For Quick Alerts
ALLOW NOTIFICATIONS  
For Daily Alerts

ತೂಕ ಇಳಿಕೆಯಲ್ಲಿ ಹಸಿರು ಚಿನ್ನ ವೀಳ್ಯದೆಲೆಯ ಕರಾಮತ್ತೇನು?

By Manu
|

ಪಂಚಭಕ್ಷ್ಯಪರಮಾನ್ನದ ಅಂತಿಮ ಘಟ್ಟ ವೀಳ್ಯದೆಲೆಯ ಸೇವನೆಯಾಗಿತ್ತು. ನಮ್ಮ ಹಿರಿಯರಿಗೆ ಊಟದ ಬಳಿಕ ಎಲೆ ಅಡಿಕೆ ಮತ್ತು ಸುಣ್ಣವನ್ನು ಜಗಿಯದೇ ತಿಂದ ಊಟ ಜೀರ್ಣವಾಗುತ್ತಲೇ ಇರಲಿಲ್ಲ. ಆದರೆ ಬಳಿಕ ಇದರಲ್ಲಿ ತಂಬಾಕು ಸೇರಿಸುವ ಮೂಲಕ ಜೀರ್ಣಕ್ರಿಯೆಗೆ ಸಹಕಾರಿಯಾಗಿದ್ದ ವೀಳ್ಯದೆಲೆ ವ್ಯಸನಕಾರಕವಾಗಿ ಬದಲಾಯಿತು.

ತಂಬಾಕು ಇರುವ ನೀರನ್ನು ಕುಡಿಯಬಾರದು ಎಂಬು ನಂಬಿದ್ದರ ಪರಿಣಾಮವಾಗಿ ಕೆಂಪಾದ ಎಂಜಲು ನಮ್ಮ ರಸ್ತೆ, ವಠಾರ, ರೈಲುನಿಲ್ದಾಣ ಎಲ್ಲೆಂದೆರಲ್ಲಿ ರಾರಾಜಿಸತೊಡಗಿತು. ಬಸ್ ನಿಲ್ದಾಣ ಅಥವಾ ರೈಲು ನಿಲ್ದಾಣಗಳ ಮೆಟ್ಟಿಲು, ಹಜಾರದ ನಟ್ಟನಡುವಣ ಸ್ಥಳ ಬಿಟ್ಟರೆ ಜನರು ಉಗಿದ ಕೆಂಪುದ್ರವದಿಂದ ಕೆಂಪಗಾಗಿ ಹೋಗಿದೆ. ಆದರೆ ವೀಳ್ಯದೆಲೆಗೆ ತಟ್ಟಿರುವ ಕಳಂಕವನ್ನು ನಿವಾರಿಸಲು ಸಾಧ್ಯವಿದೆ.

ವೀಳ್ಯದೆಲೆಯಲ್ಲಿ ಹಲವು ಆರೋಗ್ಯಕರ ಅಂಶಗಳಿವೆ. ಜೀರ್ಣಕ್ರಿಯೆಗೆ ನೆರವಾಗುವುದು, ಹೊಟ್ಟೆಯಲ್ಲಿ ಹೆಚ್ಚಿನ ಜೀರ್ಣರಸಗಳು ಸ್ರವಿಸಲು ನೆರವಾಗಿ ಉಬ್ಬರವಾಗದಂತೆ ರಕ್ಷಣೆ ನೀಡುವುದು, ಮಲಬದ್ಧತೆಯನ್ನು ತಡೆಯುವುದು ಮೊದಲಾದವು ಈ ಎಲೆಯ ನೇರ ಉಪಯೋಗಗಳಾದರೆ ಕಾಳುಮೆಣಸಿನೊಂದಿಗೆ ಸೇವಿಸಿದರೆ ತೂಕವನ್ನೂ ಇಳಿಸಬಹುದು ಎಂದು ಇತ್ತೀಚೆಗೆ ತಿಳಿದುಬಂದಿದೆ. ಸಮರ್ಪಕವಾದ ಸೇವನೆಯಿಂದ ಎಂಟು ವಾರಗಳಲ್ಲಿ ಗಮನಾರ್ಹ ಬದಲಾವಣೆ ಕಂಡುಬಂದಿರುವುದು ತೂಕ ಇಳಿಸಲು ಕಾತರಿಸುವವರಿಗೆ ಶುಭಸುದ್ದಿಯಾಗಿದೆ. ಈ ಎಲೆಯ ಉಪಯೋಗದ ಬಗ್ಗೆ ಕೆಲವು ಮಾಹಿತಿಗಳನ್ನು ನೋಡೋಣ
..

ತೂಕ ಇಳಿಸಲು ಸಹಕಾರಿ

ತೂಕ ಇಳಿಸಲು ಸಹಕಾರಿ

ವೀಳ್ಯದೆಲೆಯನ್ನು ಜಗಿದಾಗ ಬಾಯಿಯಲ್ಲಿ ಜೊಲ್ಲು ಹೆಚ್ಚಿನ ಪ್ರಮಾಣದಲ್ಲಿ ಉತ್ಪತ್ತಿಯಾಗುತ್ತದೆ. ಇದೇ ವೇಳೆಯಲ್ಲಿ ಜಠರಕ್ಕೆ ಸಿದ್ಧವಾಗಿರಲು ಮೆದುಳಿನಿಂದ ಸಂದೇಶ ಹೋಗುತ್ತದೆ. ಪರಿಣಾಮವಾಗಿ ಹೊಟ್ಟೆಹಸಿವು ಪ್ರಾರಂಭವಾಗುತತ್ದೆ. ಈ ದ್ರವವನ್ನು ನುಂಗಿದ ಬಳಿಕ ಹೊಟ್ಟೆಯಲ್ಲಿ ಈ ಮೊದಲು ಜೀರ್ಣಗೊಂಡಿದ್ದ ಆಹಾರದಲ್ಲಿದ್ದ ವಿಷಕಾರಿ ವಸ್ತುಗಳನ್ನು (ಆಯುರ್ವೇದದಲ್ಲಿ ಇದಕ್ಕೆ ಆಮ ಎಂದು ಕರೆಯುತ್ತಾರೆ) ಈ ದ್ರವ ಎದುರಿಸಿ ಹಾನಿಯಾಗುವುದನ್ನು ತಪ್ಪಿಸುತ್ತದೆ.

ತೂಕ ಇಳಿಸಲು ಸಹಕಾರಿ

ತೂಕ ಇಳಿಸಲು ಸಹಕಾರಿ

ಜೊತೆಗೇ ಆಯುರ್ವೇದದಲ್ಲಿ ವಿವರಿಸಿರುವಂತೆ ಮೇಧ ಧಾತುವನ್ನು ಕರಗಿಸುತ್ತದೆ. ಈ ಮೇಧ ಧಾತು ಎಂದರೆ ನಮ್ಮ ದೇಹದಲ್ಲಿ ಸಂಗ್ರಹವಾಗಿರುವ ಕೊಬ್ಬು. ಕೊಬ್ಬು ಕರಗಿದಂತೆ ನಿಧಾನವಾಗಿ ಹೆಚ್ಚಿನ ತೂಕವೂ ಕಡಿಮೆಯಾಗುತ್ತಾ ಬರುತ್ತದೆ.

ಆಹಾರವನ್ನು ಜೀರ್ಣಹಿಸಿಕೊಳ್ಳಲು

ಆಹಾರವನ್ನು ಜೀರ್ಣಹಿಸಿಕೊಳ್ಳಲು

ಕಾಳುಮೆಣಸಿಗೆ ಖಾರ ನೀಡುವ ಪೋಷಕಾಂಶವಾದ ಪೆಪ್ಪರಿನ್ (pepperin) ಸಹಾ ಆಹಾರವನ್ನು ಜಠರ ಮತ್ತು ಕರುಳುಗಳಲ್ಲಿ ಅರೆಯಲು ನೆರವಾಗುತ್ತದೆ. ಜೊತೆಗೆ ಆಹಾರದಿಂದ ಸಣ್ಣಕರುಳುಗಳ ಒಳಭಾಗದ ವೀಳ್ಯದೆಲೆಯನ್ನು ಎಲ್ಲಾ ಪೋಷಕಾಂಶಗಳನ್ನು ಹೀರಿಕೊಳ್ಳಲೂ ನೆರವಾಗುತ್ತದೆ. ಜೊತೆಗೇ ಇದರ ಖಾರವಾದ ರುಚಿ ನಾಲಿಗೆಯ ರುಚಿಗ್ರಂಥಿಗಳನ್ನು ಚುರುಕುಗೊಳಿಸಿ ಬಾಯಿಯಲ್ಲಿ ಹೆಚ್ಚಿನ ಲಾಲಾರಸ ಉತ್ಪತ್ತಿಯಾಗಲು ಸಹಕರಿಸುತ್ತದೆ.

ಆಹಾರವನ್ನು ಜೀರ್ಣಹಿಸಿಕೊಳ್ಳಲು

ಆಹಾರವನ್ನು ಜೀರ್ಣಹಿಸಿಕೊಳ್ಳಲು

ವೀಳ್ಯದೆಲೆ ಮೆದುಳು ಜಠರಕ್ಕೆ ಹೆಚ್ಚಿನ ಜಠರಾಮ್ಲ ತಯಾರಿಸಿಟ್ಟುಕೊಳ್ಳಲು ಸಂದೇಶ ಕಳಿಸುತ್ತದೆ. ಇದರಿಂದಾಗಿ ಜಠರಕ್ಕೆ ಆಗಮಿಸಿದ ಆಹಾರ ಪೂರ್ಣವಾಗಿ ಜೀರ್ಣಗೊಳ್ಳಲು ಸಾಧ್ಯವಾಗುತ್ತದೆ. ಒಂದು ವೇಳೆ ಪೂರ್ಣವಾಗಿ ಆಹಾರ ಜೀರ್ಣವಾಗದೇ ಇದ್ದರೆ ಅಜೀರ್ಣ, ವಾಯುಪ್ರಕೋಪ, ಬೇಧಿ, ಹುಳಿತೇಗು, ಮಲಬದ್ಧತೆ ಮೊದಲಾದ ತೊಂದರೆಗಳು ಎದುರಾಗುತ್ತವೆ. ಜೊತೆಗೆ ಕಾಳುಮೆಣಸಿನ ಸೇವನೆಯಿಂದ ಬೆವರುವುದು ಮತ್ತು ಮೂತ್ರದ ಪ್ರಮಾಣದಲ್ಲಿಯೂ ಹೆಚ್ಚಳವಾಗಿ ದೇಹದಲ್ಲಿದ್ದ ವಿಷಕಾರಿ ವಸ್ತುಗಳನ್ನು ಶೀಘ್ರವಾಗಿ ಹೊರಹಾಕಲು ಸಾಧ್ಯವಾಗುತ್ತದೆ. ಒಂದು ವೇಳೆ ಈ ಎರಡೂ ಆಹಾರಗಳು ಕೈಜೋಡಿಸಿದರೆ? ಅದು ಸರಿ, ಈ ಜೋಡಿ ಜೀರ್ಣಕ್ರಿಯೆಯನ್ನು ಉತ್ತಮಗೊಳಿಸುವುದರ ಜೊತೆಗೇ ತೂಕವನ್ನೂ ಸುರಕ್ಷಿತವಾಗಿ ಇಳಿಸಲು ಸಹಾಯ ಮಾಡುತ್ತವೆ.

ಉಪಯೋಗಿಸುವ ವಿಧಾನ

ಉಪಯೋಗಿಸುವ ವಿಧಾನ

ಒಂದು ಎಳೆಯ ವೀಳ್ಯದೆಲೆಯೊಳಗೆ ಐದು ಕಾಳುಮೆಣಸಿನ ಕಾಳುಗಳನ್ನು (ಕಪ್ಪು ಕಾಳುಗಳು) ಇಟ್ಟು ಮಡಚಿ ಇಡಿಯಾಗಿ ಬಾಯಿಯಲ್ಲಿಟ್ಟು ಅಗಿಯಿರಿ. ಮೊದಮೊದಲಿಗೆ ಕಾಳುಮೆಣಸಿನ ಖಾರ ಕೊಂಚ ನಾಲಿಗೆಗೆ ಬಿಸಿ ಮುಟ್ಟಿಸುತ್ತದೆ. ಆದರೆ ಶೀಘ್ರದಲ್ಲಿಯೇ ಲಾಲಾರಸದ ಪ್ರಮಾಣ ಹೆಚ್ಚುತ್ತಾ ಹೋಗುವುದರಿಂದ ಖಾರ ಕಡಿಮೆಯಾಗುತ್ತದೆ. ಆದರೆ ಇದನ್ನು ಈಗಲೇ ನುಂಗಬಾರದು.

ಉಪಯೋಗಿಸುವ ವಿಧಾನ

ಉಪಯೋಗಿಸುವ ವಿಧಾನ

ಸ್ವಲ್ಪ ಹೊತ್ತು ಅಂದರೆ ಸುಮಾರು ನಾಲ್ಕರಿಂದ ಐದು ನಿಮಿಷಗಳ ಬಳಿಕ ಹೊಟ್ಟೆಯಲ್ಲಿ ಕೊಂಚ ಹಸಿವು ಅನ್ನಿಸಿದಾಗ, ಅಷ್ಟು ಹೊತ್ತಿಗೆ ಬಾಯಿ ತುಂಬಿರುತ್ತದೆ. ಆ ಬಳಿಕ ನಿಧಾನವಾಗಿ ಈ ದ್ರವವನ್ನು ನುಂಗಿ. ಈ ವಿಧಾನವನ್ನು ಪ್ರತಿದಿನ ಬೆಳಿಗ್ಗೆ ಎದ್ದ ಕೂಡಲೇ ಖಾಲಿ ಹೊಟ್ಟೆಯಲ್ಲಿ ಸೇವಿಸಬೇಕು. ಬಳಿಕ ಸುಮಾರು ಮುಕ್ಕಾಲು ಘಂಟೆ ಏನನ್ನೂ ಸೇವಿಸಬಾರದು. ಸುಮಾರು ಎಂಟು ವಾರಗಳಲ್ಲಿಯೇ ತೂಕದಲ್ಲಿ ವ್ಯತ್ಯಾಸ ಕಂಡುಬರುತ್ತದೆ.

ಎಚ್ಚರಿಕೆ

ಎಚ್ಚರಿಕೆ

ಇದಕ್ಕೆ ಅತಿ ಎಳೆಯ ವೀಳ್ಯದೆಲೆಯನ್ನೇ ಆರಿಸಬೇಕು. ಬಲಿತ ಅಥವಾ ಹಳದಿಯಾಗಲು ಪ್ರಾರಂಭವಾಗಿರುವ ಎಲೆಯಿಂದ ಪ್ರಯೋಜನವಿಲ್ಲ. ಅಲ್ಲದೇ ಒಂದು ದಿನಕ್ಕೂ ಹಳೆಯದಾಗಿ ಕಪ್ಪಗಾಗಲು ತೊಡಗಿರುವ ಎಲೆಯೂ ಉತ್ತಮವಲ್ಲ. ಈ ಎಲೆಯನ್ನು ಸೇವಿಸಿದರೆ ಒಳ್ಳೆಯದಾಗುವುದರ ಬದಲು ಹೊಟ್ಟೆ ಕೆಡುವ ಸಂಭವವೇ ಹೆಚ್ಚಾಗಿರುತ್ತದೆ. ಎಲೆಯನ್ನು ತಿನ್ನುವ ಮೊದಲು ನೀರಿನಿಂದ ಸ್ವಚ್ಛವಾಗಿ ತೊಳೆದು ಒರೆಸಿ ತಿನ್ನಬೇಕು.

ವೀಳ್ಯದ ಎಲೆಯ ಆರೋಗ್ಯಕಾರಿ ಪ್ರಯೋಜನಗಳು

ವೀಳ್ಯದ ಎಲೆಯ ಆರೋಗ್ಯಕಾರಿ ಪ್ರಯೋಜನಗಳು

ವೀಳ್ಯದ ಎಲೆ ಕೇವಲ ತೂಕ ಇಳಿಸಿಕೊಳ್ಳಲು ಮಾತ್ರವಲ್ಲಿ ಆರೋಗ್ಯಕಾರಿ ಪ್ರಯೋಜನಗಳು ಕೂಡ ಸಾಕಷ್ಟಿವೆ. ವೀಳ್ಯದ ಎಲೆಗೆ ಭಾರತೀಯ ಸಂಸ್ಕೃತಿಯಲ್ಲಿ ಹೆಚ್ಚಿನ ಸ್ಥಾನಮಾನ ನೀಡಲಾಗಿದೆ. ಪ್ರತಿಯೊಂದು ಶುಭಕಾರ್ಯಕ್ಕೂ ವೀಳ್ಯದ ಎಲೆ ಇರಲೇಬೇಕು.ಹಬ್ಬ ಹರಿದಿನಗಳಲ್ಲಿ ಅಥವಾ ಮನೆಗೆ ಬಂದವರಿಗೆ ಉಡುಗೊರೆ ಕೊಡುವಾಗ ಜೊತೆಗೆ ವೀಳ್ಯದ ಎಲೆ ಶುಭ ಹಾರೈಸುವ ಸಲುವಾಗಿ ಕೊಡಲಾಗುತ್ತದೆ. ಊಟದ ನಂತರ ವೀಳ್ಯದ ಎಲೆಯೊಂದಿಗೆ ಅಡಿಕೆ ಬೆರೆಸಿ ತಿನ್ನುವುದು ರೂಢಿಗಳಲ್ಲಿ ಬಂದಿದೆ. ಇದನ್ನು ತಿಂದಿರುವುದನ್ನು ಸುಲಭವಾಗಿ ಜೀರ್ಣವಾಗುತ್ತದೆ ಎಂಬುದರ ಜೊತೆಗೆ ಏನೇಕ ಔಷಧೀಯ ಗುಣಗಳು ಈ ಎಲೆಯಲ್ಲಿವೆ ಎಂಬುದನ್ನು ತಿಳಿದುಕೊಳ್ಳಲೇಬೇಕು., ಬನ್ನಿ ಅವು ಯಾವುದು ಎಂಬುದನ್ನು ಮುಂದಿನ ಸ್ಲೈಡ್ ಕ್ಲಿಕ್ ಮಾಡಿ

ಉರಿಯೂತ

ಉರಿಯೂತ

ಸಂಧಿವಾತ ಮತ್ತು ವೃಷಣಗಳ ಉರಿಯೂತ ತಡೆಯಲು ವೀಳ್ಯದ ಎಲೆಯ ಮೂಲಕ ಚಿಕಿತ್ಸೆ ನೀಡಲಾಗುತ್ತದೆ. ವೀಳ್ಯದ ಎಲೆಯನ್ನು ಬಿಸಿ ಮಾಡಿ ಅದಕ್ಕೆ ಒಂದು ಪದರ ಹರಳೆಣ್ಣೆಯಲ್ಲಿ ಅದ್ದಿ ಊತ ಅಥವಾ ಕೀವು ಆದ ಜಾಗದಲ್ಲಿ ಹಚ್ಚಬೇಕು,ಪ್ರತಿ ಗಂಟೆಗೊಮ್ಮೆ ಇದನ್ನು ಬದಲಿಸುತ್ತಿರಬೇಕು.

ಉಸಿರಾಟದ ತೊಂದರೆ

ಉಸಿರಾಟದ ತೊಂದರೆ

ಕೆಮ್ಮು ಅಥವಾ ಉಸಿರಾಟದ ತೊಂದರೆಯಾದಾಗ ವೀಳ್ಯದ ಎಲೆಯನ್ನು ಸಾಸಿವೆ ಎಣ್ಣೆಯಲ್ಲಿ ಬಿಸಿ ಮಾಡಿ ಅದ್ದಿ ಎದೆಯ ಮೇಲೆ ಇಡುವುದರಿಂದ ಉಸಿರಾಟದ ತೊಂದರೆ ನಿವಾರಣೆಯಾಗುತ್ತದೆ.ಎಲೆ ಅಡಿಕೆ ಜಜ್ಜಿ ಜೇನುತುಪ್ಪದೊಂದಿಗೆ ಮಿಶ್ರ ಮಾಡಿ ತಿನ್ನುವುದರಿಂದ ಒಣ ಕೆಮ್ಮು ಕಡಿಮೆ ಆಗುತ್ತದೆ.

ಮಧುಮೇಹ

ಮಧುಮೇಹ

ವೀಳ್ಯದ ಎಲೆಯ ಮೇಲೆ ಮಾಡಿದ ಸಂಶೋಧನೆಯಿಂದ ಇದರಲ್ಲಿ ಮಧುಮೇಹ ವಿರೋಧಿ ಗುಣ ಇರುವುದು ಕಂಡು ಬಂದಿದ್ದು ಇದು ಚಿಕಿತ್ಸೆಗೆ ನೆರವಾಗುತ್ತದೆ ಎನ್ನಲಾಗಿದೆ.

ತಲೆನೋವು

ತಲೆನೋವು

ವೀಳ್ಯದ ಎಲೆಯಲ್ಲಿರುವ ನೋವುನಿವಾರಕ ಮತ್ತು ತಂಪಾಗಿಸುವ ಗುಣ ತಲೆನೋವಿನ ಪರಿಹಾರಕ್ಕೆ ಸಹಕರಿಸುತ್ತದೆ.

ಮಲಬದ್ಧತೆಗೆ ಮದ್ದು

ಮಲಬದ್ಧತೆಗೆ ಮದ್ದು

ವೀಳ್ಯದ ಎಳೆಯ ಕಾಂಡವನ್ನು ಹರಳೆಣ್ಣೆಯೊಂದಿಗೆ ಬೆರೆಸಿ ಗುದನಾಳಕ್ಕೆ ಹಾಕುವುದರಿಂದ ಮಲಬದ್ಧತೆ ತಕ್ಷಣ ನಿವಾರಣೆಯಾಗುತ್ತದೆ.

ಬೆನ್ನು ನೋವನ್ನು ಕಡಿಮೆ ಮಾಡುತ್ತದೆ

ಬೆನ್ನು ನೋವನ್ನು ಕಡಿಮೆ ಮಾಡುತ್ತದೆ

ಎಲೆ ಅಥವಾ ಅದರ ಬಿಸಿ ರಸವನ್ನು ಯಾವುದೇ ಎಣ್ಣೆಯ ಜೊತೆ (ಕೊಬ್ಬರಿ ಎಣ್ಣೆ) ಮಿಶ್ರ ಮಾಡಿ ಹಚ್ಚುವುದರಿಂದ ಬೆನ್ನಿನ ಕೆಳಭಾಗದ ನೋವನ್ನು ಕಡಿಮೆ ಮಾಡುತ್ತದೆ.

ಉತ್ಕರ್ಷಣ ನಿರೋಧಕ

ಉತ್ಕರ್ಷಣ ನಿರೋಧಕ

ವೀಳ್ಯದ ಎಲೆಯ ಮೇಲೆ ಮಾಡಿದ ಸಂಶೋಧನೆ ಮೇಲೆ ಇದರಲ್ಲಿರುವ BHT (butylated hydroxyl toluene)ಮುಕ್ತ ಮೂಲಭೂತ ಅಂಶಗಳನ್ನು ಶೇಖರಿಸುವ ಗುಣಲಕ್ಷಣಗಳನ್ನು ಹೊಂದಿರುವುದು ಕಂಡು ಬಂತು.

ಮೂತ್ರ ವಿಸರ್ಜನೆಗೆ ತೊಂದರೆಯಾದಾಗ

ಮೂತ್ರ ವಿಸರ್ಜನೆಗೆ ತೊಂದರೆಯಾದಾಗ

ವೀಳ್ಯದ ಎಲೆಯ ರಸವನ್ನು ಹಾಲಿನೊಂದಿಗೆ ಬೆರೆಸಿ ಸೇವಿಸಿದಾಗ ಮೂತ್ರಕ್ಕೆ ಸಂಬಂಧ ಪಟ್ಟ ಸಮಸ್ಯೆಗಳಿಗೆ ಪರಿಹಾರ ದೊರಕುತ್ತದೆ.

ಗಾಯಕ್ಕೆ ಪರಿಹಾರ

ಗಾಯಕ್ಕೆ ಪರಿಹಾರ

ಗಾಯವಾದ ಜಾಗಕ್ಕೆ ವೀಳ್ಯದ ಎಳೆಯ ರಸದ ಹಚ್ಚಿ ಎಲೆಯಿಂದ ಒತ್ತಿ ಹಿಡಿಯುವುದರಿಂದ 2-3 ದಿನದಲ್ಲಿ ಗಾಯ ಮಾಯವಾಗುತ್ತದೆ.

English summary

Betel leaf home remedy for weight loss

In India the practice of chewing paan after a meal is very common and has a number of health benefits. But did you know that chewing betel leaves can help you lose weight too? Here’s how it works and how you can use it.
X
Desktop Bottom Promotion