For Quick Alerts
ALLOW NOTIFICATIONS  
For Daily Alerts

ಬಹುಪಯೋಗಿ ವೀಳ್ಯದೆಲೆಯ ಸ್ಪೆಷಾಲಿಟಿ ಒಂದೇ, ಎರಡೇ?

By Manu
|

ಊಟದ ಬಳಿಕ ಎಲೆಯಡಿಕೆ ತಿನ್ನುವುದು ಭಾರತದಲ್ಲಿ ಬಹಳ ಹಿಂದಿನಿಂದ ನಡೆದುಕೊಂಡು ಬಂದಂತಹ ಪದ್ಧತಿ. ಆದರೆ ಇತ್ತೀಚೆಗೆ ಕೆಲವರು ಹೊಗೆಸೊಪ್ಪನ್ನು ಸೇರಿಸುವ ಮೂಲಕ ಇದನ್ನೊಂದು ವ್ಯಸನದ ರೂಪದಲ್ಲಿ ಸೇವಿಸುತ್ತಾರೆ. ವೀಳೆಯದೆಲೆ (Piper betle) (ಊಟದ ಬಳಿಕ ಹಾಕುವ ವೀಳ್ಯಕ್ಕೆ ಬಳಸುವ ಎಲೆಯ ಕಾರಣಕ್ಕೆ ಇದಕ್ಕೆ ವೀಳೆಯದೆಲೆ ಅಥವಾ ವೀಳ್ಯದೆಲೆ ಎನ್ನಲಾಗುತ್ತದೆ) ಒಂದು ಔಷಧೀಯ ಗುಣಗಳ ಗಣಿಯಾಗಿದ್ದು ಆಯುರ್ವೇದದಲ್ಲಿ ವಿವಿಧ ತೊಂದರೆಗಳಿಗೆ ಇದನ್ನು ಪರಿಹಾರವನ್ನಾಗಿ ಸೂಚಿಸಲಾಗುತ್ತದೆ. ತೂಕ ಇಳಿಕೆಯಲ್ಲಿ ಹಸಿರು ಚಿನ್ನ ವೀಳ್ಯದೆಲೆಯ ಕರಾಮತ್ತೇನು?

ಈ ಎಲೆಯ ಪ್ರತಿ ಭಾಗವೂ ನಂಜುನಿರೋಧಕವಾಗಿದ್ದು ವಿವಿಧ ತೊಂದರೆಗಳಿಗೆ ಉಪಯೋಗಿಸಲಾಗುತ್ತದೆ. ವಿಶೇಷವಾಗಿ ಮೂಗಿನಲ್ಲಿ ರಕ್ತ ಬರುವುದು, ಕೆಂಪಾದ ಕಣ್ಣುಗಳು, ಋತುಸ್ರಾವ, ಧ್ವನಿಪೆಟ್ಟಿಗೆಯಲ್ಲಿ ಸೋಂಕು, ಲೈಂಗಿಕ ದೌರ್ಬಲ್ಯ ಮೊದಲಾದ ತೊಂದರೆಗಳಿಗೆ ವೀಳ್ಯದೆಳೆಯನ್ನು ಔಷಧಿಯಾಗಿ ಬಳಸಲಾಗುತ್ತಾ ಬಂದಿದೆ. ಭಾರತದಲ್ಲಿ ಶತಮಾನಗಳಿಂದ ವೀಳ್ಯದ ಹೊರತಾಗಿ ಔಷಧೀಯ ರೂಪದಲ್ಲಿ ಬಳಕೆಯಾಗುತ್ತಾ ಬಂದಿದೆ.

ಭಾರತದಲ್ಲಿ ಮಾತ್ರವಲ್ಲ ಬಾಂಗ್ಲಾದೇಶ, ಪಾಕಿಸ್ತಾನ, ಇಂಡೋನೇಶಿಯಾ ಮೊದಲಾದ ದೇಶಗಳಲ್ಲಿಯೂ ಬಹಳ ಹಿಂದಿನಿಂದ ಬಳಕೆಯಲ್ಲಿದೆ. ಇಂಡೋನೇಶ್ಯಾದಲ್ಲಿ ಭಾರತದಂತೆಯೇ ಹಲವು ಧಾರ್ಮಿಕ ಶಾಸ್ತ್ರಗಳಲ್ಲಿಯೂ ಉಪಯೋಗಿಸಲಾಗುತ್ತದೆ. ವೀಳ್ಯದೆಲೆ ವಿವಿಧ ಕಾಯಿಲೆಗಳಿಗೆ ಔಷಧರೂಪದಲ್ಲಿ ಬಳಕೆಯಾಗುತ್ತದೆ. ಇದರ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಕೆಳಗಿನ ಸ್ಲೈಡ್ ಶೋ ಮೂಲಕ ವಿವರಿಸಲಾಗಿದೆ.

ಕೆಮ್ಮು

ಕೆಮ್ಮು

ಮೂರು ಲೋಟ ನೀರಿಗೆ ಹದಿನೈದು ವೀಳೆಯದೆಲೆಗಳನ್ನು ಹಾಕಿ ಕುದಿಸಿ. ಇದು ಸುಮಾರು ಮುಕ್ಕಾಲರಷ್ಟು ಪ್ರಮಾಣಕ್ಕೆ ಇಳಿದ ಬಳಿಕ ಸೋಸಿ ಕೊಂಚ ಜೇನು ಸೇರಿಸಿ ಬಿಸಿಬಿಸಿಯಿದ್ದಂತೆಯೇ ಕುಡಿಯುವುದರಿಂದ ಕೆಮ್ಮು ಗುಣವಾಗುತ್ತದೆ.

ಗಂಟಲೂತ (Bronchitis)

ಗಂಟಲೂತ (Bronchitis)

ರಡು ಕಪ್ ನೀರಿಗೆ ಒಂದು ಚಿಕ್ಕ ತುಂಡು ಕಲ್ಲುಸಕ್ಕರೆ ಮತ್ತು ಏಳು ವೀಳೆಯದೆಲೆಗಳನ್ನು ಸೇರಿಸಿ ಕುದಿಸಿ. ನೀರು ಆವಿಯಾಗಿ ಸುಮಾರು ಅರ್ಧದಷ್ಟು ಪ್ರಮಾಣಕ್ಕೆ ಬಂದ ಬಳಿಕ ಇಳಿಸಿ ಸೋಸಿ. ಈ ಒಂದು ಲೋಟವನ್ನು ಸಮಪ್ರಮಾಣದಲ್ಲಿ ಮೂರು ಭಾಗ ಮಾಡಿ ದಿನದ ಮೂರು ಹೊತ್ತು ಕುಡಿಯುವುದರಿಂದ ಗಂಟಲೂತ ಕಡಿಮೆಯಾಗುತ್ತದೆ.

ಶರೀರದ ದುರ್ಗಂಧ ನಿವಾರಿಸಲು

ಶರೀರದ ದುರ್ಗಂಧ ನಿವಾರಿಸಲು

ಎರಡು ಲೋಟ ನೀರಿಗೆ ಐದು ವೀಳೆಯದೆಲೆ ಸೇರಿಸಿ ಕುದಿಸಿ. ನೀರು ಆವಿಯಾಗಿ ಒಂದು ಲೋಟ ಆದಾಗ ಇದನ್ನು ಮಧ್ಯಾಹ್ನ ಊಟದ ಬಳಿಕ ಕುಡಿಯಿರಿ.

ಸುಟ್ಟಗಾಯಗಳಿಗೆ

ಸುಟ್ಟಗಾಯಗಳಿಗೆ

ಕೆಲವು ವೀಳೆಯದೆಲೆಗಳನ್ನು ಜಜ್ಜಿ ಒಂದು ಬಟ್ಟೆಯಲ್ಲಿ ಹಿಂಡಿ ರಸ ತೆಗೆಯಿರಿ. ಇದಕ್ಕೆ ಕೊಂಚ ಜೇನು ಸೇರಿಸಿ ಸುಟ್ಟಜಾಗಕ್ಕೆ ಹಚ್ಚಿ ಒಣಗಲುಬಿಡಿ. ಒಣಗಿದ ಬಳಿಕವೂ ಇನ್ನಷ್ಟು ರಸ ಹಚ್ಚಿ. ಇದೇ ರೀತಿ ದಿನದಲ್ಲಿ ಕೆಲವಾರು ಬಾರಿ ಪುನರಾವರ್ತಿಸಿ. ಒಂದೆರಡು ದಿನಗಳಲ್ಲಿ ಸುಟ್ಟಚರ್ಮದ ಕೆಳಗೆ ಹೊಸಚರ್ಮ ಬೆಳೆಯಲು ಪ್ರಾರಂಭವಾಗುತ್ತದೆ.

ಮೂಗಿನಲ್ಲಿ ರಕ್ತ ಬರುತ್ತಿದ್ದರೆ

ಮೂಗಿನಲ್ಲಿ ರಕ್ತ ಬರುತ್ತಿದ್ದರೆ

ಅತಿ ಎಳೆಯ ವೀಳೆಯದೆಲೆಯನ್ನು ಚೆನ್ನಾಗಿ ಜಜ್ಜಿ ಒಂದು ಚಿಕ್ಕ ಉಂಡೆಯನ್ನಾಗಿಸಿ. ರಕ್ತ ಬರುತ್ತಿರುವ ಮೂಗಿನೊಳಕ್ಕೆ ತೂರಿಸಿ ಆ ಹೊಳ್ಳೆಯನ್ನು ಹೊರಗಿನಿಂದ ಒತ್ತಿ ಹಿಡಿಯಿರಿ, ಇನ್ನೊಂದು ಹೊಳ್ಳೆಯಿಂದ ಮಾತ್ರ ಉಸಿರಾಡಿ. ಶೀಘ್ರವೇ ರಕ್ತ ಬರುವುದು ನಿಂತು ಹೋಗುತ್ತದೆ.

ಕರುಳಿನ ಹುಣ್ಣು (Ulcer)

ಕರುಳಿನ ಹುಣ್ಣು (Ulcer)

ಕರುಳಿನಲ್ಲಿ ಹುಣ್ಣು ಆಗಿದ್ದರೆ ಎಳೆಯ ಅಥವಾ ಈಗತಾನೇ ಬಲಿಯಲು ಪ್ರಾರಂಭಿಸಿರುವ ಎಲೆಗಳನ್ನು ಚೆನ್ನಾಗಿ ತೊಳೆದು ಅಗಿದು ನುಂಗಿಬಿಡಿ. ರುಚಿ ಒಗರು ಅನ್ನಿಸಿದರೆ ಕೊಂಚ ಸಕ್ಕರೆಯನ್ನು ಬಳಸಬಹುದು. ಇದನ್ನು ದಿನಕ್ಕೆರಡು ಬಾರಿ ಪುನರಾವರ್ತಿಸಿ.

ಕೆಂಪಾದ ಮತ್ತು ತುರಿಕೆಯಿರುವ ಕಣ್ಣು

ಕೆಂಪಾದ ಮತ್ತು ತುರಿಕೆಯಿರುವ ಕಣ್ಣು

ಒಂದು ಕಪ್ ನೀರನ್ನು ಕುದಿಸಿ ಒಲೆಯಿಂದ ಇಳಿಸಿದ ಬಳಿಕ ಸುಮಾರು ಆರು ಎಳೆಯ ವೀಳ್ಯದೆಲೆಗಳನ್ನು ಹಾಕಿ ತಣಿಯಲು ಬಿಡಿ. ಬಳಿಕ ಈ ನೀರನ್ನು ಸೋಸಿ ದಿನಕ್ಕೆ ಮೂರು ಬಾರಿ ಕಣ್ಣುಗಳನ್ನು ತೊಳೆದುಕೊಳ್ಳಿ. ಒಂದೆರಡು ದಿನಗಳಲ್ಲಿಯೇ ಕಣ್ಣಿನ ಉರಿ ಕಡಿಮೆಯಾಗುತ್ತದೆ. ಪೂರ್ತಿಯಾಗಿ ಉರಿ ಕಡಿಮೆಯಾಗುವ ತನಕ ಈ ವಿಧಾನವನ್ನು ಅನುಸರಿಸಿ.

ಮೈ ಕೈ ತುರಿಕೆಗೆ

ಮೈ ಕೈ ತುರಿಕೆಗೆ

ಸುಮಾರು ಒಂದು ಲೀಟರ್ ನೀರಿಗೆ ಇಪ್ಪತ್ತು ವೀಳೆಯದೆಲೆಗಳನ್ನು ಹಾಕಿ ಕುದಿಸಿ ತಣಿಸಿ. ತಣಿದ ನೀರಿನಿಂದ ಎಲೆಗಳನ್ನು ಸೋಸಿ ತೆಗೆದು ಈ ನೀರಿನಿಂದ ತುರಿಕೆಯಿರುವ ಜಾಗವನ್ನು ಚೆನ್ನಾಗಿ ತೊಳೆದುಕೊಳ್ಳಿ. ಈ ನೀರನ್ನು ಅದ್ದಿದ ಸ್ಪಂಜ್ ಉಪಯೋಗಿಸಿ ಒರೆಸಿಕೊಳ್ಳುವುದೂ ಉತ್ತಮ ವಿಧಾನವಾಗಿದೆ. ಒಂದೆರಡು ದಿನಗಳಲ್ಲಿಯೇ ತುರಿಕೆ ಪೂರ್ಣವಾಗಿ ಮಾಯವಾಗುವುದು.

ಒಸಡುಗಳಲ್ಲಿ ರಕ್ತ ನಿಲ್ಲಿಸಲು

ಒಸಡುಗಳಲ್ಲಿ ರಕ್ತ ನಿಲ್ಲಿಸಲು

ಎರಡು ಕಪ್ ನೀರಿನಲ್ಲಿ ನಾಲ್ಕು ವೀಳೆಯದೆಲೆಗಳನ್ನು ಹಾಕಿ ಕುದಿಸಿ. ತಣಿದ ಬಳಿಕ ಎಲೆಗಳನ್ನು ನಿವಾರಿಸಿ ಈ ನೀರಿನಿಂದ ಮುಕ್ಕಳಿಸಿ. ದಿನಕ್ಕೆ ಮೂರು ಅಥವಾ ನಾಲ್ಕು ಬಾರಿ ಪುನರಾವರ್ತಿಸಿ.

ಅಜೀರ್ಣತೆಗೆ

ಅಜೀರ್ಣತೆಗೆ

ಎರಡು ವೀಳೆಯದೆಲೆಗಳನ್ನು ಚೆನ್ನಾಗಿ ತೊಳೆದು ಅಗಿಯಿರಿ ಹಾಗೂ ನಯವಾಗುವವರೆಗೆ ಅಗಿಯಿರಿ, ಬಳಿಕ ನಾರುಗಳನ್ನು ಉಳಿಸಿಕೊಂಡು ಉಳಿದ ಭಾಗವನ್ನು ನುಂಗಿ.

ಬಾಯಿಯ ದುರ್ಗಂಧ ನಿವಾರಿಸಲು

ಬಾಯಿಯ ದುರ್ಗಂಧ ನಿವಾರಿಸಲು

ಒಂದು ಲೀಟರ್ ನೀರಿಗೆ ನಾಲ್ಕು ವೀಳೆಯದೆಲೆಗಳನ್ನು ಹಾಕಿ ಕುದಿಸಿ. ಕೊಂಚ ಕಾಲ ಕುದಿದ ಬಳಿಕ ಎಲೆಗಳನ್ನು ಹೊರತೆಗೆದು ಜಜ್ಜಿ ಹಿಂಡಿ ರಸವನ್ನು ಆ ನೀರಿಗೇ ಸೇರಿಸಿ.ಈ ನೀರಿನಿಂದ ಆಗಾಗ ಮುಕ್ಕಳಿಸುತ್ತಾ ಇರಿ. ಬಾಯಿಯ ದುರ್ಗಂಧ ಒಂದೆರಡು ದಿನಗಳಲ್ಲಿಯೇ ಕಡಿಮೆಯಾಗುತ್ತದೆ.

ಮೊಡವೆಗಳನ್ನು ನಿವಾರಿಸಲು

ಮೊಡವೆಗಳನ್ನು ನಿವಾರಿಸಲು

ಸುಮಾರು ಹತ್ತು ವೀಳೆಯದೆಲೆಗಳನ್ನು ಚಿಕ್ಕದಾಗಿ ಹೆಚ್ಚಿ ಎರಡು ಕಪ್ ಬಿಸಿನೀರಿಗೆ ಹಾಕಿ. ನೀರು ತಣಿದ ಬಳಿಕ ಸೋಸಿ ಈ ನೀರಿನಿಂದ ಮುಖ ತೊಳೆದುಕೊಳ್ಳಿ. ಇದನ್ನು ದಿನಕ್ಕೆ ಸುಮಾರು ಎರಡರಿಂದ ಮೂರು ಬಾರಿ ಪುನರಾವರ್ತಿಸಿ. ಎಳೆಯ ವೀಳ್ಯದೆಲೆಗಳನ್ನು ಅರೆದು ಲೇಪನವನ್ನು ಮೊಡವೆಗಳಿಗೆ ಹಚ್ಚುವುದರಿಂದಲೂ ಮೊಡವೆ ನಿವಾರಣೆಯಾಗುತ್ತದೆ.

ಬಿಳಿಸೆರಗು ನಿವಾರಿಸಲು

ಬಿಳಿಸೆರಗು ನಿವಾರಿಸಲು

ಎರಡೂವರೆ ಲೀಟರ್ ನೀರಿಗೆ ಹತ್ತು ವೀಳೆಯದೆಲೆಗಳನ್ನು ಹಾಕಿ ಸುಮಾರು ಐದು ನಿಮಿಷ ಕುದಿಸಿ. ಬಳಿಕ ಇದು ಸುಮಾರು ಉಗುರುಬೆಚ್ಚನೆಯಷ್ಟು ತಣಿದ ಬಳಿಕ ಈ ನೀರಿನಿಂದ ಬಿಳಿಸೆರಗಿನ ಮೂಲವನ್ನು ಸ್ವಚ್ಛಗೊಳಿಸುತ್ತಿರಿ.

ತಾಯಿಹಾಲು ಹೆಚ್ಚಿಸಲು

ತಾಯಿಹಾಲು ಹೆಚ್ಚಿಸಲು

ಸುಮಾರು ಎಂಟರಿಂದ ಹತ್ತು ಚೆನ್ನಾಗಿ ಬಲಿತ ವೀಳೆಯದೆಲೆಗಳ ಎರಡೂ ಬದಿಗೆ ಕೊಬ್ಬರಿ ಎಣ್ಣೆ ಹಚ್ಚಿ ಒಂದರ ಮೇಲೊಂದಿರಿಸಿ. ಇವನ್ನು ಒಟ್ಟಿಗಿರಿಸಲು ದಾರವನ್ನು ಸುತ್ತಿ ಒಂದು ಚಿಕ್ಕ ಗಂಟಾಗಿಸಿ. ಇದನ್ನು ಕಾವಲಿಯ ಮೇಲಿಟ್ಟು ಎಲೆಗಳು ಒಣಗುವವರೆಗೆ ಚಿಕ್ಕ ಉರಿಯಲ್ಲಿ ಬಿಸಿಮಾಡಿ. ಬಿಸಿಯಿದ್ದಂತೆಯೇ ಸ್ತನಗಳಿಗೆ ಶಾಖ ನೀಡುವುದರಿಂದ ತಾಯಿಹಾಲು ಹೆಚ್ಚುತ್ತದೆ.

English summary

Betel leaves for various diseases

Betel is a medicinal plant which is very beneficial. It containing antiseptic substances in all its parts. The leaves are widely used to treat a nosebleed, red eyes, discharge, making a loud voice, and many more, including erectile dysfunction. Betel leaves are useful for treating various diseases. Here This recipes using beetal leaf for various diseases.
X
Desktop Bottom Promotion