For Quick Alerts
ALLOW NOTIFICATIONS  
For Daily Alerts

ಒತ್ತಡವನ್ನು ಮೆಟ್ಟಿ ನಿಲ್ಲಲು ಇಲ್ಲಿದೆ ನೋಡಿ ಸರಳ ಟಿಪ್ಸ್

|

ಭವಿಷ್ಯವನ್ನು ಪ್ರಸ್ತುತ ಜೀವನವನ್ನು ಆಸ್ವಾದಿಸುವಲ್ಲಿ ಬಹು ದೊಡ್ಡ ಕಂಟಕವಾಗಿ ಒತ್ತಡ ಜೀವನದಲ್ಲಿ ಗೋಚರಿಸುತ್ತದೆ. ಯಶಸ್ವಿಯಾಗಬೇಕೆಂಬ ತುಡಿತ ಮತ್ತು ಸ್ಪರ್ಧೆಯಲ್ಲಿನ ನಮ್ಮ ಓಟ ನಮ್ಮ ಜೀವನವನ್ನು ಒತ್ತಡಪೂರ್ಣಗೊಳಿಸಿದೆ. ನಿಜಕ್ಕೂ ಒತ್ತಡವಿಲ್ಲದೆ ಯಾವುದೇ ಮನುಷ್ಯ ಇರಲು ಸಾಧ್ಯವಿಲ್ಲ ಎಂದೇ ಹೇಳಬಹುದು. ಕೆಲಸಕ್ಕೆ ಹೋಗುವವರು ಸಾಮಾನ್ಯವಾಗಿ ಎದುರಿಸುವ ಸಮಸ್ಯೆಯೆಂದರೆ ಒತ್ತಡ. ಒತ್ತಡದಿಂದಾಗಿ ವ್ಯಕ್ತಿ ಮನಃಶಾಂತಿಯನ್ನು ಕಳೆದುಕೊಳ್ಳುತ್ತಿದ್ದಾನೆ.

ಈವತ್ತು ದಿನ ಸರಿಯಿರಲಿಲ್ಲ ನಾಳೆ ಎಲ್ಲವೂ ಸರಿ ಹೋಗುತ್ತೆ ಅಂತ ನೀವು ಯೋಚಿಸುತ್ತಿದ್ದರೆ ಅದನ್ನು ಮನಸ್ಸಿನಿಂದ ತೆಗೆದುಹಾಕಿ. ಪ್ರತಿ ದಿನವೂ ನೀವು ಒತ್ತಡವನ್ನು ಎದುರಿಸಲೇ ಬೇಕು ಎಂಬುದು ಸತ್ಯ. ಕೆಲಸಕ್ಕೆ ಹೋಗುವ ಪ್ರತಿಯೊಬ್ಬರು ಒತ್ತಡವನ್ನು ಎದುರಿಸುತ್ತಾರೆ. ಇದು ಅವರ ದೈಹಿಕ ಮತ್ತು ಮಾನಸಿಕ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಒತ್ತಡವು ಆರೋಗ್ಯ ಮತ್ತು ಚರ್ಮದ ಸಮಸ್ಯೆಗಳಿಗೆ ಒಂದು ಮುಖ್ಯ ಕಾರಣ.

ಕೆಲವೊಮ್ಮೆ ಹೆಚ್ಚು ಆವಶ್ಯಕತೆಯಿಲ್ಲದ ಮತ್ತು ಅರ್ಥವಿಲ್ಲದ ವಿಷಯಗಳಿಗಾಗಿ ನಾವು ಚಿಂತಿಸಿ ನಮ್ಮ ಒತ್ತಡವನ್ನು ಹೆಚ್ಚಿಸಿಕೊಳ್ಳುತ್ತೇವೆ. ಬದುಕು ಬಾಳುವುದಕ್ಕಾಗಿ ಇರುವುದು ಚಿಂತಿಸಲು ಒತ್ತಡದಿಂದ ನಷ್ಟಗೊಳಿಸಲು ಅಲ್ಲ ಎಂಬುದನ್ನು ನಾವು ಇಲ್ಲಿ ಪರಿಗಣಿಸಬೇಕು. ಬನ್ನಿ ಒತ್ತಡವನ್ನು ನಿಯಂತ್ರಿಸುವ ಮಾರ್ಗವನ್ನು ತಿಳಿಯೋಣ...

ಆರೋಗ್ಯಕಾರಿ ಆಹಾರ ಸೇವನೆ

ಆರೋಗ್ಯಕಾರಿ ಆಹಾರ ಸೇವನೆ

ಹೆಚ್ಚಿನ ಸಮಯದಲ್ಲಿ ನಾವು ಚಿಂತೆ ಅಥವಾ ಒತ್ತಡದಲ್ಲಿದ್ದಾಗ ಸಿಕ್ಕಿ ಸಿಕ್ಕಿದ್ದನ್ನೆಲ್ಲಾ ತಿನ್ನುತ್ತೇವೆ. ಇದರ ಬದಲಿಗೆ ಕೆಲವೊಂದು ಆರೋಗ್ಯಕಾರಿ ಆಹಾರಗಳಾದ ಹಣ್ಣುಗಳು ಮತ್ತು ಸಲಾಡ್‌ಗಳನ್ನು ಸೇವಿಸುವುದರಿಂದ ಆರೋಗ್ಯಕಾರಿ ಆಹಾರ ವಿಧಾನವನ್ನು ನಮ್ಮದಾಗಿಸಿಕೊಳ್ಳಬಹುದು ಮತ್ತು ಒತ್ತಡವನ್ನು ದೂರವಿರಿಸಿ ಸಂತಸಮಯ ಜೀವನ ನಮ್ಮದಾಗಬಹುದು.

ನಿದ್ದೆ

ನಿದ್ದೆ

ಒತ್ತಡಕ್ಕೆ ತ್ವರಿತ ಮದ್ದೆಂದರೆ ನಿದ್ದೆಯಾಗಿದೆ. ಒತ್ತಡವನ್ನು ನಿರ್ವಹಿಸಲು ಮನಸ್ಸಿಗೆ ಸ್ವಲ್ಪ ವಿಶ್ರಾಂತಿ ಅತ್ಯಗತ್ಯ. ನಿದ್ದೆಯನ್ನು ನೀವು ಚೆನ್ನಾಗಿ ಮಾಡಿದಿರೆಂದರೆ ಒತ್ತಡ ರಹಿತ ಜೀವನ ನಿಮ್ಮದಾಗುತ್ತದೆ.

ಸರಿಯಾಗಿ ನೀರು ಕುಡಿಯಿರಿ

ಸರಿಯಾಗಿ ನೀರು ಕುಡಿಯಿರಿ

ಇದು ಒತ್ತಡವನ್ನು ಕಡಿಮೆ ಮಾಡುವುದಲ್ಲದೆ ಆರೋಗ್ಯವನ್ನು ಕಾಪಾಡುತ್ತದೆ. ಯಾವಾಗಲೂ ದೇಹದಲ್ಲಿ ನೀರಿನಂಶ ಸಮತೋಲನದಲ್ಲಿದ್ದರೆ ಆಯಾಸಗೊಂಡ ಮಾಂಸಖಂಡಗಳಿಗೆ ಆರಾಮ ನೀಡಿ ನೀವು ಶಾಂತ ಚಿತ್ತರಾಗಿರುವಂತೆ ಮಾಡುತ್ತದೆ.

ಕಾಫಿಗೆ ಬೈ ಹೇಳಿ

ಕಾಫಿಗೆ ಬೈ ಹೇಳಿ

ಸಾಮಾನ್ಯವಾಗಿ ಜನ ಕಾಫಿ ಕುಡಿಯುವುದು ಒತ್ತಡವನ್ನು ಕಡಿಮೆ ಮಾಡಲು ಉತ್ತಮ ಔಷಧ ಎಂದು ತಿಳಿಯುತ್ತಾರೆ. ಆದರೆ ಕೆಫೀನ್ ನಿಮ್ಮೊಳಗಿನ ಸಹಜವಾಗಿ ನಿಮ್ಮನ್ನು ಶಾಂತಗೊಳಿಸಬಲ್ಲ ಅಡಿನೊಸೈನ್ ಅನ್ನು ಕಡಿಮೆ ಮಾಡಿಬಿಡುತ್ತದೆ. ಆದ್ದರಿಂದ ಹೆಚ್ಚು ಕಾಫಿ ಕುಡಿಯಬೇಡಿ.

ಧ್ಯಾನ

ಧ್ಯಾನ

ಬೆಳಗಿನ ಜಾವದಲ್ಲಿ ಮಾಡುವ ಧ್ಯಾನವು ಒತ್ತಡವನ್ನು ನಿಯಂತ್ರಿಸುವ ಪರಿಣಾಮಕಾರಿ ವಿಧಾನವಾಗಿದೆ. ನಿಮ್ಮ ಸಮಸ್ಯೆಗಳಿಗೆ ಪರಿಹಾರವನ್ನು ಒದಗಿಸಲು ಸಹಾಯಕವಾಗುವಂತೆ ನಿಮ್ಮ ಮನಸ್ಸನ್ನು ಇದು ಚುರುಕುಗೊಳಿಸುತ್ತದೆ. ಹೆಚ್ಚಿನ ಚಿಂತೆ ನಿಮ್ಮ ಮನದಲ್ಲಿ ಕಾಡುತ್ತಿದ್ದರೆ ಸಮಸ್ಯೆಗಳಿಗೆ ಪರಿಹಾರ ಹುಡುಕಲು ನೀವು ವಿಫಲಗೊಳ್ಳುತ್ತೀರಿ. ಈ ಸಮಯದಲ್ಲಿ ನಿಮ್ಮ ಮನಸ್ಸನ್ನು ತೆರವುಗೊಳಿಸುವುದು ಒತ್ತಡವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.

ವ್ಯಾಯಾಮ

ವ್ಯಾಯಾಮ

ದೈಹಿಕ ಕಸರತ್ತನ್ನು ಅನುಸರಿಸುವುದು ನಿಮಗೆ ಒತ್ತಡಪೂರ್ಣ ಜೀವನದಿಂದ ಮುಕ್ತಿಯನ್ನು ನೀಡುತ್ತದೆ. ಯಾವುದೇ ರೀತಿಯ ಕ್ರೀಡೆ ಅಥವಾ ವ್ಯಾಯಾಮ ನಿಮ್ಮ ದೇಹದ ಚಲನವಲನಗಳನ್ನು ಚುರುಕುಗೊಳಿಸಿ ನಿಮ್ಮನ್ನು ತಾಜಾಗೊಳಿಸುತ್ತದೆ ಮತ್ತು ಇದರಿಂದ ಒತ್ತಡ ಹಾಗೂ ಚಿಂತೆಯನ್ನು ನಿಮಗೆ ನಿರ್ವಹಿಸಬಹುದಾಗಿದೆ.

English summary

Best way to deal with stress

Stress is one evil of life which keeps people from cherishing the present and enjoying the future. With the increase in competition and need of being successful, we have forgot a life without stress. The only ones who live without stress or strain are infants. have a look to handle stress for an effective stress management.
Story first published: Wednesday, August 26, 2015, 19:56 [IST]
X
Desktop Bottom Promotion