For Quick Alerts
ALLOW NOTIFICATIONS  
For Daily Alerts

ಉಸಿರಾಟದ ಪ್ರಕ್ರಿಯೆಯ ಮೂಲಕ ಆರೋಗ್ಯ ಸುಧಾರಿಸಿಕೊಳ್ಳಿ

|

ದೇಹಕ್ಕೆ ಅತ್ಯಮೂಲ್ಯ ಆಸ್ತಿ ಎಂದೆನಿಸಿರುವ ಉಸಿರಾಟ ನಮ್ಮ ಆರೋಗ್ಯದ ಸ್ಥಿತಿಯನ್ನು ತಿಳಿಸುವ ಕೀಲಿಕೈ ಎಂಬುದನ್ನು ನೀವು ಬಲ್ಲಿರಾ? ಹೌದು ನಮ್ಮ ದೇಹದ ಉಸಿರಾಟದ ಮೂಲಕ ಹೊರಹೋಗುವ ಗಾಳಿ ಆರೋಗ್ಯ ಸ್ಥಿತಿಯನ್ನು ತಿಳಿಸುವ ಮಾಪನದಂತೆ ಕೆಲಸ ಮಾಡುತ್ತದೆ. ಅನಾದಿ ಕಾಲದಲ್ಲಿ ಹಿಪ್ಪೋಕ್ರೇಟ್ಸ್ ಉಸಿರಾಟವನ್ನು ಗ್ರಹಿಸಿ ಆರೋಗ್ಯ ಸ್ಥಿತಿಯನ್ನು ತಿಳಿದುಕೊಳ್ಳುತ್ತಿದ್ದನಂತೆ. ಇದು ಆಶ್ಚರ್ಯಕರವೆಂದು ಎನಿಸಿದರೂ ವೈದ್ಯಕೀಯ ಲೋಕದಲ್ಲಿ ರುಜುವಾತುಗೊಂಡಿದೆ. ಉಸಿರಿನ ದುರ್ವಾಸನೆಗೆ ಇನ್ನೂ ಗುಡ್ ಬೈ ಹೇಳಿ!

ಉಸಿರಾಟವು ದೇಹದಲ್ಲಿ ನಡೆಯುವ ಸಾಮಾನ್ಯ ಪ್ರಕ್ರಿಯೆ ಎಂಬುದು ಎಲ್ಲರಿಗೂ ಗೊತ್ತಿರುವ ವಿಷಯವೇ, ಆದರೆ ಇದು ದೇಹದಲ್ಲಿರುವ ಲೋಪ ದೋಷಗಳನ್ನು ತಿಳಿಸುತ್ತದೆ ಎಂಬುದೇ ಇದರ ವೈಶಿಷ್ಟ್ಯತೆ! ಬಾಯಿಯ ದುರ್ವಾಸನೆಯನ್ನು ಸರಿಯಾಗಿ ಗುರುತಿಸಿದರೆ, ಆ ದೋಷವನ್ನು ಅಂದರೆ ಕಾಯಿಲೆಯನ್ನು ಗುಣಪಡಿಸಿಕೊಳ್ಳಬಹುದು. ನಮ್ಮ ಬಾಯಿಯಲ್ಲಿ ಹಲವಾರು ರಾಸಾಯನಿಕಗಳು ಇರುತ್ತವೆ. ಇವು ದೇಹದಲ್ಲಿ ಏನಾದರು ಗುರುತಿಸಲಾಗದ ಸಮಸ್ಯೆ ಕಂಡು ಬಂದಾಗ ವಿಭಿನ್ನವಾಗಿ ವಾಸನೆಯನ್ನು ಬೀರುತ್ತವೆ. ಈ ವಾಸನೆಗಳೇ ಆ ಕಾಯಿಲೆಯನ್ನು ಕಂಡು ಹಿಡಿಯುವ ಸರಳ ಉಪಾಯಗಳಾಗಿರುತ್ತವೆ.

ಉದಾಹರಣೆಗೆ ಮಧುಮೇಹಿಗಳಲ್ಲಿ ಒಂದು ವಿಚಿತ್ರ ಬಗೆಯ ವಾಸನೆ ಕಂಡು ಬರುತ್ತದೆ. ಯಾವಾಗ ಮಧುಮೇಹವು ತೀವ್ರತರನಾದ ಹಂತಕ್ಕೆ ತಲುಪುತ್ತದೆಯೋ, ಆಗ ಇದು ಸ್ನಾಯುಗಳ ಪ್ರೋಟೀನ್ ಮತ್ತು ಕೊಬ್ಬುಗಳನ್ನು ವಿಭಜಿಸುತ್ತದೆ. ಇದರಿಂದಾಗಿ, ಮಧುಮೇಹಿಗಳ ದೇಹದಲ್ಲಿನ ರಕ್ತದಲ್ಲಿ ಕೀಟೋನ್ ಬಾಡಿಗಳು (ketone bodies) ಸಂಗ್ರಹಗೊಳ್ಳುತ್ತವೆ. ಅಂಗೈಗೂ ಆರೋಗ್ಯಕ್ಕೂ ಎತ್ತಣಿಂದೆತ್ತ ಸಂಬಂಧವಯ್ಯಾ?

ಈ ಕೀಟೋನ್ ಬಾಡಿಗಳು ಬಾಯಿಯಲ್ಲಿ ಒಂದು ಬಗೆಯ ದುರ್ವಾಸನೆಗೆ ಕಾರಣವಾಗುತ್ತವೆ. ಜೊತೆಗೆ ಇವು ಮೆದುಳನ್ನು ಕೂಡ ಘಾಸಿಗೊಳಿಸುತ್ತವೆ ಮತ್ತು ನಿಮ್ಮನ್ನು ಕೋಮಾಗೆ ಸಹ ತೆಗೆದುಕೊಂಡು ಹೋಗಬಹುದು. ಒಂದು ವೇಳೆ, ಬಾಯಿಯ ಆರೋಗ್ಯವು ದವಡೆ ರೋಗ, ಟೊನ್ಸಿಲಿಟಿಸ್, ದಂತಕುಳಿ, ಇತ್ಯಾದಿಗಳಿಂದ ಹಾನಿಗೊಳಗಾದರೆ ಇವು ನಿಮ್ಮ ಮೂತ್ರಪಿಂಡ, ಕರುಳುಗಳ ಆರೋಗ್ಯವನ್ನು ಹಾಳುಮಾಡಬಹುದು, ಹೃದ್ರೋಗ ಮತ್ತು ಮಧುಮೇಹ ಹಾಗು ಜಠರದ ಕಾಯಿಲೆ ಬಂದಿರುವ ಸೂಚನೆಗಳನ್ನು ಸಹ ಇವು ನೀಡಬಹುದು. ಹಾಗಾದರೆ ಬನ್ನಿ ಬಾಯಿಯ ದುರ್ವಾಸನೆಯು ಯಾವ ರೋಗದ ಮುನ್ಸೂಚನೆಯನ್ನು ಒದಗಿಸುತ್ತದೆ ಎಂದು ತಿಳಿದುಕೊಳ್ಳೋಣ....

ಮೀನಿನಂತಹ ವಾಸನೆ

ಮೀನಿನಂತಹ ವಾಸನೆ

ಇದು ಮೂತ್ರಪಿಂಡ ವೈಫಲ್ಯವನ್ನು ಸೂಚಿಸುವ ದುರ್ವಾಸನೆಯಾಗಿರುತ್ತದೆ. ರಕ್ತದಲ್ಲಿ ಶೇಖರಣೆಗೊಳ್ಳುವ ಅಮೋನಿಯಾವು ಈ ವಾಸನೆಯನ್ನು ಉಂಟು ಮಾಡುತ್ತದೆ. ಅಮೋನಿಯಾವು ನಮ್ಮ ದೇಹದಲ್ಲಿ ಸಂಗ್ರಹವಾಗುವ ಒಂದು ಕಶ್ಮಲವಾಗಿದ್ದು, ಇದು ಮೂತ್ರದ ಮೂಲಕ ಹೊರಹೋಗುತ್ತದೆ.ಯಾವಾಗ ಮೂತ್ರಪಿಂಡಗಳು ಕಾರ್ಯನಿರ್ವಹಿಸುವುದಿಲ್ಲವೋ, ಆಗ ಇವು ದೇಹದಿಂದ ಹೊರಹೋಗುವುದಿಲ್ಲ, ಆಗ ಇವು ರಕ್ತದೊಂದಿಗೆ ಸೇರಿಕೊಳ್ಳುತ್ತವೆ.

ಆಸಿಡ್ ರಿಫ್ಲಕ್ಸ್

ಆಸಿಡ್ ರಿಫ್ಲಕ್ಸ್

ಈ ಸನ್ನಿವೇಶದಲ್ಲಿ, ಜಠರದಲ್ಲಿ ಉತ್ಪಾದನೆಯಾದ ಆಸಿಡ್ ಅನ್ನನಾಳದಲ್ಲಿ ಮೇಲ್ಮುಖವಾಗಿ ಚಲಿಸುತ್ತದೆ. ಜೊತೆಗೆ ಇದು ಬಾಯಿಯವರೆಗೆ ಬರಬಹುದು. ಇದು ಎದೆ ಉರಿಯನ್ನುಂಟು ಮಾಡುತ್ತದೆ. ಈ ಆಸಿಡ್ ರಿಫ್ಲಕ್ಸ್ ಜೀರ್ಣ ಕ್ರಿಯೆಗೆ ತೊಂದರೆ ಮಾಡುತ್ತದೆ. ಇದು ಸಹ ಒಂದು ಬಗೆಯ ಹೊಲಸು ವಾಸನೆಯನ್ನು ತರುತ್ತದೆ. ಹೀಗೆ ನಿಮ್ಮ ಉಸಿರಾಟವು ಗ್ಯಾಸ್ಟ್ರೋ ಇಂಟೆಸ್ಟೆನಲ್ ಟ್ರ್ಯಾಕ್ ಕಾಯಿಲೆಗಳನ್ನು(GIT) ಸಹ ಕಂಡು ಹಿಡಿಯಲು ಸಹಾಯ ಮಾಡುತ್ತದೆ.

ಉಸಿರಾಟದ ನಾಳಗಳ ಇನ್‍ಫೆಕ್ಷನ್

ಉಸಿರಾಟದ ನಾಳಗಳ ಇನ್‍ಫೆಕ್ಷನ್

ಅಸ್ತಮಾ, ಬ್ರೊಂಕಿಟಿಸ್ ಮತ್ತು ಸಿನುಸಿಟಿಸ್ ಮುಂತಾದ ಸಮಸ್ಯೆಗಳು ಉಸಿರಿನಲ್ಲಿ ದುರ್ವಾಸನೆಯನ್ನು ತರುತ್ತವೆ. ಶ್ವಾಸಕೋಶದಲ್ಲಿ ಸೇರಿಕೊಳ್ಳುವ ಸಿಂಬಳ ಮತ್ತು ಬ್ಯಾಕ್ಟೀರಿಯಾಗಳು ಶ್ವಾಸ ನಾಳಗಳ ಮೂಲಕ ಸಾಗಿ ಈ ದುರ್ವಾಸನೆಗೆ ಕಾರಣವಾಗುತ್ತವೆ.

ಸ್ಥೂಲಕಾಯ

ಸ್ಥೂಲಕಾಯ

ನೀವು ದಪ್ಪಗಾಗಲು ಆರಂಭಿಸಿದ್ದೀರಿ ಎಂದು ಉಸಿರಾಟವು ಸೂಚನೆ ನೀಡುತ್ತದೆ. ದೇಹದಲ್ಲಿ ಅಧಿಕ ಪ್ರಮಾಣದ ಜಲಜನಕ ಮತ್ತು ಮೀಥೇನ್ ಅನಿಲಗಳು ಸೇರಿಕೊಂಡಾಗ ಅವರ ದೇಹವು ದಪ್ಪಗಾಗುವುದಿಲ್ಲ. ಆದರೆ ಈ ಅನಿಲಗಳು ಕಡಿಮೆ ಪ್ರಮಾಣದಲ್ಲಿದ್ದಾಗ ಖಂಡಿತ ಅವರ ದೇಹ ಸ್ಥೂಲಕಾಯವಾಗುತ್ತದೆ ಮತ್ತು ಈ ಅನಿಲಗಳು ಉಸಿರಾಟದಲ್ಲಿ ದುರ್ವಾಸನೆಯನ್ನು ತರುತ್ತವೆ.

ಮಧುಮೇಹ

ಮಧುಮೇಹ

ಮಧುಮೇಹವು ಅಧಿಕ ಪ್ರಮಾಣಕ್ಕೆ ಹೋಗಿ ತಲುಪಿರುವ ರೋಗಿಯಲ್ಲಿ, ನೇಲ್ ಪಾಲಿಶ್ ರಿಮೂವರ್ ಅಥವಾ ಹಣ್ಣಿನ ವಾಸನೆಯಂತಹ ದುರ್ವಾಸನೆಯು ಬರುತ್ತದೆ. ಇದು ತುಂಬಾ ವಿಷಮ ಪರಿಸ್ಥಿತಿಯಾಗಿದ್ದು, ಈ ಸ್ಥಿತಿಯಲ್ಲಿ ಕೀಟೊನ್ ಬಾಡಿಗಳು ನಿಮ್ಮ ರಕ್ತದಲ್ಲಿ ಸೇರಿಕೊಳ್ಳುತ್ತವೆ. ಕೀಟೊನ್ ಬಾಡಿಗಳು ಅನಿಯಂತ್ರಿತ ರೀತಿಯಲ್ಲಿ ಕೊಬ್ಬು ಮತ್ತು ಸ್ನಾಯು ಪ್ರೋಟಿನ್‌ಗಳನ್ನು ವಿಭಜಿಸುವ ಮೂಲಕ ದುರ್ವಾಸನೆಗೆ ಕಾರಣವಾಗುತ್ತವೆ.

ಅಲರ್ಜಿಗಳು

ಅಲರ್ಜಿಗಳು

ಕಟ್ಟಿಕೊಂಡ ಮೂಗು ಮತ್ತು ಸಿಂಬಳ ಸೋರುವ ಮೂಗಿನಿಂದ ದುರ್ವಾಸನೆ ಬರುವುದು ಸಹಜ. ಯಾವಾಗ ನಿಮ್ಮ ಮೂಗು ಕಟ್ಟಿಕೊಳ್ಳುತ್ತದೆಯೋ, ಆಗ ನೀವು ಬಾಯಿಯಲ್ಲಿ ಉಸಿರಾಡುತ್ತೀರಿ. ಇದರಿಂದ ಬಾಯಿಯಲ್ಲಿ, ಬ್ಯಾಕ್ಟೀರಿಯಾಗಳು ಬೆಳವಣಿಗೆಯಾಗಲು ಆರಂಭವಾಗುತ್ತವೆ. ಆಗ ಸಹಜವಾಗಿ ಕೆಟ್ಟವಾಸನೆ ಬಾಯಿಂದ ಬರುತ್ತದೆ.

ಹೃದಯಾಘಾತ

ಹೃದಯಾಘಾತ

ಉಸಿರಾಟದ ದುರ್ವಾಸನೆಗಳಲ್ಲಿ ಹೃದಯಾಘಾತದ ಸೂಚನೆ ಸಹ ದೊರೆಯುತ್ತದೆ. ಹೃದ್ರೋಗಗಳನ್ನು ಪರಿಶೀಲಿಸಲು ಉಸಿರಾಟದ ನಮೂನೆಗಳನ್ನು ಸಹ ತೆಗೆದುಕೊಳ್ಳಲಾಗುತ್ತದೆ. ಇದನ್ನು ಬ್ರೀಥ್ ಪ್ರಿಂಟ್ ಎಂದು ಕರೆಯುತ್ತಾರೆ.

English summary

Detect Health Conditions From Breath

Your breath can be an important determinant of your health. Diagnosing various health conditions through the smell of your breath dates back to the era of Hippocrates. Even he used to diagnose health issues by the scent of breath. Today, doctors are doing more work in finding out the breath diagnosis process.
X
Desktop Bottom Promotion