೋಟಿನ್, ವಿಟಮಿನ್ ಸಿ, ಮ್ಯಾಂಗನೀಸ್ ಮತ್ತು ಪೊಟ್ಯಾಶಿಯಂ ಅಂಶಗಳು ಸಮೃದ್ಧವಾಗಿದೆ. ವ್ಯಾಯಾಮದ ನಂತರ, ದೇಹದ ಗ್ಲೈಕೋಜೆನ್ (glycogen) ಮಟ್ಟ ಕಡಿಮೆಯಾಗಲ್ಪಡುತ್ತದೆ, ಮತ್ತು ಸಿಹಿ ಗೆಣಸು, ಗ್ಲೈಕೋಜೆನ್ ಮಟ್ಟವನ್ನು ಮತ್ತೆ ಹೆಚ್ಚಿಸುತ್ತದೆ
English summary

Easy Tips for Planning a Healthy life

Healthy eating is not about strict dietary limitations, staying unrealistically thin, or depriving yourself of the foods you love. There are many vegetables too that are rich in protein and can give you the Amount of protein necessary for your body, have a look
Story first published: Thursday, February 26, 2015, 18:58 [IST]
X
Desktop Bottom Promotion