For Quick Alerts
ALLOW NOTIFICATIONS  
For Daily Alerts

ಮಧ್ಯರಾತ್ರಿ ಕಾಡುವ ಕೆಮ್ಮು, ಏನು ಮಾಡಬೇಕು?

By Super
|

ಜೀವನದಲ್ಲಿ ಎಲ್ಲರಿಗೂ ಅತ್ಯಂತ ಅಪ್ಯಾಯಮಾನವಾದುದು ಎಂದರೆ ಸುಖವಾದ ನಿದ್ದೆ. ಆದರೆ ನಡುರಾತ್ರಿಯಲ್ಲಿ ಕೆಲವೊಮ್ಮೆ ಈ ಸುಖನಿದ್ದೆಗೆ ಭಂಗವಾಗುತ್ತದೆ. ಮನೆಯ ಹೊರಗೆ ಯಾರಾದರೂ ತಮಟೆ ಬಾರಿಸಿ ಈ ನಿದ್ದೆಗೆ ಭಂಗ ತಂದಿದ್ದರೆ ಅಕ್ಕ ಪಕ್ಕದ ಅಷ್ಟೂ ಮನೆಗಳ ಜನರು ನಿದ್ದೆಗೆಟ್ಟ ಸಿಟ್ಟಿನಲ್ಲಿ ತಮಟೆಯನ್ನು ಹರಿದು ತಮಟೆ ಬಾರಿಸಿದವರಿಗೇ ಬಾರಿಸಿ ಕಳಿಸುವುದು ಖಚಿತ. ಆದರೆ ಈ ತೊಂದರೆ ನಮ್ಮ ದೇಹದೊಳಗಡೆಯೇ ಇದ್ದರೆ? ಇದಕ್ಕೆ ಅತ್ಯುತ್ತಮವಾದ ಉದಾಹರಣೆ ಎಂದರೆ ನಡುರಾತ್ರಿಯಲ್ಲಿ ಕಾಡುವ ಕೆಮ್ಮು. ಕೆಮ್ಮು ನೆಗಡಿಗೆ ರಾಮಬಾಣ ಒಣ ಶುಂಠಿ ಕಷಾಯ

ಈ ಕೆಮ್ಮು ನಿಮ್ಮ ನಿದ್ದೆಯನ್ನು ಮಾತ್ರವಲ್ಲ, ನಿಮ್ಮ ಅಕ್ಕಪಕ್ಕದಲ್ಲಿರುವವರ ನಿದ್ದೆಯನ್ನೂ ಕೆಡಿಸಿ ದೈಹಿಕ ತೊಂದರೆಯೊಡನೆ ಮಾನಸಿಕವಾದ ಕಿರುಕುಳವನ್ನೂ ನೀಡುತ್ತದೆ. ಹಿರಿಯರ ಅನುಭವದ ಪ್ರಕಾರ ನಿಮ್ಮ ತಪ್ಪಾದ ನಿದ್ದೆಯ ಭಂಗಿಯೇ ಈ ಕೆಮ್ಮಿಗೆ ಪ್ರಮುಖ ಕಾರಣ. ವಾಸ್ತವವಾಗಿ ಕೆಮ್ಮು ನಮ್ಮ ದೇಹದ ಒಂದು ರಕ್ಷಣಾ ವ್ಯವಸ್ಥೆಯೇ ಹೊರತು ಕಾಯಿಲೆಯಲ್ಲ. ನಮ್ಮ ಶ್ವಾಸನಾಳದ ದಾರಿಯಲ್ಲಿ ಏನಾದರೂ ಅಡಚಣೆಯುಂಟಾಗಿದ್ದರೆ ಅದನ್ನು ತೆರವುಗೊಳಿಸುವ ಒಂದು ವ್ಯವಸ್ಥೆ. ನಮ್ಮ ಗಂಟಲಿನ ಒಳಭಾಗದಲ್ಲಿ ಯಾವಾಗಲೂ ತೇವವಾಗಿರಬೇಕು.

ಕೆಲವೊಮ್ಮೆ ವೈರಸ್ ಮತ್ತು ಇತರ ವೈರಾಣುಗಳು ಈ ತೇವವನ್ನೇ ಮನೆಮಾಡಿಕೊಂಡು ದೇಹದ ಮೇಲೆ ಧಾಳಿ ನಡೆಸುತ್ತವೆ. ಆಗ ನಮ್ಮ ರೋಗನಿರೋಧಕ ವ್ಯವಸ್ಥೆ ಈ ವೈರಸ್ಸುಗಳ ಸುತ್ತ ಲೋಳೆಯಾದ ದ್ರವವನ್ನು ಸ್ರವಿಸಿ ಧಾಳಿಯನ್ನು ತಡೆಯುತ್ತದೆ. ಇದೇ ಕಫ. ಆದರೆ ಈ ಗಟ್ಟಿಯಾದ ಈ ಲೋಳೆ ಸುಲಭದಲ್ಲಿ ಹೊರಹೋಗದು, ಇದನ್ನು ಹೊರಹಾಕಲು ದೇಹ ನಡೆಸುವ ಕಸರತ್ತೇ ಕೆಮ್ಮು. ಶೀತ, ಕೆಮ್ಮು, ಕಫ ಹೋಗಲಾಡಿಸುವ ಕಷಾಯ

ಆರೋಗ್ಯವಂತರಲ್ಲಿ ಸಾಮಾನ್ಯವಾಗಿ ಜೇನಿಗಿಂತ ಕೊಂಚ ತೆಳುವಾಗಿರುವ ಈ ಲೋಳೆ ಸುಲಭವಾಗಿ ಚಿಕ್ಕ ಕೆಮ್ಮಿನ ಮೂಲಕ ತೊಲಗುತ್ತದೆ. ನಾವೆಲ್ಲರೂ ದಿನಕ್ಕೆ ಕೆಲವು ಬಾರಿಯಾದರೂ ಚಿಕ್ಕದಾಗಿ ಕೆಮ್ಮುತ್ತಾ ಗಂಟಲಿನೊಳಗಿನ ಲೋಳೆಯನ್ನು ಸ್ವಚ್ಛಗೊಳಿಸುತ್ತಲೇ ಇರುತ್ತೇವೆ. ಆದರೆ ತಡರಾತ್ರಿಯಲ್ಲಿ ನಿದ್ದೆಗೆಡಿಸುವ ಕೆಮ್ಮಿಗೆ ಇತರೇ ಕಾರಣಗಳಿವೆ. ಇದರಲ್ಲಿ ಪ್ರಮುಖವಾದುದು ಧೂಮಪಾನ!

ಇನ್ನುಳಿದಂತೆ ಶ್ವಾಸಕೋಶ, ಶ್ವಾಸನಾಳದಲ್ಲಿ ಸೋಂಕು, ಆಯಾ ಪ್ರದೇಶದಲ್ಲಿ ವಿಶಿಷ್ಟವಾಗಿರುವ ಹೂವುಗಳ ಪರಾಗ ಅಥವಾ ಹೊಗೆಯಿಂದ ಉಂಟಾದ ಅಲರ್ಜಿ (ಬೇಗನೇ ಬೆಳೆಯುವ ಅಕೇಶಿಯಾ ಮರಗಳನ್ನು ನಗರಪ್ರದೇಶದಲ್ಲಿ ನಿಷೇಧಿಸಿದ್ದು ಇದೇ ಕಾರಣಕ್ಕಾಗಿ) ಸಹಾ ಕೆಮ್ಮನ್ನು ಉಂಟುಮಾಡುತ್ತದೆ. ಈ ಕೆಮ್ಮಿನ ಇನ್ನಿತರ ಕಾರಣ ಮತ್ತು ನಿವಾರಣೆಯ ಸುಲಭ ಉಪಾಯಗಳನ್ನು ಇಲ್ಲಿ ನೀಡಲಾಗಿದೆ...

ಕುಹರ (Sinus)ನಲ್ಲಿ ಸೋಂಕು

ಕುಹರ (Sinus)ನಲ್ಲಿ ಸೋಂಕು

ನಮ್ಮ ಮೂಗಿನ ಮೇಲ್ಭಾಗದಲ್ಲಿ, ಹಣೆಯ ನಟ್ಟನಡುವೆ ಒಂದು ಟೊಳ್ಳುಭಾಗವಿದೆ. ಇದೇ ಕುಹರ. ಈ ಟೊಳ್ಳು ವೈರಸ್ಸು ಅಡಗಿ ಕೂರಲು ಪ್ರಶಸ್ತ ತಾಣವಾಗಿದೆ. ಹೂಗಳ ಪರಾಗದ ಅಲರ್ಜಿ ಮತ್ತು ಹೊಗೆಯ ಅಲರ್ಜಿಯಿಂದಲೂ ಈ ಭಾಗದಲ್ಲಿ ಸೋಂಕಾಗುತ್ತದೆ. ಈ ಸೋಂಕು ಹೆಚ್ಚಾದರೆ ತಲೆನೋವು, ತಲೆ ಭಾರವಾಗುವುದು, ಕೆಮ್ಮು ಮೊದಲಾದ ತೊಂದರೆಗಳು ಎದುರಾಗುತ್ತವೆ. ಒಂದು ವೇಳೆ ಈ ತೊಂದರೆ ಎದುರಾದರೆ ಯಾವುದೇ ಮನೆಮದ್ದನ್ನು ಪ್ರಯತ್ನಿಸದೇ ತಜ್ಞವೈದ್ಯರಲ್ಲಿ ತಪಾಸಣೆಗೊಳಪಡುವುದು ಅತ್ಯಂತ ಸೂಕ್ತ. ಕುಹರದ ಸೋಂಕು ಮೆದುಳಿನ ಕ್ಷಮತೆಯನ್ನೂ ಪ್ರಭಾವಗೊಳಿಸಬಲ್ಲುದಾದುದರಿಂದ ನಿರ್ಲಕ್ಷ್ಯ ಸಲ್ಲದು.

ಕಬ್ಬಿಣಾಂಶದ ಕೊರತೆ

ಕಬ್ಬಿಣಾಂಶದ ಕೊರತೆ

ಒಂದು ವೇಳೆ ನಿಮ್ಮ ಆಹಾರದಲ್ಲಿ ಸಾಕಷ್ಟು ಕಬ್ಬಿಣಾಂಶ ಇರದೇ ಇದ್ದಲ್ಲಿ ನಿಮ್ಮ ರೋಗ ನಿರೋಧಕ ವ್ಯವಸ್ಥೆಯೂ ಕುಂಠಿತವಾಗುತ್ತದೆ. ಈ ಕೊರತೆಯಿಂದ ಕಫ ಗಾಢವಾಗಿ ನಡುರಾತ್ರಿಯಲ್ಲಿ ಕೆಮ್ಮಿನ ಅನಿವಾರ್ಯತೆ ಉಂಟಾಗಬಹುದು ಎಂದು ತಜ್ಞರು ಅಭಿಪ್ರಾಯ ಪಡುತ್ತಾರೆ. ಆದ್ದರಿಂದ ಕಬ್ಬಿಣ ಹೆಚ್ಚಿರುವ ಆಹಾರಗಳು, ಉದಾಹರಣೆಗೆ ಹಸಿರು ಸೊಪ್ಪುಗಳನ್ನು ನಿಮ್ಮ ನಿತ್ಯದ ಆಹಾರದಲ್ಲಿ ಸಾಕಷ್ಟು ಇರುವಂತೆ ನೋಡಿಕೊಳ್ಳಿ.

ಅಸ್ತಮಾ

ಅಸ್ತಮಾ

ಅಸ್ತಮಾದಿಂದ ಬಳಲುವವರಿಗೆ ನಡುರಾತ್ರಿಯ ಕೆಮ್ಮು ನಿತ್ಯವೂ ಕಾಡಬಹುದು. ಏಕೆಂದರೆ ಅಸ್ತಮಾ ರೋಗಿಗಳಲ್ಲಿ ಶ್ವಾಸನಾಳ ಮತ್ತು ಶ್ವಾಸಕೋಶಕ್ಕೆ ಗಾಳಿಯನ್ನು ಒದಗಿಸುವ ಇತರ ನಾಳಗಳು ಕಿರಿದಾಗಿರುತ್ತವೆ. ಈ ಕಿರಿಯ ಸ್ಥಳವೂ ವೈರಸ್ಸುಗಳ ಧಾಳಿಗೆ ಸೂಕ್ತ ವೇದಿಕೆಯಾಗಬಲ್ಲುದು. ಪರಿಣಾಮವಾಗಿ ಕಫ ಮತ್ತು ಕೆಮ್ಮು ಸತತವಾಗಿ ಕಾಡಬಹುದು. ವೈದ್ಯರು ನೀಡಿರುವ ಔಷಧಿಗಳನ್ನು ನಿಯಮಿತವಾಗಿ ಸೇವಿಸುವ ಮೂಲಕ ಈ ತೊಂದರೆಯನ್ನು ದೂರವಿಡಬಹುದು.

ಕೋಣೆಯ ಗಾಳಿಯಲ್ಲಿ ತೇವಾಂಶ ಇಲ್ಲದಿರುವುದು

ಕೋಣೆಯ ಗಾಳಿಯಲ್ಲಿ ತೇವಾಂಶ ಇಲ್ಲದಿರುವುದು

ನಾವು ಸೇವಿಸುವ ಗಾಳಿಯಲ್ಲಿ ಸಾಕಷ್ಟು ತೇವಾಂಶ ಇರಬೇಕು. ಒಂದು ವೇಳೆ ಹವೆ ತುಂಬಾ ಒಣದಾಗಿದ್ದರೆ ಮೂಗಿನ ಒಳಭಾಗ ಮತ್ತು ಶ್ವಾಸಕೋಶದಲ್ಲಿ ನಿಧಾನವಾಗಿ ತುರಿಕೆಗೆ ಕಾರಣವಾಗಬಹುದು. ನಿದ್ದೆ ಹತ್ತಿದ ಬಳಿಕ ಈ ತುರಿಕೆ ಸಹಿಸಲಸಾಧ್ಯವಾಗಿ ಕೆಮ್ಮು ಕಾಡಬಹುದು. ಆದ್ದರಿಂದ ಸಾಕಷ್ಟು ತೇವಾಂಶ ಇರುವಂತೆ ನೋಡಿಕೊಳ್ಳುವುದು ಅಗತ್ಯ. ಮಾರುಕಟ್ಟೆಯಲ್ಲಿ ತೇವಾಂಶ ನೀಡುವ humidifier ಎಂಬ ಸಾಧನವೂ ಲಭ್ಯವಿದ್ದು ಸಾಕಷ್ಟು ಪ್ರಯೋಜನಕಾರಿಯಾಗಿದೆ.

ಹೊಟ್ಟೆಯಲ್ಲಿನ ಆಮ್ಲೀಯತೆ

ಹೊಟ್ಟೆಯಲ್ಲಿನ ಆಮ್ಲೀಯತೆ

ಕೆಲವೊಮ್ಮೆ ಆಹಾರ ಜೀರ್ಣವಾದ ಬಳಿಕ ಉತ್ಪತ್ತಿಯಾಗುವ ಆಮ್ಲಗಳು ಜಠರದಲ್ಲಿ ಕೆಲವು ಅನಿಲಗಳನ್ನು ಬಿಡುಗಡೆ ಮಾಡುತ್ತವೆ. ಈ ಅನಿಲಗಳು ಅನ್ನನಾಳ, ಗಂಟಲ ಮೂಲಕ ದೇಹದಿಂದ ಹೊರಹೋಗಲು ಪ್ರಯತ್ನಿಸುತ್ತವೆ. ಇದನ್ನೇ acid reflux ಎಂದು ಕರೆಯಲಾಗುತ್ತದೆ. ಈ ತೊಂದರೆ ಇದ್ದಾಗಲೂ ನಡುರಾತ್ರಿಯಲ್ಲಿ ಕೆಮ್ಮು ಕಾಡುತ್ತದೆ. ಈ ತೊಂದರೆ ಬರದಂತೆ ನಮ್ಮ ಆಹಾರವನ್ನು ಆಯ್ದುಕೊಳ್ಳುವುದು ಅಗತ್ಯವಾಗಿದೆ.

English summary

Causes Of Midnight Cough

What causes night cough? When you suffer severe cough that too when you lie down then it can be considered as cough that is a result of your posture. Night cough could be tough to deal with as it disturbs your sleep and may also disturb others around. 
X
Desktop Bottom Promotion