For Quick Alerts
ALLOW NOTIFICATIONS  
For Daily Alerts

ಕಲ್ಲಂಗಡಿ ಹಣ್ಣಿನ ಬೀಜಗಳ ಸ್ಪೆಷಾಲಿಟಿ ಒಂದೇ ಎರಡೇ

|

ಹಣ್ಣುಗಳು ಪ್ರಕೃತಿಯ ಅತ್ಯಂತ ಪರಿಶುದ್ಧ ಉಡುಗೊರೆಗಳಾಗಿರುತ್ತವೆ. ಹಲವಾರು ಹಣ್ಣುಗಳಲ್ಲಿ, ವಿವಿಧ ಬಗೆಯ ಪೋಷಕಾಂಶಗಳ ಆಗರವೇ ಇರುತ್ತದೆ. ವೈದ್ಯಕೀಯ ವಿಜ್ಞಾನದ ಪ್ರಕಾರ ಎಲ್ಲಾ ಬಗೆಯ ಹಣ್ಣುಗಳನ್ನು ಸೇವಿಸುವ ಮೂಲಕ ನಾವು ಪರಿಣಾಮಕಾರಿಯಾದ ತಿನ್ನುವ ಅಭ್ಯಾಸಗಳನ್ನು ಹೊಂದಬಹುದಂತೆ. ಹಾಗಾಗಿ ವೈದ್ಯರು ಮತ್ತು ಆಹಾರ ತಜ್ಞರು ಹಣ್ಣುಗಳನ್ನು ಹೆಚ್ಚಾಗಿ ಸೇವಿಸಿ ಎಂದು ಒತ್ತು ನೀಡುತ್ತಾರೆ.

ವಿಶೇಷವಾಗಿ ಆಯಾ ಋತುಗಳಲ್ಲಿ ದೊರೆಯುವ ಹಣ್ಣುಗಳನ್ನು ತಿನ್ನಲೇ ಬೇಕೆಂದು ಇವರು ಸೂಚಿಸುತ್ತಾರೆ. ಬೇಸಿಗೆಯಲ್ಲಿ ದೊರೆಯುವ ಹಣ್ಣುಗಳಲ್ಲಿ ಕಲ್ಲಂಗಡಿ ಹಣ್ಣು ಸಹ ಒಂದು ಪ್ರಮುಖ ಹಣ್ಣಾಗಿದೆ. ಇದು ಮಾವಿನ ಹಣ್ಣಿನಷ್ಟು ರುಚಿಕರವಾಗಿಲ್ಲದಿದ್ದರು, ತನ್ನ ಆರೋಗ್ಯಕಾರಿ ಪ್ರಯೋಜನಗಳ ಸಲುವಾಗಿ ಹಲವಾರು ರೀತಿಯಲ್ಲಿ ನಿಮ್ಮ ಅನುಕೂಲಕ್ಕೆ ಬರುತ್ತದೆ. ಕಲ್ಲಂಗಡಿಯನ್ನು ಸೇವಿಸುವುದರಿಂದ ದೇಹವನ್ನು ಈ ಬೇಸಿಗೆಯಲ್ಲಿಯೂ ಸಹ ತಂಪಾಗಿ ಇರಿಸಬಹುದು. ಕಲ್ಲಂಗಡಿ ಹಣ್ಣಿನ ಜೊತೆಗೆ ಅದರ ಬೀಜಗಳಲ್ಲಿ ಸಹ ಹಲವಾರು ಪ್ರಯೋಜನಗಳು ಇರುತ್ತವೆ. ಕಲ್ಲಂಗಡಿ ಹಣ್ಣು ಲೈಂಗಿಕ ಶಕ್ತಿಯನ್ನು ಹೆಚ್ಚಿಸುತ್ತದೆಯಂತೆ!

Benefits Of Watermelon Seeds

ಹಲವಾರು ಪೋಷಕಾಂಶ ತಜ್ಞರು ಮತ್ತು ಡಯೇಟೀಷಿಯನ್‌ಗಳು ಕಲ್ಲಂಗಡಿ ಹಣ್ಣಿನ ಬೀಜಗಳಿಂದ ಹಲವಾರು ಆರೋಗ್ಯಕಾರಿ ಪ್ರಯೋಜನಗಳು ದೊರೆಯುತ್ತವೆ ಎಂದು ಹೇಳುತ್ತಾರೆ. ಜನರು ಇದನ್ನು ತಿಳಿದುಕೊಂಡು ಕಲ್ಲಂಗಡಿ ಹಣ್ಣು ಸೇವಿಸುವಾಗ ಇವುಗಳ ಬೀಜಗಳನ್ನು ಸಹ ಸೇವಿಸಬೇಕೆಂದು ಇವರು ಸಲಹೆ ನೀಡುತ್ತಾರೆ. ಇವುಗಳನ್ನು ಎಷ್ಟು ತಿಂದರೆ ಅಷ್ಟು ಒಳ್ಳೆಯದು ಎಂಬುದು ಅವರ ಅಭಿಪ್ರಾಯ. ಬನ್ನಿ ಕಲ್ಲಂಗಡಿ ಹಣ್ಣಿನ ಬೀಜಗಳಲ್ಲಿ ಯಾವೆಲ್ಲ ಪ್ರಯೋಜನಗಳು ದೊರೆಯುತ್ತವೆ ಎಂದು ತಿಳಿದುಕೊಳ್ಳೋಣ.

ಅಮೈನೊ ಆಮ್ಲಗಳ ಸ್ವಾಭಾವಿಕ ಮೂಲ
ಮಾನವ ದೇಹಕ್ಕೆ ಅಮೈನೊ ಆಮ್ಲಗಳು ಅತ್ಯಗತ್ಯವಾಗಿ ಬೇಕಾಗುತ್ತವೆ. ನಿಮ್ಮ ದೇಹವು ಈ ಆಮ್ಲಗಳನ್ನು ಗ್ಲುಟಮಿಕ್ ಮತ್ತು ಟ್ರೈಪ್ಟೊಫಾನ್ ಆಮ್ಲಗಳ ರೂಪದಲ್ಲಿ ಪಡೆಯುತ್ತದೆ. ಇದಕ್ಕಾಗಿ ಹಲವಾರು ಔಷಧಿಗಳು ದೊರೆಯುತ್ತವೆ. ಆದರೆ ವೈದ್ಯರು ಅವುಗಳ ಬದಲಿಗೆ ಸ್ವಾಭಾವಿಕ ಮೂಲಗಳಿಂದ ಈ ಆಮ್ಲಗಳನ್ನು ಪಡೆಯಿರಿ ಎಂದು ಸಲಹೆ ನೀಡುತ್ತಾರೆ. ಕಲ್ಲಂಗಡಿ ಬೀಜಗಳಲ್ಲಿ ಈ ಆಮ್ಲಗಳು ಸ್ವಾಭಾವಿಕವಾಗಿ ಅಡಗಿರುತ್ತವೆ. ಅದನ್ನು ಸೇವಿಸುವ ಮೂಲಕ ನೀವು ನಿಮ್ಮ ಜೀರ್ಣಾಂಗ ವ್ಯೂಹ, ಲೈಂಗಿಕ ಆರೋಗ್ಯ ಮತ್ತು ಹೃದಯಕ್ಕೆ ಸಂಬಂಧಿಸಿದ ವ್ಯವಸ್ಥೆಯನ್ನು ಸರಿಪಡಿಸಿಕೊಳ್ಳಬಹುದು.

ಮೆಗ್ನಿಷಿಯಂ ಪೂರೈಸುತ್ತವೆ
ಮೆಗ್ನಿಷಿಯಂ ನಮ್ಮ ದೇಹಕ್ಕೆ ಅತ್ಯಗತ್ಯವಾಗಿ ಬೇಕಾದ ಖನಿಜಾಂಶವಾಗಿರುತ್ತದೆ. ವೈದ್ಯಕೀಯ ವಿಜ್ಞಾನದ ಪ್ರಕಾರ 100 ಗ್ರಾಂ ಕಲ್ಲಂಗಡಿ ಹಣ್ಣಿನ ಬೀಜಗಳಲ್ಲಿ 139% ನಷ್ಟು ದೇಹಕ್ಕೆ ಅಗತ್ಯವಾದ ಮೆಗ್ನಿಷಿಯಂ ದೊರೆಯುತ್ತದೆ. ಇದು ನಿಮ್ಮ ಜೀರ್ಣಾಂಗವ್ಯೂಹಕ್ಕೆ ಸಹಕರಿಸುತ್ತದೆ. ಪ್ರೋಟಿನ್‌‍ಗಳನ್ನು ಸಂಸ್ಕರಿಸುತ್ತದೆ ಮತ್ತು ರಕ್ತದ ಒತ್ತಡವನ್ನು ಸಹ ಸಾಮಾನ್ಯ ಮಟ್ಟಕ್ಕೆ ತರುತ್ತದೆ. ಇದರ ಜೊತೆಗೆ ಇದು ಮಧುಮೇಹವನ್ನು ನಿಯಂತ್ರಿಸುತ್ತದೆ ಮತ್ತು ಹೈಪರ್‌ಟೆನ್ಶನ್ ಸಹ ನಿಯಂತ್ರಿಸುತ್ತದೆ.

ಮಧುಮೇಹದ ಮೇಲೆ ಹೋರಾಡುತ್ತದೆ
ಮಧುಮೇಹವು ಈಗ ಸಾಮಾನ್ಯವಾಗಿ ಕಂಡು ಬರುವ ಆರೋಗ್ಯದ ಸಮಸ್ಯೆಯಾಗಿ ಬಿಟ್ಟಿದೆ. ಇದನ್ನು ಸರಿಯಾಗಿ ನಿಭಾಯಿಸಲಿಲ್ಲವಾದಲ್ಲಿ, ಇದು ಗಂಭೀರ ಪ್ರಮಾಣಕ್ಕೆ ತಿರುಗುತ್ತದೆ. ಒಂದು ವೇಳೆ ನೀವು ಮಧುಮೇಹದಿಂದ ಬಳಲುತ್ತಿದ್ದಲ್ಲಿ, 40-45 ನಿಮಿಷಗಳ ಕಾಲ ಕಲ್ಲಂಗಡಿ ಬೀಜಗಳನ್ನು ನೀರಿನಲ್ಲಿ ಕುದಿಸಿ. ನಂತರ ಅದನ್ನು ಟೀ ರೀತಿ ಪ್ರತಿದಿನ ಸೇವಿಸಿ. ಇದು ಮಧುಮೇಹಕ್ಕೆ ಕಾರಣವಾದ ಲೋಪ ದೋಷಗಳನ್ನು ಸರಿಪಡಿಸುತ್ತದೆ. ಗರ್ಭಾವಸ್ಥೆಯಲ್ಲಿ ಕಾಡುವ ರೋಗರುಜಿನಗಳಿಗೆ ಸಂಜೀವಿನಿ-ಕಲ್ಲಂಗಡಿ ಹಣ್ಣು!

ನಿಮ್ಮ ಜ್ಞಾಪಕ ಶಕ್ತಿಯನ್ನು ಚುರುಕುಗೊಳಿಸುತ್ತದೆ
ಕಲ್ಲಂಗಡಿ ಬೀಜಗಳು ನಿಮ್ಮ ಜ್ಞಾಪಕ ಶಕ್ತಿಯನ್ನು ಹೆಚ್ಚಿಸುತ್ತದೆ. ಇದು ಇತರೆ ಆರೋಗ್ಯ ಸಮಸ್ಯೆಗಳಿಂದ ದೇಹವು ಬೇಗ ಚೇತರಿಸಿಕೊಳ್ಳಲು ಸಹಾಯ ಮಾಡುತ್ತದೆ. ಈ ಕಲ್ಲಂಗಡಿ ಬೀಜಗಳನ್ನು ಸೂಚಿಸಿದ ರೀತಿಯಲ್ಲಿ ಸೇವಿಸಿದರೆ ಯಾರ ಜ್ಞಾಪಕಶಕ್ತಿ ಬೇಕಾದರು ಚುರುಕಾಗುತ್ತದೆ. ಪ್ರೋಟೀನ್ ಕೊರತೆಯು ಜ್ಞಾಪಕ ಶಕ್ತಿಯ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ. ಆದರೆ ಕಲ್ಲಂಗಡಿ ಬೀಜಗಳು ಈ ಕೊರತೆಯನ್ನು ನೀಗಿಸುತ್ತವೆ.
ಕ್ವಾಶಿಯೊರ್ಕರ್ ಮತ್ತು ಮರಸ್ಮಸ್ ಎಂಬ ನೆನಪಿನ ಶಕ್ತಿ ಕುಂದಿಸುವ ಸಮಸ್ಯೆಗಳಿಂದ ಬಳಲುವವರಿಗೆ ಈ ಬೀಜಗಳು ದಿವ್ಯೌಷಧಿಯಾಗಿರುತ್ತವೆ. ಹಾಗಾಗಿ ಕಲ್ಲಂಗಡಿ ಬೀಜಗಳನ್ನು ಇನ್ನು ಮುಂದೆ ತಿನ್ನದೆ ಎಸೆಯಲು ಹೋಗಬೇಡಿ. ಅವುಗಳಲ್ಲಿ ಆರೋಗ್ಯದ ಗಣಿಯೇ ಇರುತ್ತದೆ.

English summary

Benefits Of Watermelon Seeds

Fruits are the purest gifts of the nature. Most of the fruits are the store house of various types of nutritive elements. In the opinion of the medical science, eating all types of fruits is one of the most effective habits. Most of the doctors and nutritional experts lay emphasis on the consumption of fruits,
X
Desktop Bottom Promotion