For Quick Alerts
ALLOW NOTIFICATIONS  
For Daily Alerts

ಮನಸ್ಸನ್ನು ಸದಾ ಶಾಂತವಾಗಿರಿಸುವ ಅದ್ಭುತ ಆಹಾರ!

|

ಸಾಮಾನ್ಯವಾಗಿ ಎಲ್ಲರಲ್ಲಿಯೂ ಕಂಡುಬರುವ ಸಾಮಾನ್ಯ ಸಮಸ್ಯೆ, ಮಾನಸಿಕ ಒತ್ತಡ! ಕೆಲಸ ಮಾಡುವ ಸ್ಥಳದಲ್ಲಾಗಲೀ ವಾಸಿಸುವ ಸ್ಥಳದಲ್ಲಾಗಲೀ ಯಾವುದೇ ಸಮಸ್ಯೆಯಿದ್ದರೆ ಅದು ನಿಮ್ಮ ಮನಸ್ಸಿನ ಮೇಲೆ ನೇರವಾಗಿ ಪರಿಣಾಮ ಬೀರುತ್ತದೆ.

ಮಾನಸಿಕ ಒತ್ತಡವನ್ನು ನಿಯಂತ್ರಿಸಲು ವ್ಯಾಯಾಮ ಅಥವಾ ಯಾವುದೇ ವೈದ್ಯರ ಸಲಹೆಯನ್ನು ತೆಗೆದುಕೊಳ್ಳುತ್ತೇವೆ. ಆದರೆ ಅದಕ್ಕಿಂತಲೂ ಮುಖ್ಯವಾಗಿ ನಮ್ಮ ಆಹಾರ ಕ್ರಮದಲ್ಲಿ ಸರಿಯಾದ ಅನುಕರಣೆ ನಿಮ್ಮನ್ನು ಒತ್ತಡದ ಸಮಸ್ಯೆಯಿಂದ ಸಂಪೂರ್ಣವಾಗಿ ದೂರವಿರಿಸಬಲ್ಲದು. ಆರೋಗ್ಯಕರವಾದ ದೇಹ ಮತ್ತು ಮನಸ್ಸು ಇವೆರಡೂ ಪರಸ್ಪರ ಒಂದಕ್ಕೊಂದು ಅವಿನಾಭಾವ ಸಂಬಂಧವನ್ನು ಹೊಂದಿರುತ್ತವೆ. ಮನಸ್ಸನ್ನು ನೀವು ಆರೋಗ್ಯಕರ ದೇಹದಿಂದ ಪ್ರತ್ಯೇಕವಾಗಿ ನೋಡಲು ಸಾಧ್ಯವಾಗುವುದಿಲ್ಲ.

ವೈದ್ಯರ ಅಭಿಪ್ರಾಯದ ಪ್ರಕಾರ ತಮ್ಮ ಮನಸ್ಸನ್ನು ಆರೋಗ್ಯವಾಗಿರಿಸಿಕೊಳ್ಳಲು ಜನ ತಮ್ಮ ಕೈಯಲ್ಲಿ ಏನೆಲ್ಲ ಸಾಧ್ಯವಾಗುತ್ತದೋ, ಅದನ್ನು ಮಾಡಬೇಕಂತೆ. ಅದಕ್ಕಾಗಿ ಅವರು ಮನಸ್ಸನ್ನು ಸದಾ ಶಾಂತವಾಗಿ ಇರಿಸುವಂತಹ, ಆಹಾರಗಳನ್ನು ಸೇವಿಸಲು ಶಿಫಾರಸು ಮಾಡುತ್ತಾರೆ. ಆರೋಗ್ಯಕರವಾದ ಮನಸ್ಸಿಗೆ ಆಹಾರಗಳು ಅತ್ಯಾವಶ್ಯಕವಾಗಿ ಬೇಕಾಗುತ್ತವೆ. ನಿಮ್ಮ ಮನಸ್ಸನ್ನು ಶಾಂತವಾಗಿ ಇರಿಸಿಕೊಳ್ಳಲು ಬೇಕಾದ ಆಹಾರ ಪದಾರ್ಥಗಳ ಕುರಿತು ತಿಳಿದುಕೊಳ್ಳಲು ಬಯಸುವಿರಾ? ಬನ್ನಿ ಇಂದು ನಾವು ಆ ಆಹಾರಗಳು ಯಾವುವು ಎಂದು ನಿಮಗೆ ತಿಳಿಸಿಕೊಡುತ್ತೇವೆ.

 ಮೀನು ಅತ್ಯಗತ್ಯ

ಮೀನು ಅತ್ಯಗತ್ಯ

ಎಲ್ಲಾ ಆಹಾರಗಳಿಗಿಂತ ಮಿಗಿಲಾಗಿ, ಮನಸ್ಸನ್ನು ಶಾಂತಾವಾಗಿರಿಸಲು ಮೀನು ಅತ್ಯಂತ ಪ್ರಮುಖವಾದ ಆಹಾರ ಪದಾರ್ಥವಾಗಿರುತ್ತದೆ. ಇದರಲ್ಲಿ ಮನಸ್ಸಿಗೆ ಅಗತ್ಯವಾದ ಎಲ್ಲಾ ಪೋಷಕಾಂಶಗಳು ಇರುತ್ತವೆ.ಆದರೂ ಡಯೆಟ್ ತಜ್ಞರು ಸ್ವಾರ್ಡ್ ಫಿಶ್ ಸೇವಿಸಬೇಡಿ ಎಂದು ಹೇಳುತ್ತಾರೆ. ಆದರೆ ಸಾಲ್ಮನ್ ಮತ್ತು ಸಾರ್ಡಿನ್ ಮೀನುಗಳನ್ನು ಸೇವಿಸಲು ಶಿಫಾರಸು ಮಾಡುತ್ತಾರೆ. ಇವುಗಳು ಜೀರ್ಣ ಮಾಡಿಕೊಳ್ಳಲು ಸುಲಭವಾಗಿರುತ್ತವೆ ಮತ್ತು ಮೆದುಳಿಗೆ ಅಗತ್ಯವಾದ ಪೋಷಕಾಂಶಗಳನ್ನು ಒದಗಿಸುತ್ತವೆ.

ಅಧಿಕ ಆಂಟಿ ಆಕ್ಸಿಡೆಂಟ್‌ಗಳು ಇರುವ ಆಹಾರವನ್ನು ತೆಗೆದುಕೊಳ್ಳಿ

ಅಧಿಕ ಆಂಟಿ ಆಕ್ಸಿಡೆಂಟ್‌ಗಳು ಇರುವ ಆಹಾರವನ್ನು ತೆಗೆದುಕೊಳ್ಳಿ

ಮೆದುಳಿನ ಆರೋಗ್ಯವನ್ನು ಕಾಪಾಡಲು ಅಧಿಕ ಆಂಟಿ ಆಕ್ಸಿಡೆಂಟ್‌ಗಳು ಇರುವ ಆಹಾರವನ್ನು ತೆಗೆದುಕೊಳ್ಳಿ. ಇವುಗಳು ಮೆದುಳಿನ ಆರೋಗ್ಯವನ್ನು ಸುಧಾರಿಸುವ ಜೊತೆಗೆ ದೇಹದ ಆರೋಗ್ಯವನ್ನು ಸಹ ಚೆನ್ನಾಗಿ ಇಡುತ್ತವೆ. ಇವುಗಳನ್ನು ಸೇವಿಸುವುದರಿಂದ ನಿಮ್ಮ ಏಕಾಗ್ರತೆಯು ಸಹ ವೃದ್ಧಿಸುತ್ತದೆ.

ಅವೊಕ್ಯಾಡೊವನ್ನು ಉದಾಸೀನ ಮಾಡಬೇಡಿ

ಅವೊಕ್ಯಾಡೊವನ್ನು ಉದಾಸೀನ ಮಾಡಬೇಡಿ

ಅವೊಕ್ಯಾಡೊದಲ್ಲಿ ಅಧಿಕ ಪ್ರಮಾಣದ ಮೊನೊಸ್ಯಾಚುರೇಟೆಡ್ ಕೊಬ್ಬು ಇರುತ್ತದೆ. ಇದು ಆರೋಗ್ಯಕಾರಿ ಕೊಬ್ಬು ಎಂದು ಪರಿಗಣಿಸಲ್ಪಟ್ಟಿದೆ. ಇದು ದೇಹದಿಂದ ಮೆದುಳಿಗೆ ಸರಬರಾಜಾಗುವ ರಕ್ತದ ಪರಿಚಲನೆಯನ್ನು ಸರಾಗಗೊಳಿಸುತ್ತದೆ. ಇದರಿಂದ ನಿಮ್ಮ ಮೆದುಳು ನೆಮ್ಮದಿಯನ್ನು ಪಡೆಯುತ್ತದೆ ಮತ್ತು ಚುರುಕಾಗಿ ಕೆಲಸ ಮಾಡುತ್ತದೆ.

 ಧಾನ್ಯಗಳನ್ನು ಸೇವಿಸಿ

ಧಾನ್ಯಗಳನ್ನು ಸೇವಿಸಿ

ನಿಮ್ಮ ಊಟದಲ್ಲಿ ಅಧಿಕ ಪ್ರಮಾಣದ ಧಾನ್ಯಗಳನ್ನು ಸೇರಿಸಿ. ಧಾನ್ಯಗಳಲ್ಲಿ ಅಧಿಕ ಪ್ರಮಾಣದ ಪೋಷಕಾಂಶಗಳು ಇರುತ್ತವೆ. ಒಂದು ವೇಳೆ ನೀವು ಪ್ರತಿದಿನ ಎರಡು ಬಾರಿ ಧಾನ್ಯಗಳನ್ನು ಸೇವಿಸಿದಲ್ಲಿ, ನಿಮ್ಮ ಮೆದುಳಿನ ಮೇಲೆ ಇದರಿಂದ ಉತ್ತಮ ಪರಿಣಾಮ ಬೀರುತ್ತದೆ. ಇದು ಪಾರ್ಶ್ವ ವಾಯು ಮತ್ತು ಇತ್ಯಾದಿ ಕಾಯಿಲೆಗಳಿಂದ ನಿಮ್ಮನ್ನು ದೂರವಿರಿಸುತ್ತದೆ.

ಬಾದಾಮಿ

ಬಾದಾಮಿ

ಸತು ಮತ್ತು ವಿಟಮಿನ್ ಬಿ 12 ಅಂಶಗಳು ನಿಮ್ಮ ಊಟದ ಜೊತೆಗೆ ಸೇರಿದರೆ ನಿಮ್ಮ ಆರೋಗ್ಯದ ದೃಷ್ಟಿಯಿಂದ ಸಾಕಷ್ಟು ಒಳ್ಳೆಯದು. ಈ ಪೋಷಕಾಂಶಗಳು ಸಮತೋಲಿತ ಚಿತ್ತ ನಿರ್ವಹಿಸಲು ಮತ್ತು ಆತಂಕ ದೂರಗೊಳಿಸಲು ಸಹಾಯಕ.

ಪಾಲಾಕ್

ಪಾಲಾಕ್

ಮ್ಯಾಗ್ನೀಶಿಯಂ ಸಮೃದ್ಧ ಅಂಶವನ್ನು ಹೊಂದಿರುವ ಪಾಲಾಕ್ ಮನಸ್ಸನ್ನು ಸದಾ ನಿಶ್ಚಲವಾಗಿರುವಂತೆ ಮಾಡುತ್ತದೆ. ಸರಿಯಾದ ಪ್ರಮಾಣದ ವಿಟಮಿನ್ ಎ ಹಾಗೂ ಸಿ ಯ ಜೊತೆಗೆ ಕಬ್ಬಿಣದ ಅಂಶ ಆರೋಗ್ಯಕರ ಮನಸ್ಸನ್ನು ನಿಮ್ಮದಾಗಿಸುತ್ತದೆ.

English summary

Best Foods To Keep Your Mind Calm

A healthy body and mind are inter-related. You cannot think about enjoying a healthy body without ensuring a healthy mind. In the opinions of the doctors, people must try everything to keep their mind healthy and fit so that they can feel the healthiness of their body.
Story first published: Wednesday, May 6, 2015, 15:10 [IST]
X
Desktop Bottom Promotion