For Quick Alerts
ALLOW NOTIFICATIONS  
For Daily Alerts

ಗರ್ಭಿಣಿಯರೇ ದಿನ ನಿತ್ಯದ ಆಹಾರ ಕ್ರಮ ಹೀಗಿರಲಿ

|

ಪ್ರಸ್ತುತ ದಿನಗಳಲ್ಲಿ ಜೀವನ ಶೈಲಿಯ ಬದಲಾವಣೆ ಮತ್ತು ಅನಾರೋಗ್ಯಕರ ಆಹಾರಗಳ ಸೇವನೆಯ ಅಭ್ಯಾಸಗಳು ನಮ್ಮ ಪ್ರತಿಯೊಂದು ಸಂಭವನೀಯ ಕಾಯಿಲೆಗಳಿಗೆ ಮೂಲ ಕಾರಣವಾಗಿವೆ. ಇಂತಹ ನಡವಳಿಕೆಗಳಿಂದ ಕೆಲವರು ನಾನಾ ರೀತಿಯ ಸಮಸ್ಯೆಗಳಿಗೆ ಗುರಿಯಾಗುತ್ತಿರುವುದು ಸಾಮಾನ್ಯವಾಗಿ ಬಿಟ್ಟಿದೆ. ಅದರಲ್ಲೂ ಗರ್ಭಿಣಿಯರು ಕೈಗೆಟುಕುವ ಸಿದ್ಧ ಆಹಾರಗಳಿಗೆ ಗುಲಾಮರಾಗಿ, ಅವುಗಳ ದುಷ್ಪರಿಣಾಮಗಳನ್ನೂ ಅರಿಯದೇ ಸುಲಭವಾಗಿ ಅನಾರೋಗ್ಯಕ್ಕೆ ಗುರಿಯಾಗುತ್ತಾರೆ.

ಕೆಲವೊಮ್ಮೆ ಇಂತಹ ಆಹಾರಗಳ ಸೇವನೆಯಿಂದಾಗಿ, ಹುಟ್ಟುವ ಮಗುವಿನ ಆರೋಗ್ಯದ ಮೇಲೆ ಕೂಡ ಕೆಟ್ಟ ಪರಿಣಾಮವನ್ನು ಬೀರುತ್ತದೆ. ಹಾಗಾಗಿ ಗರ್ಭಿಣಿಯರಿಗೆ೦ದೇ" ಮೀಸಲಾಗಿರುವ ಕೆಲವೊ೦ದು ತರಕಾರಿ, ಹಣ್ಣುಗಳನ್ನೂ ಸೇವಿಸಿದಲ್ಲಿ ಅದರಿ೦ದ ಆಕೆಯು ಪಡೆದುಕೊಳ್ಳಬಹುದಾದ ಆರೋಗ್ಯ ಲಾಭವು ದ್ವಿಗುಣಗೊಳ್ಳುತ್ತದೆ. ಬನ್ನಿ ಅವು ಯಾವುದು ಎಂಬುದನ್ನು ನೋಡೋಣ.. ಗರ್ಭಿಣಿ ಸ್ತ್ರೀಯರ ಆಹಾರ ಸೇವನೆ ಹೇಗಿರಬೇಕು?

ಹಸುವಿನ ಹಾಲು

Best Foods to Eat While Pregnant

ಹಸುವಿನ ಹಾಲಿನಲ್ಲಿ ಹೆಚ್ಚಿನ ಮಟ್ಟದ ಕ್ಯಾಲ್ಸಿಯಂ ಲಭ್ಯವಿದ್ದು ಮಗುವಿನ ಮೂಳೆಗಳ ಬೆಳವಣಿಗೆಗೆ ಅಗತ್ಯವಾಗಿದೆ. ಅಲ್ಲದೇ ಮಾನಸಿಕವಾಗಿ ಶಾಂತವಾಗಿರಲು ಹಾಗೂ ಉದ್ವೇಗಗೊಳ್ಳದೇ ಇರಲು ರಕ್ತದಲ್ಲಿ ಸೆರೋಟೋನಿನ್ ಎಂಬ ಕಿಣ್ವ ಉತ್ಪತ್ತಿಯಾಗಲೂ ಹಾಲು ಸಹಕಾರಿಯಾಗಿದೆ. ಹಾಗಾಗಿ ಗರ್ಭಿಣಿ ಮಹೆಳೆಯರು ಹಸುವಿನ ಹಾಲಿಗೆ ಸಕ್ಕರೆ ಹಾಕದೇ ಬಿಸಿ ಮಾಡಿ ಬೆಳಿಗ್ಗೆ ಮತ್ತು ರಾತ್ರಿ ಮಲಗುವ ಮುನ್ನ ಸೇವಿಸಿದರೆ ಆರೋಗ್ಯಕ್ಕೆ ಸಹಕಾರಿಯಾಗಲಿದೆ

ಹಸಿರು ಸೊಪ್ಪುಗಳು


ಹಸಿರು ಸೊಪ್ಪುಗಳಲ್ಲಿ ಸಮೃದ್ಧವಾದ ಸತುವಿನ ಅಂಶವಿರುತ್ತದೆ. ಸತುವು ಮಗುವಿನ ಅಂಗಾಂಗಗಳ ಬೆಳವಣಿಗೆಯಲ್ಲಿ ಅತ್ಯಂತ ಮಹತ್ವದ ಪಾತ್ರವನ್ನು ನಿರ್ವಹಿಸುವ ಅಂಶವಾಗಿರುತ್ತದೆ. ಪಾಲಕ್ ಸೊಪ್ಪುಗಳು, ಲೆಟ್ಯೂಸ್ ಮತ್ತು ಫೆನುಗ್ರೀಕ್‍ಗಳಲ್ಲಿ ಸಹ ಸತುವಿನ ಅಂಶ ಯಥೇಚ್ಛವಾಗಿರುತ್ತದೆ. ಇದರ ಜೊತೆಗೆ ಇದರಲ್ಲಿ ಮ್ಯಾಂಗನೀಸ್, ನಾರಿನಂಶ ಮತ್ತು ಇನ್ನಿತರ ವಿಟಮಿನ್‍ಗಳು ಸಹ ಇರುವುದರಿಂದ ಗರ್ಭಿಣಿಯರು ಇವುಗಳನ್ನು ತಪ್ಪದೆ ಸೇವಿಸಬೇಕಾಗುತ್ತದೆ.

ಸೀತಾಫಲ ಹಣ್ಣು


ಪೋಷಕಾ೦ಶಗಳನ್ನು ಅತ್ಯುತ್ಕೃಷ್ಟ ಪರಿಮಾಣಗಳಲ್ಲಿ ಒಳಗೊ೦ಡಿರುವುದರಿ೦ದ ಸೀತಾಫಲವು ಗರ್ಭಿಣಿ ಸ್ತ್ರೀಯರ ಪಾಲಿಗೆ ಸ೦ಜೀವಿನಿಯ೦ತಿದೆ. ಸೀತಾಫಲವು ಖನಿಜಗಳು, ವಿಟಮಿನ್, ಪ್ರೋಟೀನ್‌ಗಳು, ನಾರಿನ೦ಶ, ಶರ್ಕರಪಿಷ್ಟಗಳು, ಹಾಗೂ ಅವಶ್ಯಕ ಕೊಬ್ಬಿನಾ೦ಶಸಗಳ ರೂಪದಲ್ಲಿ ನಾನಾ ಪೋಷಕ ತತ್ವಗಳನ್ನು ಒಳಗೊ೦ಡಿರುತ್ತದೆ. ಶರೀರಕ್ಕೆ, ಅದರಲ್ಲೂ ವಿಶೇಷವಾಗಿ ಗರ್ಭಿಣಿಯರ ಆರೋಗ್ಯಕ್ಕೆ ಅವಶ್ಯಕವಾಗಿರುವ ಎಲ್ಲಾ ಪೋಷಕ ತತ್ವಗಳು ಯಾವುದಾದರೂ ಒ೦ದು ಹಣ್ಣಿನಲ್ಲಿ ಅಡಕಗೊ೦ಡಿರುವುದೇ ಹೌದೆ೦ದಾದರೆ ಆ ಹಣ್ಣು ಸೀತಾಫಲವಲ್ಲದೇ ಬೇರಾವುದೂ ಅಲ್ಲ.

ಟೊಮೇಟೊ


ಟೊಮೇಟೊ ಲೈಕೊಪೀನ್ ಎಂಬ ಶಕ್ತಿ ಶಾಲಿ ಕ್ಯಾನ್ಸರ್ ನಿವಾರಿಸುವ ಅಂಶವು ಟೊಮೇಟೊಗಳಲ್ಲಿ ಅಧಿಕ ಪ್ರಮಾಣದಲ್ಲಿ ಕಂಡು ಬರುತ್ತವೆ. ಗರ್ಭಿಣಿಯಾಗಿರುವಾಗ ಇವುಗಳನ್ನು ಸೇವಿಸಿದರೆ ಅದು ಮಗುವಿನ ಜನನದ ನಂತರ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ ಮತ್ತು ಮುಂದಿನ ಕೆಲವು ತಿಂಗಳುಗಳವರೆಗೆ ಇವುಗಳು ಮಗುವಿನ ರೋಗ ನಿರೋಧಕ ಶಕ್ತಿಯನ್ನು ಕಾಪಾಡುತ್ತಲೆ ಇರುತ್ತವೆ.

ಸೀಬೆ ಹಣ್ಣು


ಸೀಬೆ ಹಣ್ಣು ಕಬ್ಬಿಣಾ೦ಶ, ಕ್ಯಾಲ್ಸಿಯ೦, ಥೈಯಮೀನ್, ಪೊಟ್ಯಾಷಿಯ೦, ಮೆಗ್ನೀಷಿಯ೦, ಹಾಗೂ ರ೦ಜಕದ೦ತಹ ವಸ್ತುಗಳನ್ನೂ ಕೂಡಾ ಒಳಗೊ೦ಡಿದ್ದು, ಗರ್ಭಿಣಿಯರಿಗೆ ಹೇಳಿ ಮಾಡಿಸಿದ ಹಣ್ಣಾಗಿದೆ. ಸಾಮಾನ್ಯವಾಗಿ ಗರ್ಭಿಣಿ ಸ್ತ್ರೀಯರಲ್ಲಿ ರೋಗ ನಿರೋಧಕ ಶಕ್ತಿಯು ಸುಸ್ಥಿತಿಯಲ್ಲಿರಬೇಕಾದುದು ಅತೀ ಮುಖ್ಯವಾಗಿರುತ್ತದೆ. ಏಕೆ೦ದರೆ, ಗರ್ಭಿಣಿ ಸ್ತ್ರೀಯರ ರೋಗ ನಿರೋಧಕ ಶಕ್ತಿಯು ಸುಸ್ಥಿತಿಯಿ೦ದಿದ್ದಲ್ಲಿ, ಅದು ಅವರಿಗೆ ನಾನಾ ತೆರನಾದ ರೋಗಗಳ ವಿರುದ್ಧ ಹೋರಾಡಲು ನೆರವಾಗುತ್ತದೆ. ಸೀಬೆ ಹಣ್ಣಿನಲ್ಲಿ ವಿಟಮಿನ್ C ಯು ಸಮೃದ್ಧವಾಗಿದ್ದು, ಅದು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಿ ಅದನ್ನು ಬಲಯುತಗೊಳಿಸುತ್ತದೆ.
English summary

Best Foods to Eat While Pregnant

A healthy diet is an important part of a healthy lifestyle at any time, but is especially vital if you're pregnant or planning a pregnancy. Eating healthily during pregnancy will help your baby to develop and grow. You don’t need to go on a special diet, but it's important to eat a variety of different foods every day to get the right balance of nutrients that you and your baby need.
X
Desktop Bottom Promotion