For Quick Alerts
ALLOW NOTIFICATIONS  
For Daily Alerts

ನಿಜಕ್ಕೂ ಜೇನು ತುಪ್ಪ ಆರೋಗ್ಯಕ್ಕೆ ಮಾರಕವೇ?

|

ಜೇನು ತುಪ್ಪವನ್ನು ಶತಮಾನಗಳಿಂದ ನಾವು ಔಷಧಗಳ ಉದ್ದೇಶಕ್ಕಾಗಿ ಬಳಸಿಕೊಂಡು ಬರುತ್ತಿದ್ದೇವೆ. ಇದು ತನ್ನ ಉಪಶಮನಕಾರಿ ಗುಣಗಳಿಂದಾಗಿ ಮತ್ತು ಗಾಯಗಳನ್ನು ಇನ್‍ಫೆಕ್ಷನ್ ಆಗದೆ ತಡೆಯುವ ಗುಣಗಳಿಂದಾಗಿ ಖ್ಯಾತಿ ಪಡೆದಿದೆ. ಜೇನಿನ ಸವಿಯ ಜೊತೆಗೆ ಅದರಲ್ಲಿರುವ ಔಷಧ ಗುಣಗಳು ಇದನ್ನು ಜನಪ್ರಿಯಗೊಳಿಸಿವೆ. ಆದರೆ ಅತಿಯಾಗಿ ಸೇವಿಸಿದರೆ ಅಮೃತವು ವಿಷವಾಗುವಂತೆ, ಜೇನನ್ನು ಅತಿಯಾಗಿ ಸೇವಿಸಿದರೆ ಅಡ್ಡ ಪರಿಣಾಮಗಳಿಗೆ ಗುರಿಯಾಗಬೇಕಾಗುತ್ತದೆ.

ಪ್ರಸಿದ್ಧ ನ್ಯೂಟ್ರಿಷಿಯನಿಸ್ಟ್ ಆದ ಪ್ರಿಯಾ ಕಾತ್ಪಾಲ್‌ರವರ ಪ್ರಕಾರ ಜೇನು ತುಪ್ಪವನ್ನು ಹೆಚ್ಚಾಗಿ ಸೇವಿಸಿದರೆ ಆರೋಗ್ಯಕ್ಕೆ ಹಾನಿಯುಂಟಾಗುತ್ತದೆಯಂತೆ. ಅತಿಯಾದ ಜೇನು ತುಪ್ಪವು ಜೀರ್ಣ ಕ್ರಿಯೆಯ ಮೇಲೆ ಹಾನಿ ಮಾಡುತ್ತದೆ. ಇದು ಹೊಟ್ಟೆ ನೋವು, ಹೊಟ್ಟೆ ಉಬ್ಬುವುದು ಮತ್ತು ಡಯೇರಿಯಾಗೆ ಕಾರಣವಾಗುತ್ತದೆ. ಜೇನು ತುಪ್ಪವು ಹೊಟ್ಟೆಯಲ್ಲಿರುವಷ್ಟು ಹೊತ್ತು ನಿಮಗೆ ಅಸೌಖ್ಯವನ್ನುಂಟು ಮಾಡುತ್ತಲೆ ಇರುತ್ತದೆ. ರಾತ್ರಿಯೂಟದ ಸವಿಯನ್ನು ಹೆಚ್ಚಿಸುವ ಆರೋಗ್ಯಯುತ ಸಿಹಿತಿಂಡಿಗಳು

Does honey have any side-effects?

ಜೇನು ತುಪ್ಪದಲ್ಲಿರುವ ಫ್ರಕ್ಟೋಸ್ ಅಂಶವು ಸಣ್ಣ ಕರುಳು ಪೋಷಕಾಂಶಗಳನ್ನು ಹೀರಿಕೊಳ್ಳುವ ಪ್ರಕ್ರಿಯೆಗೆ ಅಡ್ಡಿಯುಂಟು ಮಾಡುತ್ತದೆ.
ಜೇನು ತುಪ್ಪ ಸ್ವಲ್ಪ ಪ್ರಮಾಣದ ಆಮ್ಲೀಯ ಗುಣಗಳನ್ನು ಒಳಗೊಂಡಿದೆ. ಇದು ನಿಮ್ಮ ಎನಾಮೆಲ್ ಮೇಲೆ ದುಷ್ಪರಿಣಾಮ ಬೀರುವ ಸಾಧ್ಯತೆ ಇರುತ್ತದೆ. ಇದರ ಜೊತೆಗೆ ಇದು ನಿಮ್ಮ ಈಸೊಫಗುಸ್, ಕರುಳುಗಳು ಮತ್ತು ಜಠರಗಳ ಮೇಲೆ ಅಡ್ಡ ಪರಿಣಾಮ ಬೀರಿ, ನಿಮ್ಮ ದೇಹದಲ್ಲಿ ಆಸಿಡ್ ರಿಫ್ಲಕ್ಸ್ ಅಂದರೆ ಎದೆ ಉರಿ ಬರುವಂತೆ ಮಾಡುತ್ತದೆ. ಶೌಚಾಲಯಕ್ಕಿಂತಲೂ ಹೆಚ್ಚಿನ ಕ್ರಿಮಿಗಳು ಇವುಗಳಲ್ಲಿವೆ ಕಣ್ರೀ!

ಒಂದು ವಿಚಾರವನ್ನು ಮರೆಯಬೇಡಿ. ಜೇನು ತುಪ್ಪ ಸಕ್ಕರೆಯ ಒಂದು ರೂಪ, ಇದನ್ನು ಹೆಚ್ಚಾಗಿ ಸೇವಿಸಿದರೆ ನಿಮ್ಮ ದೇಹದಲ್ಲಿ ಇನ್ಸುಲಿನ್ ಪ್ರಮಾಣದ ಏರುಪೇರಿಗೆ ಕಾರಣವಾಗಬಹುದು. " ಜೇನು ತುಪ್ಪವು ಮಧುಮೇಹ ಇರುವವರಲ್ಲಿ ರಕ್ತದಲ್ಲಿರುವ ಸಕ್ಕರೆಯ ಪ್ರಮಾಣವನ್ನು ಏರು ಪೇರು ಮಾಡುತ್ತದೆ" ಎಂದು ಪ್ರಿಯಾರವರು ಹೇಳುತ್ತಾರೆ.

ತಜ್ಞರ ಪ್ರಕಾರ ಒಂದು ವೇಳೆ ನೀವು ಹೂವುಗಳ ಪರಾಗ ರೇಣುಗಳಿಗೆ ಅಲರ್ಜಿಯನ್ನು ಹೊಂದಿದ್ದರೆ, ನಿಮಗೆ ಜೇನು ತುಪ್ಪ ಸೇವನೆಯಿಂದ ಅಲರ್ಜಿ ಉಂಟಾಗಬಹುದಂತೆ. ಇದರ ಜೊತೆಗೆ ಜೇನು ತುಪ್ಪ ಸೇವನೆಯಿಂದ ತ್ವಚೆಯ ಮೇಲೆ ಗುಳ್ಳೆಗಳು ಉಂಟಾಗಬಹುದು. ಉಸಿರಾಟದ ಸಮಸ್ಯೆ ಮತ್ತು ಆಹಾರ ನುಂಗುವಿಕೆಗು ಸಹ ಜೇನು ತುಪ್ಪದಿಂದ ಸಮಸ್ಯೆ ಉಂಟಾಗುವ ಸಾಧ್ಯತೆ ಇರುತ್ತದೆ. ಇಂತಹ ಪರಾಗ ರೇಣುಗಳ ಅಲರ್ಜಿಯನ್ನು ಹೊಂದಿದ್ದರೆ ಏನು ಮಾಡಬಹುದು ಎಂಬುದಕ್ಕೆ ಪರಿಹಾರಗಳನ್ನು ಈ ಕೆಳಗೆ ನೀಡಿದ್ದೇವೆ ಓದಿ.

ಅಧಿಕ ಪ್ರಮಾಣದ ಜೇನು ತುಪ್ಪವನ್ನು ಸೇವಿಸುವುದರಿಂದ ನಿಮ್ಮ ದೇಹಕ್ಕೆ ಅಧಿಕ ಪ್ರಮಾಣದ ಕ್ಯಾಲೊರಿಗಳು ಸೇರುತ್ತವೆ. ಆದ್ದರಿಂದ ಒಂದು ವೇಳೆ ನೀವು ತೂಕವನ್ನು ಇಳಿಸಿಕೊಳ್ಳಲು ಪ್ರಯತ್ನಿಸುತ್ತಿದ್ದರೆ, ಜೇನು ತುಪ್ಪವನ್ನು ನೋಡಿಕೊಂಡು ಸೇವಿಸುವುದು ಒಳ್ಳೆಯದು. ವೈದ್ಯಲೋಕವನ್ನೇ ಚಕಿತಗೊಳಿಸುವ 'ಚ್ಯವನಪ್ರಾಶದ' ಅದ್ಭುತ ಕಮಾಲು!

ಸಲಹೆ:
ಒಂದು ದಿನಕ್ಕೆ ಎಷ್ಟು ಜೇನು ತುಪ್ಪವನ್ನು ಸೇವಿಸಬಹುದು ಎಂಬ ಕುರಿತು ಯಾವುದೇ ಮಿತಿಗಳು ಇಲ್ಲ. ಆದರೆ ಇದನ್ನು ಪ್ರತಿನಿತ್ಯ ಹೆಚ್ಚಾಗಿ ಸೇವಿಸಬೇಡಿ ಎಂದು ಹೇಳಲಾಗುತ್ತದೆ. ಒಂದು ವೇಳೆ ನೀವು ಅಧಿಕ ಪ್ರಮಾಣದ ಸಿಹಿ ತಿನಿಸುಗಳನ್ನು ಸೇವಿಸಿದ ದಿನ ಜೇನು ತುಪ್ಪವನ್ನು ಸೇವಿಸಲು ಹೋಗಬೇಡಿ. ಸೇವಿಸಲೆ ಬೇಕಾದಲ್ಲಿ ಸ್ವಲ್ಪ ಮಾತ್ರ ಸೇವಿಸಿ. ನಿಮ್ಮ ಸಕ್ಕರೆಯ ಸೇವನೆಯ ಪ್ರಮಾಣವನ್ನು ಯಾವುದೇ ಕಾರಣಕ್ಕು 100 ಕ್ಯಾಲೋರಿಗಳಿಗಿಂತ ಹೆಚ್ಚಿಗೆ ಮಾಡಿಕೊಳ್ಳಬೇಡಿ. ಅಂದರೆ ಪ್ರತಿ ದಿನ 6 ಟೀ ಚಮಚ ಪ್ರಮಾಣದ ಒಳಗೆ ನಿಮ್ಮ ಸಕ್ಕರೆಯ ಸೇವನೆ ಮಿತಿಯಿರಲಿ.

English summary

Does honey have any side-effects?

Honey has been used as a traditional medicine for centuries and is believed to cure everything, from infected wounds to burns. No doubt honey has many healing powers and is considered safe for intake, but excessive intake of honey can have potential side effects.
Story first published: Wednesday, March 18, 2015, 15:06 [IST]
X
Desktop Bottom Promotion