For Quick Alerts
ALLOW NOTIFICATIONS  
For Daily Alerts

ಸುಗಂಧಭರಿತವಾದ ಟಾಲ್ಕಂ ಪೌಡರ್‌ ಆರೋಗ್ಯಕ್ಕೆ ಮಾರಕವೇ?

|

ನವಿರಾದ, ಬಿಳುಪಿನಿಂದ ಕೂಡಿದ ಮತ್ತು ಸುಗಂಧಭರಿತವಾದ ಟಾಲ್ಕಂ ಪೌಡರ್ -ಪ್ರತಿಯೊಬ್ಬ ಭಾರತೀಯ ಮಹಿಳೆಯು ತನ್ನ ಸೌಂದರ್ಯ ವೃದ್ಧಿಗಾಗಿ ಮತ್ತು ವೈಯುಕ್ತಿಕ ಶುದ್ಧತೆಗಾಗಿ ಬಯಸುವ ಒಂದು ಅಗತ್ಯ ಅಂಶವಾಗಿದೆ. ಟಾಲ್ಕಂ ಪೌಡರ್ ದೇಹದಿಂದ ಬೆವರನ್ನು ಮತ್ತು ತೇವಾಂಶವನ್ನು ಹೀರಿಕೊಳ್ಳುತ್ತದೆ ಹಾಗು ಡಿಯೋಡರೆಂಟ್ ಆಗಿ ಕಾರ್ಯ ನಿರ್ವಹಿಸುತ್ತದೆ. ಇದರ ಜೊತೆಗೆ ಇದು ಮಕ್ಕಳ ಡೈಪರ್‌ನಿಂದ ಉಂಟಾಗುವ ಗುಳ್ಳೆಗಳನ್ನು ಮತ್ತು ಅವುಗಳ ಘರ್ಷಣೆಯನ್ನು ಸಹ ನಿವಾರಿಸಲು ಬಳಸಲಾಗುತ್ತದೆ.

ಆಹಾರ ಮತ್ತು ಔಷಧಿ ನಿಯಂತ್ರಣ ಮಂಡಳಿಯು (2010 ರಲ್ಲಿ) ಟಾಲ್ಕಂ ಪೌಡರ್ ಅನ್ನು ವೈಯುಕ್ತಿಕ ಉದ್ದೇಶಗಳಿಗೆ ಮತ್ತು ಸೌಂದರ್ಯವರ್ಧಕವಾಗಿ ಬಳಸುವುದರಿಂದ ಯಾವುದೇ ಹಾನಿಯಿಲ್ಲ ಎಂದು ಸಾರಿದೆ. ಆದರೂ ಈ ಉತ್ಪನ್ನವನ್ನು ಬಳಸುವುದರಿಂದ ಹಲವಾರು ಆರೋಗ್ಯದ ಮೇಲೆ ಹಲವು ರೀತಿಯ ಅಪಾಯವಿರುವುದು ಕಂಡು ಬಂದಿದೆ.

ಟಾಲ್ಕಂ ಪೌಡರ್ ವಿಷಕಾರಿ!

ಟಾಲ್ಕಂ ಪೌಡರ್ ವಿಷಕಾರಿ!

ಟಾಲ್ಕ ಪೌಡರ್‌ನಲ್ಲಿ ಟಾಲ್ಕ್ ಎಂಬ ಖನಿಜವಿದೆ. ಆಕಸ್ಮಿಕವಾಗಿ ಅಥವಾ ಉದ್ದೇಶ ಪೂರ್ವಕವಾಗಿ ಟಾಲ್ಕಂ ಪೌಡರನ್ನು ಮೂಸಿ ನೋಡಿದಾಗ ಅಥವಾ ತಿಂದಾಗ ಇದರಲ್ಲಿರುವ ವಿಷವು ನಮ್ಮ ದೇಹವನ್ನು ಸೇರುತ್ತದೆ. ಇದು ಕೆಲವೊಂದು ನಿರ್ದಿಷ್ಟ ಆಂಟಿಸೆಪ್ಟಿಕ್‍ಗಳಲ್ಲಿ, ಬೇಬಿ ಪೌಡರ್‌ಗಳಲ್ಲಿ, ಟಾಲ್ಕಂ ಪೌಡರ್‌ಗಳಲ್ಲಿ ಮತ್ತು ಕೆಲವೊಂದು ಬಗೆಯ ಸ್ಟ್ರೀಟ್ ಹೆರಾಯಿನ್‍ಗಳಲ್ಲಿ ಒಂದು ಘಟಕಾಂಶವಾಗಿ ಕಂಡು ಬರುತ್ತದೆ.

ಉಸಿರಾಟದ ಸಮಸ್ಯೆಗಳು

ಉಸಿರಾಟದ ಸಮಸ್ಯೆಗಳು

ಟಾಲ್ಕಂ ಪೌಡರನ್ನು ಪ್ರತಿನಿತ್ಯ ಬಳಸುವುದರಿಂದ ಉಸಿರಾಟದ ಸಮಸ್ಯೆಗಳು ಕಂಡು ಬರುತ್ತವೆ. ವಿಶೇಷವಾಗಿ ಎಳೆ ಮಕ್ಕಳಲ್ಲಿ ಈ ಸಮಸ್ಯೆ ಹೆಚ್ಚಾಗಿ ಕಂಡುಬರುತ್ತದೆ. ಅಮೆರಿಕನ್ ಅಕಾಡೆಮಿ ಆಫ್ ಪೀಡಿಯಾಟ್ರಿಕ್ಸ್ ಮಕ್ಕಳ ಕೆಳಭಾಗದ ಮೇಲೆ ಟಾಲ್ಕಂಪ್ ಪೌಡರ್ ಡಸ್ಟಿಂಗ್ ಮಾಡುವುದನ್ನು ಪ್ರೋತ್ಸಾಹಿಸುವುದನ್ನು ನಿಲ್ಲಿಸಿದೆ.

ನ್ಯುಮೋನಿಯಾ

ನ್ಯುಮೋನಿಯಾ

ಎಳೆಮಕ್ಕಳು ಟಾಲ್ಕ ಪೌಡರನ್ನು ಉಸಿರಾಡುವುದರಿಂದ ನ್ಯುಮೋನಿಯಾಗೆ ಗುರಿಯಾಗುವ ಸಾಧ್ಯತೆ ಸಹ ಉಂಟು. ಹಾಗಾಗಿ ಮಕ್ಕಳಿಗೆ ಟಾಲ್ಕಂ ಪೌಡರ್ ಹಚ್ಚುವ ಮೊದಲು, ಅದನ್ನು ತಾಯಂದಿರು ತಮ್ಮ ಕೈಗೆ ಉಜ್ಜಿಕೊಂಡು ನಂತರ ಲೇಪಿಸುವುದು ಒಳಿತು. ಹೀಗೆ ಮಾಡುವಾಗ ಅವರು ತಮ್ಮ ಮಗುವಿನ ತಲೆಯನ್ನು ದೂರವಿರಿಸಬೇಕು.

ಟಾಲ್ಕೊಸಿಸ್

ಟಾಲ್ಕೊಸಿಸ್

ಟಾಲ್ಕಂ ಪೌಡರ್ ಬಳಸುವುದರಿಂದ ಅದರ ಕಣಗಳು ಗಾಳಿಯಲ್ಲಿ ತೇಲಾಡುತ್ತಿರುತ್ತವೆ. ಆ ಗಾಳಿಯ ಮೂಲಕ ಅವು ನಮ್ಮ ದೇಹವನ್ನು ಪ್ರವೇಶಿಸುತ್ತವೆ. ಇವುಗಳನ್ನು ಉಸಿರಾಡುವುದರಿಂದ ಉಬ್ಬಸ, ಉಸಿರಾಟದ ಏರು ಪೇರಾಗುತ್ತದೆ ಹಾಗು ಕೆಮ್ಮು ಸಹ ಕಂಡು ಬರುತ್ತದೆ. ಇನ್ನೂ ಗಂಭೀರವಾದ ಸಂದರ್ಭಗಳಲ್ಲಿ ಇದು ಟಾಲ್ಕೊಸಿಸ್ ಅಥವಾ ಶ್ವಾಸಕೋಶದ ತುರಿಕೆಯಂತಹ ಗಂಭೀರ ಸಮಸ್ಯೆಯನ್ನು ಸಹ ಉಂಟು ಮಾಡುತ್ತದೆ.

ಅಂಡಾಶಯ ಉರಿಯೂತ

ಅಂಡಾಶಯ ಉರಿಯೂತ

ಬಹುತೇಕ ಹೆಂಗಸರು ಟಾಲ್ಕಂ ಪೌಡರನ್ನು ತಮ್ಮ ಸ್ತ್ರೀತನದ ಶುದ್ಧತೆಗಾಗಿ ಬಳಸುತ್ತಾರೆ. ಅಂದರೆ ತಮ್ಮ ಜನನಾಂಗದಿಂದ ಬರುವ ದುರ್ವಾಸನೆಯನ್ನು ನಿಗ್ರಹಿಸಲು ಇದನ್ನು ಬಳಸುತ್ತಾರೆ. ಆದರೆ ಇದನ್ನು ಬಳಸುವುದರಿಂದ, ಇದರಲ್ಲಿರುವ ಕಣಗಳು ಜನನಾಂಗದ ಮೂಲಕ ಹಾದು ಗರ್ಭಕೋಶವನ್ನು ತಲುಪುತ್ತವೆ. ಆನಂತರ ಅವು ಅಲ್ಲಿಂದ ಫಾಲ್ಲೋಪಿಯನ್ ನಾಳಗಲ ಮೂಲಕ ಹಾದು ಅಂಡಾಶಯವನ್ನು ತಲುಪುತ್ತವೆ. ಹೀಗೆ ಅದು ಅಲ್ಲಿ ಉರಿಯೂತವನ್ನುಂಟು ಮಾಡುತ್ತದೆ.

ಅಂಡಾಶಯದ ಕ್ಯಾನ್ಸರ್

ಅಂಡಾಶಯದ ಕ್ಯಾನ್ಸರ್

ಸ್ತ್ರೀಯರು ತಮ್ಮ ಜನನಾಂಗದ ಶುದ್ಧತೆಗಾಗಿ ಟಾಲ್ಕಂ ಪೌಡರ್ ಬಳಸುವುದರಿಂದ ಅವರು ಅಂಡಾಶಯದ ಕ್ಯಾನ್ಸರ್‌ಗೆ ಗುರಿಯಾಗುತ್ತಾರೆ ಎಂಬುದು, ನಂಬಲಸಾಧ್ಯವಾದರು ಸತ್ಯವಾದ ವಿಚಾರವಾಗಿರುತ್ತದೆ. ದುರದೃಷ್ಟವಶಾತ್ ಪ್ರತಿ 5 ಮಹಿಳೆಯರ ಪೈಕಿ ಒಬ್ಬ ಮಹಿಳೆಯು ತಮ್ಮ ಜನಾನಂಗವನ್ನು ಶುದ್ಧವಾಗಿರಿಸಿಕೊಳ್ಳಲು ಈ ಉತ್ಪನ್ನಗಳನ್ನು ಬಳಸುತ್ತಾಳೆ. ಈ ಮೊದಲೆ ಹೇಳಿದಂತೆ ಟಾಲ್ಕ್ ಜನನಾಂಗದ ಮೂಲಕ ಪ್ರವೇಶಿಸಿ, ಸಂತಾನೋತ್ಪತಿಯ ಅಂಗಗಳ ಮೂಲಕ ಹಾದು ಅಂಡಾಶಯದ ಗೋಡೆಗಳ ಮೇಲೆ ಕುಳಿತು ಕ್ಯಾನ್ಸರ್ ಉಂಟು ಮಾಡುತ್ತದೆ.

ಶ್ವಾಸಕೋಶದ ಕ್ಯಾನ್ಸರ್

ಶ್ವಾಸಕೋಶದ ಕ್ಯಾನ್ಸರ್

ಮೆಡ್‌ಲೈನ್ ಪ್ಲಸ್‍ರವರ ಪ್ರಕಾರ ಯಾರು ನಿರಂತರವಾಗಿ ಟಾಲ್ಕ್ ಕಣಗಳಿಗೆ ತಮ್ಮನ್ನು ತಾವು ಒಡ್ಡಿಕೊಳ್ಳುತ್ತಾರೋ, ಅಂದರೆ ಈ ಟಾಲ್ಕ್ ಕಣಗಳನ್ನು ಉಸಿರಾಡುವವರಿಗೆ ಶ್ವಾಸ ಕೋಶಕ್ಕೆ ಸಂಬಂಧಿಸಿದ ಕಾಯಿಲೆ ಬರುವ ಸಾಧ್ಯತೆಗಳು ಹೆಚ್ಚಂತೆ.

ಅಪಾಯ ಕಟ್ಟಿಟ್ಟ ಬುತ್ತಿ

ಅಪಾಯ ಕಟ್ಟಿಟ್ಟ ಬುತ್ತಿ

ಸೌಂದರ್ಯವರ್ಧಕ ಉದ್ದೇಶಗಳಿಗೆ ಇದನ್ನು ಬಳಸುವವರಲ್ಲಿ ಇದನ್ನು ಉಸಿರಾಡುವ ಮೂಲಕ ಶ್ವಾಸಕೋಶದ ಕ್ಯಾನ್ಸರ್ ಬರುತ್ತದೆ ಎಂಬ ಅಂಶವು ಇನ್ನೂ ದೃಢಪಟ್ಟಿಲ್ಲ. ಆದರೂ ತಮ್ಮ ದೇಹದ

ದುರ್ಗಂಧವನ್ನು ನಿಯಂತ್ರಿಸಿಕೊಳ್ಳಲು ಜನರು ಕಾರ್ನ್‌ಸ್ಟಾರ್ಚ್‌ನಿಂದ ತಯಾರಿಸಿದ ಪೌಡರ್‌ಗಳನ್ನು ಬಳಸುವ ಮೂಲಕ ಈ ಬಗೆಯ ಕ್ಯಾನ್ಸರ್‌ಕಾರಕಗಳಿಂದ ದೂರವುಳಿಯಬಹುದು. ಟಾಲ್ಕಂಪೌಡರ್‌ನ ಸುಗಂಧವು ನಿಜಕ್ಕು ಆಹ್ಲಾದಕರವಾಗಿರುತ್ತದೆ. ಇದು ಮೃದುವಾಗಿರುತ್ತದೆ, ಮಧುರವಾಗಿರುತ್ತದೆ ಮತ್ತು ನುಣುಪಿನಿಂದ ಕೂಡಿರುತ್ತದೆ. ಆದರೆ ಅದೇ ಸಮಯಕ್ಕೆ ಇದು ಅಪಾಯವನ್ನು ಸಹ ಹೊಂದಿರುತ್ತದೆ. ಆದ್ದರಿಂದ ಮುಂದಿನ ಬಾರಿ ಈ ಬಾಟಲನ್ನು ತೆರೆಯುವಾಗ ಎಚ್ಚರಿಕೆಯಿಂದಿರಿ.

English summary

Can talcum powder pose health risks?

Soft, white, and often perfumed – talcum powder is the favourite cosmetic and personal hygiene toiletry used by many Indian women. Talcum powder is used to absorb sweat and moisture from the body and acts as a deodorant. However, this seemingly harmless product could pose several health risks.
Story first published: Friday, January 2, 2015, 14:44 [IST]
X
Desktop Bottom Promotion