For Quick Alerts
ALLOW NOTIFICATIONS  
For Daily Alerts

ಎಲೆಮರೆ ಕಾಯಿ ಲಿಂಬೆ: ಅದೇನು ಮಾಯೆ, ಅದೇನು ಜಾದೂ!

By Super
|

ತೂಕ ಇಳಿಸಲು ಆಯುರ್ವೇದ ಸಲಹೆ ಮಾಡುವ ಸುಲಭ ವಿಧಾನವೆಂದರೆ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಲಿಂಬೆರಸ ಸೇರಿಸಿದ ಉಗುರುಬೆಚ್ಚನೆಯ ನೀರು ಸೇವಿಸುವುದು. ಲಿಂಬೆರಸದ ಸೇವನೆ ಕೇವಲ ತೂಕ ಇಳಿಸಲಿಕ್ಕಷ್ಟೇ ಮೀಸಲಾಗಿಲ್ಲ. ಬದಲಿಗೆ ದೇಹದಲ್ಲಿದ್ದ ವಿಷಕಾರಿ ವಸ್ತುಗಳನ್ನು ಹೊರದಬ್ಬಲೂ, ದೇಹಕ್ಕೆಹೆಚ್ಚಿನ ತ್ರಾಣ ನೀಡಲೂ, ಮಲಬದ್ಧತೆ ನಿವಾರಿಸಲೂ ನೆರವಾಗುತ್ತದೆ.

ದೇಹದಲ್ಲಿ ಉಳಿದುಕೊಂಡಿದ್ದ ಕಲ್ಮಶಗಳನ್ನು ಶೀಘ್ರವಾಗಿ ಹೊರಹಾಕಲು ಲಿಂಬೆರಸ ಉತ್ತಮವಾಗಿದೆ. ಪರಿಣಾಮವಾಗಿ ದೇಹದ ತೂಕ ಶೀಘ್ರವಾಗಿ ಕಡಿಮೆಯಾಗುತ್ತಾ ಹೋಗುತ್ತದೆ. ತೂಕ ಇಳಿಸುವ ನಿಟ್ಟಿನಲ್ಲಿ ಲಿಂಬೆರಸ ಸೇರಿಸಿದ ನೀರು ಕುಡಿಯುವುದರ ಮಹತ್ವಗಳು:

ಲಿಂಬೆರಸದ ಸೇವನೆಯಿಂದ ಜಠರದಲ್ಲಿ ಜೀರ್ಣಕ್ರಿಯೆ ಶೀಘ್ರಗೊಳ್ಳುತ್ತದೆ
ಜಠರದಲ್ಲಿ ಕರಗಿದ ಆಹಾರ ಬೇಗನೇ ಕರುಳುಗಳತ್ತ ಸಾಗುತ್ತದೆ ಮತ್ತು ಶೀಘ್ರವೇ ತ್ಯಾಜ್ಯಗಳು ವಿಸರ್ಜಿಸಲು ನೆರವಾಗುತ್ತದೆ. ಈ ಕಾರಣದಿಂದ ಹೊಟ್ಟೆ ಮತ್ತು ಇತರ ಜೀರ್ಣಾಂಗಗಳಲ್ಲಿ ವ್ಯರ್ಥವಾದ ಆಹಾರ ಉಳಿದು ತೂಕ ಹೆಚ್ಚಿಸುವುದನ್ನು ತಡೆಯುತ್ತದೆ. ಜೊತೆಗೇ ಅತಿಸಾರ ಅಥವಾ ಮಲಬದ್ಧತೆಯುಂಟಾಗುವುದರಿಂದ ರಕ್ಷಣೆ ನೀಡುತ್ತದೆ. ಲಿಂಬೆ ಹಣ್ಣಿನ 16 ಅದ್ಭುತ ಆರೋಗ್ಯ ಸೂತ್ರಗಳು

Can Lemon Water Really Help You Lose Weight

ಹಸಿವನ್ನು ತಗ್ಗಿಸುತ್ತದೆ
ತೂಕ ಏರಲು ಪ್ರಮುಖ ಕಾರಣ ಸೇವಿಸುವ ಆಹಾರದ ಪ್ರಮಾಣದಲ್ಲಿ ನಿಯಂತ್ರಣವಿಲ್ಲದೇ ಇರುವುದು. ಇದೊಂದು ಗೀಳಾಗಿದ್ದು ಹೊಟ್ಟೆಯಿಂದ ಮೆದುಳಿಗೆ ಹೊರಡುವ ಸಂಕೇತಗಳು ಪ್ರಮುಖ ಕಾರಣವಾಗಿವೆ.
ಲಿಂಬೆರಸದ ಸೇವನೆಯಿಂದ ಈ ಸಂಕೇತಗಳು ದುರ್ಬಲಗೊಳ್ಳುವುದರಿಂದ ಹಸಿವಿನ ಸಂದೇಶ ಪದೇ ಪದೇ ಹೋಗುವುದು ಕಡಿಮೆಯಾಗುತ್ತದೆ. ಅಂದರೆ ಪರೋಕ್ಷವಾಗಿ ಹಸಿವು ಕಡಿಮೆಯಾಗುತ್ತದೆ. ಕಡಿಮೆಯಾದ ಹಸಿವಿನ ಕಾರಣ ಅತಿಯಾಗಿ ತಿನ್ನುವುದು ತಪ್ಪಿದಂತಾಗಿ ತೂಕ ಇಳಿಯಲು ನೆರವಾಗುತ್ತದೆ.

ಶೀತ ನೆಗಡಿ ಕೆಮ್ಮಿನಿಂದ ರಕ್ಷಣೆ ನೀಡುತ್ತದೆ
ಲಿಂಬೆರಸದಲ್ಲಿ ಹೆಚ್ಚಿನ ಪ್ರಮಾಣದಲ್ಲಿರುವ ವಿಟಮಿನ್ ಸಿ ದೇಹದ ರೋಗ ನಿರೋಧಕ ಶಕ್ತಿಯನ್ನು ಬಲಪಡಿಸಲು ನೆರವಾಗುತ್ತದೆ. ಪರಿಣಾಮವಾಗಿ ಶೀತ, ನೆಗಡಿ, ಕೆಮ್ಮು, ಜ್ವರ, ಎದೆಯ ಸೋಂಕುಗಳು ಮೊದಲಾದ ತೊಂದರೆಗಳಿಂದ ಮುಕ್ತಿ ದೊರಕುತ್ತದೆ.

ಚರ್ಮ ನೆರಿಗೆ ಬೀಳುವುದನ್ನು ತಡೆಯುತ್ತದೆ
ಚರ್ಮ ನೆರಿಗೆ ಬೀಳಲು ವಿಟಮಿನ್ ಸಿ ಕೊರತೆ ಕಾರಣವಾಗಿದೆ. ಲಿಂಬೆರಸದಲ್ಲಿರುವ ವಿಟಮಿನ್ ಸಿ ಕಾರಣದಿಂದಾಗಿ ಚರ್ಮ ಉತ್ತಮ ಪೋಷಣೆ ಪಡೆದು ನೆರಿಗೆಯಿಂದ ದೂರವಿರುತ್ತದೆ.

ಮುಲ್ತಾನಿ ಮಿಟ್ಟಿ (ಒಂದು ಬಗೆಯ ಜೇಡಿಮಣ್ಣು)
ಸಮಪ್ರಮಾಣದಲ್ಲಿ ಸೇರಿಸಿ ಮಿಶ್ರಣ ತಯಾರಿಸಿ ರಾತ್ರಿ ಮಲಗುವ ಮುನ್ನ ಮುಖಕ್ಕೆ ಹಚ್ಚಿಕೊಳ್ಳಿ. ಉರಿ ಎನಿಸಿದರೆ ಲಿಂಬೆಯ ಪ್ರಮಾಣ ತಗ್ಗಿಸಿ. ಬೆಳಿಗ್ಗೆ ತಣ್ಣೀರಿನಿಂದ ತೊಳೆದುಕೊಳ್ಳಿ, ಸೋಪು ತಾಗಿಸಬೇಡಿ. ಮುಖದಲ್ಲಿ ಗಾಯದ ಅಥವಾ ಹಳೆಯ ಮೊಡವೆಯ ಕಲೆಗಳಿದ್ದರೆ ಲಿಂಬೆರಸವನ್ನು ನೇರವಾಗಿ ಹತ್ತಿ ಉಪಯೋಗಿಸಿ ಹಚ್ಚಿಕೊಳ್ಳಿ. ನಿತ್ಯದ ಲಿಂಬೆರಸದ ಸೇವನೆಯಿಂದ ಚರ್ಮಕ್ಕೆ ಒಳಗಿನಿಂದ ಉತ್ತಮ ಪೋಷಣೆ ದೊರಕುವುದರಿಂದ ಚರ್ಮದ ಕಾಂತಿ ಹೆಚ್ಚುತ್ತದೆ.

ಮೆದುಳು ಮತ್ತು ನರಗಳ ಕ್ಷಮತೆಯನ್ನು ಹೆಚ್ಚಿಸುತ್ತದೆ
ಲಿಂಬೆರಸದಲ್ಲಿರುವ ಪೊಟ್ಯಾಶಿಯಂ ಮೆದುಳಿನ ಮತ್ತು ಮೆದುಳು ಬಳ್ಳಿಯ ಕಾರ್ಯವಿಧಾನಗಳನ್ನು ಚುರುಕುಗೊಳಿಸುವುದರಿಂದ ದೈನಂದಿನ ಚಟುವಟಿಕೆಗಳಲ್ಲಿ ಬದಲಾವಣೆ ಕಂಡುಬರುತ್ತದೆ. ಜೊತೆಗೇ ಪೊಟ್ಯಾಶಿಯಂ ರಕ್ತದೊತ್ತಡವನ್ನು ಸುಸ್ಥಿತಿಯಲ್ಲಿಡಲೂ ನೆರವಾಗುತ್ತದೆ.

ವಿಶೇಷ ಸೂಚನೆ
ಉತ್ತಮ ಪರಿಣಾಮಕ್ಕಾಗಿ ಲಿಂಬೆರಸವನ್ನು ಉಗುರುಬೆಚ್ಚನಿಯ ನೀರಿನಲ್ಲಿ ಬೆಳಿಗ್ಗೆದ್ದು ಖಾಲಿ ಹೊಟ್ಟೆಯಲ್ಲಿ ಕುಡಿಯಿರಿ. ಸಕ್ಕರೆ ಸೇರಿಸುವುದರಿಂದ ಲಿಂಬೆಯ ಗುಣಗಳು ನಾಶವಾಗುವುದರಿಂದ ಸಕ್ಕರೆ, ಉಪ್ಪು, ಬೆಲ್ಲ ಯಾವುದನ್ನೂ ಸೇರಿಸಬೇಡಿ. ಕೆಲವು ಹನಿ ಜೇನನ್ನು ಬೇಕಾದರೆ ಸೇರಿಸಬಹುದು. ಜೇನು ಸೇರಿಸಿದ ನೀರು ಕುಡಿಯುವುದರಿಂದ ದೇಹ ಲಿಂಬೆ ಮತ್ತು ಜೇನು ಎರಡರ ಪ್ರಯೋಜನವನ್ನೂ ಪಡೆಯಬಹುದು.
ಈ ನೀರನ್ನು ಕುಡಿದ ಬಳಿಕ ಮುಕ್ಕಾಲು ಗಂಟೆ ಏನನ್ನೂ ಸೇವಿಸಬೇಡಿ. ಉತ್ತಮ ಪರಿಣಾಮಕ್ಕಾಗಿ ಲಿಂಬೆರಸವನ್ನು ಸೇವಿಸಿದ ಬಳಿಕ ದೀರ್ಘ ಉಸಿರಾಟದ ಮೂಲಕ ಸಾಕಷ್ಟು ನಡೆಯಿರಿ ಅಥವಾ ಲಘು ವ್ಯಾಯಾಮ ಮಾಡಿ. ಇದರಿಂದ ದೇಹಕ್ಕೆ ಹೆಚ್ಚಿನ ಆಮ್ಲಜನಕ ದೊರಕುತ್ತದೆ ಮತ್ತು ಕೊಬ್ಬು ಹೆಚ್ಚಿನ ಪ್ರಮಾಣದಲ್ಲಿ ಕರಗಲು ನೆರವಾಗುತ್ತದೆ.

English summary

Can Lemon Water Really Help You Lose Weight

Just add lemon juice to lukewarm water and get going. Professional nutritionists claim that drinking lemon water induces weight loss. It also helps regulate metabolism and sugar absorption in the body, thereby helping you lose extra weight.
X
Desktop Bottom Promotion